Asianet Suvarna News Asianet Suvarna News

Karnataka Politics: ಜನತೆಯ ಆಶೋತ್ತರಗಳಿಗೆ ಕಾಂಗ್ರೆಸ್‌ ಸ್ಪಂದನೆ: ತಿಮ್ಮಾಪೂರ

*  ಕಾಂಗ್ರೆಸ್‌ ಸದಸ್ಯತ್ವ ನೊಂದಣಿ ಅಭಿಯಾನಕ್ಕೆ ಮಾಜಿ ಸಚಿವ ತಿಮ್ಮಾಪೂರ ಚಾಲನೆ
*  ಮುಂಬರುವ ಚುನಾವಣೆಗಳಲ್ಲಿ ಬಿಜೆಪಿಗೆ ಜನತೆ ತಕ್ಕ ಪಾಠ ಕಲಿಸುತ್ತಾರೆ
*  ಕಾಂಗ್ರೆಸ್‌ನಿಂದ ಸರ್ವರಿಗೂ ಒಳಿತಾಗುವ ಯೋಜನೆ ಜಾರಿ
 

Congress Respond to the Problems of the People Says RB Timmapur grg
Author
Bengaluru, First Published Dec 12, 2021, 10:18 AM IST | Last Updated Dec 12, 2021, 10:18 AM IST

ರೋಣ(ಡಿ.12): ಸ್ವಾತಂತ್ರ್ಯ ಪೂರ್ವದಿಂದ ಇಂದಿನ ವರೆಗೂ ದೇಶದ ಹಿತ ಕಾಪಾಡುವಲ್ಲಿ, ಜನತೇಯ ಆಶೋತ್ತರಗಳಿಗೆ ಅವಿರತ ಶ್ರಮಿಸಿದ ಏಕೈಕ ಪಕ್ಷ ಕಾಂಗ್ರೆಸ್‌(Congress) ಎಂದು ಮಾಜಿ ಸಚಿವ ಆರ್‌.ಬಿ. ತಿಮ್ಮಾಪೂರ(RB Timmapur) ಹೇಳಿದರು. ಪಟ್ಟಣದ ಪುರಸಭೆ 7ನೇ ವಾರ್ಡಿನ ದ್ಯಾಮವ್ವದೇವಿ ದೇವಸ್ಥಾನ ಆವರಣದಲ್ಲಿ ಕಾಂಗ್ರೆಸ್‌ ಕಮಿಟಿ, ರೋಣ ಬ್ಲಾಕ್‌ ಕಾಂಗ್ರೆಸ್‌ ಕಮಿಟಿ ವತಿಯಿಂದ ಶನಿವಾರ ಜರುಗಿದ ಕಾಂಗ್ರೆಸ್‌ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಜಾತ್ಯಾತೀತ ತತ್ವ, ಸಿದ್ದಾಂತದೊಂದಿಗೆ ಅಪಾರ ಜನ ಮೆಚ್ಚುಗೆಗೆ ಪಾತ್ರವಾಗಿದೆ. ಕಾಂಗ್ರೆಸ್‌ ಆಡಳಿತದಲ್ಲಿದ್ದಾಗ ಜಾರಿಗೆ ತಂದಿರುವ ಯೋಜನೆಗಳೇ ಇಂದಿಗೂ ಜನಮನದಲ್ಲಿವೆ. ಆದರೆ, ಕೇವಲ 7 ವರ್ಷಗಳಿಂದ ದೇಶದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರದ(BJP Government) ಜನ ವಿರೋಧಿ, ರೈತ(Farmers), ಕಾರ್ಮಿಕ ವಿರೋಧಿ ನೀತಿ ಅತ್ಯಂತ ಬೇಸರ ತಂದಿದ್ದು, ಬಿಜೆಪಿಗೆ ಜನರ ಬಳಿ ಬರುವ ನೈತಿಕ ಹಕ್ಕನ್ನು ಕಳೆದುಕೊಳ್ಳುವಂತಾಗಿದೆ. ಮುಂಬರುವ ಚುನಾವಣೆಗಳಲ್ಲಿ(Election) ಬಿಜೆಪಿಗೆ ಜನತೆ ತಕ್ಕ ಪಾಠ ಕಲಿಸುತ್ತಾರೆ ಎಂಬುದು ಶತಸಿದ್ಧವಾಗಿದೆ. ಜನತೆ ಕಾಂಗ್ರೆಸ್‌ ಬೆಂಬಲಿಸುವ ನಿಟ್ಟಿನಲ್ಲಿ ಸ್ವಯಂ ಪ್ರೇರಿತರಾಗಿ ಸದಸ್ಯತ್ವ ನೋಂದಣಿಗೆ ಮುಂದಾಗಿದ್ದಾರೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಕಾಂಗ್ರೆಸ್‌ ಪಕ್ಷದ ಸದಸ್ಯತ್ವ ಪಡೆಯಬೇಕು ಎಂದರು.

Mahadayi Project: ಮತ್ತೊಂದು ರೈತ ಬಂಡಾಯಕ್ಕೂ ಸಿದ್ಧ: ಬೊಮ್ಮಾಯಿ ಸರ್ಕಾರಕ್ಕೆ ಸೊಬರದಮಠ ಎಚ್ಚರಿಕೆ

ಜಿಲ್ಲಾ ಕಾಂಗ್ರೆಸ್‌ ಕಮಿಟಿ ಅಧ್ಯಕ್ಷ ಜಿ.ಎಸ್‌. ಪಾಟೀಲ(GS Patil) ಮಾತನಾಡಿ, ರೈತರ, ಕಾರ್ಮಿಕ, ಬಡವರ, ದಿನ ದಲಿತರ, ಅಲ್ಪ ಅಸಂಖ್ಯಾತರ, ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಹಗಲಿರುಳು ಕಾಂಗ್ರೆಸ್‌ ಪಕ್ಷ ಶ್ರಮಿಸುತ್ತಿದೆ. ಅಧಿಕಾರ ಇದ್ದಾಗ, ಇಲ್ಲದಿದ್ದಾಗಲೂ ಜನರ ಪರ ಬೇಕು- ಬೇಡಿಕೆ, ಸಮಸ್ಯೆಗಳ ಪರ ಧ್ವನಿಯಾಗಿ ಬೀದಿಗಿಳಿದು ಹೋರಾಡುತ್ತಾ ಬರಲಾಗಿದೆ. ಕಾಂಗ್ರೆಸ್‌ ಪಕ್ಷದ ತತ್ವ, ಸಿದ್ದಾಂತ ಜನ ಮೆಚ್ಚುಗೆ ಪಡೆದಿದ್ದು, ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್‌ ಪಕ್ಷವನ್ನು ಜನ ಅಪಾರವಾಗಿ ಮೆಚ್ಚಿದ್ದಾರೆ. ಪಕ್ಷದ ಶಕ್ತಿ ಏನೆಂಬುದನ್ನು ತೋರ್ಪಡಿಸಲು ಕಾರ್ಯಕರ್ತರು, ಅಭಿಮಾನಿಗಳು ಅತ್ಯಂತ ಉತ್ಸುಕರಾಗಿದ್ದು, ಈ ದಿಶೆಯಲ್ಲಿ ಪಕ್ಷ ಸಂಘಟನೆಯಲ್ಲಿ ಶ್ರಮಿಸುತ್ತಿದ್ದಾರೆ ಎಂದರು.

ಕೆಪಿಸಿಸಿ ಸದಸ್ಯ ಐ.ಎಸ್‌. ಪಾಟೀಲ, ಪುರಸಭೆ ಉಪಾಧ್ಯಕ್ಷ ಮಿಥುನ್‌ ಪಾಟೀಲ, ವಿ.ಆರ್‌. ಗುಡಿಸಾಗರ, ಗದಿಗೆಪ್ಪ ಕಿರೇಸೂರ, ಮಹಾಪ್ರಧಾನ ಕಾರ್ಯದರ್ಶಿ ವಿ.ಬಿ. ಸೋಮನಕಟ್ಟಿಮಠ, ಯೂಸುಫ್‌ ಇಟಗಿ, ಬಸವರಾಜ ನವಲಗುಂದ, ವೀರಭದ್ರಗೌಡ ಪಾಟೀಲ, ವಿಶ್ವನಾಥ ಜಿಡ್ಡಿಬಾಗಿಲ, ಸಂಗು ನವಲಗುಂದ, ದುರ್ಗಪ್ಪ ಹಿರೇಮನಿ, ಈಶ್ವರ ಕಡಬಿನಕಟ್ಟಿ, ಬಾವಾಸಾಬ ಬೆಟಗೇರಿ, ದಾವಲಸಾಬ ಬಾಡಿನ, ಹನಮಂತಪ್ಪ ತಳ್ಳಿಕೇರಿ, ಅಂದಪ್ಪ ಗಡಗಿ, ಅಬ್ದುಲ್‌ ಹಮಿದ ತಹಶೀಲ್ದಾರ್‌ ಸೇರಿ ಹಲವರಿದ್ದರು.

ಕಾಂಗ್ರೆಸ್‌ನಿಂದ ಸರ್ವರಿಗೂ ಒಳಿತಾಗುವ ಯೋಜನೆ ಜಾರಿ

ಮುಂಡರಗಿ(Mundargi):  ದೇಶ ಮತ್ತು ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ(Congress Government) ಅಧಿಕಾರಕ್ಕೆ ಬಂದಾಗಲೆಲ್ಲ ಬಡವರ, ಹಿಂದುಳಿದವರ, ಕಾರ್ಮಿಕರ ಹಾಗೂ ಸರ್ವರಿಗೂ ಒಳಿತಾಗುವಂತಹ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ(Ramakrishna Doddamani) ಹೇಳಿದರು.

ಶನಿವಾರ ಪಟ್ಟಣದ 5ನೇ ವಾರ್ಡ್‌ನಲ್ಲಿ ತಾಲೂಕು ಬ್ಲಾಕ್‌ ಕಾಂಗ್ರೆಸ್‌ ಹಾಗೂ ಮಹಿಳಾ ಬ್ಲಾಕ್‌ ಕಾಂಗ್ರೆಸ್‌(Women's Black Congress) ಕಮಿಟಿಯಿಂದ ಆಯೋಜಿಸಿದ್ದ ಕಾಂಗ್ರೆಸ್‌ ಸದಸ್ಯತ್ವ ಅಭಿಯಾನಕ್ಕೆ(Congress Membership Campaign) ಚಾಲನೆ ನೀಡಿ ಅವರು ಮಾತನಾಡಿದರು.

ಬಿಜೆಪಿ ಸರ್ಕಾರದ(BJP Government) ಆಡಳಿತ ಸಂಪೂರ್ಣ ವಿಫಲವಾಗಿದೆ. ಪೆಟ್ರೋಲ್‌, ಡಿಸೆಲ್‌, ಅಡಿಗೆ ಅನಿಲ, ದಿನ ಬಳಕೆ ವಸ್ತುಗಳ ಬೆಲೆ ಹೆಚ್ಚಾಗಿದೆ. ಇದರಿಂದ ಜನ ಸಾಮಾನ್ಯರು, ಕಾರ್ಮಿಕರು ಜೀವನ ನಡೆಸುವುದು ದುಸ್ತರವಾಗಿದೆ. ಬಂಡವಾಳ ಶಾಹಿಗಳ ಪರ ಇರುವಂತಹ ಸರ್ಕಾರ ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಆದ್ದರಿಂದ ಯುವಕ- ಯುವತಿಯರು ಹಾಗೂ ಇತರ ಎಲ್ಲ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್‌ ಸದಸ್ಯತ್ವ ನೋಂದಣಿ ಮಾಡಿಕೊಳ್ಳುವ ಮೂಲಕ ಪಕ್ಷವನ್ನು ಬಲಿಷ್ಠಗೊಳಿಸಬೇಕು ಎಂದರು.

Karnataka Politics: ಬಿಲ್‌ಪಾಸ್‌ ಮಾಡಲು ಜೆಡಿಎಸ್‌ ಕೈ-ಕಾಲು ಹಿಡಿಯುವ ಪರಿಸ್ಥಿತಿ: ಶೆಟ್ಟರ್‌

ತಾಲೂಕು ಮಹಿಳಾ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷೆ ಜ್ಯೋತಿ ರಾಘವೇಂದ್ರ ಕುರಿಯವರ ಮಾತನಾಡಿ, ಮುಂಡರಗಿ ಪಟ್ಟಣವೂ ಸೇರಿದಂತೆ ತಾಲೂಕಿನ ಎಲ್ಲ ಗ್ರಾಮಗಳಿಗೂ ತೆರಳಿ ಕಾಂಗ್ರೆಸ್‌ ಸದಸ್ಯತ್ವ ಅಭಿಯಾನ ಕೈಗೊಂಡು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಮಾಡಲು ಶ್ರಮಿಸಲಾಗುವುದು. ಅದರಲ್ಲಿಯೂ ವಿಶೇಷವಾಗಿ ಮಹಿಳೆಯರ ಸದಸ್ಯತ್ವವನ್ನು ಹೆಚ್ಚಿಸಲು ಶ್ರಮಿಸುವುದಾಗಿ ಹೇಳಿದರು.

ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ಡಾ. ಬಿ.ಎಸ್‌. ಮೇಟಿ, ಎ.ವೈ. ನವಲಗುಂದ, ಪುರಸಭೆ ಸದಸ್ಯ ರಾಜೇಸಾಬ ಬೆಟಗೇರಿ, ರೈಮಾನಸಾಬ ಮಲ್ಲನಕೇರಿ, ಕಾರ್ಯಕರ್ತರಾದ ಮುದಿಯಪ್ಪ ಕುಂಬಾರ, ವಿ.ಎಸ್‌. ಗಟ್ಟಿ, ಮುತ್ತು ಬಳ್ಳಾರಿ, ಪ್ರತಿಭಾ ಹೊಸಮನಿ, ಪಾರ್ವತಿ ಕುಬಸದ, ರೇಣುಕಾ ಹರ್ತಿ, ಎ.ಪಿ. ದಂಡಿನ, ಲಕ್ಷ್ಮೇದೇವಿ ಮಾಗಡಿ, ನಿಶ್ಚಿತಾ ಅಳವಂಡಿ, ಲಕ್ಷ್ಮೇ ಹೊಸಮನಿ, ರಾಘವೇಂದ್ರ ಕುರಿಯವರ, ಬಸವಂತಪ್ಪ ಹೊಸಮನಿ, ಡಿ.ಎಂ. ಕಾತರಕಿ, ವೀರೇಶ ಹಡಗಲಿ, ಶರಣಪ್ಪ ಕುಬಸದ, ಲೋಕೇಶ ದೊಡ್ಡಮನಿ, ಅಶೋಕ ಸವಣೂರ ಇತರರು ಉಪಸ್ಥಿತರಿದ್ದರು.
 

Latest Videos
Follow Us:
Download App:
  • android
  • ios