Asianet Suvarna News Asianet Suvarna News

ಅನಂತ್‌ ವಿರುದ್ಧ ಕಾಂಗ್ರೆಸ್‌ ಕೆಂಡ: ಬೆಂಗಳೂರಲ್ಲಿ ಪ್ರತಿಭಟನೆ, ಕುಮಟಾದಲ್ಲಿ ಕೇಸ್‌ ದಾಖಲು

ಬೆಂಗಳೂರಿನ ರೇಸ್‌ ಕೋರ್ಸ್‌ ರಸ್ತೆಯ ಪಕ್ಷದ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಿ ಅನಂತ್ ಕುಮಾರ್‌ ಅವರ ಪ್ರತಿಕೃತಿ ದಹಿಸಿ ಅಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ಸಿಗರು, ಅವರನ್ನು ಗಡೀಪಾರು ಮಾಡುವಂತೆ ಆಗ್ರಹಿಸಿದ್ದಾರೆ. ಈ ನಡುವೆ ಅನಂತಕುಮಾರ್‌ ಹೆಗಡೆ ವಿರುದ್ಧ ಕುಮಟಾ ಪೊಲೀಸರಿಂದ ಸುಮೋಟೋ ಪ್ರಕರಣ ದಾಖಲಾಗಿದೆ. 

congress protest in bengaluru against anantkumar hegde s statement kumta police file suo motu case ash
Author
First Published Jan 15, 2024, 7:40 AM IST

ಬೆಂಗಳೂರು (ಜನವರಿ 15, 2024): ಮುಖ್ಯಮಂತ್ರ ಸಿದ್ದರಾಮಯ್ಯ ವಿರುದ್ಧ ಉತ್ತರ ಕನ್ನಡ ಸಂಸದ ಅನಂತಕುಮಾರ್‌ ಹೆಗಡೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಕಾಂಗ್ರೆಸ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಅನಂತಕುಮಾರ್‌ ಅವರು ಸಿದ್ದರಾಮಯ್ಯ ಅವರ ಕಾಳಿನ ಧೂಳಿಗೂ ಸಮನಲ್ಲ, ಅವರು ಹದ್ದು ಮೀರಿ ಮಾತನಾಡುತ್ತಿದ್ದಾರೆ. ಈ ರೀತಿಯ ಹೇಳಿಕೆಗೆ ಜನರೇ ಉತ್ತರ ಕೊಡುತ್ತಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಮತ್ತಿತರರು ಕಿಡಿ ಕಾರಿದ್ದಾರೆ. 

ಇದೇ ವೇಳೆ ಬೆಂಗಳೂರಿನ ರೇಸ್‌ ಕೋರ್ಸ್‌ ರಸ್ತೆಯ ಪಕ್ಷದ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಿ ಅನಂತ್ ಕುಮಾರ್‌ ಅವರ ಪ್ರತಿಕೃತಿ ದಹಿಸಿ ಅಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ಸಿಗರು, ಅವರನ್ನು ಗಡೀಪಾರು ಮಾಡುವಂತೆ ಆಗ್ರಹಿಸಿದ್ದಾರೆ. ಈ ನಡುವೆ ಅನಂತಕುಮಾರ್‌ ಹೆಗಡೆ ವಿರುದ್ಧ ಕುಮಟಾ ಪೊಲೀಸರಿಂದ ಸುಮೋಟೋ ಪ್ರಕರಣ ದಾಖಲಾಗಿದೆ. 

ಇದನ್ನು ಓದಿ: ಅನಂತ ಕುಮಾರ ಹೆಗಡೆ ಜಾತಿ, ಧರ್ಮ ಬೇರೆ ಮಾಡಿಯೇ ರಾಜಕಾರಣ ಮಾಡಿದವರು: ಸಚಿವ ನಾಗೇಂದ್ರ

ಅನಂತ್ ಕುಮಾರ್‌ ಹೆಗಡೆ ಹೇಳಿದ್ದೇನು?  
ಹಿಂದೂ ಸಮಾಜವನ್ನು ಜಾತಿ, ಭಾಷೆ, ಪ್ರಾದೇಶಿಕತೆ ಆಧಾರದಲ್ಲಿ ಒಡೆಯುತ್ತಾ ಬರಲಾಗಿದೆ. ಮೂರ್ಖರಾಮಯ್ಯನಂಥವರು ಈಗಲೂ ಸಮಾಜವನ್ನು ಒಡೆಯುತ್ತಲೇ ಇದ್ದಾರೆ. ಈ ಬಾರಿ ಅವರಿಗೆ ಯಾವ ರೀತಿಯ ಹೊಡೆತ ನೀಡಬೇಕೆಂದರೆ ಪುನರ್‌ಜನ್ಮವೂ ಸಿಗಬಾರದು ಎಂದು ಹೇಳಿ ಏಕವಚನದಲ್ಲೇ ಸಿದ್ದರಾಮಯ್ಯ ವಿರುದ್ಧ ಹೆಗಡೆ ಆಕ್ರೋಶ ವ್ಯಕ್ತಪಡಿಸಿದ್ದರು.

ಹೆಗಡೆಗೆ ಏನೋ ಆಗಿದೆ
ಅನಂತ್ ಹೆಗಡೆ ಇಷ್ಟು ದಿನ ವಿಶ್ರಾಂತಿಯಲ್ಲಿದ್ದರು. ಈಗ ಬಂದು ಏನೇನೋ ಮಾತಾಡುತ್ತಿದ್ದಾರೆ. ಜನರೇ ಅವರಿಗೆ ಉತ್ತರ ಕೊಡುತ್ತಾರೆ. 

- ಡಿ. ಕೆ. ಶಿವಕುಮಾರ್, ಡಿಸಿಎಂ

ಅನಂತ್ ಕುಮಾರ್ ಹೆಗಡೆ ಹೇಳಿಕೆಯಿಂದ ಅಂತರ ಕಾಯ್ದುಕೊಂಡರಾ ಬಿಜೆಪಿ ನಾಯಕರು?

ಇಷ್ಟು ದಿನ ನಾಪತ್ತೆ ಆಗಿದ್ದರು
ಇಷ್ಟು ದಿನ ನಾಪತ್ತೆ ಆಗಿದ್ದವರು ಈಗ ದಿಢೀರ್‌ ಪ್ರತ್ಯಕ್ಷವಾಗಿದ್ದಾರೆ. ಮೋದಿ ಬಗ್ಗೆ ಈ ರೀತಿ ಮಾತಾಡಿದರೆ ಅವರು ಸುಮ್ಮನಿರುತ್ತಾರೆಯೇ? 

 - ಜಗದೀಶ್‌ ಶೆಟ್ಟರ್, ಮಾಜಿ ಮುಖ್ಯಮಂತ್ರಿ 
ಹಿಂದೂ ಧರ್ಮ ನಿಮ್ಮಪ್ಪನ ಮನೆ ಆಸ್ತಿ ಅಲ್ಲ: ಅನಂತ್ ಕುಮಾರ್ ಹೆಗಡೆಗೆ ಪ್ರದೀಪ್‌ ಈಶ್ವರ್‌ ಗುಡುಗು

ಅನಂತ್ ಕುಮಾರ್ ಹೆಗಡೆ ಯಾವ ಪುಟಗೋಸಿ? ಸಿಎಂ ಕಾಲಿನ ಧೂಳಿಗೂ ಸಮನಲ್ಲ: ಸಚಿವ ತಂಗಡಗಿ ಆಕ್ರೋಶ

Follow Us:
Download App:
  • android
  • ios