Asianet Suvarna News Asianet Suvarna News

ಮುದ್ರಣ ಕಾಶಿ​ಯಲ್ಲಿಂದು ಪ್ರಜಾ​ಧ್ವನಿ ಯಾತ್ರೆ: ಕೈ ಶಕ್ತಿ ಪ್ರದರ್ಶನಕ್ಕೆ ಅಂತಿಮ ಸಿದ್ಧತೆ

  • ಮುದ್ರಣ ಕಾಶಿ ಗದಗದಲ್ಲಿಂದು ಪ್ರಜಾ​ಧ್ವನಿ ಯಾತ್ರೆ
  •  ಕೈ ಶಕ್ತಿ ಪ್ರದ​ರ್ಶ​ನಕ್ಕೆ ಅಂತಿಮ ಸಿದ್ಧತೆ
  •  ಕಾರ್ಯಕ್ರಮದಲ್ಲಿ 50 ಸಾವಿರಕ್ಕೂ ಅಧಿಕ ಕಾರ್ಯಕರ್ತು ಭಾಗಿಯಾಗುವ ನಿರೀಕ್ಷೆ
  •  ಯಾತ್ರೆಯಲ್ಲಿ ಡಿ.ಕೆ.ಶಿ, ಸಿದ್ದರಾಮಯ್ಯ ಸೇರಿದಂತೆ ಪಕ್ಷದ ಪ್ರಮುಖರು ಭಾಗಿ
Congress prajadhwani yatra in gadag today rav
Author
First Published Jan 18, 2023, 7:26 AM IST

ಗದಗ (ಜ.18) : ಪ್ರಜಾಧ್ವನಿ ಕಾರ್ಯಕ್ರಮದ ಮೂಲಕ ರಾಜ್ಯದ ಜನರ ನಾಡಿಮಿಡಿತ ಅರಿಯುವುದಕ್ಕಾಗಿ ಕಾಂಗ್ರೆಸ್‌ನ ಪ್ರಜಾಧ್ವನಿ ಯಾತ್ರೆ ಗದ​ಗ-ಬೆಟ​ಗೇರಿ ಅವಳಿ ನಗ​ರ​ದಲ್ಲಿ ಜ. 18 ರಂದು ಬುಧ​ವಾರ ಸಂಜೆ 4ಕ್ಕೆ ನಗ​ರದ ಮುನ್ಸಿ​ಪಲ್‌ ಕಾಲೇಜು ಆವ​ರ​ಣ​ದಲ್ಲಿ ನಡೆಯಲಿದ್ದು ಆ ಬೃಹತ್‌ ವೇದಿ​ಕೆ​ಯಲ್ಲಿ ಕೈ ಶಕ್ತಿ ಪ್ರದ​ರ್ಶ​ನಕ್ಕೆ ಅಂತಿಮ ಸಿದ್ಧತೆ ಮಾಡಿಕೊಂಡಿದೆ.

ಕಾರ್ಯ​ಕ್ರ​ಮ​ದಲ್ಲಿ ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ. ​ಶಿ​ವ​ಕು​ಮಾರ, ಪ್ರತಿ​ಪಕ್ಷ ನಾಯಕ ಸಿದ್ದ​ರಾ​ಮಯ್ಯ, ವಿಧಾನಪರಿ​ಷ​ತ್‌ ವಿಪಕ್ಷ ನಾಯಕ ಬಿ.ಕೆ. ​ಹ​ರಿ​ಪ್ರ​ಸಾದ್‌, ರಾಜ್ಯ ಉಸ್ತು​ವಾರಿ ರಣ​ದೀಪ್‌ ಸಿಂಗ್‌ ಸುರ್ಜೇ​ವಾಲ್‌, ಪಕ್ಷದ ಮುಖಂಡ​ರಾದ ಎಂ.ಬಿ.​ ಪಾ​ಟೀಲ್‌, ಈಶ್ವರ ಖಂಡ್ರೆ, ಸಲೀಂ ಅಹ್ಮದ್‌, ಸತೀಶ್‌ ಜಾರಕಿಹೊಳಿ, ಎಂ.ಬಿ. ಪಾಟೀಲ, ದ್ರುವನಾರಾಯಣ, ಮಯೂರ ಜಯಕುಮಾರ, ರಾಮಲಿಂಗರೆಡ್ಡಿ ಸೇರಿ​ದಂತೆ ಪಕ್ಷದ ಪ್ರಮುಖ ಮುಖಂಡರು ಜಿಲ್ಲೆಯ ಶಾಸಕ ಎಚ್‌.​ಕೆ. ​ಪಾ​ಟೀಲ, ಮಾಜಿ ಶಾಸಕ ಡಿ.ಆ​ರ್‌. ​ಪಾ​ಟೀಲ, ಮಾಜಿ ಶಾಸಕ, ಜಿಲ್ಲಾಧ್ಯಕ್ಷ ಜಿ.ಎ​ಸ್‌.​ಪಾ​ಟೀಲ, ಮಾಜಿ ಸಚಿವ ಬಿ.ಆ​ರ್‌. ​ಯಾ​ವ​ಗಲ್ಲ ಹಾಗೂ ಪಕ್ಷದ ಘಟಾ​ನು​ಘಟಿ ನಾಯ​ಕರು ಭಾಗ​ವ​ಹಿ​ಸ​ಲಿ​ದ್ದಾರೆ.

'ಬಿಜೆಪಿ ಭ್ರಷ್ಟಾಚಾರದ ವಿರುದ್ಧ ಪ್ರಜಾಧ್ವನಿ ಯಾತ್ರೆ'

50 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಭಾಗಿ:

ಗದಗ ನಗರದ ಮುನ್ಸಿ​ಪಲ್‌ ಕಾಲೇಜು ಆವ​ರ​ಣ​ದಲ್ಲಿ ಈಗಾಗಲೇ ಇದಕ್ಕಾಗಿ ಬೃಹತ್‌ ವೇದಿಕೆ ನಿರ್ಮಿಸಿದ್ದು, ಕಾರ್ಯಕ್ರಮಕ್ಕೆ ಜಿಲ್ಲೆಯ 7 ತಾಲೂಕುಗಳಿಂದ 50 ಸಾವಿರಕ್ಕೂ ಅಧಿಕ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಕಾರ್ಯ​ಕ್ರ​ಮಕ್ಕೆ ಬರುವ ಜನ​ತೆಗೆ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಕಾಂಗ್ರೆ​ಸ್‌ನ ಭದ್ರ​ಕೋ​ಟೆ​ಯಾ​ಗಿರುವ ಗದಗ ಜಿಲ್ಲೆಯಲ್ಲಿ ಮತ್ತೆ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಈ ಪ್ರಜಾಧ್ವನಿ ಕಾರ್ಯಕ್ರಮ ಪ್ರಮುಖ ಪಾತ್ರವಹಿಸಲಿದೆ. ಇದಕ್ಕಾಗಿ ಪಕ್ಷದ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಎಲ್ಲ ನಾಯಕರು ಆಗಮಿಸುತ್ತಿದ್ದು, ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು.

- ಜಿ.ಎಸ್‌. ಪಾಟೀಲ. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ, ಮಾಜಿ ಶಾಸಕ

ಬಿಜೆಪಿ ಪಕ್ಷದ ದುರಾಡ​ಳಿ​ತ​ವು ರಾಜ್ಯಕ್ಕೆ ಕಳಂಕ​ವನ್ನು ತಂದಿ​ದೆ. ಬಿಜೆ​ಪಿಯ ದುರಾ​ಡ​ಳಿತ, ಬಡ​ವಿ​ರೋಧಿ ನೀತಿ​ಯಿಂದ ರಾಜ್ಯದ ಜನತೆ ಬೇಸ​ತ್ತಿದ್ದು, ಈ ಬಾರಿ ಜಿಲ್ಲೆ​ಯಲ್ಲಿ ಕಾಂಗ್ರೆಸ್‌ ಪಕ್ಷವು 4 ಸ್ಥಾನ​ಗ​ಳಲ್ಲಿ ಬಹು​ಮ​ತ​ದಿಂದ ಗೆಲವು ಸಾಧಿಸು​ವುದರಲ್ಲಿ ಯಾವುದೇ ಸಂಶಯವಿಲ್ಲ. ಪ್ರಜಾ​ಧ್ವನಿ ಕಾರ್ಯ​ಕ್ರ​ಮ ಪಕ್ಷ ಸಂಘ​ಟ​ನೆಗೆ ಭಾರಿ ಬಲ ನೀಡ​ಲಿ​ದೆ.

- ಬಸ​ವ​ರಾಜ ಸುಂಕಾ​ಪುರ, ಮುಳ​ಗುಂದ ಬ್ಲಾಕ್‌ ಕಾಂಗ್ರೆಸ್‌ ಅಧ್ಯ​ಕ್ಷ

ಕಾಂಗ್ರೆಸ್‌ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದು, ಬಿಜೆಪಿ ಸರ್ಕಾರದ ದುರಾಡಳಿತವನ್ನು ಸಾರ್ವಜನಿಕರಿಗೆ ತಿಳಿಸುವುದು, ಜನರ ನಾಡಿಮಿಡತ ಅರಿವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದ್ದು, ನಮ್ಮ ಪಕ್ಷದ ಹಿರಿಯರು ಜಿಲ್ಲೆಯ ಜನತೆಗೆ ಕಾಂಗ್ರೆಸ್‌ ಅಧಿಕಾರವಧಿಯಲ್ಲಿನ ಜನಪರ ಕಾರ್ಯಗಳ ಬಗ್ಗೆ ತಿಳಿಸಲಿದ್ದಾರೆ.

- ವಿ.ಬಿ. ಸೋಮನಕಟ್ಟಿಮಠ, ಜಿಲ್ಲಾ ಕಾಂಗ್ರೆಸ್‌ನ ಮಹಾ ಪ್ರಧಾನ ಕಾರ್ಯದರ್ಶಿ

ದೇಶ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಜನ ವಿರೋಧಿ ಆಡಳಿತದಿಂದಾಗಿ ಜನರು ಬೇಸತ್ತು ಹೋಗಿದ್ದಾರೆ. ಬೆಲೆ ಏರಿಕೆಯಿಂದಾಗಿ ಕಂಗೆಟ್ಟು ಹೋಗಿದ್ದಾರೆ. ಜನರಿಗೆ ಇದನ್ನು ತಿಳಿಸುವುದು, ಕಾಂಗ್ರೆಸ್‌ ಪಕ್ಷದ ಅಧಿಕಾರಾವಧಿಯಲ್ಲಿ ಬಡವರ ಪರವಾಗಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ತಿಳಿಸಲಾಗುವುದು.

- ಅಶೋಕ ಮಂದಾಲಿ, ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ

ಕಾಂಗ್ರೆಸ್‌ ಪ್ರಜಾಧ್ವನಿ ಬಸ್‌ ಯಾತ್ರೆ ಇಂದು ಪುನಾರಂಭ: ಹೊಸಪೇಟೆ, ಕೊಪ್ಪಳದಲ್ಲಿ ಬೃಹತ್‌ ಸಮಾವೇಶ 

Follow Us:
Download App:
  • android
  • ios