Asianet Suvarna News Asianet Suvarna News

ಚೈತ್ರಾ ಕುಂದಾಪುರ ಡೀಲ್‌ ಪ್ರಕರಣಕ್ಕೆ ಟ್ವಿಸ್ಟ್‌: ಸಲೂನ್‌ ಮಾಲೀಕನಿಗೆ ಬೆದರಿಕೆ ಕರೆ

ಉದ್ಯಮಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ವಂಚಿಸಿದ ಚೈತ್ರ ಕುಂದಾಪುರ ಅಂಡ್ ಟೀಂ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್ ಮೇಲೆ ಟ್ವಿಸ್ಟ್ ಎಂಬಂತೆ ಹೊಸ ವಿಚಾರಗಳು ಬಯಲಿಗೆ ಬರುತ್ತಿವೆ.

twist for chaitra kundapur fraud case gvd
Author
First Published Sep 14, 2023, 11:30 PM IST | Last Updated Sep 15, 2023, 11:28 AM IST

ವರದಿ: ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು (ಸೆ.14): ಉದ್ಯಮಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ವಂಚಿಸಿದ ಚೈತ್ರ ಕುಂದಾಪುರ ಅಂಡ್ ಟೀಂ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್ ಮೇಲೆ ಟ್ವಿಸ್ಟ್ ಎಂಬಂತೆ ಹೊಸ ವಿಚಾರಗಳು ಬಯಲಿಗೆ ಬರುತ್ತಿವೆ. ಇದೆಲ್ಲದರ ಜೊತೆಗೆ ಹೊಸ ತಿರುವು ಕೊಟ್ಟಿದ್ದ ಕಡೂರಿನ ಸಲೂನ್ ಮಾಲೀಕನಿಗೆ ಬೆದರಿಕೆ ಕರೆಯೊಂದು ಬಂದಿದ್ದು ಧನರಾಜ್ ಕಾಂಗ್ರೆಸ್ ಮುಖಂಡ ಎನ್ನುವ ಸಂಗತಿಯೂ ಹೊರಬಂದಿದೆ.

ಸಲೂನ್ ಮಾಲೀಕನಿಗೆ ಬೆದರಿಕೆ ಕರೆ: ಬಿಜೆಪಿ ಟಿಕೆಟ್ ಕೊಡಿಸೋದಾಗಿ ಉದ್ಯಮಿ ಗೋವಿಂದ ಬಾಬು ಗೆ ಟೋಪಿ ಹಾಕಿ ತಿಂಗಳುಗಳೇ ಕಳೆದ ಬಳಿಕ ಮೋಸ ಮಾಡಿದ ಮಿಕಾಗಳು ಒಂದೊಂದೇ ಬಲೆಗೆ ಬೀಳುತ್ತಿವೆ. ಯಾವ ಸಿನಿಮಾಗೂ ಕಡಿಮೆ ಇಲ್ಲದಂತೆ ಕಲ್ಪನಾ ಲೋಕವನ್ನೇ ಸೃಷ್ಟಿಸಿ ಕೋಟಿ ಕೋಟಿ ವಂಚಿಸಿದ್ದ ಚೈತ್ರ ಕುಂದಾಪುರ ಪ್ರಕರಣ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ನಿನ್ನೆ ಅರೆಸ್ಟ್ ಆಗಿ ಸಿಸಿಬಿ ಪೊಲೀಸರ ವಶಕ್ಕೆ ಹೋಗಿದ್ದ ಚೈತ್ರ ಕಥೆ ಒಂದು ಕಡೆಯಾದ್ರೆ. ಇವತ್ತು ಡೀಲ್ಗೆ ಪಾತ್ರಧಾರಿಯನ್ನು ಸೃಷ್ಟಿಸಲು ಕಡೂರಿನ ಮಿಸ್ಟರ್ ಕಟ್ ಸಲೂನ್ ಮಾಲೀಕ ರಾಮುಗೆ ಧನರಾಜ್ ಅಂಡ್ ಗಗನ್ ಟೀಮ್ ಆಪ್ತ ನೂತನ್ ಬೆದರಿಕೆ ಒಡ್ಡಿದ್ದು ಭಾರೀ ಸುದ್ದಿಯಾಗಿದೆ. 

ವಂಚನೆ ಪ್ರಕರಣ: ಚೈತ್ರಾ ಕುಂದಾಪುರ ಬಗ್ಗೆ ಮತ್ತೊಂದು ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಕಟಿಂಗ್‌ ಶಾಪ್‌ ಮಾಲೀಕ

ಗೋವಿಂದ ಬಾಬು ಬಳಿ ತೆರಳುವ ಮುನ್ನ ಥೇಟ್ ಬಿಜೆಪಿ ಆರ್ ಎಸ್ ಎಸ್ ಮುಖಂಡನಂತೆ ಕೂದಲು ಶೈನಿಂಗ್ ಮಾಡಿ ಹೇರ್ ಕಟ್ ಮಾಡಿಸಿಕೊಂಡು ಹೋದ ಬಳಿಕ ಪ್ರಕರಣ ಹೊರ ಬರುತ್ತಿದ್ದಂತೆ ಸಲೂನ್ ಮಾಲೀಕ ರಾಮುಗೆ ಶಾಕ್ ಆಗಿದೆ. ನಿನ್ನೆಯಷ್ಟೇ ಮಾಧ್ಯಮಗಳ ಮುಂದೆ ತನಗೆ ತಿಳಿದ ಮಾಹಿತಿ ನೀಡಿದ್ದಕ್ಕೆ ಧನರಾಜ್ ಆಪ್ತ ನೂತನ್ ಸಲೂನ್ ಮಾಲೀಕನಿಗೆ ಧಮ್ಕಿ ಹಾಕಿರುವ ಆಡಿಯೋ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.ಕಡೂರಿನ ಕಾಂಗ್ರೆಸ್ ಮುಖಂಡನಾಗಿರುವ ನೂತನ್ ಧಮ್ಕಿ ಹಾಕಿರುವ ಆಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. "ನಿನ್ಯಾಕೆ ಮಾಧ್ಯಮ ಮುಂದೆ ಮಾತಾನಾಡಿದೆ. ನನಗೆ ಗೊತ್ತಿಲ್ಲ ಅಂತಾ ಹೇಳಬೇಕಿತ್ತು. ಪ್ರಕರಣದಿಂದ ಅವರೇ ಹೊರ ಬರ್ತಾರಾ? ಅಂಗಡಿ ಹೇಗೆ ನಡೆಸುತ್ತೀಯಾ ನೋಡುತ್ತೇನೆ," ಎಂದು ಧಮ್ಕಿ ಹಾಕಿರುವ ಆಡಿಯೋ ವೈರಲ್‌ ಆಗಿದೆ.

2018ರಿಂದಲೇ ಕಡೂರಿನ ಲಿಂಕ್: ಇನ್ನು ಉದ್ಯಮಿ ಗೋವಿಂದಬಾಬು ಗೆ ಟಿಕೆಟ್ ಕೊಡಿಸಿದಾಗ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ. ಚೈತ್ರ ಕುಂದಾಪುರ 2018 ರಿಂದಲೇ ಕಡೂರಿ ಲಿಂಕ್ ಬಂದಿದ್ರು ಅನ್ನೋ ಮಾಹಿತಿ ಲಭ್ಯವಾಗಿದೆ. ಕಡೂರು ಪಟ್ಟಣದ ಸರ್ಕಾರಿ ಕಾಲೇಜು ಒಂದರಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಪಟ್ಟಣದಲ್ಲಿ ಪ್ರಚೋದನಕಾರಿ ಭಾಷಣ ಮಾಡ್ತಾರೆ ಅಂತ ವಿರೋಧ ವ್ಯಕ್ತವಾಗಿತ್ತು. ಆ ವೇಳೆ ಪ್ರಮುಖ ಆರೋಪಿ ಗಗನ್ ಜೊತೆ ಇದ್ದ ಫೋಟೋ ಲಭ್ಯವಾಗಿದೆ. ಕಡೂರಿಗೆ ಆಗಮಿಸಿದ ವೇಳೆ ಗಗನ್ ಧನ್ರಾಜು ಜೊತೆ ಸ್ನೇಹ ಸಂಪಾದಿಸಿದ್ದ ಚೈತ್ರ ಈ ಪ್ರಕರಣದಲ್ಲಿ ಈ ಎಲ್ಲಾ ತಂಡ ಭಾಗಿಯಾಗಿರುವುದು ಸಖತ್ ಇಂಟರೆಸ್ಟಿಂಗ್. 

ಹಿಂದುತ್ವಕ್ಕಾಗಿ ರಾಜಕೀಯಕ್ಕೆ ಬಂದ ನನ್ನ ಹೋರಾಟಕ್ಕೆ ಸೋಲಿಲ್ಲ: ಸಿ.ಟಿ.ರವಿ

ಇದರ ಜೊತೆಗೆ ಪ್ರಮುಖ ಆರೋಪಿ ಧನರಾಜ್ ಬಂಧನವಾಗುತ್ತಿದ್ದಂತೆ ಕಡೂರಿನ ಶಾಸಕರೊಂದಿಗೆ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಕಾಂಗ್ರೆಸ್ ಶಾಸಕ ಆನಂದ್ ಅಪ್ತ ಎಂಬುದು ಇಲ್ಲಿ ಗಮನಾರ್ಹ. ಸದ್ಯ ಈ ಪ್ರಕರಣಕ್ಕೂ ಶಾಸಕರಿಗೂ ಸಂಬಂಧ ಇಲ್ಲದಿದ್ದರೂ ಕಾಫಿ ನಾಡಲ್ಲಿ ಈ ಪ್ರಕರಣ ಫುಲ್ ಕಾವು ಪಡೆದಿದೆ.ಒಟ್ಟಾರೆ ತನಿಖೆ ಆರಂಭವಾಗುತ್ತಿದ್ದಂತೆ  ಒನ್, ಟೂ, ತ್ರೀ, ಫೋರ್ , ಅನ್ನುತ್ತಿದ್ದಂತೆ ದಿನದಿಂದ ದಿನಕ್ಕೆ ತಿರುವು ಪಡೆಯುತ್ತಿರುವ  ಪ್ರಕರಣದಲ್ಲಿ ಆರೋಪಿಗಳ ಸಂಖ್ಯೆ ಜಾಸ್ತಿ ಆಗ್ತಾನೆ ಇದೆ.

Latest Videos
Follow Us:
Download App:
  • android
  • ios