ಸರ್ಕಾರದ ಮತ್ತೆರಡು ವಿಕೆಟ್ ಪತನ ಖಚಿತ: ಪ್ರಿಯಾಂಕ್ ಖರ್ಗೆ ಬಾಂಬ್
* ಸರ್ಕಾರದ ಮತ್ತೆರಡು ವಿಕೆಟ್ ಪತನ ಖಚಿತ
* ಪಿಎಸ್‌ಐ ಹುದ್ದೆ ನೇಮಕಾತಿ ಪರೀಕ್ಷೆ ಬಗ್ಗೆ ತನಿಖೆ ನಡೆದ್ರೆ ಇನ್ನೇರಡು ವಿಕೆಟ್
* ಹೊಸ ಬಾಂಬ್ ಸಿಡಿಸಿದ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ
ಬೆಂಗಳೂರು, (ಏ.15): ಈಗಾಗಲೇ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ್ ಜಾರಕಿಹೊಳಿ ಅವರ ರೂಪದಲ್ಲಿ ಬಿಜೆಪಿ ಸರ್ಕಾರದ ಮೊದಲ ವಿಕೆಟ್ ಪತನವಾಗಿತ್ತು. ಇದೀಗ ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪ ಅವರು ರಾಜೀನಾಮೆ ನೀಡಿದ್ದು, 2ನೇ ವಿಕೆಟ್ ಪತನ ವಾದಂತಾಗಿದೆ. ಇದರ ಮಧ್ಯೆ ಇನ್ನೇರಡು ವಿಕೆಟ್ ಪತನವಾಗಲಿವೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಹೊಸ ಬಾಂಬ್ ಸಿಡಿಸಿದ್ದಾರೆ.
ಇಂದು(ಶುಕ್ರವಾರ) ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಪಿಎಸ್‌ಐ ಹುದ್ದೆ ನೇಮಕಾತಿ ಪರೀಕ್ಷೆ ಬಗ್ಗೆ ತನಿಖೆ ನಡೆದ್ರೆ ಇನ್ನೇರಡು ವಿಕೆಟ್ ಪತನವಾಗಲಿದೆ ಎಂದು ಹೇಳಿದರು.
ಜನರ ಒಂದು ಆಕಾಂಕ್ಷೆ ಇದೆ. ಸರ್ಕಾರಿ ನೌಕರಿಗೊಸ್ಕರ ಕುಟುಂಬದವರು ಆಸ್ತಿ ಮಾರ್ತಾರೆ, ಒಡವೆ ಮಾರ್ತಾರೆ, ಸಾಲ ತಗೊತ್ತಾರೆ. ಈ ಸರಕಾರದಲ್ಲಿ ಯಾವುದೇ ರೀತಿಯಾದಂತಹ ಉದ್ಯೋಗ ಸೃಷ್ಟೀ ಮಾಡ್ತಾ ಇಲ್ಲ. ಸರಕಾರಿ ನೌಕರಿಗೆ ಕರೆದಾಗಲು ಕೂಡ ಭ್ರಷ್ಟಾಚಾರ ನಡೆದಿದೆ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
PSI Recruitment Scam ರಾಜ್ಯದ 545 ಸಬ್ ಇನ್ಸ್ಪೆಕ್ಟರ್ ಗಳ ನೇಮಕಾತಿಯಲ್ಲಿ ಅಕ್ರಮ ಪತ್ತೆ!
ಕನಿಷ್ಟ 70 ಸಾವಿರ ಜನ ಯುವಕರು ಹಾಗೂ ಯುವತಿಯರು PSI ಪರೀಕ್ಷೆ ಬರೆಸಿದ್ದಾರೆ. 545 ಪಿಎಸ್‌ಐ ಹುದ್ದೆಗಳಿಗೆ ಹತ್ತಿರವಾಗಿ 70 ಸಾವಿರ ಅಪ್ಲಿಕೇಶನ್ ಹಾಕಿದ್ದಾರೆ. ಪರೀಕ್ಷೆ ಬರೆದ ನಂತರ ಸಾಕಷ್ಟು ಅನುಮಾನಗಳು ಬಂತು. ಬರೆದಿರೋ ಅಭ್ಯರ್ಥಿಗಳೆಲ್ಲಾ ಹೋಗಿ ಗೃಹ ಸಚಿವರವರಿಗೆ ದೂರು ಕೊಟ್ಟರು. ಈ ಪರೀಕ್ಷೆಯಲ್ಲಿ ಅವವ್ಯಹಾರ ಆಗಿದೆ.
ನಮ್ಮ ಪರೀಕ್ಷಾ ಕೊಠಡಿಯಲ್ಲಿ ಸಿಸಿಟವಿ ಕ್ಯಾಮರ ಇರಲಿಲ್ಲ . ಫೋನ್ ಕೂಡ ಬಳಗಡೆ ಬಿಡ್ತಾ ಇದ್ದರು. ಒಎಮ್ಆರ್ ಶೀಟ್ಗಳು ಕಾಣೆಯಾಗುತ್ತಿದ್ದವು ಅಂತ ದೂರು ಕೊಟ್ಟರು. ಒಂದು ಸಾರಿ ಅಲ್ಲ ಎರಡು ಮೂರು ಸಾರಿ ಕೊಟ್ಟರು. ಮೇಲ್ಮನೆ ಸದನದಲ್ಲೂ ಕೂಡ ಚರ್ಚೆ ಆಯ್ತು. ಆಗ ಹೋಮ್ ಮಿನಿಸ್ಟರ್ ಹೇಳ್ತಾರೆ. ಯಾವುದೇ ರೀತಿಯಾದಂತಹ ಗೋಂದಲ ಇಲ್ಲ. ಯಾವ ಆಕಾಂಕ್ಷಿಗಳು , ಯಾವ ಅಭ್ಯರ್ಥಿಗಳು ಪಾಸ್ ಆಗಿಲ್ಲ , ಅವರು ಉಡಾಫೆಯಾಗಿ ಮಾತನಾಡಿಕೊಂಡು ಹೋಗುತ್ತಿದ್ದಾರೆ. ಇದಕ್ಕೆ ಗಮನ ಕೊಡಬೇಡಿ ಅಂತ ಹೇಳಿಕೆ ನೀಡಿದ್ದಾರೆ.
ಮತ್ತೆ ಏಕಾಎಕಿ ಮೋನ್ನೆ ಈ PSI ಹುದ್ದೆಗಳಲ್ಲಿ ಭ್ರಷ್ಟಾಚಾರ ನಡೆದಿದೆ . ಅದಕ್ಕೆ ಮುಲ ಕಾರಣ ಗೃಹ ಇಲಾಖೆ ಎಂದು ಹೇಳುತ್ತಾರೆ. ಪ್ರತಿಯೊಂದು ಕೇಸ್ಗೆ 70 ರಿಂದ 80 ಲಕ್ಷ ಪಡೆದಿದ್ದಾರೆ. DGP ಆಪೀಸ್ ರೈಡ್ ಆಗಿದೆ ಇವತ್ತು. ಕಲಬುರಗಿನಲ್ಲಿ ಚೌಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಆಗಿದೆ ಎಂದು ಪ್ರಿಯಾಂಕ ಖರ್ಗೆ ಆರೋಪಿಸಿದ್ದಾರೆ.
ಸಬ್ ಇನ್ಸ್ಪೆಕ್ಟರ್ ಗಳ ನೇಮಕಾತಿಯಲ್ಲಿ ಅಕ್ರಮ ಪತ್ತೆ!
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ( Karnataka State Police) 545 ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (Sub inspector) ಹುದ್ದೆಗಳ ನೇಮಕಾತಿಯಲ್ಲಿ ಭಾರಿ ಅಕ್ರಮ ನಡೆದಿರುವುದು ಪತ್ತೆಯಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಅಕ್ರಮ ಪಾಸ್ ಆಗಿರುವುದು ಪತ್ತೆಯಾಗಿದ್ದು, ನೇಮಕಾತಿ ಇಲಾಖೆ ಇದರಲ್ಲಿ ಭಾಗಿಯಾಗಿವ ಶಂಕೆ ವ್ಯಕ್ತವಾಗಿದೆ. 545 ಪಿಎಸ್‌ಐ ಹುದ್ದೆಗಳಿಗೆ ಲಕ್ಷಾಂತರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಇದೀಗ ಪರೀಕ್ಷೆಯಲ್ಲಿ ಭಾಗಿಯಾದ ಅಭ್ಯರ್ಥಿಗಳಿಂದ ಕೋಟಿಗಟ್ಟಲೆ ಹಣ ಪಡೆದು ಪಾಸ್ ಮಾಡಿರುವ ಆರೋಪವಿದೆ.
ಪೊಲೀಸ್ ಇಲಾಖೆಯ 545 ಸಬ್ ಇನ್ಸ್‌ಪೆಕ್ಟರ್(PSI) ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ(Araga Jnanendra) ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.