Asianet Suvarna News Asianet Suvarna News

ಪಂಚಮಸಾಲಿ ಮೀಸಲಾತಿಗಾಗಿ ರಾಜೀನಾಮೆಗೂ ಸಿದ್ಧ: ಕಾಂಗ್ರೆಸ್‌ ಶಾಸಕ ರಾಜು ಕಾಗೆ

ಮೀಸಲಾತಿಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ಸಮಾಜದ ಸಲುವಾಗಿ ಅಧಿಕಾರ ಕಳೆದುಕೊಳ್ಳಲು ಸಿದ್ದ ಎಂದರು. ಮೀಸಲಾತಿ ಗಾಗಿ ಸಮಾಜದ ಎಲ್ಲ ಶಾಸಕರು ನಾಳೆಯೇ ಸಾಮೂಹಿಕವಾಗಿ ರಾಜೀನಾಮೆ ನೀಡಬೇಕು. ಆಗ ಸರ್ಕಾರ ಮೀಸಲಾತಿ ಕೊಟ್ಟೇ ಕೊಡುತ್ತದೆ: ಕಾಗವಾಡ ಶಾಸಕ ರಾಜು ಕಾಗೆ 
 

i am ready to resign for panchmasali reservation Says kagwad congress mla raju kage grg
Author
First Published Jul 10, 2024, 12:46 PM IST

ಬೆಳಗಾವಿ(ಜು.10):  ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ರಾಜೀನಾಮೆಗೂ ಸಿದ್ಧ ಎಂದು ಕಾಗವಾಡ ಶಾಸಕ ರಾಜು ಕಾಗೆ ಹೇಳಿದರು. 

ಉಗಾರ ಖುರ್ದದಲ್ಲಿ ಮಂಗಳವಾರ ಪಂಚಮಸಾಲಿ ಸಮಾಜದ ಸಭೆಯಲ್ಲಿ ಮಾತನಾಡಿ, ಮೀಸಲಾತಿಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ಸಮಾಜದ ಸಲುವಾಗಿ ಅಧಿಕಾರ ಕಳೆದುಕೊಳ್ಳಲು ಸಿದ್ದ ಎಂದರು. ಮೀಸಲಾತಿ ಗಾಗಿ ಸಮಾಜದ ಎಲ್ಲ ಶಾಸಕರು ನಾಳೆಯೇ ಸಾಮೂಹಿಕವಾಗಿ ರಾಜೀನಾಮೆ ನೀಡಬೇಕು. ಆಗ ಸರ್ಕಾರ ಮೀಸಲಾತಿ ಕೊಟ್ಟೇ ಕೊಡುತ್ತದೆ ಎಂದು ಹೇಳಿದ್ದಾರೆ. 

ಅಬ್ ಕೀ ಬಾರ್ ಚಾರ್‌ ಸೌ ಪಾರ್ ಕನಸು ಢಮಾರ್: ಶಾಸಕ ರಾಜು ಕಾಗೆ

ಇತಿಹಾಸದಲ್ಲಿ ನಮ್ಮ ಹೆಸರು ಉಳಿಯಬೇಕಾದರೆ ನಾವು ಸಮುದಾಯಕ್ಕಾಗಿ ರಾಜೀನಾಮೆ ನೀಡೋಣ. ರಾಜ್ಯದಿಂದ ಮೀಸಲಾತಿ ಕುರಿತು ಕೇಂದ್ರಕ್ಕೆ ಮನವಿ ಮಾಡಲಿ. ಅಲ್ಲಿ ನಮ್ಮ ಸಂಸದರಿದ್ದಾರೆ. ಜನಾಂಗಕ್ಕೆ ನ್ಯಾಯ ಸಿಗುವುದಾದರೆ ನಾನು ರಾಜೀನಾಮೆ ನೀಡಲು ಸಿದ್ಧ ಎಂದು ಹೇಳಿದರು.

Latest Videos
Follow Us:
Download App:
  • android
  • ios