ಬೆಂಗಳೂರು[ಏ.13]: ರಾಜ್ಯದಲ್ಲಿ ಕೊರೋನಾ ವೈರಸ್‌ ಸೋಂಕು ತೀವ್ರಗತಿಯಲ್ಲಿ ಹರಡದಂತೆ ನಿಯಂತ್ರಿಸಲು ವೈದ್ಯಕೀಯ ಶಿಕ್ಷಣ ಸಚಿವ ಹಗಲಿರುಳು ಶ್ರಮಿಸುತ್ತಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಸಣ್ಣದೊಂದು ಎಡವಟ್ಟು ಮಾಡಿಕೊಂಡಿದ್ದಾರೆ. 

ಕೊರೋನಾ ಹೋರಾಟದಲ್ಲಿ ಟೊಂಕ ಕಟ್ಟಿ ನಿಂತಿರುವ ಸುಧಾಕರ್‌ ಅವರ ಕಾರ್ಯ ವೈಖರಿಗೆ ಪ್ರತಿಪಕ್ಷದ ನಾಯಕರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಆರೋಗ್ಯ ಇಲಾಖೆಯ ಕೆಲವು ಹೊಣೆಗಾರಿಕೆಗಳನ್ನು ಸುಧಾಕರ್ ಅವರ ಹೆಗಲಿಗೆ ಹಾಕಿದ್ದಾರೆ. 

ಸುಧಾಕರ್‌ ಪರಿಶ್ರಮಕ್ಕೆ ಪ್ರತಿಪಕ್ಷದಿಂದಲೂ ಮೆಚ್ಚುಗೆ! 

ಕೊರೋನಾ ವೈರಸ್‌ ಪೀಡಿತರು ಹಾಗೂ ಶಂಕಿತರ ಚಿಕಿತ್ಸಾ ಕ್ರಮವನ್ನು ಪರಿಶೀಲಿಸಲು ಆಗಾಗ ಖುದ್ದಾಗಿ ಆಸ್ಪತ್ರೆಗಳಿಗೆ ತೆರಳುವ ಸಚಿವ ಸುಧಾಕರ್‌ ಅವರ ಬಗ್ಗೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಇವೆಲ್ಲಾವುಗಳನ್ನು ಗಳಿಸಿದ್ದ ಸುಧಾಕರ್ ಅವರು ಸ್ವಿಮ್ಮಿಂಗ್ ಪೂಲ್‌ನಲ್ಲಿ ಹೋಮ ಮಾಡಿದ್ದಾರೆ.

ಸಿಕ್ಕ ಮೆಚ್ಚುಗೆಗಳೆಲ್ಲ ಸ್ವಿಮ್ಮಿಂಗ್‌ ಪೂಲ್‌ನಲ್ಲಿ ಹೋಮ

ಹೌದು...ಕೊರೋನಾ ವಿರುದ್ಧ ಸಮರದಲ್ಲಿ ಗಳಿಸಿದ್ದ ಮೆಚ್ಚುಗೆಗಳು-ಕೃತಜ್ಞತೆಗಳನ್ನೆಲ್ಲಾ ಸ್ವಿಮ್ಮಿಂಗ್‌ ಫೂಲ್‌ನಲ್ಲಿ ಹೋಮ ಮಾಡಿದ್ದಾರೆ.  ಇಡೀ ವಿಶ್ವವನ್ನೇ ಕಟ್ಟಿ ಕಾಡುತ್ತಿರುವ ಮಾರಣಾಂತಿಕ ಕೊರೋನಾ ವೈರಸ್‌ ಕರ್ನಾಟಕದಲ್ಲೂ ಸಾಕಷ್ಟು ಜೀವ ಹಾನಿ ಉಂಟು ಮಾಡುತ್ತಿದೆ. ಲಾಕ್‌ಡೌನ್ ನಡುವೆಯೂ ಸೋಂಕಿತರ ಸಂಖ್ಯೆ ದಿನೇ ದಿನೇ ಏರುತ್ತಲೇ ಇದೆ. 

ಇದು ಸಮಾನ್ಯವಾಗಿ ಸರ್ಕಾರಕ್ಕೆ ತಲೆ ನೋವಾಗಿ ಪರಿಣಮಿಸಿದ್ದು ವೈದ್ಯರು ಮತ್ತು ಪೊಲೀಸರು ವಿಶ್ರಾಂತಿ ಇಲ್ಲದೆ ಕೆಲಸ ಮಾಡುತ್ತಿದ್ದಾರೆ. ಈ ನಡುವೆ ಸುಧಾಕರ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಪೋಟೋ ಇದೀಗ ವ್ಯಾಪಕ ಟೀಕೆಗೆ ಗುರಿಯಾಗಿದೆ.

ರಾಮುಲು, ಸುಧಾಕರ್‌ಗೆ ಹೊಣೆಗಾರಿಕೆ ವಿಭಜನೆ: ಸಿಎಂ ನಿರ್ಧಾರಕ್ಕೆ ಇಬ್ಬರಿಗೂ ಅಸಮಾಧಾನ?

ಭಾನುವಾರ ಮಕ್ಕಳ ಜೊತೆ ಈಜುಕೊಳದಲ್ಲಿ ಆಟವಾಡುತ್ತಿದ್ದ ಪೋಟೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದ ಸಚಿವ ಸುಧಾಕರ್‌, ತುಂಬಾ ದಿನಗಳ ನಂತರ ನಾನು ನನ್ನ ಮಕ್ಕಳ ಜೊತೆ ಈಜುಕೊಳದಲ್ಲಿದ್ದೇನೆ. ಇಲ್ಲೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗುತ್ತಿದೆ ಎಂದು ಬರೆದುಕೊಂಡಿದ್ದರು. ಸಚಿವರ ಈ ಟ್ವೀಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಲವರು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಕುರಿತು ಹಲವರು ಟ್ವಿಟ್ ಮಾಡಿದ್ದು, ಲಾಕ್ ಡೌನ್ ಸಮಯದಲ್ಲಿ ವೈದ್ಯರು ,ಪೊಲೀಸರು ಕಷ್ಟ ಪಡುತ್ತಿದ್ದಾರೆ. ನೀವು ಈ ಸಮಯದಲ್ಲಿ ಎಂಜಾಯ್ ಮಾಡುತ್ತಿದ್ದೀರ?. ವೈದ್ಯಕೀಯ ಮಂತ್ರಿಯಾಗಿ ನಿಮಗೆ ಜವಾಬ್ದಾರಿ ಇಲ್ಲವೇ? ಹೀಗೆ ಮನೆಮಂದಿಯೊಂದಿಗೆ ನೀವು ವಿಶ್ರಾಂತಿ ಮೂಡ್‌ನಲ್ಲಿ ಇದ್ದರೂ ಆ ಪೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವ ಅಗತ್ಯ ಏನಿತ್ತು? ಎಂದು ಕಿಡಿಕಾರಿದ್ದಾರೆ.

ರಾಜೀನಾಮೆ ಆಗ್ರಹಿಸಿದ ಡಿಕೆಶಿ

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಟ್ವೀಟ್‌ ಮಾಡುವ ಮೂಲಕ ಸಚಿವರ ವಿರುದ್ಧ ಕಿಡಿಕಾರಿದ್ದಾರೆ. ಇಡೀ ಜಗತ್ತು ಆರೋಗ್ಯ ಬಿಕ್ಕಟ್ಟಿನಲ್ಲಿ ಸಿಲುಕಿರುವಾಗ, ಕೊರೋನಾ ಉಸ್ತುವಾರಿ ಸಚಿವ ಡಾ.ಸುಧಾಕರ್ ಈಜುಕೊಳದಲ್ಲಿ ಸಮಯ ಕಳೆಯುವ ಮೂಲಕ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಕೊರೋನಾ ವೈರಸ್: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದು ನೈತಿಕತೆಯ ವಿಚಾರ. ಸುಧಾಕರ್ ಅವರು ಸ್ವ ಇಚ್ಛೆಯಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಮತ್ತು ಮುಖ್ಯಮಂತ್ರಿಗಳು ಅವರನ್ನು ಮಂತ್ರಿಮಂಡಲದಿಂದ ವಜಾಗೊಳಿಸಬೇಕು ಎಂದು ಶಿವಕುಮಾರ್ ಟ್ವೀಟ್‌ ಮಾಡುವ ಮೂಲಕ ಒತ್ತಾಯಿಸಿದ್ದಾರೆ.
  ಇದರ ಬೆನ್ನಲ್ಲೇ ತಮ್ಮ ಟ್ವೀಟ್‌ ವಿವಾದ ಸೃಷ್ಟಿಸುತ್ತದೆ ಎಂಬುದು ಅರಿವಿಗೆ ಬರುತ್ತಿದ್ದಂತೆ ಸುಧಾಕರ್, ಆ ಫೋಟೋವನ್ನು ಟ್ವಿಟ್ಟರ್‌ನಿಂದ ಡಿಲೀಟ್ ಮಾಡಿದ್ದಾರೆ.

ಸಂಪುಟದಿಂದ ಸುಧಾಕರ ವಜಾ ಮಾಡುವಂತೆ ದೂರು
ಈಜು ಕೊಳದಲ್ಲಿ ಪುತ್ರನ ಜೊತೆಗಿನ ಸುಧಾಕರ ಫೋಟೋ ವಿವಾದ ಹಿನ್ನೆಲೆಯಲ್ಲಿ ಸಿಎಂಗೆ ಕಾಂಗ್ರೆಸ್ ದೂರು ನೀಡಿದೆ. ಗೃಹ ಕಚೇರಿ ಕೃಷ್ಣಾದಲ್ಲಿ ಕಾಂಗ್ರೆಸ್‌ನ ಮನೋಹರ ಅವರು ಯಡಿಯೂರಪ್ಪಗೆ ದೂರು ಸಲ್ಲಿಸಿದ್ದು, ಸಂಪುಟದಿಂದ ಸುಧಾಕರ್ ಅವರನ್ನು ವಜಾ ಮಾಡುವಂತೆ ಮನವಿ ಮಾಡಿದರು.