ಬಿಜೆಪಿಯಿಂದ ಸರ್ಕಾರದ ಹಣ ವೃಥಾ ಪೋಲು: ಪ್ರಿಯಾಂಕ್ ಖರ್ಗೆ
ಒಬ್ಬ ಶಾಸಕ ಅಥವಾ ಸಂಸದ ಮಾಡುವ ಕೆಲಸಕ್ಕೆ ಪ್ರಧಾನ ಮಂತ್ರಿಯನ್ನು ಕರೆಸಿ ಅವರಿಂದ ಹಕ್ಕು ಪತ್ರ ನೀಡುವ ಕೆಲಸವನ್ನು ರಾಜ್ಯ ಬಿಜೆಪಿ ಸರ್ಕಾರ ಮಾಡಿದೆ. ಸಾರ್ವಜನಿಕರ ದುಡ್ಡು ಹೇಗೆ ವ್ಯರ್ಥ ಮಾಡಬೇಕು ಎನ್ನುವುದನ್ನು ಬಿಜೆಪಿ ಸರ್ಕಾರದಿಂದ ಕಲಿಯಬೇಕು ಎಂದು ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು.
ಚಿತ್ತಾಪುರ (ಜ.28): ಒಬ್ಬ ಶಾಸಕ ಅಥವಾ ಸಂಸದ ಮಾಡುವ ಕೆಲಸಕ್ಕೆ ಪ್ರಧಾನ ಮಂತ್ರಿಯನ್ನು ಕರೆಸಿ ಅವರಿಂದ ಹಕ್ಕು ಪತ್ರ ನೀಡುವ ಕೆಲಸವನ್ನು ರಾಜ್ಯ ಬಿಜೆಪಿ ಸರ್ಕಾರ ಮಾಡಿದೆ. ಸಾರ್ವಜನಿಕರ ದುಡ್ಡು ಹೇಗೆ ವ್ಯರ್ಥ ಮಾಡಬೇಕು ಎನ್ನುವುದನ್ನು ಬಿಜೆಪಿ ಸರ್ಕಾರದಿಂದ ಕಲಿಯಬೇಕು ಎಂದು ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು. ತಾಲೂಕಿನ ನಾಲವಾರ ಗ್ರಾಮದಲ್ಲಿ ರು.89 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಅಡಿಗಲ್ಲು ನೆರವೇರಿಸಿ ಮಾತನಾಡಿದ ಅವರು, ಕಲಬುರಗಿ ಜಿಲ್ಲೆಗೆ ಪ್ರಧಾನಿ ಹಿಂದೆಯೂ ಬಂದಿದ್ದಾರೆ. ಆದರೆ, ಇಲ್ಲಿವರೆಗೆ ರಾಜ್ಯದ ಜನತೆಗೆ ಅನುಕೂಲವಾಗುವ ಯೋಜನೆಗಳನ್ನು ಘೋಷಣೆ ಮಾಡಿಲ್ಲಾ.
ಕಾಂಗ್ರೆಸ್‌ನ ಪ್ರಧಾನಿಗಳು ಬಂದಾಗ ಕಲಬುರಗಿಗೆ ಸಾಕಷ್ಟುಯೋಜನೆ ಮತ್ತು ಅನುದಾನವನ್ನು ನೀಡಿ ಜಿಲ್ಲೆ ಅಭಿವೃದ್ಧಿ ಮಾಡಿದ್ದಾರೆ. ನಾನು ಚುನಾವಣೆ ಸಮಯದಲ್ಲಿ ಮತದಾರರಿಗೆ ನೀಡಿರುವ ಭರವಸೆಯಂತೆ ಅಭಿವೃದ್ಧಿ ಕೆಲಸವನ್ನು ಮಾಡುತ್ತಾ ಬರುತ್ತಿದ್ದೇನೆ. ಆದರೆ, ರಾಜ್ಯ ಸರ್ಕಾರವು ನಮ್ಮ ತಾಲೂಕಿಗೆ ಬಂದ ಅನುದಾನವನ್ನು ಹಿಂದಕ್ಕೆ ಪಡೆದು ಅಭಿವೃದ್ಧಿಗೆ ಹಿನ್ನಡೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಜಿಲ್ಲೆಯಲ್ಲಿ ನೆಟೆರೋಗ, ಬಗ್ಗಡಿ ಕೆಕೆಅರ್‌ಡಿಬಿ ಹಗರಣ ಬಗ್ಗೆ ಯಾರೊಬ್ಬರೂ ಮಾತನಾಡುವುದಿಲ್ಲಾ. ಜಿಲ್ಲಾ ಉಸ್ತುವಾರಿ ಸಚಿವರು ಆರಂಭದಲ್ಲಿ ನಮ್ಮ ಜಿಲ್ಲೆಗೆ ಹೊಸ ನೀಲಿ ನಕ್ಷೆ ತಯಾರಿಸಿದ್ದರು.
ಜಯಮುತ್ತು ಸರ್ವಾಧಿಕಾರಿ ಧೋರಣೆ ಜೆಡಿಎಸ್‌ಗೇ ಕುತ್ತು: ಸಿ.ಪಿ.ಯೋಗೇಶ್ವರ್
ಆದರೆ, ಈಗ ಯಾವ ನಕ್ಷೆಯೂ ಇಲ್ಲ, ಅವರು ಇಲ್ಲ. ಈ ಸರ್ಕಾರದಲ್ಲಿ ಯಾವುದಾದರೂ ಯೋಜನೆ ಮಾಡಿದ್ದಾರೆ ಎಂದು ಹೇಳಲಿ ಎಂದು ಸವಾಲು ಹಾಕಿದರು. ಇವರದು ಏನಾದರೂ ಸಾಧನೆ ಎಂದರೆ 40 ಪರ್ಸೆಂಟೇಜ್ ಈ ಬಿರುದು ನೀಡಿದ್ದು ವಿರೋಧ ಪಕ್ಷದವರಲ್ಲಾ. ಗುತ್ತಿಗೆದಾರರ ಸಂಘ ಎಂದು ಹೇಳಿದರು. ಜಿಲ್ಲೆಯ ಅಭಿವೃದ್ಧಿ ಕುರಿತು ಯಾರು ಮಾತನಾಡುವುದಿಲ್ಲ. ಅವರ ಪ್ರಾಮುಖ್ಯತೆ ಜಟ್ಕಾ ಕಟ್, ಹಿಜಾಬ್, ಹಿಂದು ಮುಸ್ಲಿಂರ ನಡುವೆ ವಿಷ ಬೀಜ ಬಿತ್ತುವ ಕೆಲಸ ಮಾಡೋದೆ ಆಗಿದೆ. ಹೆಣದ ಮೇಲೆ ಹಣ ಮಾಡಲು ಹೊರಟಿದೆ. ಚುನಾವಣೆ ಬಂದಾಗ ಮಾತ್ರ ಹಿಂದು ಮುಸ್ಲಿಂ ಎಂದು ನೋಡುತ್ತಾರೆ ಎಂದರು.
ಯಾದಗಿರಿಯಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಬಸ್‌ಯಾತ್ರೆ: ಬಿಜೆಪಿ ವಿರುದ್ಧ ಸಿದ್ದು-ಡಿಕೆಶಿ ವಾಗ್ದಾಳಿ
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿಯೊಂದು ಮನೆ ಯಜಮಾನಿಗೆ ರು.2000, 200 ಯೂನಿಟ್ ವಿದ್ಯುತ್ ಫ್ರೀ ನೀಡುವ ಯೋಜನೆ ಜಾರಿಗೆ ತರುತ್ತೇವೆ ಎಂದು ಪಕ್ಷ ಹೇಳಿದೆ. ಇದರಿಂದ ಬಡ ಕುಟುಂಬಗಳಿಗೆ ಆರ್ಥಿಕ ವ್ಯವಸ್ಥೆ ಸುಧಾರಣೆ ನಾವು ಮಾಡುತ್ತೇವೆ. ಇದಕ್ಕೆ ಸುಳ್ಳು ಪ್ರಚಾರ ಎಂದು ಬಿಜೆಪಿಯವರು ಹೇಳುತ್ತಾರೆ. ಅಮಾವಾಸೆಗೆ ಒಂದು ಹುಣ್ಣಿಮೆಗೊಂದು ಅಭ್ಯರ್ಥಿ, ನಾನು ಬ್ಯಾಟಿಂಗ್ ಮಾಡಲು ರೆಡಿ. ಬೌಲರ್ ಯಾರು ಅಂತಾ ಹೇಳಿ. ನಮ್ಮ ಫೈಟ್ ಅಮಿತ್ ಶಾ ಹಾಗೂ ಪ್ರಧಾನಿ ಮೋದಿ ಜೊತೆ ಇದೆ. ಯಾವ ಪಿಚ್ ಬೇಕು? ತೀರ್ಮಾನ ಮಾಡಿ ಎಂದು ಬಿಜೆಪಿಗೆ ಸವಾಲು ಹಾಕಿದರು. ವಿಧಾನ ಪರಿಷತ್ ಮಾಜಿ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ರಮೇಶ ಮರಗೋಳ, ನಾಗರೆಡ್ಡಿ ಪಾಟೀಲ್, ಶಿವಾನಂದ ಪಾಟೀಲ್, ವೀರನಗೌಡ ಪರಸರೆಡ್ಡಿ ಮಾತನಾಡಿದರು.