Asianet Suvarna News Asianet Suvarna News

ನಮ್ಮನ್ನು ಸೇರಿ ಎಲ್ಲರೂ ನಾಟಕೀಯ ರಾಜಕಾರಣ ಮಾಡುತ್ತಿದ್ದಾರೆ: ಶಾಸಕ ರಾಜು ಕಾಗೆ

ನ್ನನ್ನೂ ಸೇರಿಸಿ ಎಲ್ಲ ರಾಜಕಾರಣಿಗಳು ನಾಟಕೀಯ ರಾಜಕಾರಣ ಮಾಡುತ್ತಿದ್ದಾರೆ. ರಾಜ್ಯವನ್ನು ದಿವಾಳಿ ಮಾಡಿ ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದು ಶಾಸಕ ರಾಜು ಕಾಗೆ ಆಡಳಿತ ಹಾಗೂ ವಿರೋಧ ಪಕ್ಷಗಳ ವಿರುದ್ಧ ಹರಿಹಾಯ್ದರು.

Congress MLA Raju kage statement about state politics at kagawad chikkodi district belgavi rav
Author
First Published Aug 14, 2024, 4:17 PM IST | Last Updated Aug 14, 2024, 4:18 PM IST

ಚಿಕ್ಕೋಡಿ (ಆ.14): ನನ್ನನ್ನೂ ಸೇರಿಸಿ ಎಲ್ಲ ರಾಜಕಾರಣಿಗಳು ನಾಟಕೀಯ ರಾಜಕಾರಣ ಮಾಡುತ್ತಿದ್ದಾರೆ. ರಾಜ್ಯವನ್ನು ದಿವಾಳಿ ಮಾಡಿ ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದು ಶಾಸಕ ರಾಜು ಕಾಗೆ ಆಡಳಿತ ಹಾಗೂ ವಿರೋಧ ಪಕ್ಷಗಳ ವಿರುದ್ಧ ಹರಿಹಾಯ್ದರು.

ಚಿಕ್ಕೋಡಿ ತಾಲೂಕಿನ ಅಥಣಿ ತಾಲೂಕಿನ ಮದಭಾವಿ ಗ್ರಾಮದಲ್ಲಿ  ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕಾಗವಾಡ ಶಾಸಕ ರಾಜು ಕಾಗೆ ಅವರು, ಎಲ್ಲ ರಾಜಕೀಯ ಪಕ್ಷಗಳ ನಾಯಕರು ಜನರಿಗೆ ತಪ್ಪು ಸಂದೇಶ ನೀಡಿಹಾಳು ಮಾಡುತ್ತಿದ್ದಾರೆಂದು ಕಿಡಿಕಾರಿದರು.

ಪಂಚಮಸಾಲಿ ಮೀಸಲಾತಿಗಾಗಿ ರಾಜೀನಾಮೆಗೂ ಸಿದ್ಧ: ಕಾಂಗ್ರೆಸ್‌ ಶಾಸಕ ರಾಜು ಕಾಗೆ

ಸಿಎಂ ವಿರುದ್ಧ ಮುಡಾ ಪಾದಯಾತ್ರೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಬಿಜೆಪಿ ತಮ್ಮ ತಟ್ಟೆಯಲ್ಲಿ ಕತ್ತೆ ಬಿದ್ದಿದೆ ಅದನ್ನ ನೋಡಲಿ ಮೊದಲು.  ತಮ್ಮ ತಟ್ಟೆಯಲ್ಲಿ ಕತ್ತೆ ಬಿದ್ದಿದೆ ಬೇರೆಯವರ ತಟ್ಟೆಯಲ್ಲಿ ಬಿದ್ದ ನೋಣದ ಬಗ್ಗೆ ಮಾತಾಡೋದು ಎಷ್ಟು ಸರಿ? ನೆರೆ ಹಾಗೂ ಬರಗಾಲದ ಸಮಸ್ಯೆಗಳ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ನೆರೆ ಹಾವಳಿಯಲ್ಲಿ ಸಾವಿರಾರು ಎಕರೆ ಭೂಪ್ರದೇಶದಲ್ಲಿ ಬೆಳೆಗಳು ನಾಶವಾಗಿವೆ. ಬಸವೇಶ್ವರ ಏತ ನೀರಾವರಿ ಕುರಿತು ಯಾರೂ ಧ್ವನಿ ಎತ್ತುತ್ತಿಲ್ಲ. ರೈತರ ಸಮಸ್ಯೆ ಕುರಿತು ಯಾರೂ ಹೋರಾಟ ಮಾಡುತ್ತಿಲ್ಲ. ನಮ್ಮನ್ನು ಸೇರಿ ಎಲ್ಲ ರಾಜಕಾರಣಿಗಳು ಬರೀ ನಾಟಕ ಮಾಡಿ ರಾಜ್ಯವನ್ನ ಹಾಳು ಮಾಡುತ್ತಿದ್ದಾರೆ ಎಂದು ಸ್ವಪಕ್ಷ ಹಾಗೂ ವಿರೋಧ ಪಕ್ಷದ ನಾಯಕರ ವಿರುದ್ಧ ಹರಿಹಾಯ್ದರು.

Latest Videos
Follow Us:
Download App:
  • android
  • ios