ಜ.17ರಂದು ಹೊಸಪೇಟೆಯಲ್ಲಿ ಪ್ರಜಾಧ್ವನಿ ಕಾರ್ಯಕ್ರಮ: ಶಾಸಕ ಪರಮೇಶ್ವರ ನಾಯ್ಕ

ಕಾಂಗ್ರೆಸ್‌ ಜನರ ಅಭಿವೃದ್ಧಿ ಪರವಾಗಿದೆ. ಆದರೆ, ಬಿಜೆಪಿ ಸಮಾಜದಲ್ಲಿ ಭಾವನೆ ಕೆರಳಿಸಿ, ಸಾಮರಸ್ಯ ಕದಡುತ್ತಿದೆ. ಇದನ್ನು ಜನರಿಗೆ ತಿಳಿಯಪಡಿಸಲು ಪಕ್ಷ ಪ್ರಜಾಧ್ವನಿ ಬಸ್‌ಯಾತ್ರೆ ಹಮ್ಮಿಕೊಂಡಿದ್ದು, ಜ.17ರಂದು ಬೆಳಗ್ಗೆ 11ಗಂಟೆಗೆ ನಗರಕ್ಕೆ ಯಾತ್ರೆ ಬರಲಿದೆ ಎಂದು ಹೂವಿನಹಡಗಲಿ ಕ್ಷೇತ್ರದ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ಹೇಳಿದರು. 

MLA PT Parameshwar Naik Talks About Congress Prajadwani Bus Yatra gvd

ಹೊಸಪೇಟೆ (ಜ.16): ಕಾಂಗ್ರೆಸ್‌ ಜನರ ಅಭಿವೃದ್ಧಿ ಪರವಾಗಿದೆ. ಆದರೆ, ಬಿಜೆಪಿ ಸಮಾಜದಲ್ಲಿ ಭಾವನೆ ಕೆರಳಿಸಿ, ಸಾಮರಸ್ಯ ಕದಡುತ್ತಿದೆ. ಇದನ್ನು ಜನರಿಗೆ ತಿಳಿಯಪಡಿಸಲು ಪಕ್ಷ ಪ್ರಜಾಧ್ವನಿ ಬಸ್‌ಯಾತ್ರೆ ಹಮ್ಮಿಕೊಂಡಿದ್ದು, ಜ.17ರಂದು ಬೆಳಗ್ಗೆ 11ಗಂಟೆಗೆ ನಗರಕ್ಕೆ ಯಾತ್ರೆ ಬರಲಿದೆ ಎಂದು ಹೂವಿನಹಡಗಲಿ ಕ್ಷೇತ್ರದ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ಮಾಜಿ ಸಿಎಂ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ,ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌ ಸೇರಿದಂತೆ ಪಕ್ಷದ ಹಿರಿಯ ನಾಯಕರು ಆಗಮಿಸಲಿದ್ದಾರೆ ಎಂದರು.

ತೋರಣಗಲ್‌ನಿಂದ ಆಗಮನ: ಬೆಂಗಳೂರಿಗೆ ಜ.16ರಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ನಾ ನಾಯಕಿ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ.ಹಾಗಾಗಿ ಬೆಂಗಳೂರಿನಿಂದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ ಅವರು ಜ.16ರಂದು ಸಂಜೆ ಜಿಂದಾಲ್‌ಗೆ ಆಗಮಿಸಲಿದ್ದು,ಅಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಬಳಿಕ ಜ.17ರಂದು ಬಸ್‌ಯಾತ್ರೆ ನಡೆಸಲಿದ್ದಾರೆ.ಅವರು ತೋರಣಗಲ್‌ನಿಂದ ಭುವನಹಳ್ಳಿ,ಗಾದಿಗನೂರು, ಧರ್ಮಸಾಗರ, ಪಾಪಿನಾಯಕನಹಳ್ಳಿ, ವಡ್ಡರಹಳ್ಳಿ, ಕಾರಿಗನೂರು ಮೂಲಕ ಬಳ್ಳಾರಿ ರಸ್ತೆಯಿಂದ ಬೆಳಗ್ಗೆ 11ಕ್ಕೆ ವೇದಿಕೆಗೆ ಆಗಮಿಸಲಿದ್ದಾರೆ. ಪಕ್ಷದ ನಿಯಮದ ಪ್ರಕಾರ ಎಲ್ಲೂ ರೋಡ್‌ಶೋ ನಡೆಸಲು,ದಾರಿ ಮಧ್ಯೆ ಹೂ,ಹಾರ, ತುರಾಯಿ ಹಾಕಲು ಅವಕಾಶ ನೀಡಲಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಹಿಂದುಳಿದ ಗಂಗಾಮತ ಸಮಾಜ ಎಸ್ಟಿಗೆ ಸೇರಿಸಿ: ವಿಧಾನಪರಿಷತ್‌ ಸದಸ್ಯ ರವಿಕುಮಾರ್

ಡೋಂಗಿ ರಾಜಕಾರಣ: ರಾಜ್ಯದಲ್ಲಿ ಬಿಜೆಪಿ ಡೋಂಗಿ ರಾಜಕಾರಣ ಮಾಡುತ್ತಿದೆ.ಸುಳ್ಳು ಹೇಳಿ ಸರ್ಕಾರ ನಡೆಸಲಾಗುತ್ತಿದೆ.ರೈತರ,ಯುವಕರ, ಮಹಿಳೆಯರ, ದಲಿತರ,ಅಲ್ಪಸಂಖ್ಯಾತರ ಹಕ್ಕುಗಳನ್ನು ದಮನ ಮಾಡಲಾಗುತ್ತಿದೆ. ಬಿಜೆಪಿ ಶ್ರೀಮಂತರ ಪಕ್ಷವಾಗಿದೆ. ಬಡವರನ್ನು ಮರೆತಿದೆ. ಅಭಿವೃದ್ಧಿ ಮರೆತು, ಜನರ ಭಾವನೆ ಕೆರಳಿಸಿ ರಾಜಕಾರಣ ಮಾಡುತ್ತಿದೆ. ಈ ಬಗ್ಗೆ ನಾವು ಜನರಲ್ಲಿ ಜಾಗೃತಿ ಮೂಡಿಸಲು ಬಸ್‌ಯಾತ್ರೆ ಹಮ್ಮಿಕೊಂಡಿದ್ದೇವೆ.ಅಭಿವೃದ್ಧಿ ಮರೆತು, ಜನರ ಗಮನ ಬೇರೆ ಕಡೆ ಸೆಳೆಯಲು ಭಾವನಾತ್ಮಕ ವಿಚಾರ ಕೆದುಕುತ್ತಿದೆ. ರಾಜ್ಯದ ಜನರು ಎಚ್ಚೆತ್ತುಕೊಂಡಿದ್ದಾರೆ.ಈ ಬಾರಿ ಅವರ ಆಟ ನಡೆಯುವುದಿಲ್ಲ ಎಂದರು.

ಎಐಸಿಸಿ ನಾಯಕ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಬಳ್ಳಾರಿಯಲ್ಲಿ ಭಾರತ ಜೋಡೋ ಕಾರ್ಯಕ್ರಮ ಯಶಸ್ವಿಗೊಳಿಸಲಾಗಿದೆ.ಈಗ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ನಾವು ಪ್ರಜಾಧ್ವನಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಒಂದು ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಈ ಭಾಗವಷ್ಟೇ ಅಲ್ಲ,ಇಡೀ ರಾಜ್ಯದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ ಅವರ ಅಭಿಮಾನಿಗಳಿದ್ದಾರೆ.ಅವರನ್ನು ನೋಡಲು ಜನ ಆಗಮಿಸುತ್ತಾರೆ ಎಂದರು. ಹೊಸಪೇಟೆಯಲ್ಲಿ ಕಲುಷಿತ ನೀರು ಕುಡಿದು ಮಹಿಳೆ ಮೃತಪಟ್ಟಿರುವುದನ್ನು ನಾವು ಬಲವಾಗಿ ಖಂಡಿಸುತ್ತೇವೆ. ಹೂವಿನಹಡಲಿಯಲ್ಲೂ ಇಂಥ ಪ್ರಕರಣ ನಡೆದಿತ್ತು. ಸರ್ಕಾರ ಕೂಡಲೇ ಸ್ಪಂದಿಸಬೇಕು. ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಕಾರ್ಯ ಮಾಡಬೇಕು ಎಂದರು.

ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ: ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಎಸ್‌. ಭೀಮಾನಾಯ್ಕ ಮಾತನಾಡಿ, ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರಲಿದೆ. ಮಾಜಿ ಸಿಎಂ ಸಿದ್ದರಾಮಯ್ಯನವರು ಉತ್ತಮ ಆಡಳಿತ ನೀಡಿದ್ದಾರೆ. ಈ ಬಾರಿ ಜನ ಬದಲಾವಣೆ ಬಯಸಿದ್ದಾರೆ. ಎಸ್ಸಿ,ಎಸ್ಟಿಗಳಿಗೆ ಮೀಸಲಾತಿ ಹೆಚ್ಚಳ ಮಾಡಲಾಗಿದೆ ಎಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದ್ದಾರೆ. ಎಲ್ಲಿ ಹೆಚ್ಚಳ ಮಾಡಲಾಗಿದೆ. ಅಲ್ಲಿ ಆದೇಶ ನೀಡಲಾಗಿದೆ. ಸಂವಿಧಾನದ 9ನೇ ಶೆಡ್ಯೂಲ್‌ನಲ್ಲಿ ಎಲ್ಲಿ ಸೇರಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬರೀ ಸುಳ್ಳು ಹೇಳುವ ರಾಜಕಾರಣ ಮಾಡುತ್ತಿದ್ದಾರೆ ಎಂದು ದೂರಿದರು.

ರಾಮಕೃಷ್ಣ ಹೆಗಡೆ ಮಾರ್ಗದಲ್ಲಿ ಸ್ಪೀಕರ್‌ ಕಾಗೇರಿ: ಪ್ರಹ್ಲಾದ್‌ ಜೋಶಿ

ಬಳ್ಳಾರಿ ಗ್ರಾಮೀಣ ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷ ಬಿ.ವಿ. ಶಿವಯೋಗಿ,ಮುಖಂಡರಾದ ವೆಂಕಟರಾವ್‌ ಘೋರ್ಪಡೆ, ರಾಜಶೇಖರ ಹಿಟ್ನಾಳ್‌, ಇಮಾಮ್‌ ನಿಯಾಜಿ, ಸಯ್ಯದ್‌ ಮಹಮ್ಮದ್‌, ಗುಜ್ಜಲ ನಾಗರಾಜ, ಎಲ್‌.ಸಿದ್ದನಗೌಡ, ತಮನಳೇಪ್ಪ, ಗುಜ್ಜಲ ರಘು, ವಿನಾಯಕ ಶೆಟ್ಟರ್‌, ಸಿ.ಖಾಜಾಹುಸೇನ್‌, ವೀರಸ್ವಾಮಿ, ನಿಂಬಗಲ್‌ ರಾಮಕೃಷ್ಣ, ವೀರಭದ್ರ ನಾಯಕ, ಬಣ್ಣದಮನೆ ಸೋಮಶೇಖರ, ಕೆ. ರವಿಕುಮಾರ ಮತ್ತಿತರರಿದ್ದರು.

Latest Videos
Follow Us:
Download App:
  • android
  • ios