2024ರ ಲೋಕಸಭಾ ಚುನಾವಣೆ ಚರ್ಚೆಗಳು ಶುರುವಾಗಿದೆ. ಕಾಂಗ್ರೆಸ್ ಈಗಾಗಲೇ ತಯಾರಿ ಆರಂಭಿಸಿದೆ. ವಿಪಕ್ಷಗಳ ಮೈತ್ರಿಯಾಗಿ ಬಿಜೆಪಿ ವಿರುದ್ಧ ಮುಗಿಬೀಳಲು ಕಳೆದ ವರ್ಷದಿಂದಲೇ ಪ್ರಯತ್ನ ನಡೆಯುತ್ತಿದೆ. ಇದೀಗ ಬಿಹಾರ ಸಿಎಂ ನಿತೀಶ್ ಕುಮಾರ್ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಭವಿಷ್ಯ ಹೇಳಿದ್ದಾರೆ. 

ಪಾಟ್ನಾ(ಫೆ.18): ಎಲ್ಲಾ ಪಕ್ಷಗಳ ಲೋಕಸಭಾ ಚುನಾವಣಾ ತಯಾರಿಗಳು ಆರಂಭಗೊಂಡಿದೆ. ಕಾಂಗ್ರೆಸ್ ಈಗಾಗಲೇ ಭಾರತ್ ಜೋಡೋ ಯಾತ್ರೆ ಮೂಲಕ ಲೋಕಸಭೆಗೆ ಸಜ್ಜಾಗಿದೆ. ಇತ್ತ ಬಿಜೆಪಿ ಸೈಲೆಂಟ್ ಆಗಿ ತಯಾರಿ ನಡೆಸುತ್ತಿದೆ. 2024ರ ಚುನಾವಣೆ ಗೆಲ್ಲಲು ಪಕ್ಷಗಳು ಭಾರಿ ಕಸರತ್ತು ನಡೆಸುತ್ತಿದೆ. ಇದರ ನಡುವೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೊಸ ಬಾಂಬ್ ಸ್ಫೋಟಿಸಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೇರಿದಂತೆ ಎಲ್ಲಾ ವಿಪಕ್ಷಗಳು ಒಗ್ಗಟ್ಟಾಗಬೇಕು ಎಂದು ಕರೆ ನೀಡಿದ್ದಾರೆ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ವಿಪಕ್ಷಗಳು ಒಂದಾಗಿ ಚುನಾವಣೆ ಎದುರಿಸಬೇಕು. ಹೀಗಾದಲ್ಲಿ ಬಿಜೆಪಿ 100 ಸ್ಥಾನ ಗೆಲ್ಲುವುದು ಕಷ್ಟವಾಗಲಿದೆ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.

ಪಾಟ್ನಾದಲ್ಲಿ ಆಯೋಜಿಸಿದ ಸಿಪಿಐ(ಎಂ) 11ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ನಿತೀಶ್ ಕುಮಾರ್, ಮೈತ್ರಿಯ ಅಗತ್ಯತೆಯನ್ನು ಒತ್ತಿಹೇಳಿದ್ದಾರೆ. 2024ರಲ್ಲಿ ಬಿಜೆಪಿ ಸೋಲಿಸಲು ಎಲ್ಲಾ ಪಕ್ಷಗಳು ಒಗ್ಗಟ್ಟಾಗಬೇಕು. ಕಾಂಗ್ರೆಸ್ ನನ್ನ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ ಎಲ್ಲಾ ಪಕ್ಷಗಳ ಜೊತೆ ಒಂದಾಗಿ ಚುನಾವಣೆ ಎದುರಿಸಿದರೆ ಬಿಜೆಪಿ ಸ್ಥಾನ 100 ದಾಟುವುದು ಕಷ್ಟವಾಗಲಿದೆ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.ಈ ಸಭೆಯಲ್ಲಿ ಕಾಂಗ್ರೆಸ್, ಸಿಪಿಎಂ ಸೇರಿದಂತೆ ಹಲವು ಪಕ್ಷಗಳ ನಾಯಕರು ಪಾಲ್ಗೊಂಡಿದ್ದರು. 

ತಮಿಳುನಾಡಿನಿಂದ ಪ್ರಧಾನಿ ಮೋದಿ ಲೋಕಸಭೆಗೆ ಸ್ಪರ್ಧೆ?

ದೇಶವನ್ನು ದ್ವೇಷಬಿತ್ತುವ ಪಕ್ಷದಿಂದ ದೂರವಿಡಬೇಕು. ಇದಕ್ಕಾಗಿ ವಿಪಕ್ಷಗಳು ಒಂದಾಗಬೇಕು. ನಾನು ನಿಮ್ಮ ಜೊತೆಗಿರುತ್ತೇನೆ ಎಂದು ನಿತೀಶ್ ಕುಮಾರ್ ಸಿಪಿಐ(ಎಂ) ಪಕ್ಷದ ಸಭೆಯಲ್ಲಿ ಹೇಳಿದ್ದಾರೆ. ಬಿಜೆಪಿ ಜೊತೆ ಮೈತ್ರಿ ಮುರಿದು ಇದೀಗ ಆರ್‌ಜೆಡಿ ಜೊತೆ ಸರ್ಕಾರ ರಚಿಸಿರುವ ನಿತೀಶ್ ಕುಮಾರ್, ಇದೀಗ ಸಿಪಿಐ(ಎಂ) ಜೊತೆ ಲೋಕಸಭೆಗಾಗಿ ಮೈತ್ರಿಗೆ ಮುಕ್ತವಾಗಿದ್ದಾರೆ ಎಂಬ ಸೂಚನೆ ನೀಡಿದ್ದಾರೆ. ಇತ್ತ ಕಾಂಗ್ರೆಸ್ ನಾಯಕರು ವಿಪಕ್ಷಗಳ ಒಕ್ಕೂಟ ಸೇರಿಕೊಂಡು ಮೋದಿ ಎದುರಿಸಲು ಸಲಹೆ ನೀಡಿದ್ದಾರೆ.

Scroll to load tweet…

ಸಿಪಿಐ(ಎಂ) ಪಕ್ಷದ ಸಭೆಯಲ್ಲಿ ಬಿಹಾರ ಮಾಜಿ ಮುಖ್ಯಮಂತ್ರಿ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, ಬಿಹಾರ ಮಾಜಿ ಮುಖ್ಯಮಂತ್ರಿ ಜಿತಿನ್ ರಾಮ್ ಮಾಂಜಿ, ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದರು. 

ಲೋಕಸಭೆ ಹಾಗೂ ವಿಧಾನಸಭೆ ಉಪ ಚುನಾವಣಾ ದಿನಾಂಕ ಘೋಷಣೆ, ಫೆ.27ಕ್ಕೆ ಮತದಾನ!

2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಲೆಯಲ್ಲಿ ನಿಲ್ಲಿಸಲು ವಿಪಕ್ಷಗಳಿಗೆ ಸಾಧ್ಯ. ಆದರೆ ಒಗ್ಗಟ್ಟಾಗಿ ಹೋರಾಡಬೇಕು ಅನ್ನೋ ಸೂಚನೆಯನ್ನು ನಿತೀಶ್ ಕುಮಾರ್ ನೀಡಿದ್ದಾರೆ. ಈ ಮೂಲಕ ವಿಪಕ್ಷಗಳು ಪ್ರತ್ಯೇಕವಾಗಿ ಹೋರಾಡಿದರೆ ಬಿಜೆಪಿ ಸೋಲಿವುದು ಕಷ್ಟ ಎಂದಿದ್ದಾರೆ. ಇಷ್ಟೇ ಅಲ್ಲ ಕಾಂಗ್ರೆಸ್ ಈ ಬಾರಿ ವಿಪಕ್ಷಗಳ ಜೊತೆಗೂಡಿ ಚುನಾವಣೆ ಎದುರಿಸುವ ಬದಲು ಸ್ವಂತ ಬಲದಿಂದ ಹೋರಾಟಕ್ಕೆ ಮನಸ್ಸು ಮಾಡಿದೆ. ಇತ್ತ ಪಶ್ಚಿಮಂ ಬಂಗಾಳದ ಟಿಎಂಸಿ ಪಕ್ಷ ಕಾಂಗ್ರೆಸ್ ಮುನಿಸಿಕೊಂಡಿದೆ. ಹೀಗಾಗಿ ಎಲ್ಲಾ ಪಕ್ಷಗಳ ಮೈತ್ರಿ ಅಸಾಧ್ಯ ಎನ್ನುವ ಮಾತುಗಳು ಕೇಳಿಬರುತ್ತಿದೆ. ಕಾಂಗ್ರೆಸ್ ಏಕಾಂಗಿಯಾಗಿ ಗೆದ್ದು ಅಧಿಕಾರಿ ಹಿಡಿಯುವ ಹುಮ್ಮಸ್ಸಿನಲ್ಲಿದೆ. ಆದರೆ ನಿತೀಶ್ ಕುಮಾರ್ ಪರೋಕ್ಷವಾಗಿ ಕಾಂಗ್ರೆಸ್ ನಾಯಕರಲ್ಲಿ ಮೈತ್ರಿ ಮಾಡಿಕೊಂಡರೆ ಮಾತ್ರ ಗೆಲುವು ಸಾಧ್ಯ ಅನ್ನೋ ಭವಿಷ್ಯ ನುಡಿದಿದ್ದಾರೆ. ಇದು ಕಾಂಗ್ರೆಸ್ ತಳಮಳ ಹೆಚ್ಚಿಸಿದೆ.