ಬೆಂಗಳೂರು, (ಸೆ.23) : ಇಂದು (ಬುಧವಾರ) ಮೂರನೇ ದಿನದ ವಿಧಾನಮಂಡಲದ ಅಧಿವೇಶನದಲ್ಲಿ ಮೆಡಿಕಲ್ ಕಿಟ್ ಖರೀದಿ ಹಗರಣದ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ನಡುವೆ ಬಾರಿ ಗದ್ದಲ, ಜಟಾಪಟಿ ನಡುವೆಯೂ ಸದನ ನಡೆಯುತ್ತಿದೆ. 

ಇದರ ಮಧ್ಯೆ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆಯವರು ಧರಿಸಿದ್ದಂತ ಮಾಸ್ಕ್ ಎಲ್ಲರ ಗಮನ ಸೆಳೆಯಿತು. 'ಸೋಂಕಿತ ಸರ್ಕಾರ' ಎಂದು ಬರೆದಿದ್ದಂತ ಪ್ರಿಂಟೆಡ್ ಮಾಸ್ಕ್ ಹಾಕಿಕೊಂಡಿದ್ದು ಎಲ್ಲರ ಗಮನಸೆಳೆಯಿತು.

ಮಾಸ್ಕ್‌ ಹಾಕಿ​ಕೊಂಡೇ ಮಾತಾ​ಡಿ: ಸದಸ್ಯರಿಗೆ ಸ್ಪೀಕರ್‌ ಕಾಗೇರಿ ತಾಕೀ​ತು

 ಇಂದಿನ ಪ್ರಶ್ನೋತ್ತರ ಸಮಯದಲ್ಲಿ ಮಾತನಾಡಲು ಮೇಲೆ ಎದ್ದ ಪ್ರಿಯಾಂಕ್ ಖರ್ಗೆ, ಸೋಂಕಿತ ಸರ್ಕಾರ ಎಂಬ ಸ್ಲೋಗನ್ ಇರುವ ಮಾಸ್ಕ್ ನೋಡಿ ಸದನದಲ್ಲಿದ್ದ ಎಲ್ಲರೂ ಅವರನ್ನೇ ನೋಡುತ್ತಿದ್ದರು. 

'ಸೋಂಕಿತ ಸರ್ಕಾರ' ಎನ್ನುವ ಪ್ರಿಂಟೆಡ್ ಮಾಸ್ಕ್ ಹಾಕಿಕೊಳ್ಳುವ ಮೂಲಕ ಆಡಳಿತರೂಢ ಬಿಜೆಪಿ ಸರ್ಕಾರ ಪರೋಕ್ಷವಾಗಿ ಮೌನ ಪ್ರತಿಭಟನೆ ಮಾಡಿದರು.