ಸವದತ್ತಿ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧೆ ಬಗ್ಗೆ ಹೇಳಿಲ್ಲ: ಸತೀಶ್ ಜಾರಕಿಹೊಳಿ

ಕೋಲಾರ ಜೊತೆಗೆ ಸವದತ್ತಿ ವಿಧಾನಸಭಾ ಕ್ಷೇತ್ರದಿಂದಲೂ ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪರ್ಧಿಸುತ್ತಾರೆ ಎಂಬ ಊಹಾಪೋಹಗಳಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತೆರೆ ಎಳೆದಿದ್ದಾರೆ. 

Congress MLA Satish Jarkiholi Speaks About Siddaramaiah At Belagavi gvd

ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ

ಬೆಳಗಾವಿ (ಜ.16): ಕೋಲಾರ ಜೊತೆಗೆ ಸವದತ್ತಿ ವಿಧಾನಸಭಾ ಕ್ಷೇತ್ರದಿಂದಲೂ ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪರ್ಧಿಸುತ್ತಾರೆ ಎಂಬ ಊಹಾಪೋಹಗಳಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತೆರೆ ಎಳೆದಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, 'ಸವದತ್ತಿಯಿಂದ ಸಿದ್ದರಾಮಯ್ಯ ಸ್ಪರ್ಧೆ ಬಗ್ಗೆ ಎಲ್ಲಿಯೂ ಹೇಳಿಲ್ಲ. ಸವದತ್ತಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಥಳೀಯರಿಗೆ ಟಿಕೆಟ್ ಕೊಡ್ತೀವಿ. ಸಿದ್ದರಾಮಯ್ಯ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸುವ ಬಗ್ಗೆ ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತೆ. 

ಅದು ಬೆಂಗಳೂರು ಲೆವೆಲ್‌‌ನಲ್ಲಿ ನಿರ್ಧಾರ ಆಗುವಂತಹ ವಿಚಾರ. ಸವದತ್ತಿಯಲ್ಲಿ ಸ್ಥಳೀಯರು ಪಕ್ಷ ಸಂಘಟನೆ ಮಾಡಿದ್ದಾರೆ. ಟಿಕೆಟ್ ಗಾಗಿ ಹೊರಗಡೆಯವರು ಸಹ ಅರ್ಜಿ ಸಲ್ಲಿಸಿದ್ದಾರೆ. ಆದ್ರೆ ಸರ್ವೆಯಲ್ಲಿ ಯಾರ ಹೆಸರು ಬರುತ್ತೆ ಆ ಸ್ಥಳೀಯ ನಾಯಕರಿಗೆ ಟಿಕೆಟ್ ನೀಡೋದಾಗಿ ಹೇಳಿದ್ದಾರೆ. ಇನ್ನು ವಿಧಾನಸಭೆ ಚುನಾವಣೆಗೆ ಸಿದ್ಧತೆ ವಿಚಾರವಾಗಿ ಪ್ರತಿಕ್ರಿಯಿಸಿದ ಸತೀಶ್, 'ಒಂದು ವರ್ಷದಿಂದ ಎಲೆಕ್ಷನ್ ತಯಾರಿ ನಡೀತಿದೆ, ನಾವು ಮಾಡ್ತಿದೀವಿ. ಬಹಳಷ್ಟು ಜನ ಸ್ಪರ್ಧೆಗೆ ಅರ್ಜಿ ಕೊಟ್ಟಿದ್ದಾರೆ, ಕರೆದು ಚರ್ಚೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಸಿದ್ದರಾಮಯ್ಯ ಬಲವಂತಕ್ಕೆ ಕೋಲಾರದಿಂದ ಸ್ಪರ್ಧಿಸಲು ಬರುತ್ತಿದ್ದಾರೆ: ಸಿ.ಎಂ.ಇಬ್ರಾಹಿಂ

'ಸ್ಯಾಂಟ್ರೋ ಕಾರು ಬೆಡ್ ರೂಮ್, ಕಿಚನ್ ರೂಮ್ ಓಡಾಡಿ ಈಗ ಸಿಕ್ಕಾಕೊಂಡಿದೆ, ಮುಂದೇನಾಗುತ್ತೆ ನೋಡೋಣ': ಸ್ಯಾಂಟ್ರೋ ರವಿ ಪ್ರಕರಣ ಕುರಿತಂತೆ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದು, 'ಬೆಡ್ ರೂಮ್ ಅಲ್ಲಿ ಇಲ್ಲಿ ಅಂತಾ ಎಲ್ಲ ಕಡೆ ಸ್ಯಾಂಟ್ರೋ ಕಾರು ಓಡಾಡಿದೆ‌. ಸ್ಯಾಂಟ್ರೋ ಕಾರು ಚಿಕ್ಕದಿರುತ್ತೆ ಅಂತಾ ಎಲ್ಲಿ ಬೇಕಾದಲ್ಲಿ ಓಡಾಡಿಸಿದ್ದಾನೆ‌. ಮುಂದೆ ಹೀಗೆ ಆಗಬಹುದು ಅವನಿಗೆ ಗೊತ್ತೆ ಇಲ್ಕ. ಬೆಡ್‌ರೂಮ್, ಕಿಚನ್ ರೂಮ್‌ನಲ್ಲಿ ಎಲ್ಲಾ ಅಡ್ಡಾಡಿದೆ.‌ ಈಗ ಬಂದು ಸಿಕ್ಕಾಕಿಕೊಂಡಿದೆ ಮುಂದೆ ಏನಾಗುತ್ತೆ ನೋಡೋಣ‌‌. ಸಿಎಂ ಹಾಗೂ ಪೊಲೀಸ್ ಅಧಿಕಾರಿಗಳು ಸರಿಯಾಗಿ ತನಿಖೆ ಮಾಡ್ತೀವಿ ಅಂದಿದ್ದಾರೆ‌. ಸ್ಯಾಂಟ್ರೋ ಕಾರು ಎಷ್ಟು ಸ್ಟಾಪ್ ಮಾಡ್ತಾರೆ ನೋಡೋಣ' ಎಂದು ವ್ಯಂಗ್ಯವಾಡಿದ್ದಾರೆ.

ಬೆಳಗಾವಿ ಮಹಾನಗರ ಪಾಲಿಕೆ 'ದಕ್ಷಿಣ'ದಿಂದಲೇ ನಿಯಂತ್ರಣ: ಬೆಳಗಾವಿ ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆಗೆ ದಿನಾಂಕ ನಿಗದಿ ವಿಚಾರವಾಗಿ ಪ್ರತಿಕ್ರಿಯಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, 'ಪಾಪ ಅವರು ಗಾಡಿಗೆ ಅಷ್ಟೇ ಸೀಮಿತವಾಗಿರುತ್ತಾರೆ ಏನೋ, ಮತ್ತೆ ಎಲ್ಲಾ ದಕ್ಷಿಣದಿಂದ ನಿಯಂತ್ರಣ ಮಾಡಬೇಕು ಅಷ್ಟೇ' ಎಂದು ಪರೋಕ್ಷವಾಗಿ ಬೆಳಗಾವಿ ಮಹಾನಗರ ಪಾಲಿಕೆ ಬೆಳಗಾವಿ ದಕ್ಷಿಣ ಬಿಜೆಪಿ ಶಾಸಕ ಅಭಯ್ ಪಾಟೀಲ್ ನಿಯಂತ್ರಣದಲ್ಲಿಯೇ ಇರುತ್ತೆ' ಎಂದು ತಿಳಿಸಿದ್ದಾರೆ. 

ಜ.17ರಂದು ಹೊಸಪೇಟೆಯಲ್ಲಿ ಪ್ರಜಾಧ್ವನಿ ಕಾರ್ಯಕ್ರಮ: ಶಾಸಕ ಪರಮೇಶ್ವರ ನಾಯ್ಕ

ಪಟ್ಟಾವಾಲಾ, ಗಾಡಿ, ಮತ್ತು ಖುರ್ಚಿ ಮೇಲೆ ಕೂರೋದು ಅಷ್ಟೇ ಅದನ್ನ ಬಿಟ್ರೆ ಸ್ವತಂತ್ರವಾಗಿ ಮಹಾನಗರ ಪಾಲಿಕೆ ನಡೆಯೋದು ಬಹಳ ಕಷ್ಟ. ಬಿಜೆಪಿ ಸರ್ಕಾರ ಇರೋವರೆಗೂ ಹೀಗೆ. ನಮ್ಮ ಸರ್ಕಾರ ಬಂದ್ರೆ ಸ್ವತಂತ್ರವಾಗಿ ಕೆಲಸ ಮಾಡಲು ಬಿಡ್ತೀವಿ' ಎಂದು ತಿಳಿಸಿದ್ದಾರೆ. ಮಹಾನಗರ ಪಾಲಿಕೆ ಮೇಯರ್ ಉಪಮೇಯರ್ ಚುನಾವಣೆ ವಿಚಾರವಾಗಿ ಸದನದಲ್ಲಿ ನಾವು ಪ್ರಶ್ನೆ ಕೇಳಿದ್ವಿ ಅದಕ್ಕೆ ಮಾಡಿರಬಹುದು. ಜನರಿಂದ ಆಯ್ಕೆ ಆದವರನ್ನು ಎಲ್ಲಿಯವರೆಗೆ ದೂರ ಇಡೋದು, ಹೀಗಾಗಿ ಬೇಸತ್ತು ಶಾಸಕರು ಈಗ ದಿನಾಂಕ ನಿಗದಿ ಮಾಡಿಸಿರಬಹುದು' ಎಂದು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios