Asianet Suvarna News Asianet Suvarna News

ಅಲ್ಪಸಂಖ್ಯಾತರ ಬಗ್ಗೆ ಮಾತನಾಡಿದ ಕುಮಾರಸ್ವಾಮಿ ವಿರುದ್ಧ ಗುಡುಗಿದ ಜಮೀರ್

* ಅಲ್ಪಸಂಖ್ಯಾತ ನಾಯಕರ ಬಗ್ಗೆ ಎಚ್ಡಿಕೆ ಹೇಳಿಕೆಗೆ ಜಮೀರ್ ಅಹಮದ್ ತಿರುಗೇಟು
* ಎಚ್ಡಿಕೆಗೆ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಸವಾಲು
*ಸಿದ್ದರಾಮಯ್ಯ ಅಲ್ಪ ಸಂಖ್ಯಾತರ ನಾಯಕರ ಟರ್ಮಿನೇಟರ್  ಎಂದಿದ್ದ ಕುಮಾರಸ್ವಾಮಿ

Congress MLA Zameer Ahmed Khan Hits back at HD Kumaraswamy Over allegation on Siddu rbj
Author
Bengaluru, First Published Oct 16, 2021, 9:14 PM IST
  • Facebook
  • Twitter
  • Whatsapp

ಬೆಂಗಳೂರು, (ಅ.16): ಸಿದ್ದರಾಮಯ್ಯ ಅವರನ್ನು ಅಲ್ಪ ಸಂಖ್ಯಾತರ ನಾಯಕರ ಟರ್ಮಿನೇಟರ್ ಎಂದಿರುವ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಶಾಸಕ ಜಮೀರ್ ಅಹಮದ್ ಖಾನ್ (Zameer Ahmed Khan) ವಾಗ್ದಾಳಿ ನಡೆಸಿದ್ದಾರೆ.

ಇಂದು (ಅ.16) ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಮೀರ್, ನಿಜವಾಗಿ ಅಲ್ಪಸಂಖ್ಯಾತ ನಾಯಕರರ ಮೇಲೆ ಕಾಳಜಿ ಇರೋದು ಸಿದ್ದರಾಮಯ್ಯ (siddaramaiah) ಮತ್ತು ದೇವೇಗೌಡ ಅವರಿಗೆ ಮಾತ್ರ. ಕುಮಾರಸ್ವಾಮಿಗೆ (HD Kumaraswamy( ಅಲ್ಪಸಂಖ್ಯಾತ ನಾಯಕರ ಮೇಲೆ ಕಾಳಜಿ ಇಲ್ಲ. ಕುಮಾರಸ್ವಾಮಿ ಮುಂದಿನ ಮುಖ್ಯಮಂತ್ರಿ ಮುಸ್ಲಿಂ ನಾಯಕ ಅಂತ ಅವರ ಪಕ್ಷದಿಂದ ಘೋಷಿಸಲಿ ಎಂದು ಸವಾಲು ಹಾಕಿದರು.

ಸ್ವಪಕ್ಷದ ಮುಸ್ಲಿಂ ನಾಯಕನನ್ನು ಮುಗಿಸಿದ್ದೇ ಸಿದ್ದರಾಮಯ್ಯ: ಎಚ್‌ಡಿಕೆ

ಕುಮಾರಸ್ವಾಮಿ ಸಿಎಂ ಆಗಿದ್ದಾಗ ಒಮ್ಮೆಯೂ ಹಜ್ ಉದ್ಘಾಟನೆಗೆ ಬರಲಿಲ್ಲ. ಯಡಿಯೂರಪ್ಪ, ಡಿವಿಎಸ್, ಶೆಟ್ಟರ್, ಸಿದ್ದರಾಮಯ್ಯ ಹಜ್ ಯಾತ್ರೆಯ ಉದ್ಘಾಟನೆ ಗೆ ಬಂದಿದ್ರು. ಇದರಲ್ಲೇ ಗೊತ್ತಾಗುತ್ತೆ ಕುಮಾರಸ್ವಾಮಿಗೆ ಅಲ್ಪಸಂಖ್ಯಾತರ ಮೇಲೆ ಎಷ್ಟು ಪ್ರೀತಿ‌ ಇದೆ ಅಂತ ಎಂದು ತಿವಿದರು.

ಟಿಪ್ಪು ಜಯಂತಿಯನ್ನು ಸಿದ್ದರಾಮಯ್ಯ ಬ್ಯಾಂಕ್ವೆಟ್ ಹಾಲ್ ನಲ್ಲಿ ಮಾಡ್ತಿದ್ರು. ಆದ್ರೆ ಎಚ್ಡಿಕೆ ಸಿಎಂ ಆದ್ಮೇಲೆ ರವೀಂದ್ರ ಕಲಾಕ್ಷೇತ್ರದಲ್ಲಿ ಮಾಡಿ ಅಂತ ಅಧಿಕಾರಿಗಳಿಗೆ ಸೂಚಿಸಿದರು. ಮುಸ್ಲಿಮರ ಮೇಲೆ ಪ್ರೀತಿ ಇದ್ದಿದ್ರೆ ಹೀಗೆ ಮಾಡುತ್ತಿರಲಿಲ್ಲ ಎಂದು ಕಿಡಿಕಾರಿದರು.

ಸಿದ್ದರಾಮಯ್ಯ ಸಿಎಂ ಆದಮೇಲೆ 3150 ಕೋಟಿ ಅಲ್ಪಸಂಖ್ಯಾತ ರ ಅನುದಾನ ಹೆಚ್ಚಿಸಿದ್ರು. ಆದರೆ ಕುಮಾರಸ್ವಾಮಿ ಸಿಎಂ ಆದ ಮೇಲೆ ಅದನ್ನು  ಕಡಿಮೆ ಮಾಡಿದ್ರು. ಯಾರಿಗೆ ಅಲ್ಪ ಸಂಖ್ಯಾತರ ಮೇಲೆ ಪ್ರೀತಿ ನೀವೆ ಹೇಳಿ.

ನಿಮ್ಮ ಮಗನನ್ನು ಮಂಡ್ಯದಲ್ಲಿ ನಿಲ್ಲಿಸುವ ಬದಲುಗೆ ಜಾಫರ್ ಷರೀಫ್ ಮೊಮ್ಮಗನಿಗೆ ಟಿಕೆಟ್ ಕೊಡಬೇಕಿತ್ತು ಮಂಡ್ಯದಲ್ಲಿ. ಮಾತಾಡೊದಲ್ಲಾ, ಕೆಲಸ ಮಾಡಿ ತೋರಿಸಿ.  ಜಾಫರ್ ಷರೀಫ್ ಮೊಮ್ಮಗ ಚುನಾವಣೆಗೆ ನಿಂತಾಗ ಜೆಡಿಎಸ್ ಅಬ್ದುಲ್ ಅಜೀಂ ಅವರನ್ನು ಅಭ್ಯರ್ಥಿಯನ್ನಾಗಿ ಹಾಕಿದ್ರು. ಜಾಫರ್ ಷರೀಫ್ ಮೊಮ್ಮಗನ ಮೇಲೆ ಪ್ರೀತಿ ಇದ್ದಿದ್ದರೆ ಯಾಕೆ ಮುಸ್ಲಿಂ ಅಭ್ಯರ್ಥಿಯನ್ನು ಒಂದು ಎದುರಾಳಿಯಾಗಿ ನಿಲ್ಲಿಸ್ತಾ ಇದ್ರು ಎಂದು ಕುಮಾರಸ್ವಾಮಿ ವಿರುದ್ಧ ಗುಡುಗಿದರು.

ರಾಮನಗರ,ಚನ್ನಪಟ್ಟಣ  ಹಾಸನದಲ್ಲಿ ಏಕೆ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಡಲ್ಲ. ಬಿಜೆಪಿಗೆ ಸಹಾಯ ಮಾಡಲು ಉಪ ಚುನಾವಣೆಗಳಲ್ಲಿ ಅಲ್ಪಸಂಖ್ಯಾತ ರಿಗೆ ಟಿಕೆಟ್ ಕೊಟ್ಟಿದ್ದಾರೆ ಎಂದು ತಿರುಗೇಟು ನೀಡಿದರು.

Follow Us:
Download App:
  • android
  • ios