ಬಿಜೆಪಿ ಶಾಸಕ ಶ್ರೀಮಂತ ಪಾಟೀಲ್‌ಗೆ ಸಚಿವ ಸ್ಥಾನ ನೀಡುವಂತೆ ಕಾಂಗ್ರೆಸ್ MLA ಆಗ್ರಹ

* ಬಿಜೆಪಿ ಶಾಸಕ ಶ್ರೀಮಂತ ಪಾಟೀಲ್ ಪರ ಕಾಂಗ್ರೆಸ್ ಶಾಸಕಿ ಬ್ಯಾಟಿಂಗ್
 * ಶ್ರೀಮಂತ ಪಾಟೀಲ್‌ಗೆ ಸಚಿವ ಸ್ಥಾನ ನೀಡುವಂತೆ ಆಗ್ರಹ
* ಅಲ್ಲದೇ ವಾಪಸ್ ಕಾಂಗ್ರೆಸ್‌ಗೆ ಬರುವಂತೆ ಆಹ್ವಾನಿಸಿದ ಶಾಸಕಿ ಅಂಜಲಿ ನಿಂಬಾಳ್ಕರ್

Congress MLA Anjali  nimbalkar Demands Minister Post to shrimant patil rbj

ಬೆಳಗಾವಿ, (ಸೆ.12): ಬಿಜೆಪಿ ಶಾಸಕ ಶ್ರೀಮಂತ ಪಾಟೀಲ್‌ಗೆ ಸಚಿವ ಸ್ಥಾನ ನೀಡುವಂತೆ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಒತ್ತಾಯಿಸಿದ್ದಾರೆ. ಅಲ್ಲದೇ ವಾಪಸ್ ಕಾಂಗ್ರೆಸ್‌ಗೆ ಬರುವಂತೆ ಶ್ರೀಮಂತ ಪಾಟೀಲ್ ಅವರಿಗ ಆಹ್ವಾನಿಸಿದ್ದಾರೆ.

ಜಿಲ್ಲೆಯ ಅಂಬಡಗಟ್ಟಿ ಗ್ರಾಮದಲ್ಲಿ ಇಂದು (ಸೆ.12) ಮಾತನಾಡಿರುವ ಅಂಜಲಿ ನಿಂಬಾಳ್ಕರ್, ಶ್ರೀಮಂತ ಪಾಟೀಲ್‌ರನ್ನು ಮರಳಿ ನಮ್ಮ ಪಕ್ಷಕ್ಕೆ ಬರುವಂತೆ ಕರೆದಿದ್ದೇನೆ. ಶ್ರೀಮಂತ ಅಣ್ಣಾ ನಮ್ಮ ಪಕ್ಷಕ್ಕೆ ಬಾ ಅಂತಾ ನನ್ನ ಕರೆದಿದ್ದಾರೆ. ನಾನು ಈಕಡೆ ಕರೆದಿದ್ದೇ‌ನೆ. ಅವರು ಆ ಕಡೆ ಕರೆದಿದ್ದಾರೆ. ಮುಂದೆ ಏನು ಆಗುತ್ತೆ ನೋಡೋಣ ಎಂದರು. 

ಆಪ್ತಗೆ ಸಚಿವ ಸ್ಥಾನ ನೀಡಲು ಸಿಎಂಗೆ ಜಾರಕಿಹೊಳಿ ಒತ್ತಡ

ಶ್ರೀಮಂತ ಪಾಟೀಲ್‌ಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯ ಮಾಡಿದ್ದು ನಾನೇ ಮೊದಲು. ಮರಾಠಾ ಸಮುದಾಯಕ್ಕೆ ಅನ್ಯಾಯ ಆಗಿದೆ ಅಂತಾ ನಾನೇ ಮೊದಲು ಒತ್ತಾಯಿಸಿದ್ದೀನಿ. ಬಿಜೆಪಿ ಪಕ್ಷದವರು ಸಹ ಒತ್ತಾಯ ಮಾಡಿರಲಿಲ್ಲ. ಮರಾಠಾ ಸಮುದಾಯ ಮೇಲೆ ಅನ್ಯಾಯ ಆಗುತ್ತಿದ್ರೆ ಸುಮ್ನೇ ಕೂಡುವುದಕ್ಕೆ ಆಗಲ್ಲ. ಯಾವುದೇ ಪಕ್ಷ ಇರಲಿ ಬೇಧಭಾವ ನಡೆಯಲ್ಲ. ನಮ್ಮ ಸಮಾಜಕ್ಕೆ ಶ್ರೀಮಂತ ಪಾಟೀಲ್ ಏನಾದರೂ ಮಾಡ್ತಾರೆ ಎಂಬ ಭಾವನೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಯೂಸ್ ಆ್ಯಂಡ್ ಥ್ರೋ ಪಾಲಿಸಿ ಅಷ್ಟೇ. ಮುಂದೆ ಯಾವಾಗ ಸಂಪುಟ ವಿಸ್ತರಣೆ ಆಗುತ್ತೋ ಆಗ ಶ್ರೀಮಂತ ಪಾಟೀಲ್ ‌ರನ್ನು ಮಂತ್ರಿ ಮಾಡಲೇಬೇಕು ಎಂದು ಆಗ್ರಹಿಸಿದರು.

Latest Videos
Follow Us:
Download App:
  • android
  • ios