Asianet Suvarna News Asianet Suvarna News

ಕಾಂಗ್ರೆಸ್‌ ರಾಜಕಾರಣ ಸಂಪೂರ್ಣ ಬಡವರ ಪರ: ಸಚಿವ ಮಧು ಬಂಗಾರಪ್ಪ

ಕಾಂಗ್ರೆಸ್ ಪಕ್ಷದ ರಾಜಕಾರಣ ಸಂಪೂರ್ಣ ಬಡವರ ಪರವಾಗಿದ್ದು, ಬಿಜೆಪಿ ಮಾತ್ರ ಭಾವನಾತ್ಮಕ ರಾಜಕೀಯದ ಮೂಲಕ ಬಡವರ ಬದುಕನ್ನು ಬೀದಿಗೆ ತರುತ್ತಿದೆ. ಕ್ಷುಲ್ಲಕ ರಾಜಕೀಯದ ಬಿಜೆಪಿಯನ್ನು ಜಿಲ್ಲೆಯಿಂದ ಕಿತ್ತೊಗೆಸಲು ಎಲ್ಲರೂ ಕೈ ಜೋಡಿಸುವಂತೆ ಉಸ್ತುವಾರಿ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮನವಿ ಮಾಡಿದರು.

Congress politics is completely pro poor Says Minister Madhu Bangarappa gvd
Author
First Published Sep 15, 2023, 3:40 AM IST

ಶಿಕಾರಿಪುರ (ಸೆ.15): ಕಾಂಗ್ರೆಸ್ ಪಕ್ಷದ ರಾಜಕಾರಣ ಸಂಪೂರ್ಣ ಬಡವರ ಪರವಾಗಿದ್ದು, ಬಿಜೆಪಿ ಮಾತ್ರ ಭಾವನಾತ್ಮಕ ರಾಜಕೀಯದ ಮೂಲಕ ಬಡವರ ಬದುಕನ್ನು ಬೀದಿಗೆ ತರುತ್ತಿದೆ. ಕ್ಷುಲ್ಲಕ ರಾಜಕೀಯದ ಬಿಜೆಪಿಯನ್ನು ಜಿಲ್ಲೆಯಿಂದ ಕಿತ್ತೊಗೆಸಲು ಎಲ್ಲರೂ ಕೈ ಜೋಡಿಸುವಂತೆ ಉಸ್ತುವಾರಿ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮನವಿ ಮಾಡಿದರು. ಪಟ್ಟಣದಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಎಂದಿಗೂ ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬಂದಿಲ್ಲ. ಏಕೆಂದರೆ ಅವರು ಎಂದಿಗೂ ಒಡೆದು ಆಳುವ, ಭಾವನಾತ್ಮಕ ರಾಜಕೀಯ ಮಾಡುತ್ತಾ ಜನರ ಹಿತಮರೆತಿದ್ದರು. 

ಅದಕ್ಕೆ ವಿಧಾನಸಭೆ ಚುನಾವಣೆಯಲ್ಲಿ ಜನತೆ ತಕ್ಕ ಉತ್ತರ ನೀಡಿದ್ದಾರೆ. ಈಗ ರಾಜ್ಯದಲ್ಲಿ ನಮ್ಮ ಸರಕಾರ ಇದೆ ಆದರೂ ಬೇರೆಯವರು ಅಧಿಕಾರ ನಡೆಸುತ್ತಿದ್ದಾರೆ ಅದಕ್ಕೆ ಅವಕಾಶ ನೀಡಬಾರದು ಕಾಂಗ್ರೆಸ್ ಕಾರ್ಯಕರ್ತರು ಹೆದರುವ ಅಗತ್ಯವಿಲ್ಲ ನೀವು ದೈರ್ಯದಿಂದ ಜನಹಿತಕ್ಕಾಗಿ ಅಧಿಕಾರ ಚಲಾಯಿಸಿ ಅದಕ್ಕೆ ನಾನು ನಿಮ್ಮೊಂದಿಗೆ ಇರುತ್ತೇನೆ ಹೋರಾಟದ ತವರು ಶಿವಮೊಗ್ಗ ಜಿಲ್ಲೆಯಿಂದ ಬಿಜೆಪಿ ಕಿತ್ತೊಗೆಯುವ ಕೆಲಸ ಮುಂಬರುವ ಲೋಕಸಭೆ,ತಾ.ಪಂ.ಜಿ.ಪಂ. ಚುನಾವಣೆಯಲ್ಲಿ ಆಗಬೇಕಿದೆ ಅದಕ್ಕಾಗಿ ನಮ್ಮಲ್ಲಿರುವ ಭಿನ್ನಾಬಿಪ್ರಾಯ ಕಿತ್ತೊಗೆದು ಒಂದಾಗಬೇಕಿದೆ ಅದಕ್ಕೆ ಈ ವೇದಿಕೆ ಸಹಕಾರಿಯಾಗಲಿ ಎಂದು ತಿಳಿಸಿದರು.

ಉತ್ತರ ಭಾರತದ ಪಪ್ಪು ರಾಹುಲ್ ಗಾಂಧಿ, ದಕ್ಷಿಣದ ಪಪ್ಪು ಉದಯನಿಧಿ ಸ್ಟಾಲಿನ್: ಶ್ರೀರಾಮುಲು

ಶಿಕಾರಿಪುರ, ಸೊರಬ ತಾಲೂಕಿನಲ್ಲಿ ನೀರಾವರಿ ಮಾಡುವ ಕೆಲಸ ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಮಾಡಲಿಲ್ಲ ಅದಕ್ಕಾಗಿ ನಾನು ಪಾದಯಾತ್ರೆ ಮಾಡಿದ್ದಲ್ಲದೆ ಸಮ್ಮಿಶ್ರ ಸರಕಾರದ ಮೊದಲ ಬಜೆಟ್ನಲ್ಲಿ ಯೋಜನೆಗೆ ಮಂಜೂರಾತಿ ನೀಡಿತು. ಯೋಜನೆಗೆ ಹೆಚ್ಚುವರಿ ಹಣ ನೀಡಿ ಭ್ರಷ್ಟಾಚಾರ ಮಾಡಿದ್ದು ಮಾತ್ರ ಬಿಜೆಪಿ.ಸಾವಿರಾರು ಕೋಟಿ ರು. ವ್ಯಯಿಸಿದರೂ ಕೆರೆಗಳಿಗೆ ಸರಿಯಾಗಿ ನೀರು ಬಂದಿಲ್ಲ ಅದನ್ನು ನಾವು ಸರಿಪಡಿಸುತ್ತೇವೆ.ಬಂಗಾರಪ್ಪಾಜಿ ನೀಡಿದ ಬೋರ್ವೆಲ್ಗೆ ಉಚಿತ ವಿದ್ಯುತ್ ಸೇರಿ ಹಲವು ಕಾರ್ಯಕ್ರಮದ ಮೂಲಕ ಇಂದಿಗೂ ಜನರ ಮನಸ್ಸಿನಲ್ಲಿದ್ದಾರೆ. 

ತಂದೆ, ಅಜ್ಜಿಯನ್ನು ಕಳೆದುಕೊಂಡರೂ ರಾಹುಲ್‌ ಗಾಂಧಿ ದೇಶದ ಜನರ ಮನಸ್ಸು ಒಗ್ಗೂಡಿಸುವುದಕ್ಕಾಗಿ ಭಾರತ ಜೋಡಿಸುವ ಯಾತ್ರೆ ಮಾಡಿದ್ದಾರೆ. ಅವರ ಆಶಯದಂತೆ ಉತ್ತಮ ಕಾರ್ಯಕ್ರಮದ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಜನರ ಜೀವನ ಕಟ್ಟುವ ಕೆಲಸ ಮಾಡಿದೆ. ಅದನ್ನು ಜನರ ಮನೆಮನೆಗೆ ಮುಟ್ಟಿಸುವ ಕೆಲಸ ಆಗಬೇಕಿದೆ. ಅದಕ್ಕೆ ಎಲ್ಲರೂ ಕಾರ್ಯಪ್ರವೃತ್ತರಾಗೋಣ ಎಂದು ಹೇಳಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಚಂದ್ರಪ್ಪ ಮಾತನಾಡಿ, ರಾಜ್ಯ ಸರಕಾರ ಉತ್ತಮ ಕಾರ್ಯಕ್ರಮ ನೀಡುವ ಮೂಲಕ ಜನರ ಭರವಸೆ ಗೆದ್ದಿದ್ದೇವೆ ಅದನ್ನು ಜನರಿಗೆ ತಲುಪಿಸಿ ಮುಂಬರುವ ಲೋಕಸಭೆ ಚುನಾವಣೆ ಗೆಲ್ಲುವುದು ನಿಶ್ಚಿತ.

ರಾಜ್ಯದಲ್ಲಿ ಮೋದಿ ಎಲ್ಲೆಲ್ಲಿ ಪ್ರಚಾರ ಮಾಡಿದ್ದಾರೋ, ಅಲ್ಲೆಲ್ಲ ಬಿಜೆಪಿ ಸೋತಿದೆ.ರಾಹುಲ್‌ ಗಾಂಧಿ ಎಲ್ಲಿ ಪಾದಯಾತ್ರೆ ನಡೆಸಿದ್ದಾರೆ. ಅಲ್ಲಿ ಪಕ್ಷ ಗೆದ್ದಿದೆ. ನರೇಂದ್ರ ಮೋದಿ ಪ್ರಧಾನಮಂತ್ರಿ ಅಲ್ಲ ಅವರೊಬ್ಬ ಪ್ರಚಾರಮಂತ್ರಿ, ಸ್ವಯಂಘೋಷಿತ ವಿಶ್ವಮಾನವ ಅವರಿಗೆ ರಾಜ್ಯದಲ್ಲಿ ವಿಪಕ್ಷದ ನಾಯಕನ ಆಯ್ಕೆ ಮಾಡುವುದಕ್ಕೆ ಆಗಿಲ್ಲ. ಅಂತಹ ದುಸ್ಥಿತಿ ಬಿಜೆಪಿಗೆ ಬಂದಿದೆ. ತಾಲೂಕಿನಲ್ಲಿ ಕಾಂಗ್ರೆಸ್, ಬಂಡಾಯ ಕಾಂಗ್ರೆಸ್ ಎಂದು ಚುನಾವಣೆ ಸಂದರ್ಭದಲ್ಲಿ ಒಡೆದುಹೋಗಿದ್ದ ಪಕ್ಷದ ಕಾರ್ಯಕರ್ತರ ಮನಸ್ಸು ಒಗ್ಗೂಡಿಸಲು ಸಭೆ ನಡೆಸಿದ್ದು ಅದು ಫಲಪ್ರದವಾಗಿದೆ ಎಂದರು.

ಆಯನೂರು ಮಂಜುನಾಥ್ ಮಾತನಾಡಿ, ಯುದ್ಧ ಕಲಿಸಿದ ದ್ರೊಣಾಚಾರ್ಯರಿಗೆ ರಣರಂಗದಲ್ಲಿ ಅರ್ಜುನ ಮೊದಲು ಎರಡು ಬಾಣ ಬಿಟ್ಟು ಪ್ರಣಾಮ ಸಲ್ಲಿಸುತ್ತಾನೆ. ಹಾಗೆ ನನ್ನ ರಾಜಕೀಯ ಗುರು ಬಿ.ಎಸ್. ಯಡಿಯೂರಪ್ಪ ಅವರ ಕ್ಷೇತ್ರಕ್ಕೆ ಆಗಮಿಸಿರುವ ಮೊದಲ ದಿನ ನಾನು ಎರಡು ಬಾಣ ಬಿಟ್ಟಿದ್ದೇನೆ. ಅದು ಪ್ರಣಾಮಕ್ಕೆ ನಂತರದ ಸಭೆಯಲ್ಲಿ ಅವರ ವಿರುದ್ಧ ಗೆಲುವು ಸಾಧಿಸುತ್ತೇನೆ ಎಂದು ಮಾರ್ಮಿಕವಾಗಿ ನುಡಿದರು. ಬಡವರ ಬದುಕಿಗೆ ಭದ್ರತೆ ಒದಗಿಸುವ ಕಾರ್ಯಕ್ರಮ ನೀಡಿದರೆ ಜನತೆ ಕೈ ಹಿಡಿಯುತ್ತಾರೆ ಎನ್ನುವುದಕ್ಕೆ ಕಳೆದ ವಿಧಾನಸಭೆ ಚುನಾವಣೆ ಸಾಕ್ಷಿಯಾಗಿದೆ. 40% ಕಮಿಷನ್ ಹೊಡೆದಾಗ ಖಜಾನೆ ಖಾಲಿಯಾಗಿಲ್ಲ ಬಡ ಹನುಮಕ್ಕನಿಗೆ ₹ 2000 ನೀಡಿದರೆ ಖಾಲಿ ಆಗುತ್ತದೆಯೇ ಎಂದು ಪ್ರಶ್ನಿಸಿದರಲ್ಲದೇ, ಸರಕಾರ ಇರುವುದೇ ಬಡವರಿಗೆ ಕಾರ್ಯಕ್ರಮ ನೀಡಲು ಹೊರತು, ಸ್ವಂತಕ್ಕೆ ಹಣ ಮಾಡಿಕೊಳ್ಳಲು ಅಲ್ಲ. 

ಚೈತ್ರಾ ಕುಂದಾಪುರ ಡೀಲ್‌ ಪ್ರಕರಣಕ್ಕೆ ಟ್ವಿಸ್ಟ್‌: ಸಲೂನ್‌ ಮಾಲೀಕನಿಗೆ ಬೆದರಿಕೆ ಕರೆ

ದಿವಾಳಿ ಆದವರು ಇಂದು ಸಾವಿರಾರು ಕೋಟಿ ರೂ. ಆಸ್ತಿ ಮಾಡಿದ್ದಾರೆ ಅದನ್ನು ಜನತೆ ಗಮನಿಸುತ್ತಾರೆ. ತಾಲೂಕಿನಲ್ಲಿಯೂ ಬದಲಾವಣೆ ಗಾಳಿ ಬೀಸಿದೆ ಲೋಕಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ಗೆಲುವು ನಿಶ್ಚಿತ ಎಂದು ಹೇಳಿದರು. ಕಳೆದ ವಿಧಾನಸಭೆ ಚುನಾವಣೆ ಪರಾಜಿತ ಅಭ್ಯರ್ಥಿ ನಾಗರಾಜಗೌಡ ಪ್ರಾಸ್ತಾವಿಕ ಮಾತನಾಡಿದರು. ಗೋಣಿ ಮಾಲತೇಶ್, ಮುಖಂಡ ಉಮೇಶ್ ಮಾರವಳ್ಳಿ, ರಾಘವೇಂದ್ರ ನಾಯ್ಕ, ಭಂಡಾರಿ ಮಾಲತೇಶ್, ಹುಲ್ಮಾರ್ ಮಹೇಶ್, ಉಳ್ಳಿ ದರ್ಶನ್, ಪಾರಿವಾಳ ಶಿವರಾಮ್, ರೋಷನ್, ಸುಂದರೇಶ್, ಕೌಲಿ ಗಂಗಾಧರಪ್ಪ, ಪ್ರಸನ್ನಕುಮಾರ್, ಆರ್.ಮಂಜುನಾಥಗೌಡ, ಕಲಗೋಡು ರತ್ನಾಕರ್, ನಗರದ ಮಹಾದೇವಪ್ಪ, ಮರಿಯಪ್ಪ, ಪಾಲಾಕ್ಷಪ್ಪಗೌಡ ಮತ್ತಿತರರು ಉಪಸ್ಥಿತರರಿದ್ದರು.

Follow Us:
Download App:
  • android
  • ios