ಹೈಕಮಾಂಡ್‌ ಹೇಳಿದಂತೆ ಕೇಳಲು ನಾನೇನು ಫುಟ್ಬಾಲೇ, ಲೋಕಸಭೆಗೆ ಸ್ಪರ್ಧೆ ಮಾಡುವುದಿಲ್ಲ: ಪ್ರಕಾಶ್‌ ಹುಕ್ಕೇರಿ

ಹೈಕಮಾಂಡನವರು ನನಗೆ ಎಷ್ಟೇ ಒತ್ತಡ ಹೇರಿದರೂ ನಾನು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ವಿಧಾನ ಪರಿಷತ್‌ ಸದಸ್ಯನಾಗಿಯೇ ಮುಂದುವರಿಯುತ್ತೇನೆ. ಮತ್ತೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಎಂದು ಹೈಕಮಾಂಡ್‌ ಹೇಳಿದರೆ ಕೇಳಲು ನಾನೇನು ಫುಟ್ಬಾಲೇ ಎಂದು ವಿಧಾನ ಪರಿಷತ್‌ ಸದಸ್ಯ ಪ್ರಕಾಶ ಹುಕ್ಕೇರಿ ಹೈಕಮಾಂಡ್‌ ವಿರುದ್ಧ ಖಾರವಾಗಿ ನುಡಿದರು. 
 

congress mlc prakash hukkeri anger against party leaders at belagavi gvd

ಬೆಳಗಾವಿ (ಫೆ.03): ಹೈಕಮಾಂಡನವರು ನನಗೆ ಎಷ್ಟೇ ಒತ್ತಡ ಹೇರಿದರೂ ನಾನು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ವಿಧಾನ ಪರಿಷತ್‌ ಸದಸ್ಯನಾಗಿಯೇ ಮುಂದುವರಿಯುತ್ತೇನೆ. ಮತ್ತೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಎಂದು ಹೈಕಮಾಂಡ್‌ ಹೇಳಿದರೆ ಕೇಳಲು ನಾನೇನು ಫುಟ್ಬಾಲೇ ಎಂದು ವಿಧಾನ ಪರಿಷತ್‌ ಸದಸ್ಯ ಪ್ರಕಾಶ ಹುಕ್ಕೇರಿ ಹೈಕಮಾಂಡ್‌ ವಿರುದ್ಧ ಖಾರವಾಗಿ ನುಡಿದರು. 

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕೆರೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ (2014ರಲ್ಲಿ) ಸಚಿವನಾಗಿದ್ದಾಗ ನಾನು ಲೋಕಸಭಾ ಚುನಾವಣೆಯಲ್ಲಿ ಗೆದ್ದು ಸಂಸದನಾಗಿ ಸಚಿವ ಸ್ಥಾನ ಕಳೆದುಕೊಂಡೆ. ಈಗ ನಾನು ವಿಧಾನ ಪರಿಷತ್ ಸದಸ್ಯನಾಗಿದ್ದೇನೆ. ಈಗ ಮತ್ತೊಮ್ಮೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ನಾನೇನು ಫುಟ್ಬಾಲೇ ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯನವರು ನನಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಅಂದರೆ ನಾನು ಸ್ಪರ್ಧಿಸುವುದಿಲ್ಲ. ಹೈಕಮಾಂಡ್‌ನವರು ನನಗೆ ಎಷ್ಟೇ ಒತ್ತಡ ಹೇರಿದರೂ ನಾನು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ. 

ಬಿಕಿನಿ ಬ್ಯೂಟಿ ಸೋನು ಗೌಡ ಕಾರು ಡಿಕ್ಕಿ: ಡ್ರೈವಿಂಗ್ ಬರುತ್ತಾ ಅಂತಿದಾರೆ ಫ್ಯಾನ್ಸ್‌!

ವಿಧಾನಪರಿಷತ ಸದಸ್ಯನಾಗಿ ಮುಂದುವರಿಯುತ್ತೇನೆ ಎಂದು ಪ್ರಕಾಶ ಹುಕ್ಕೇರಿ ಸ್ಪಷ್ಟನೆ ನೀಡಿದರು. ಶಿಕ್ಷಕರ ಸೇವೆಯನ್ನು ಮಾಡುವುದಕ್ಕೆ ಶಿಕ್ಷಕರು ನನ್ನನ್ನು ವಿಧಾನ ಪರಿಷತ್‌ ಸದಸ್ಯನನ್ನಾಗಿ ಆಯ್ಕೆ ಮಾಡಿದ್ದಾರೆ. ಇನ್ನೂ ಐದು ವರ್ಷಕಾಲ ನನ್ನ ಅವಧಿ ಇದೆ. ಕೇವಲ ಒಂದು ವರ್ಷದಲ್ಲಿ ಶಿಕ್ಷಕರಿಗಾಗಿ ಹನ್ನೆರಡರಿಂದ ಹದಿಮೂರು‌ ಕೋಟಿ ರುಪಾಯಿ ಖರ್ಚು ಮಾಡಿದ್ದೇನೆ. ಶಿಕ್ಷಕರ ಬಹಳಷ್ಟು ಬೇಡಿಕೆಗಳಿವೆ. ಅದನ್ನು ಈಡೇರಿಸಲು ನನಗೆ 5 ವರ್ಷ ಬೇಕು ಎಂದರು.

ನಿರುದ್ಯೋಗ ಸಮಸ್ಯೆ ನಿವಾರಣೆಗೆ ಕ್ರಮ ಇಲ್ಲ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಮಂಡಿಸಿರುವ ಬಜೆಟ್ ಅಭಿವೃದ್ಧಿಗೆ ವಿಮುಖವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ಪ್ರಸ್ತುತ ಅತ್ಯಂತ ಜ್ವಲಂತ ಸಮಸ್ಯೆಯಾಗಿರುವ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಕೇಂದ್ರ ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದಿದ್ದಾರೆ.

ಮಂಡ್ಯವನ್ನು ಮಂಗಳೂರು ಮಾಡುವುದಕ್ಕೆ ಬಿಡಲ್ಲ: ಸಚಿವ ಚಲುವರಾಯಸ್ವಾಮಿ ಹೇಳಿದ್ದೇನು?

ಬಿಜೆಪಿ ಕೋಟಿ ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ನೀಡಿದ್ದ ಭರವಸೆಗಳೆಲ್ಲ ಭರವಸೆಯಾಗಿಯೇ ಉಳಿದಿದೆ. ಈ ಬಜೆಟ್ ನಲ್ಲಾದರೂ ಗಂಭೀರ ಕ್ರಮ ಘೋಷಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದೂ ಹುಸಿಯಾಗಿದೆ. ಕರ್ನಾಟಕಕ್ಕೆ ಈ ಬಜೆಟ್ ನಲ್ಲಿ ಏನನ್ನೂ ನೀಡಲಾಗಿಲ್ಲ. ರಾಜ್ಯದ ಪಾಲಿಗೆ ಅತ್ಯಂತ ನಿರಾಶಾದಾಯಕ ಬಜೆಟ್ ಇದಾಗಿದೆ ಎಂದು ಅವರು ಹೇಳಿದ್ದಾರೆ. ಭಾರತ ಕೃಷಿ ಪ್ರಧಾನ ದೇಶ. ಆದರೆ ಕೃಷಿ ಅಭಿವೃದ್ಧಿಗಾಗಲಿ, ಗ್ರಾಮೀಣ ಪ್ರದೇಶದ ಕಡೆಗಾಗಲಿ ಬಜೆಟ್ ಲಕ್ಷ್ಯವನ್ನೇ ಹರಿಸಿಲ್ಲ. ಕೇವಲ ಶ್ರೀಮಂತರನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಬಜೆಟ್ ಮಂಡಿಸಿದಂತಿದೆ ಎಂದು ಚನ್ನರಾಜ ಪ್ರತಿಕ್ರಿಯಿಸಿದ್ದಾರೆ.

Latest Videos
Follow Us:
Download App:
  • android
  • ios