Asianet Suvarna News Asianet Suvarna News

ಬಿಜೆಪಿ ಅಂದ್ರೆ ಭ್ರಷ್ಟ ಜುಮ್ಲಾ ಪಾರ್ಟಿ: ಕೈ ಚಾರ್ಜ್‌ಶೀಟ್‌

ಭಾರತ್‌ ಜೋಡೋ ಯಾತ್ರೆ​ಯ​ಲ್ಲಿ ಭಾಗಿ​ಯಾ​ಗಿ​ರುವ ಎಐ​ಸಿಸಿ ಪ್ರಧಾನ ಕಾರ್ಯ​ದರ್ಶಿ (ಸಂವ​ಹ​ನ) ಕೆ.ಸಿ.​ವೇ​ಣು​ಗೋ​ಪಾಲ್‌ ಹಾಗೂ ಪ್ರಧಾನ ಕಾರ್ಯ​ದರ್ಶಿ (ಸಂಘ​ಟ​ನೆ) ಜೈರಾಂ ರಮೇಶ್‌, ರಾಹುಲ್‌ ಗಾಂಧಿ ನೇತೃತ್ವದಲ್ಲಿ ಈ ಚಾರ್ಜ್‌ಶೀಟ್‌ ಅನ್ನು ಬಿಡು​ಗಡೆ ಮಾಡಿದರು.

congress releases bjp chargesheet to take it to every household ash
Author
First Published Jan 22, 2023, 7:55 AM IST

ನವ​ದೆ​ಹ​ಲಿ (ಜನವರಿ 22, 2023): ಪ್ರಧಾನಿ ನರೇಂದ್ರ ಮೋದಿ ನೇತೃ​ತ್ವದ ಕೇಂದ್ರ ಸರ್ಕಾ​ರದ ವಿರುದ್ಧ ಕಾಂಗ್ರೆಸ್‌ ಶನಿ​ವಾರ ಚಾರ್ಜ್‌ಶೀಟ್‌ ಬಿಡು​ಗಡೆ ಮಾಡಿದ್ದು, ಬಿಜೆ​ಪಿ​ಯನ್ನು ‘ಭ್ರಷ್ಟಜುಮ್ಲಾ ಪಕ್ಷ’ ಎಂದು ಕರೆ​ದಿದೆ. ಅಲ್ಲದೇ ನಿರು​ದ್ಯೋಗ, ರೈತರ ಸಮಸ್ಯೆ, ಮಹಿಳಾ ಸುರ​ಕ್ಷತೆಗಳ ಕುರಿ​ತಾ​ಗಿಯೂ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ ಮಾಡಿದೆ.

ಭಾರತ್‌ ಜೋಡೋ ಯಾತ್ರೆ​ಯ​ಲ್ಲಿ (Bharat Jodo Yatra) ಭಾಗಿ​ಯಾ​ಗಿ​ರುವ ಎಐ​ಸಿಸಿ ಪ್ರಧಾನ ಕಾರ್ಯ​ದರ್ಶಿ (ಸಂವ​ಹ​ನ) ಕೆ.ಸಿ.​ವೇ​ಣು​ಗೋ​ಪಾಲ್‌ (K.C. Venugopal) ಹಾಗೂ ಪ್ರಧಾನ ಕಾರ್ಯ​ದರ್ಶಿ (ಸಂಘ​ಟ​ನೆ) ಜೈರಾಂ ರಮೇಶ್‌ (Jairam Ramesh), ರಾಹುಲ್‌ ಗಾಂಧಿ (Rahul Gandhi) ನೇತೃತ್ವದಲ್ಲಿ ಈ ಚಾರ್ಜ್‌ಶೀಟ್‌ (Chargesheet) ಅನ್ನು ಬಿಡು​ಗಡೆ ಮಾಡಿದರು. ಬಿಜೆಪಿ (BJP) ಎಂದರೆ ಭ್ರಷ್ಟಜುಮ್ಲಾ ಪಕ್ಷ​ (ಸುಳ್ಳು ಹೇಳುವ ಭ್ರಷ್ಟಪಕ್ಷ) ಆ​ಗಿದೆ. ಅಲ್ಲದೇ ಇದರ ಮಂತ್ರ ಕುಛ್‌ ಕಾ ಸಾಥ್‌, ಖುದ್‌ ಕಾ ವಿಕಾಸ್‌, ಸಬ್‌ ಕೆ ಸಾಥ್‌ ವಿಶ್ವಾಸಘಾತ್‌ (ಕೆಲ​ವ​ರ ಜೊತೆಗೆ ಸ್ವಂತದ ವಿಕಾ​ಸ, ಎಲ್ಲ​ರೊಂದಿಗೆ ವಿಶ್ವಾಸಘಾತ​ಕ) ಎಂದು ವಾಗ್ದಾಳಿ ನಡೆಸಿದ್ದಾರೆ. 3 ವಿಭಾ​ಗ​ಗ​ಳಲ್ಲಿ ಚಾರ್ಜ್‌ಶೀಟ್‌ ಬಿಡು​ಗಡೆ ಮಾಡಿ​ದ​ರು.

ಇದನ್ನು ಓದಿ: ಜೋಡೋ ಯಾತ್ರೆ ಕಾಶ್ಮೀರ ಪ್ರವೇಶಕ್ಕೂ ಮೊದಲೇ ಶಾಕ್, J&K ಪ್ರಮುಖ ನಾಯಕಿ ರಾಜೀನಾಮೆ!

ಚಾರ್ಜ್‌ಶೀಟ್‌ನಲ್ಲೇನಿದೆ?
ಚಾರ್ಜ್‌ಶೀಟ್‌ನ ‘ಕುಛ್‌ ಕಾ ಸಾಥ್‌’ (ಕೆಲ​ವರ ಲಾಭ​ಕ್ಕಾ​ಗಿ) ವಿಭಾ​ಗ​ದಲ್ಲಿ, ಆಯ್ದ ಉದ್ಯ​ಮಿ​ಗಳ ಸಾಲ​ವನ್ನು ಮನ್ನಾ ಮಾಡ​ಲಾ​ಗಿದೆ. ಶೇ.10ರಷ್ಟು ಮಂದಿ ಭಾರ​ತದ ಶೇ. 64ರಷ್ಟು ಸಂಪತ್ತು ಹೊಂದಿ​ದ್ದಾರೆ. ಅಲ್ಲದೇ ಪ್ರಧಾ​ನಿ​ಗಳ ಆತ್ಮೀಯ ಸ್ನೇಹಿ​ತ​ರಿಗೆ ವಿಮಾನ ನಿಲ್ದಾ​ಣಗಳನ್ನು ಉಡು​ಗೊ​ರೆ​ಯಾಗಿ ನೀಡ​ಲಾ​ಗು​ತ್ತಿ​ದೆ ಎಂದು ಆರೋ​ಪಿ​ಸ​ಲಾ​ಗಿದೆ.‘ಖುದ್‌ ಕಾ ವಿಕಾ​ಸ್‌​’ ವಿಭಾ​ಗ​ದಲ್ಲಿ, ಪ್ರಚಾ​ರ​ಕ್ಕಾಗಿ ಬಿಜೆಪಿ ಕೋಟ್ಯಂತರ ರು. ವೆಚ್ಚ ಮಾಡು​ತ್ತಿದೆ ಮತ್ತು ಸ್ವಜನ ಪಕ್ಷ​ಪಾ​ತ​ದಲ್ಲಿ ತೊಡ​ಗಿದೆ ಎಂದು ಆರೋ​ಪಿ​ಸ​ಲಾ​ಗಿದೆ. ಮೂರನೇ ವಿಭಾ​ಗ​ದಲ್ಲಿ ದೇಶ​ದ​ಲ್ಲಿ​ರುವ ನಿರು​ದ್ಯೋಗ, ಆಹಾರ ಕೊರತೆ, ಮಹಿಳಾ ಸುರ​ಕ್ಷತೆ, ರೈತರ ಸಮಸ್ಯೆ ಮತ್ತು ದ್ವೇಷ ಭಾಷ​ಣ​ಗ​ಳನ್ನು ಸೇರಿ​ಸ​ಲಾ​ಗಿದೆ.

‘ಹಾಥ್‌ ಸೆ ಹಾಥ್‌ ಜೋಡೋ’ ಲೋಗೋ ಬಿಡು​ಗ​ಡೆ
ಭಾರತ್‌ ಜೋಡೋ ಪಾದ​ಯಾ​ತ್ರೆಯ ಬಳಿಕ ಜಿಲ್ಲೆ ಹಾಗೂ ಬ್ಲಾಕ್‌ ಮಟ್ಟದಲ್ಲಿ ಹಮ್ಮಿ​ಕೊ​ಳ್ಳಲು ನಿರ್ಧ​ರಿ​ಸ​ಲಾ​ಗಿ​ರುವ ಹಾಥ್‌ ಸೆ ಹಾಥ್‌ ಜೋಡೋ ಅಭಿ​ಯಾ​ನದ ಲೋಗೋ​ವನ್ನು ಕಾಂಗ್ರೆಸ್‌ ಶನಿ​ವಾರ ಬಿಡು​ಗಡೆ ಮಾಡಿತು. ಜಮ್ಮು ಕಾಶ್ಮೀ​ರ​ದಲ್ಲಿ ನಡೆ​ಯು​ತ್ತಿ​ರುವ ಪಾದ​ಯಾ​ತ್ರೆ​ಯಲ್ಲಿ ಭಾಗಿ​ಯಾ​ದ ಪ್ರಧಾನ ಕಾರ‍್ಯ​ದ​ರ್ಶಿ​ಗ​ಳಾದ ಜೈರಾಂ ರಮೇಶ್‌ ಮತ್ತು ಕೆ.ಸಿ.​ವೇ​ಣು​ಗೋ​ಪಾಲ್‌ ಈ ಲೋಗೋ ಬಿಡು​ಗಡೆ ಮಾಡಿ​ದರು. ಇದು ಬಹು​ಪಾಲು ಭಾರತ್‌ ಜೋಡೋ ಯಾತ್ರೆಯ ಲೋಗೋ​ವನ್ನೇ ಹೋಲು​ತ್ತಿದ್ದು, ಹೆಚ್ಚು​ವ​ರಿ​ಯಾಗಿ ಕಾಂಗ್ರೆ​ಸ್‌ನ ಗುರು​ತಾದ ‘ಕೈ’ ಚಿಹ್ನೆ​ಯನ್ನು ಅಳ​ವ​ಡಿ​ಸ​ಲಾ​ಗಿದೆ.

ಇದನ್ನೂ ಓದಿ: ನಾನು RSS ಕಚೇರಿಗೆ ಬರ್ಬೇಕಾದ್ರೆ ನನ್ನ ತಲೆ ಕಡೀಬೇಕಷ್ಟೇ: ರಾಹುಲ್‌ ಗಾಂಧಿ

ಚಾರ್ಜ್‌ಶೀಟಲ್ಲಿ ಏನು ಆರೋಪ..?
- ಕೆಲವೇ ಕೆಲವರಿಗೆ ಸಾಲ ಮನ್ನಾ
- ದೇಶದ ಶೇ.64 ಸಂಪತ್ತು ಕೇವಲ ಶೇ.10 ಜನರಲ್ಲಿ ಕ್ರೋಡೀಕರಣ
- ಪ್ರಧಾನಿ ಮಿತ್ರರಿಗೆ ಏರ್‌ಪೋರ್ಟ್‌ ‘ಗಿಫ್ಟ್‌’
- ಪ್ರಚಾರಕ್ಕೆ ಬಿಜೆಪಿಯಿಂದ ಕೋಟಿಗಟ್ಟಲೇ ಖರ್ಚು
- ದೇಶದಲ್ಲಿ ಆಹಾರ ಕೊರತೆ, ನಿರುದ್ಯೋಗ ತಾಂಡವ
- ರೈತರ ಸ್ಥಿತಿ ಅಯೋಮಯ, ಮಹಿಳಾ ಸುರಕ್ಷತೆ ಇಲ್ಲ
- ಬಿಜೆಪಿಯಿಂದ ಬರೀ ದ್ವೇಷ ಕಾರುವ ಭಾಷಣ

ಇದನ್ನೂ ಓದಿ: ಭಾರತ್‌ ಜೋಡೋ ಯಾತ್ರೆ ವೇಳೆ ರಾಹುಲ್‌ ಗಾಂಧಿಯನ್ನು ತಬ್ಬಿಕೊಂಡ ಅಭಿಮಾನಿ: ತಳ್ಳಿದ ಕಾಂಗ್ರೆಸ್‌ ಕಾರ್ಯಕರ್ತರು

Follow Us:
Download App:
  • android
  • ios