Asianet Suvarna News Asianet Suvarna News

ಮೋದಿ ಮಣಿಸಲು ವಿಪಕ್ಷ ಮಹಾಮೈತ್ರಿಗೆ ಕಾಂಗ್ರೆಸ್‌ನಿಂದ ಸಿದ್ಧತೆ

ಬಿಜೆಪಿಯನ್ನು ಎದುರಿಸಿ, ಅದನ್ನು ಅಧಿಕಾರದಿಂದ ಕೆಳಗಿಳಿಸಲು 2024ರ ಲೋಕಸಭೆ ಚುನಾವಣೆಗೂ ಮುನ್ನ ಪ್ರತಿಪಕ್ಷಗಳ ಮೈತ್ರಿಕೂಟ ರಚಿಸಬೇಕು ಎಂಬುದನ್ನು ಕಾಂಗ್ರೆಸ್‌ ಮನಗಂಡಿದೆ. ಈ ನಿಟ್ಟಿನಲ್ಲಿ ಈಗಾಗಲೇ ಹಲವು ರಾಜಕೀಯ ಪಕ್ಷಗಳ ಜತೆ ಸಂಪರ್ಕದಲ್ಲಿದೆ. 

Congress Prepares for Grand Opposition Alliance to Defeat PM Narendra Modi in India grg
Author
First Published Feb 20, 2023, 12:00 AM IST

ನವದೆಹಲಿ(ಫೆ.20): ಸತತ 2 ಲೋಕಸಭೆ ಚುನಾವಣೆಗಳಲ್ಲಿ ಸೋಲು ಕಂಡಿರುವ ಕಾಂಗ್ರೆಸ್‌ ಪಕ್ಷ 2024ರ ಲೋಕಸಭೆ ಚುನಾವಣೆಗೂ ಮುನ್ನ ಪ್ರತಿಪಕ್ಷಗಳ ಮಹಾಕೂಟವನ್ನು ಅಸ್ತಿತ್ವಕ್ಕೆ ತರುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇರಿಸಿದೆ. ಫೆ.24ರಿಂದ ಛತ್ತೀಸ್‌ಗಢ ರಾಜಧಾನಿ ರಾಯಪುರದಲ್ಲಿ ಮೂರು ದಿನಗಳ ಕಾಲ ಕಾಂಗ್ರೆಸ್‌ ಮಹಾಧಿವೇಶನ ನಡೆಯಲಿದ್ದು, ಅಲ್ಲಿ ವಿಪಕ್ಷಗಳ ಮೈತ್ರಿಕೂಟ ಹಾಗೂ ಅದರ ಬಲಪಡಿಸುವಿಕೆ ಕುರಿತು ಮಹತ್ವದ ಚರ್ಚೆಯನ್ನು ನಡೆಸಲು ನಿರ್ಧರಿಸಿದೆ.

ಇದೇ ವೇಳೆ, ಪಕ್ಷದ ಪರಮೋಚ್ಚ ನೀತಿ ನಿರೂಪಣಾ ಸಂಸ್ಥೆಯಾಗಿರುವ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಹುದ್ದೆಗಳಿಗೆ ಚುನಾವಣೆ ನಡೆಸಬೇಕೆ ಎಂಬ ಕುರಿತು ಅಧಿವೇಶನದ ಮೊದಲ ದಿನವೇ ತೀರ್ಮಾನ ಕೈಗೊಳ್ಳಲಿದೆ. ಈ ಕುರಿತು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 100 ಸ್ಥಾನ ದಾಟಲ್ಲ, ನಿತೀಶ್ ಕುಮಾರ್ ಭವಿಷ್ಯ!

ಬಿಜೆಪಿಯನ್ನು ಎದುರಿಸಿ, ಅದನ್ನು ಅಧಿಕಾರದಿಂದ ಕೆಳಗಿಳಿಸಲು 2024ರ ಲೋಕಸಭೆ ಚುನಾವಣೆಗೂ ಮುನ್ನ ಪ್ರತಿಪಕ್ಷಗಳ ಮೈತ್ರಿಕೂಟ ರಚಿಸಬೇಕು ಎಂಬುದನ್ನು ಕಾಂಗ್ರೆಸ್‌ ಮನಗಂಡಿದೆ. ಈ ನಿಟ್ಟಿನಲ್ಲಿ ಈಗಾಗಲೇ ಹಲವು ರಾಜಕೀಯ ಪಕ್ಷಗಳ ಜತೆ ಸಂಪರ್ಕದಲ್ಲಿದೆ. 2024ರ ಚುನಾವಣೆಗೆ ಎಲ್ಲರನ್ನೂ ಬಿಜೆಪಿ ವಿರುದ್ಧ ಒಗ್ಗೂಡಿಸುತ್ತೇವೆ ಎಂದು ಅವರು ಹೇಳಿದ್ದಾರೆ. ಕಾಂಗ್ರೆಸ್‌ ಪಕ್ಷವಿಲ್ಲದೆ ಬಲಿಷ್ಠ ಪ್ರತಿಪಕ್ಷಗಳ ಕೂಟ ಅಸಾಧ್ಯ ಎಂದು ಮತ್ತೊಬ್ಬ ಹಿರಿಯ ನಾಯಕ ಜೈರಾಮ್‌ ರಮೇಶ್‌ ಕೂಡ ತಿಳಿಸಿದ್ದಾರೆ.

Follow Us:
Download App:
  • android
  • ios