Asianet Suvarna News Asianet Suvarna News

ಕಾಂಗ್ರೆಸ್‌ನಲ್ಲೀಗ ಒಗ್ಗ​ಟ್ಟು ಪ್ರದ​ರ್ಶನ: ಸಾಮೂ​ಹಿಕ ನಾಯ​ಕ​ತ್ವದ ಮಂತ್ರ ಜಪ..!

ವಿಧಾ​ನ​ಸಭೆ ಚುನಾ​ವ​ಣೆಗೆ ನಾಲ್ಕೈದು ತಿಂಗಳು ಉಳಿ​ದಿ​ರು​ವಂತೆ ಕಾಂಗ್ರೆಸ್‌ ನಲ್ಲಿನ ಉಭಯ ಬಣ​ಗಳ ನಾಯ​ಕರು ಭಿನ್ನ​ಮತ ಮರೆತು ಒಗ್ಗಟ್ಟಿನ ಮಂತ್ರ ಜಪಿ​ಸಲು ಪ್ರಾರಂಭಿ​ಸಿ​ದ್ದಾರೆ. 

Congress Now Showing Unity in Ramanagara grg
Author
First Published Nov 15, 2022, 11:30 PM IST

ಎಂ.ಅ​ಫ್ರೋಜ್‌ ಖಾನ್‌

ರಾಮ​ನ​ಗರ(ನ.15):  ರಾಮ​ನ​ಗರ ವಿಧಾ​ನ​ಸಭಾ ಕ್ಷೇತ್ರ​ದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಆಯ್ಕೆ ವಿಚಾ​ರ​ವಾಗಿ ಬಣ​ಗಳ ಬಡಿ​ದಾ​ಟ​ದಲ್ಲಿ ಮುಳು​ಗಿದ್ದ ಕೈ ಪಾಳ​ಯದ ನಾಯ​ಕರು ವೈಮ​ನಸ್ಸು ಮರೆತು ಒಗ್ಗಟ್ಟು ಪ್ರದ​ರ್ಶ​ನಕ್ಕೆ ಮುಂದಾ​ಗಿ​ದ್ದಾರೆ. ರಾಮ​ನ​ಗರ ಕ್ಷೇತ್ರ​ದಿಂದ ಆಕಾಂಕ್ಷಿತ ಅಭ್ಯ​ರ್ಥಿ​ಯಾಗಿ ಇಕ್ಬಾಲ್‌ ಹುಸೇನ್‌ ಕೆಪಿ​ಸಿ​ಸಿಗೆ ಸೋಮ​ವಾರ ಅರ್ಜಿ ಸಲ್ಲಿ​ಸಿದ್ದಾರೆ. ಇಷ್ಟೇ ಅಲ್ಲದೆ, ಇಕ್ಬಾಲ್‌ ಅವ​ರೊಂದಿಗೆ ಪಕ್ಷ​ದೊ​ಳ​ಗೆಯೇ ವಿರೋಧಿ ಬಣದವ​ರಂತೆ ವರ್ತಿ​ಸು​ತ್ತಿದ್ದ ನಾಯ​ಕರು ಸಾಥ್‌ ನೀಡಿ​ರು​ವುದು ಅಚ್ಚರಿ ಮೂಡಿ​ಸಿದೆ. ಕಳೆದೊಂದು ವರ್ಷ​ದಿಂದ 2023ರ ವಿಧಾ​ನ​ಸಭಾ ಚುನಾ​ವ​ಣೆ​ಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಯಾರಾ​ಗ​ಬೇಕು ಎಂಬು​ದರ ಕುರಿತು ಪಕ್ಷದ ವೇದಿ​ಕೆ​ಗ​ಳಲ್ಲಿ ಚರ್ಚೆ​ಗಳು ನಡೆ​ಯು​ತ್ತಿತ್ತು.

ವಿಧಾನ ಪರಿ​ಷತ್‌ ಸದಸ್ಯ ಸಿ.ಎಂ.​ಲಿಂಗಪ್ಪ ಹಾಗೂ ಸಂಸದ ಡಿ.ಕೆ.​ಸು​ರೇಶ್‌ ನಡುವೆ ಅಭ್ಯರ್ಥಿ ವಿಚಾ​ರ​ವಾಗಿ ಟಾಕ್‌ ವಾರ್‌ ನಡೆ​ದಿತ್ತು. ಇದು ಎಷ್ಟರ ಮಟ್ಟಿಗೆ ಪರಿ​ಣಾಮ ಬೀರಿ​ತೆಂದರೆ ಕಾಂಗ್ರೆಸ್‌ ನಲ್ಲಿನ ಒಳ​ಬೇ​ಗುದಿ ಬೀದಿಗೆ ಬಂದಿತ್ತು. ಪಕ್ಷ​ದೊಳಗೆ ​ಎ​ರಡು ಬಣ​ಗಳು ಸೃಷ್ಟಿ​ಯಾಗಿ ವರಿಷ್ಠ​ರ ಮಾತನ್ನು ಧಿಕ್ಕ​ರಿ​ಸಿ ನಡೆ​ಯುವ ಹಂತಕ್ಕೆ ತಲು​ಪಿ​ದ್ದವು. ಬಣ​ಗಳ ನಡು​ವಿನ ತಿಕ್ಕಾಟ ವರಿ​ಷ್ಠ​ರಿಗೆ ನುಂಗ​ಲಾ​ರದ ತುತ್ತಾಗಿ ಪರಿ​ಣ​ಮಿ​ಸಿತ್ತು.

ಜೆಡಿಎಸ್‌ - ಬಿಜೆಪಿ ನಡುವೆ ಮತ್ತೊಂದು ಕ್ರೆಡಿಟ್‌ ಕದನ!

ಸಾಮೂ​ಹಿಕ ನಾಯ​ಕ​ತ್ವದ ಮಂತ್ರ:

ಕೆಪಿ​ಸಿಸಿ ಅಧ್ಯ​ಕ್ಷ​ರಾದ ಡಿ.ಕೆ.​ಶಿ​ವ​ಕು​ಮಾರ್‌ ಖುದ್ಧಾಗಿ ಉಭಯ ಬಣ​ಗಳ ನಾಯ​ಕ​ರೊಂದಿಗೆ ಚರ್ಚೆ ನಡೆ​ಸಿ​ದ್ದರು. ಅಭ್ಯರ್ಥಿ ಯಾರೆಂಬು​ದರ ಗುಟ್ಟು ಬಿಟ್ಟು ಕೊಡದೆ ‘ಸಾಮೂ​ಹಿಕ ನಾಯ​ಕ​ತ್ವ‘ದ ಮಂತ್ರ ಜಪಿ​ಸು​ವಂತೆ ಸಲಹೆ ನೀಡಿ​ದ್ದರು. ಆ ಮೂಲಕ ಅಭ್ಯರ್ಥಿ ಆಯ್ಕೆ ವಿಚಾ​ರ​ದಲ್ಲಿ ಸೃಷ್ಟಿ​ಯಾ​ಗಿದ್ದ ಬಣ ರಾಜ​ಕೀಯ ನಿಯಂತ್ರಿಸಿ ಒಗ್ಗಟ್ಟು ಪ್ರದ​ರ್ಶ​ನಕ್ಕೆ ಸೂಚನೆ ನೀಡಿ​ದ್ದರು. ಆನಂತ​ರವೂ ರಾಮ​ನ​ಗರ ನಗ​ರ​ಸಭೆ ಅಧ್ಯಕ್ಷ - ಉಪಾ​ಧ್ಯ​ಕ್ಷರ ಚುನಾ​ವ​ಣೆ ಬಣ​ಗಳ ಮೇಲಾ​ಟಕ್ಕೆ ಕಾರ​ಣ​ವಾ​ಯಿತು. ಇದೆ​ಲ್ಲ​ವನ್ನು ಗಮ​ನಿ​ಸಿದ ವರಿಷ್ಠ​ರು ಬಣ​ಗಳ ಬಡಿ​ದಾ​ಟಕ್ಕೆ ಕಡಿ​ವಾಣ ಹಾಕು​ವುದು ಕಷ್ಟ​ಸಾ​ಧ್ಯ​ವೆಂದು ಕೈಚೆ​ಲ್ಲಿ​ದ್ದ​ರು.

ಆದ​ರೀಗ ವಿಧಾ​ನ​ಸಭೆ ಚುನಾ​ವ​ಣೆಗೆ ನಾಲ್ಕೈದು ತಿಂಗಳು ಉಳಿ​ದಿ​ರು​ವಂತೆ ಕಾಂಗ್ರೆಸ್‌ ನಲ್ಲಿನ ಉಭಯ ಬಣ​ಗಳ ನಾಯ​ಕರು ಭಿನ್ನ​ಮತ ಮರೆತು ಒಗ್ಗಟ್ಟಿನ ಮಂತ್ರ ಜಪಿ​ಸಲು ಪ್ರಾರಂಭಿ​ಸಿ​ದ್ದಾರೆ. ನಗ​ರ​ಸಭೆ ಅಧ್ಯ​ಕ್ಷ​ರಾಗಿ ಪವಿತ್ರರವರ ಆಯ್ಕೆಗೆ ಅವ​ಕಾಶ ನೀಡಿದ ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ಅವ​ರಿಗೆ ಎರಡು ದಿನ​ಗಳ ಹಿಂದಷ್ಟೆಸಂಭ​ವ​ನೀಯ ಅಭ್ಯರ್ಥಿ ಇಕ್ಬಾಲ್‌ ಹುಸೇನ್‌ ಹಾಗೂ ನಗ​ರ​ಸಭೆ ಸದಸ್ಯ ಕೆ.ಶೇ​ಷಾದ್ರಿ ಕಾರ್ಯ​ಕ​ರ್ತರ ಜತೆ​ಗೂಡಿ ಅಭಿ​ನಂದನೆ ಸಲ್ಲಿಸಿದ್ದಾರೆ. ಅಲ್ಲದೆ, ಕಾಂಗ್ರೆಸ್‌ ಅಭ್ಯ​ರ್ಥಿ​ಯನ್ನು ಗೆಲ್ಲಿ​ಸಿ​ಕೊಂಡು ನಿಮ್ಮ ಕೈ ಬಲ ಪಡಿ​ಸು​ವು​ದಾಗಿ ನಾಯ​ಕರು ಪ್ರಮಾಣ ಮಾಡಿ ಬಂದಿ​ದ್ದಾರೆ.

ಅಭ್ಯರ್ಥಿಯಾಗಲು ಅರ್ಜಿ ಸಲ್ಲಿ​ಕೆ:

ಈಗ ರಾಮ​ನ​ಗರ ವಿಧಾ​ನ​ಸಭಾ ಕ್ಷೇತ್ರ​ದಿಂದ ಕಾಂಗ್ರೆಸ್‌ ಅಭ್ಯ​ರ್ಥಿ​ಯಾಗಿ ಸ್ಪರ್ಧಿ​ಸಲು ಬಯ​ಸಿ​ರುವ ಇಕ್ಬಾಲ್‌ ಹುಸೇನ್‌ ಕೆಪಿ​ಸಿಸಿ ಕಚೇ​ರಿ​ಯಲ್ಲಿ ಅರ್ಜಿ ಸಲ್ಲಿ​ಸಿ​ದ್ದಾರೆ. ಅವ​ರೊಂದಿಗೆ ವಿಧಾನ ಪರಿ​ಷತ್‌ ಸದಸ್ಯ ಸಿ.ಎಂ.​ಲಿಂಗಪ್ಪ, ಮಾಜಿ ಶಾಸಕ ಕೆ.ರಾ​ಜು, ಕೆಪಿ​ಸಿಸಿ ಪ್ರಧಾನ ಕಾರ್ಯ​ದರ್ಶಿ ಸೈಯದ್‌ ಜಿಯಾ​ವುಲ್ಲಾ, ನಗ​ರ​ಸಭಾ ಸದಸ್ಯ ಕೆ.ಶೇ​ಷಾದ್ರಿ ​ಸೇ​ರಿ​ದಂತೆ ಅನೇಕ ನಾಯ​ಕರು ಕಾಣಿ​ಸಿ​ಕೊ​ಳ್ಳುವ ಮೂಲಕ ಭಿನ್ನ​ಮ​ತಕ್ಕೆ ತೆರೆ ಎಳೆ​ದಿ​ದ್ದಾರೆ.

ಸಣ್ಣ​ಪುಟ್ಟ ಅಸ​ಮಾ​ಧಾ​ನ​ಗ​ಳನ್ನು ಬಗೆ​ಹ​ರಿ​ಸಿ​ಕೊಂಡು ಹಿರಿಯ ನಾಯ​ಕರು ಸಾಮೂ​ಹಿಕ ನಾಯ​ಕ​ತ್ವ​ದಲ್ಲಿ ಚುನಾ​ವಣೆ ಎದು​ರಿ​ಸಲು ಸನ್ನ​ದ್ಧ​ರಾ​ಗು​ತ್ತಿ​ದ್ದಾರೆ. ಅಲ್ಲದೆ, ಸ್ಥಳೀಯ ಮುಖಂಡರು ಮತ್ತು ಕಾರ್ಯ​ಕ​ರ್ತ​ರಲ್ಲಿ ಪರ​ಸ್ಪರ ಭಿನ್ನಾ​ಭಿ​ಪ್ರಾಯ ಮೂಡ​ದಂತೆ ಒಗ್ಗ​ಟ್ಟಿನ ಮಂತ್ರ ಪಠಿ​ಸು​ತ್ತಿ​ದ್ದಾರೆ. ಈ ಒಗ್ಗಟ್ಟು ಪ್ರದ​ರ್ಶನ ಭವಿಷ್ಯ​ದಲ್ಲಿ ಕಾಂಗ್ರೆಸ್‌ ನಲ್ಲಿ ಆಂತ​ರಿ​ಕ​ವಾಗಿ ಏನೆಲ್ಲಾ ಪರಿ​ಣಾ​ಮ​ಗ​ಳನ್ನು ಬೀರ​ಲಿದೆ ಎಂಬುದು ಕೂಡಾ ಮಹ​ತ್ವ​ದ್ದಾ​ಗಿದೆ.

ಕಳೆದ ವಿಧಾ​ನ​ಸಭಾ ಚುನಾ​ವ​ಣೆ​ಯಲ್ಲಿ ಸೋತರೂ ದೃತಿ​ಗೆ​ಡದ ಇಕ್ಬಾಲ್‌ ಹುಸೇನ್‌ ರವರು ‘ರಾಮ​ನ​ಗ​ರದ ಜನ ಸೇವಕ‘ ಎಂಬ ಹೆಸ​ರಿ​ನಲ್ಲಿ ಸಾಕಷ್ಟುಬಂಡ​ವಾಳ ಹೂಡಿ ಜನ​ಪರ ಕಾರ್ಯ​ಕ್ರ​ಮ​ಗಳ ಮೂಲಕ ಸಮಾಜ ಸೇವೆಯಲ್ಲಿ ತೊಡ​ಗಿದ್ದಾರೆ. ಅಲ್ಲ​ದೆ, ಕಾರ್ಯ​ಕ​ರ್ತ​ರಲ್ಲಿ ಶಕ್ತಿ ತುಂಬುವ ಮೂಲ​ಕ ಪಕ್ಷ ಸಂಘ​ಟ​ನೆ​ಯಲ್ಲಿ ಸಕ್ರಿ​ಯ​ರಾ​ಗುವ ಜತೆಗೆ ಮುಂಬ​ರುವ ವಿಧಾ​ನ​ಸಭೆ ಚುನಾ​ವ​ಣೆಗೂ ಸಾಕಷ್ಟುತಯಾ​ರಿ​ಗ​ಳನ್ನು ಮಾಡಿ​ಕೊಂಡಿದ್ದಾರೆ.

ಆಕಾಂಕ್ಷಿತ ಅಭ್ಯ​ರ್ಥಿ​ಯಾ​ಗಿ​ರುವ ಇಕ್ಬಾಲ್‌ ಅವ​ರೊಂದಿಗೆ ಹಿರಿಯ ನಾಯ​ಕರು ಕೈ ಎತ್ತಿ ಒಗ್ಗಟ್ಟು ಪ್ರದ​ರ್ಶನ ಮಾಡಿ ಕಾರ್ಯ​ಕ​ರ್ತ​ರಿಗೆ ಒಗ್ಗ​ಟ್ಟಿ​ನ ಸಂದೇಶ ರವಾ​ನಿ​ಸಿ​ದ್ದಾರೆ. ಆದರೆ, ಈ ಒಗ್ಗ​ಟ್ಟಿನ ಸಂದೇಶ ಕೇವಲ ಅರ್ಜಿ ಸಲ್ಲಿ​ಕೆಗೆ ಮಾತ್ರ ಸೀಮಿ​ತ​ವಾ​ಗುತ್ತಾ ಅಥವಾ ವಾಸ್ತ​ವ​ದಲ್ಲಿ ಜಾರಿ​ಗೊ​ಳ್ಳುತ್ತಾ ಎಂಬುದು ಕೂಡಾ ಮುಖ್ಯ​ವಾ​ಗಿದೆ. ಇದಕ್ಕೆ ಕಾಲವೇ ಉತ್ತ​ರಿ​ಸ​ಬೇಕು.

Channapatna: ಮುನಿದ ಮುಖಂಡರ ಮನೆಯ ಕದ ತಟ್ಟಿದ ಎಚ್‌.ಡಿ.ಕುಮಾರಸ್ವಾಮಿ

ಕಾಂಗ್ರೆಸ್‌ನಲ್ಲಿ ಯಾವುದೇ ಬಣ​ಗ​ಳಿಲ್ಲ. ನಾವೆ​ಲ್ಲರೂ ಒಗ್ಗ​ಟ್ಟಾ​ಗಿ​ದ್ದೇವೆ. ನಾಯ​ಕರ ನಡು​ವಿನ ಸಣ್ಣ​ಪುಟ್ಟವ್ಯತ್ಯಾ​ಸ​ಗಳು ಬಗೆ​ಹ​ರಿ​ದಿವೆ. ನಮ್ಮ ಜಿಲ್ಲೆ​ಯ ಮಗ ಡಿ.ಕೆ.​ಶಿ​ವ​ಕು​ಮಾರ್‌ ಅವರ ಕೈ ಬಲ​ಪ​ಡಿ​ಸ​ಬೇ​ಕಾ​ಗಿದೆ. ಹಾಗಾಗಿ 2023ರ ವಿಧಾ​ನ​ಸಭಾ ಚುನಾ​ವ​ಣೆ​ಯನ್ನು ಸವಾ​ಲಾಗಿ ಸ್ವೀಕ​ರಿಸಿ ಕಾಂಗ್ರೆಸ್‌ ಅಭ್ಯರ್ಥಿ ಇಕ್ಬಾಲ್‌ ಹುಸೇನ್‌ ರವರ ಗೆಲು​ವಿಗೆ ಶ್ರಮಿ​ಸು​ತ್ತೇವೆ ಅಂತ ಕೆಪಿ​ಸಿಸಿ ಪ್ರಧಾನ ಕಾರ್ಯ​ದರ್ಶಿ ಸೈಯದ್‌ ಜಿಯಾ​ವುಲ್ಲಾ ಹೇಳಿದ್ದಾರೆ. 

ನಮ್ಮ ಮಣ್ಣಿನ ಮಗ​ನಾದ ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ಅವ​ರಿಗೆ ಶಕ್ತಿ ತುಂಬುವ ಕೆಲಸ ಆಗ​ಬೇ​ಕಿದೆ. ಇದ​ಕ್ಕಾಗಿ ಪಕ್ಷದ ಹಿರಿಯ - ಕಿರಿಯ ನಾಯ​ಕರು ಹಾಗೂ ಕಾರ್ಯ​ಕ​ರ್ತರು ಶ್ರಮಿ​ಸಲು ಸನ್ನ​ದ್ಧ​ರಾ​ಗಿ​ದ್ದಾರೆ. ನಮ್ಮಲ್ಲಿ ಭಿನ್ನ​ಮ​ತ​ವಾ​ಗಲಿ, ಬಣಗಳಾ​ಗಲಿ ಇಲ್ಲ. ನಮ್ಮದು ಕಾಂಗ್ರೆಸ್‌ ಬಣ. ರಾಮ​ನ​ಗರ ಕ್ಷೇತ್ರ ಮಾತ್ರ​ವ​ಲ್ಲದೆ ಜಿಲ್ಲೆಯ ನಾಲ್ಕು ಕ್ಷೇತ್ರ​ಗ​ಳಲ್ಲಿ ಕಾಂಗ್ರೆಸ್‌ ಗೆಲವು ಸಾಧಿ​ಸುವ ವಿಶ್ವಾ​ಸ​ವಿ​ದೆ ಅಂತ ಮಾಜಿ ಜಿಪಂ ಅಧ್ಯ​ಕ್ಷ ಇಕ್ಬಾಲ್‌ ಹುಸೇನ್‌ ತಿಳಿಸಿದ್ದಾರೆ. 

Follow Us:
Download App:
  • android
  • ios