ಚಾಮರಾಜನಗರ, (ಫೆ.27): ಮೈಸೂರು ಮಹಾನಗರ ಪಾಲಿಕೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿರೋದು ಇದೀಗ ಕಾಂಗ್ರೆಸ್‌ನ ಭಿನ್ನಮತಕ್ಕೆ ಕಾರಣವಾಗಿದೆ. ಮೈತ್ರಿ ವಿಚಾರವಾಗಿ ಶಾಸಕ ತನ್ವೀರ್ ಸೇಠ್ ಅಮಾನತ್ತಿಗೆ ಸಿದ್ದರಾಮಯ್ಯ ಬಣ ಒತ್ತಾಯಿಸಿದೆ. 

ಇನ್ನು ಇದಕ್ಕೆ ಇಂದು (ಶನಿವಾರ) ಸ್ವತಃ ತನ್ವೀರ್ ಸೇಠ್ ಪ್ರತಿಕ್ರಿಯೆ ಕೊಟ್ಟಿದ್ದು, ನಾನು ಯಾವುದಕ್ಕೂ ಹೆದರುವುದಿಲ್ಲ. ಅಮಾನತು ಮಾಡಿದರು ಸಿದ್ದವಾಗಿದ್ದೇನೆ. ನಮ್ಮದು ವ್ಯಕ್ತಿ ಪೂಜೆ ಮಾಡುವ ಪರಂಪರೆ ಅಲ್ಲ ಪರೋಕ್ಷವಾಗಿ ಸಿದ್ದರಾಮಯ್ಯನವರ ಹಿಂಬಾಲಕರಿಗೆ ಟಾಂಗ್ ಕೊಟ್ಟರು.

ಮೈಸೂರು ಮೇಯರ್ ಸ್ಥಾನ ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ಯಾರು? ಸ್ಫೋಟಕ ಮಾಹಿತಿಕೊಟ್ಟ ಸಿದ್ದು ಪುತ್ರ

ನನ್ನ ವಿರುದ್ದ ಕ್ರಮ ಕೈಗೊಂಡರೆ ಅದನ್ನ ಸ್ವೀಕರಿಸುತ್ತೇನೆ. ಪಕ್ಷದ ಬೆಳವಣಿಗೆ ಬಗ್ಗೆ ಪಕ್ಷದಲ್ಲಿ ಮಾತನಾಡುವೆ. ನನ್ನ ವಿಚಾರ ನಾನೇ ಬೇರೆಯಾಗಿ ಹೋರಾಡುವೆ. ನನ್ನ ಮೇಲೆ ಮಾಡಿರುವ ಆರೋಪ ಸಾಬೀತಾಗುವವರೆಗು ಹೋರಾಟ ಮಾಡುತ್ತೇನೆ ಎಂದರು.

ಕಾಂಗ್ರೆಸ್ ಜೆಡಿಎಸ್ ಮೈತ್ರಿ ಡೀಲ್ ಆಗಿದೆ ಅನ್ನೋದು ತನಿಖೆಯಾಗಬೇಕು. ಹಲವು ದಿನಗಳಿಂದ ನನ್ನ ವಿರುದ್ದ ಷಡ್ಯಂತರ ನಡೆಯುತ್ತಿದೆ. ಇವೆಲ್ಲದಕ್ಕೂ ಹೋರಾಟ ಮಾಡುತ್ತೇನೆ ಎಂದು ಹೇಳಿದರು.

ಮೈಸೂರು ಪಾಲಿಕೆ ಮೇಯರ್‌ ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವುದಕ್ಕೆ ರಾಜ್ಯ ಕಾಂಗ್ರೆಸ್‌ನಲ್ಲಿ ಅಸಮಾಧಾನ ಭುಗಿಲೆದ್ದಿದೆ. ಮೇಯರ್ ಚುನಾವಣೆಯ ವಿಚಾರದಲ್ಲಿ ಸಿದ್ದರಾಮಯ್ಯ ಅವರಿಗೆ ಪಾಠ ಕಲಿಸುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದರು.  ಈ ಹಿನ್ನೆಲೆಯಲ್ಲಿ ಮೈಸೂರು ಮೇಯರ್ ಚುನಾವಣೆ ಪ್ರತಿಷ್ಠೆಗೆ ಕಾರಣವಾಗಿತ್ತು. 

ಡಿಕೆಶಿ ನಿರ್ಧಾರಕ್ಕೆ ಸಿದ್ದು ಬಣ ಸಿಡಿಮಿಡಿ: ಸಿದ್ದು ಕೇಳದೆ ನಿರ್ಧಾರ, ಕ್ರಮಕ್ಕೆ ಪಟ್ಟು!

ಆದ್ರೆ, ಕಾಂಗ್ರೆಸ್‌ನ ಕೆಲ ನಾಯಕರು ಮೇಯರ್ ಸ್ಥಾನವನ್ನು ಜೆಡಿಎಸ್‌ಗೆ ಕೊಟ್ಟಿರುವುದು ಸಿದ್ದರಾಮಯ್ಯನವರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೇ ಇದು ರಾಜ್ಯ ನಾಯಕರಲ್ಲಿ ದಂಗಲ್ ಶುರುವಾಗಿದೆ. ಮೇಲ್ನೋಟಕ್ಕೆ ತನ್ವೀರ್ ಸೇಠ್ ಅವರೇ ಜೆಡಿಎಸ್‌ಗೆ ಬೆಂಬಲಿಸಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ತನ್ವೀರ್ ಸೇಠ್ ಅವರನ್ನ ಪಕ್ಷದಿಂದ ಉಚ್ಛಾಟಿಸಬೇಕೆಂದು ಸಿದ್ದರಾಮಯ್ಯ ಟೀಮ್ ನಾಯಕರು ಆಗ್ರಹಿಸಿದ್ದಾರೆ.