Asianet Suvarna News Asianet Suvarna News

ಮೈದಾನ ತಯಾರಿದೆ, ಅಖಾಡಕ್ಕೆ ಧುಮುಕಿ: ಪರೋಕ್ಷವಾಗಿ ಜಾರಕಿಹೊಳಿಗೆ ಹೆಬ್ಬಾಳಕರ ಸವಾಲು

ಭವಿಷ್ಯ ಅಂತೂ ನಾನು ಹೇಳಲ್ಲ. ಮುಂದೆ ನೀವೇ ನೋಡುತ್ತಿರಲ್ಲ. ಚುನಾವಣೆಯ ಫಲಿತಾಂಶ ಬಂದ ಮೇಲೆ ಎಲ್ಲ ಗೊತ್ತಾಗುತ್ತದೆ. ಅಲ್ಲಿವರೆಗೂ ಕಾಯಬೇಕಷ್ಟೇ ಎಂದು ಹೇಳಿದ ಲಕ್ಷ್ಮಿ ಹೆಬ್ಬಾಳಕರ 

Congress MLA Lakshmi Hebbalkar Indirect Challenge to Ramesh Jarkiholi grg
Author
First Published Dec 6, 2022, 7:06 PM IST

ಬೆಳಗಾವಿ(ಡಿ.06): ‘ಮೈದಾನ್‌ ಓಪನ್‌ ಹೈ, ಖುಲ್ಲಾ ಹೈ, ಹಮ್‌ ಬಿ ತಯಾರ್‌ ಹೈ, ಆಪ್‌ ಬೀ ಖುದೋ ಮೈದಾನ್‌ ಮೇ’ - ಮೈದಾನ ತಯಾರಿದೆ. ಅಖಾಡಕ್ಕೆ ಧುಮುಕಿ ಎಂದು ರಾಜಕೀಯ ವಿರೋಧಿಗಳಿಗೆ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ನೇರವಾಗಿ ಸವಾಲು ಹಾಕಿದ್ದಾರೆ.

ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಬದ್ಧವೈರಿ ರಮೇಶ ಜಾರಕಿಹೊಳಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಕುರಿತು ಸೋಮವಾರ ನಗರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು. ಈ ಮೂಲಕ ಪರೋಕ್ಷವಾಗಿ ರಾಜಕೀಯ ಬದ್ಧವೈರಿ ರಮೇಶ ಜಾರಕಿಹೊಳಿ ಅವರಿಗೆ ಪಂಥಾಹ್ವಾನ ನೀಡಿದರು.

'ಬೆಳಗಾವಿಗೆ ಬಂದೇ ಬರ್ತೀವಿ': ಮಹಾರಾಷ್ಟ್ರ ಸಚಿವನಿಂದ ಮತ್ತೆ ಉದ್ಧಟತನ

ನನಗೆ ಪುನರ್ಜನ್ಮ ಕೊಟ್ಟಕ್ಷೇತ್ರ ಎಂಬ ಕಾರಣಕ್ಕಾಗಿಯೇ ಚುನಾವಣೆ ಗೆದ್ದ ಮಾರನೇ ದಿನವೆ ನನ್ನ ಹುಟ್ಟಿದ ದಿನಾಂಕವನ್ನು ಮತದಾರರಿಗೋಸ್ಕರ ಬದಲಾವಣೆ ಮಾಡಿಕೊಂಡಿದ್ದೇನೆ. ಚುನಾವಣೆಯಲ್ಲಿ ಗೆದ್ದ ದಿನದಿಂದ ಚುನಾವಣೆಯನ್ನು ಯಾವ ರೀತಿ ಗೆಲ್ಲಬೇಕು, ಜನರ ಮನಸನ್ನು ಯಾವ ರೀತಿ ಗೆಲ್ಲಬೇಕು ಎಂಬುವುದರ ಬಗ್ಗೆ ಕಳೆದ ನಾಲ್ಕೂವರೆ ವರ್ಷಗಳಿಂದ ಶ್ರಮಿಸುತ್ತಲೇ ಬಂದಿದ್ದೇನೆ. ಅಲ್ಲದೇ ಈಗ ಚುನಾವಣೆಗೆ 90 ದಿನ ಇದೆ ಅಂತ ತಯಾರಿ ನಡೆಸುತ್ತಿಲ್ಲ. ಈಗ ಬಂದು ನಾನು ಬಿಲ್ಲು, ಬಾಣ, ಬತ್ತಳಿಕೆ ಅಂತೆಲ್ಲ ಇಲ್ಲ ಎಂದರು.

ಗ್ರಾಮೀಣ ಕ್ಷೇತ್ರದ ಮೇಲೆ ಹಲವರು ಕಣ್ಣು ಹಾಕಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಭವಿಷ್ಯ ಅಂತೂ ನಾನು ಹೇಳಲ್ಲ. ಮುಂದೆ ನೀವೇ ನೋಡುತ್ತಿರಲ್ಲ. ಚುನಾವಣೆಯ ಫಲಿತಾಂಶ ಬಂದ ಮೇಲೆ ಎಲ್ಲ ಗೊತ್ತಾಗುತ್ತದೆ. ಅಲ್ಲಿವರೆಗೂ ಕಾಯಬೇಕಷ್ಟೇ ಎಂದು ಹೇಳಿದರು.
 

Follow Us:
Download App:
  • android
  • ios