ನೈಸ್ ಸಂಸ್ಥೆ ಅಕ್ರಮ: ಕಾಂಗ್ರೆಸ್ ಶಾಸಕ ಜಯಚಂದ್ರಗೆ ಪ್ರಾಣ ಬೆದರಿಕೆ ಕರೆ
ನೈಸ್ ಸಂಸ್ಥೆಯ ಹಗರಣದ ಬಗ್ಗೆ ಸದನದಲ್ಲಿ ಮಾತನಾಡಿದ ಬೆನ್ನಲ್ಲೇ ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಹಾಗೂ ಸಿರಾ ಕ್ಷೇತ್ರದ ಶಾಸಕರಾದ ಟಿ.ಬಿ.ಜಯಚಂದ್ರ ಅವರಿಗೆ ಪ್ರಾಣ ಬೆದರಿಕೆ ಬಂದಿದೆ ಎಂದು ಸಂಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಂಗಳೂರು (ಜು.29): ನೈಸ್ ಸಂಸ್ಥೆಯ ಹಗರಣದ ಬಗ್ಗೆ ಸದನದಲ್ಲಿ ಮಾತನಾಡಿದ ಬೆನ್ನಲ್ಲೇ ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಹಾಗೂ ಸಿರಾ ಕ್ಷೇತ್ರದ ಶಾಸಕರಾದ ಟಿ.ಬಿ. ಜಯಚಂದ್ರ ಅವರಿಗೆ ಪ್ರಾಣ ಬೆದರಿಕೆ ಬಂದಿದೆ ಎಂದು ಸಂಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಾಜಿ ಸಚಿವರೂ ಆಗಿದ್ದ ಟಿ.ಬಿ. ಜಯಚಂದ್ರ ಅವರು ಹಿಂದೆ ಸಚಿವರಾಗಿದ್ದಾಗ ನೈಸ್ ಸಂಸ್ಥೆಯ ಹಗರಣಕ್ಕೆ ಸಂಬಂಧಿಸಿದಂತೆ ವರದಿ ಸಲ್ಲಿಸಿದ್ದರು. ಅಲ್ಲದೆ, ಇತ್ತೀಚೆಗೆ ನಡೆದ ಅಧಿವೇಶನದಲ್ಲಿ ವರದಿ ಪ್ರಕಾರ ನೈಸ್ ಸಂಸ್ಥೆಯ ಮೇಲೆ ಕ್ರಮಕ್ಕೆ ಆಗ್ರಹಿಸಿದ್ದರು.
ಆಗಿನಿಂದ ಜಯಚಂದ್ರ ಅವರಿಗೆ ಸತತವಾಗಿ ದೂರವಾಣಿ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದನೆ ಹಾಗೂ ಜೀವ ಬೆದರಿಕೆ ಒಡ್ಡಲಾಗುತ್ತಿದೆ. ಪ್ರತಿ ಬಾರಿಯೂ ಬೇರೆ ಬೇರೆ ಸಂಖ್ಯೆಗಳಿಂದ ಕರೆಗಳು ಬರುತ್ತಿದ್ದು ಅವುಗಳನ್ನು ಬರೆದುಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ತಾವು ಕೂಡಲೇ ಕಾರ್ಯಪ್ರವೃತ್ತರಾಗಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಯಚಂದ್ರ ಅವರ ವಿಶೇಷ ಕರ್ತವ್ಯಾಧಿಕಾರಿ ದೂರಿನಲ್ಲಿ ತಿಳಿಸಿದ್ದಾರೆ. ನಗರದ ಡಾಲರ್ಸ್ ಕಾಲೋನಿಯಲ್ಲಿರುವ ತಮ್ಮ ಮನೆಯಲ್ಲಿ ಇದ್ದ ವೇಳೆ ಜಯಚಂದ್ರ ಅವರಿಗೆ ಕರೆಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಸಂಜಯನಗರ ಠಾಣೆ ಇನ್ಸ್‌ಪೆಕ್ಟರ್ ಗುರುಪ್ರಸಾದ್ ಅವರು, ಜಯಚಂದ್ರರವರ ಮನೆಗೆ ತೆರಳಿ ಮಾಹಿತಿ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ವಿರೋಧಿಗಳೊಂದಿಗೆ ರಾಜಕೀಯ ಮಾಡೋಣ: ಶಾಸಕ ವಿಜಯೇಂದ್ರ
ಅಡಿಕೆ ವ್ಯಾಪಾರಿಗಳಿಂದ 1000 ಕೋಟಿ ತೆರಿಗೆ ವಂಚನೆ: ಅಡಿಕೆ ವ್ಯಾಪಾರಿಗಳು ಮತ್ತು ತೆರಿಗೆ ಇಲಾಖೆ ಅಧಿಕಾರಿಗಳ ನಡುವಿನ ಹೊಂದಾಣಿಕೆಯಿಂದ ಸರ್ಕಾರಕ್ಕೆ ಪ್ರತೀ ವರ್ಷ ಸಾವಿರಾರು ಕೋಟಿ ರು.ನಷ್ಟುತೆರಿಗೆ ವಂಚನೆಯಾಗುತ್ತಿದ್ದು, ಇದನ್ನು ತಡೆಯಲು ಸರ್ಕಾರ ಗಮನ ಹರಿಸಬೇಕೆಂದು ಕಾಂಗ್ರೆಸ್ ಸದಸ್ಯ ಟಿ.ಬಿ.ಜಯಚಂದ್ರ ಮನವಿ ಮಾಡಿದರು. ಸದನದಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದಿಂದ ಪ್ರತಿ ದಿನ 70ಕ್ಕೂ ಹೆಚ್ಚು ಟ್ರಕ್‌ಗಳಲ್ಲಿ 25 ಟನ್‌ನಷ್ಟುಅಡಿಕೆ ಮಾರಾಟವಾಗುತ್ತದೆ. ದರಲ್ಲಿ ಶೇ.90ರಷ್ಟು ಹೊರ ರಾಜ್ಯಗಳಿಗೆ ಹೋಗುತ್ತದೆ. ಶೇ.10ರಷ್ಟುಮಾತ್ರ ನಮ್ಮ ರಾಜ್ಯದೊಳಗೆ ಸರಬರಾಜಾಗುತ್ತದೆ.
ಇದರಲ್ಲಿ 10-15 ಟ್ರಕ್‌ಗಳು ಮಾತ್ರ ಬಿಲ್ ಹೊಂದಿರುತ್ತವೆ. ಉಳಿದ 45ಕ್ಕೂ ಹೆಚ್ಚು ಟ್ರಕ್‌ಗಳು ಬಿಲ್ ಇಲ್ಲದೆ ಅಡಿಕೆ ತೆಗೆದುಕೊಂಡು ಹೋಗುತ್ತವೆ. ಇದರಿಂದ ದಿನಕ್ಕೆ 2.25 ಕೋಟಿಗೂ ಹೆಚ್ಚು ತೆರಿಗೆ ವಂಚನೆಯಾಗುತ್ತದೆ. ಅಂದರೆ ವರ್ಷಕ್ಕೆ ಸುಮಾರು 1000 ಕೋಟಿ ರು.ನಷ್ಟುತೆರಿಗೆ ವಂಚನೆಯಾಗುತ್ತಿದೆ. ಇದು ಮಾರಾಟಗಾರರು ಮತ್ತು ಜಿಎಸ್‌ಟಿ ಇಲಾಖಾ ಅಧಿಕಾರಿಗಳ ನಡುವಿನ ಹೊಂದಾಣಿಕೆಯಿಂದ ನಡೆಯುತ್ತಿದೆ. ಇದನ್ನು ತಡೆದು ರಾಜ್ಯದ ಬೊಕ್ಕಸಕ್ಕೆ ಬರಬೇಕಿರುವ ತೆರಿಗೆ ವಸೂಲಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮೊಹರಂ ಹಬ್ಬ: ಚಿಕ್ಕಮಗಳೂರಿನಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆಯ ದ್ಯೋತಕ
ನೈಸ್ ರಸ್ತೆ ಸರ್ಕಾರದ ವಶಕ್ಕೆ ಆಗ್ರಹ: ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್ (ನೈಸ್) ಸಂಸ್ಥೆ ರೈತರ ಸುಮಾರು 20 ಸಾವಿರ ಎಕರೆ ಭೂಮಿ ಕಬಳಿಸಿದೆ. ಹಾಗಾಗಿ ಈ ಸಂಸ್ಥೆ ನಿರ್ಮಿಸಿರುವ ರಸ್ತೆಗಳನ್ನು ಕೂಡಲೇ ಸರ್ಕಾರ ಅವಧಿಗೂ ಮೊದಲೇ ತನ್ನ ವಶಕ್ಕೆ ಪಡೆಯಬೇಕೆಂದು ಇದೇ ವೇಳೆ ಶಾಸಕ ಜಯಚಂದ್ರ ಆಗ್ರಹಿಸಿದರು. ನೈಸ್ ಸಂಸ್ಥೆ ಉದ್ದೇಶಿತ ಭೂಮಿಯಲ್ಲಿ ಎಕ್ಸ್‌ಪ್ರೆಸ್ ರಸ್ತೆ ನಿರ್ಮಾಣ ಮಾಡದೆ ರೈತರ ಹತ್ತಾರು ಎಕರೆ ಭೂಮಿಯನ್ನು ಕಬಳಿಸಿ ಹಗಲು ದರೋಡೆ ಮಾಡಿದೆ. ಈ ಸಂಬಂಧ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ನಾನು ಸಚಿವನಾಗಿದ್ದಾಗ ನನ್ನ ನೇತೃತ್ವದ ಸಮಿತಿಯು ವರದಿ ನೀಡಿತ್ತು. ಈ ವರದಿ ಬೆಳಗಾವಿಯ ಅಧಿವೇಶನದಲ್ಲಿ ಚರ್ಚೆಯೂ ಆಗಿ ಸರ್ಕಾರ ಉತ್ತರವನ್ನೂ ನೀಡಿದೆ. ನೈಸ್ ಒಪ್ಪಂದ ಮುಕ್ತಾಯಗೊಳಿಸುವಂತೆ ಸರ್ಕಾರಕ್ಕೆ ವರದಿಯೊಂದು ಈ ಹಿಂದೆಯೇ ಸಲ್ಲಿಕೆಯಾಗಿದೆ. ಹಾಗಾಗಿ ಒಪ್ಪಂದದ ಪ್ರಕಾರ ನೈಸ್ ರಸ್ತೆಯನ್ನು ಸರ್ಕಾರ ತನ್ನ ವಶಕ್ಕೆ ಪಡೆಯಲು ಇನ್ನೂ ಮೂರು ವರ್ಷ ಕಾಲಾವಕಾಶ ಇದ್ದರೂ ಅವಧಿಗೆ ಮೊದಲೇ ವಶಕ್ಕೆ ಪಡೆಯಬೇಕು ಎಂದರು.