ಧಾರವಾಡ, (ನ.13): ಮಾಜಿ ಸಚಿವ ವಿನಯ್ ಕುಲಕರ್ಣಿ ಬಂಧನವು ಕಾಂಗ್ರೆಸ್ ಕಾರ್ಯಕರ್ತರನ್ನು ಬಿಜೆಪಿ ಟಾರ್ಗೆಟ್ ಮಾಡುತ್ತಿರುವುದಕ್ಕೆ ಉದಾಹರಣೆಯಾಗಿದೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಎಂದು ಗಂಭೀರ ಆರೋಪ ಮಾಡಿದ್ದಾರೆ.

ವಿನಯ ಕುಲಕರ್ಣಿ ಬಂಧನ ಹಿನ್ನಲೆಯಲ್ಲಿ ಅವರ ನಿವಾಸಕ್ಕೆ ಭೇಟಿ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಿಂದ ಕಾಂಗ್ರೆಸ್‌ನರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ರಾಜಕೀಯವಾಗಿ ಟಾರ್ಗೆಟ್ ಮಾಡುತ್ತಿದ್ದಾರೆ. ಕಾನೂನಿಗೆ ನಾವು ತಲೆ ಬಾಗುತ್ತೇವೆ. ಕಾನೂನು ಪ್ರಕಾರ ಏನು ಆಗಬೇಕು ಆಗಲಿ, ಆದರೆ ಹೆದರಿಸುವ ಕ್ರಮ‌ ಸರಿಯಲ್ಲ, ಇ.ಡಿ,‌ ಸಿಬಿಐಗಳನ್ನು ತಮಗೆ ಬೇಕಾದಂತೆ ಬಿಜೆಪಿಯವರು ಉಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಯೋಗೀಶಗೌಡ ಕೊಲೆ ಪ್ರಕರಣ: ನ. 18ಕ್ಕೆ ವಿನಯ್‌ ಕುಲಕರ್ಣಿ ಬೇಲ್‌ ಅರ್ಜಿ ವಿಚಾರಣೆ

ವಿನಯ ಅಣ್ಣ ಕ್ಲಿನ್ ಚೀಟ್ ಪಡೆದು ಆದಷ್ಟು ಬೇಗ ಹೊರಗೆ ಬರುತ್ತಾರೆ. ನಮ್ಮ‌ ಪಕ್ಷದ ಎಲ್ಲ‌ ನಾಯಕರು, ಕಾರ್ಯಕರ್ತರು ವಿನಯ ಕುಲಕರ್ಣಿ ಜೊತೆಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಸಿದ್ದರಾಮಯ್ಯ ಸಹ ಮನೆಗೆ ಬರುತ್ತಾರೆ ಎಂದು ಹೇಳಿದರು.