ಅಧಿಕಾರಕ್ಕೋಸ್ಕರ ಹೆಚ್‌ಡಿಕೆ ಯಾರ ಕಾಲು ಬೇಕಾದ್ರೂ ಹಿಡಿತಾರೆ: ಜಮೀರ್ ಅಹಮದ್

* ಬಿಜೆಪಿ ಆಡಳಿತಕ್ಕೆ ಬಂದ ಮೇಲೆ ರಾಜ್ಯದ ಜನತೆ ಶಾಪ ಹಾಕುತ್ತಿದ್ದಾರೆ
* ರಾಜ್ಯಕ್ಕೆ ಒಳ್ಳೆಯದಾಗಬೇಕು ಅಂದ್ರೆ ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು
* ಉಪ ಚುನಾವಣೆಯಲ್ಲಿ ನಾವು ಸೋತಿರೋದು ಜೆಡಿಎಸ್‌ನಿಂದಲೇ 

Congress MLA Zameer Ahmed Khan Slam HD Kumaraswamy grg

ಬೆಂಗಳೂರು(ಜೂ.09): ಜೆಡಿಎಸ್ ಪಕ್ಷ ಈ ಹಿಂದೆ ಇದ್ದ ಬೇಸ್ ಎಲ್ಲವನ್ನೂ ಕಳೆದುಕೊಂಡಿದೆ. ನಾನು ಮುಂಚೆ ಜೆಡಿಎಸ್ ನಲ್ಲಿ ಇದ್ದವನೇ, ಅಧಿಕಾರಕ್ಕೋಸ್ಕರ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಏನು ಬೇಕಾದ್ರೂ ಮಾಡ್ತಾರೆ. ಅಧಿಕಾರಕ್ಕೋಸ್ಕರ ಪಲ್ಟಿ ಹೊಡೆಯೋ ಕೆಲಸವನ್ನೂ ಮಾಡ್ತಾರೆ. ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ರಾಜಕೀಯವೇ ಬೇರೆ, ಕುಮಾರಸ್ವಾಮಿ ಅವರ ರಾಜಕಾರಣವೇ ಬೇರೆಯಾಗಿದೆ ಎಂದು ಶಾಸಕ ಜಮೀರ್ ಅಹಮದ್ ಖಾನ್‌ ಹೆಚ್‌ಡಿಕೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಇಂದು(ಬುಧವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಣಕ್ಕೋಸ್ಕರ ಕುಮಾರಸ್ವಾಮಿ ಏನು ಬೇಕಾದ್ರೂ ಮಾಡ್ತಾರೆ.  ಅಧಿಕಾರಕ್ಕೋಸ್ಕರ ಯಾರ ಕಾಲು ಬೇಕಾದ್ರೂ ಹಿಡಿತಾರೆ. ಯಡಿಯೂರಪ್ಪನವರ ಮನೆಗೆ ಹೆಚ್‌ಡಿಕೆ ಪದೇ ಪದೆ ಹೋಗೋ ಅರ್ಥವೆನು?, ಹೆಚ್‌ಡಿಕೆ ಯಾವಾಗ ಬೇಕಾದರೂ ಕಾಂಗ್ರೆಸ್‌ಗೆ ಬರಬಹುದು. ಕುಮಾರಸ್ವಾಮಿ ಓರ್ವ ಪಲ್ಟಿ ಗಿರಾಕಿಯಾಗಿದ್ದಾರೆ ಎಂದು ಜಮೀರ್ ಅಹಮದ್ ಖಾರವಾಗಿ ಜರಿದಿದ್ದಾರೆ. 

SSLC, PUC ಪರೀಕ್ಷೆ: ಶಿಕ್ಷಣ ಸಚಿವರು ಎಡಬಿಡಂಗಿ ನಿರ್ಧಾರ ಎಂದ ಎಚ್‌ಡಿಕೆ

ಕುಮಾರಸ್ವಾಮಿ ಮಾಡಿದ ತಪ್ಪಿನಿಂದಲೇ‌ ಅಧಿಕಾರಕ್ಕೆ ಬಂದ ಬಿಜೆಪಿ

ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಆಡಳಿತಕ್ಕೆ ಬರೋದಿಲ್ಲ ಅನ್ನೋ ಸಿ.ಟಿ. ರವಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಜಮೀರ್ ಅಹಮದ್ ಖಾನ್‌, 2006 ರ ವರೆಗೂ ರಾಜ್ಯದಲ್ಲಿ ಬಿಜೆಪಿ ನೆಲಕಚ್ಚಿತ್ತು. 20-20 ತಿಂಗಳ ಆಡಳಿತದಲ್ಲಿ ಬಿಜೆಪಿ ಆಡಳಿತಕ್ಕೆ ಬಂತು. ಆಗ ಕುಮಾರಸ್ವಾಮಿಗೆ ನಾನು ಬಿಜೆಪಿಗೆ ಅಧಿಕಾರ ನೀಡುವಂತೆ ಹೇಳಿದ್ದೆ. ಕುಮಾರಸ್ವಾಮಿ ಅಂದು ಮಾಡಿದ ತಪ್ಪಿನಿಂದಲೇ‌ ಬಿಜೆಪಿ ಅಧಿಕಾರಕ್ಕೆ ಬಂತು. 2008 ರಲ್ಲಿ 110 ಸೀಟ್ ಬಂತು, 2018 ರಲ್ಲೂ 104 ಸೀಟು ಬಂತು. ಇದನ್ನ ಸಿಟಿ ರವಿ ಅವರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ. 

ಸಮ್ಮಿಶ್ರ ಸರ್ಕಾರ ತೆಗೆದು ಹಾಕಿ ಬಿಜೆಪಿ ಆಡಳಿತಕ್ಕೆ ಬಂದ ಮೇಲೆ ರಾಜ್ಯದ ಜನತೆ ಶಾಪ ಹಾಕುತ್ತಿದ್ದಾರೆ. ಬಿಜೆಪಿಯಲ್ಲಿ ಕಳೆದ 6 ತಿಂಗಳಿನಿಂದ ಗೊಂದಲವಿದೆ. ಯಾವ ಸರ್ಕಾರ ಇದ್ರೂ ಬಡವರ ಪರವಾಗಿ ಕೆಲಸ ಮಾಡಬೇಕು. ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ. ಜನರೇ ಸಿದ್ದರಾಮಯ್ಯ ಅವರೇ ಸಿಎಂ ಆಗಬೇಕು ಅಂತ ಹೇಳುತ್ತಿದ್ದಾರೆ. ಹೈಕಮಾಂಡ್ ಕೂಡ ಸಿದ್ದರಾಮಯ್ಯ ಪರ ಒಲವಿದ್ದಂತೆ ಇದೆ. ರಾಜ್ಯಕ್ಕೆ ಒಳ್ಳೆಯದಾಗಬೇಕು ಅಂದ್ರೆ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಬೇಕು. ಸಿದ್ದರಾಮಯ್ಯ ಇಂಥ ಸಮಯದಲ್ಲಿ ಸಿಎಂ ಆಗಿದ್ದರೆ ಇಷ್ಟು ಕಷ್ಟ ಪಡಬೇಕಾಗಿರಲಿಲ್ಲ. ಉಪ ಚುನಾವಣೆಯಲ್ಲಿ ನಾವು ಸೋತಿರೋದು ಜೆಡಿಎಸ್‌ನಿಂದಲೇ ಎಂದು ಆರೋಪಿಸಿದ್ದಾರೆ.
 

Latest Videos
Follow Us:
Download App:
  • android
  • ios