Asianet Suvarna News Asianet Suvarna News

ಸಚಿವರು ಸರ್ಕಾರದಲ್ಲಿ ಚೀಯರ್ ಗರ್ಲ್ಸ್ ರೀತಿ ಆಗ್ತಿದ್ದಾರೆ: ಹರಿಪ್ರಸಾದ್ ಕಿಡಿ

* ಬೆಂಗಳೂರಿನಲ್ಲಿ ಇಂದು (ಆ.17)   ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ಸುದ್ದಿಗೋಷ್ಠಿ
* ಬಿಜೆಪಿ ವಿರುದ್ಧ  ವಿಧಾನಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್  ವಾಗ್ದಾಳಿ 
* ಬಿಜೆಪಿ ಸಚಿವರಿಗೆ ಚೀಯರ್ ಗರ್ಲ್ಸ್ ಎಂದ ಬಿ ಕೆ ಹರಿಪ್ರಸಾದ್

Congress MLC BK Hariprasad Hits out at Modi Government rbj
Author
Bengaluru, First Published Aug 17, 2021, 4:35 PM IST
  • Facebook
  • Twitter
  • Whatsapp

ಬೆಂಗಳೂರು, (ಆ.17): 56 ಇಂಚಿನ ಎದೆಯ ಪ್ರಧಾನಿ ಏಳು ವರ್ಷ ಕಳೆದ್ರೂ ಮಾದ್ಯಮಗಳ ಮುಂದೆ ಬರುತ್ತಿಲ್ಲ. ಬರೀ ಭಾಷಣದಲ್ಲಿ ಹಿಂದಿ ಡೈಲಾಗ್ ಹೊಡೆಯೊದಕ್ಕೆ 56 ಇಂಚು ಸಿಮೀತ ಆಗಿದೆ ಎಂದು ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಇಂದು (ಆ.17) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೂರದರ್ಶನ ಈಗ ದುಷ್ಟರ ದರ್ಶನ ಆಗಿದೆ. ದೇಶದ ಯಾವುದೇ ವಿಚಾರಗಳನ್ನ ಅದರಲ್ಲಿ ಹೇಳುತ್ತಿಲ್ಲ. ಮೋದಿ,ಅಮಿತ್ ಶಾ,ಗಡ್ಕರಿ ಸೇರಿ ಐದು ಜನ ಮಾತ್ರ ಈ ಸರ್ಕಾರದ ಬಗ್ಗೆ ಮಾತನಾಡ್ತಾರೆ. ಇನ್ನೂ ಉಳಿದ ಸಚಿವರು ಸರ್ಕಾರದಲ್ಲಿ ಚೀಯರ್ ಗರ್ಲ್ಸ್ ರೀತಿ ಆಗ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಅನ್ನಭಾಗ್ಯ ಅಕ್ಕಿ ಕಡಿತಕ್ಕೆ ಬಿಜೆಪಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ದೆಹಲಿಯಲ್ಲಿ ರೈತರು ಪ್ರತಿಭಟನೆ ಮಾಡ್ತಿದ್ದಾರೆ.. 500 ರೈತರು ಸಾವನ್ನಪ್ಪಿದ್ದಾರೆ. ಅವರ ಕ್ಷಮೆಯಾಚಿಸುವ ಕೆಲಸ ಮಾಡಿಲ್ಲ. ಧನ್ಯವಾದಗಳನ್ನ ಹೇಳಬೇಕಿತ್ತಂತೆ. ಆಕ್ಸಿಜನ್ ಕೊಟ್ರಾ, ವೆಂಟಿಲೇಟರ್ ಕೊಟ್ರಾ...? ಯಾವುದನ್ನ ಕೊಟ್ಟಿದ್ದಾರೆ ಧನ್ಯವಾದ ಹೇಳೋಕೆ ಎಂದು ಪ್ರಶ್ನಿಸಿದರು.

ತಾಲಿಬಾನ್ ಬರೀ ಅಫ್ಘಾನಿಸ್ತಾನದಲ್ಲಿ ಅಷ್ಟೇ ಇಲ್ಲ. ಇಲ್ಲೂ ಸಹ ಅದೇ ಮಾದರಿಯಲ್ಲಿಯೇ ಇದೆ.  ಭಾರತದಲ್ಲೂ ತಾಲಿಬಾನ್ ರೀತಿಯ ಕೆಲವು ಸಂಘಟನೆಗಳಿವೆ ಎಂದರು.
 

Follow Us:
Download App:
  • android
  • ios