ಆಪ್ತಗೆ ಸಚಿವ ಸ್ಥಾನ ನೀಡಲು ಸಿಎಂಗೆ ಜಾರಕಿಹೊಳಿ ಒತ್ತಡ

  • ರಾಜ್ಯದಲ್ಲಿ ಸಂಪುಟ ವಿಸ್ತರಣೆಯಾದ ಬಳಿಕ ಹಲವು ರೀತಿಯ ಅಸಮಾಧಾನ
  • ತಮ್ಮ ಅಪ್ತಗೆ ಸಚಿವ ಸ್ಥಾನ ಕೊಡಿಸಲು ಜಾರಕಿಹೊಳಿಯಿಂದ ಸಿಎಂಗೆ ಒತ್ತಡ
  • ಈ ಸಂಬಂಧ ನಡೆಯಲಿದೆ ಅಸಮಾಧಾನಗೊಂಡ ಶಾಸಕರ ಜೊತೆ ಸಭೆ
Balachandra jarkiholi Demands minister post for shrimanth Patil snr

ಬೆಂಗಳೂರು (ಆ.09): ರಾಜ್ಯದಲ್ಲಿ ಸಂಪುಟ ವಿಸ್ತರಣೆಯಾದ ಬಳಿಕ ಹಲವು ರೀತಿಯ ಅಸಮಾಧಾನಗಳು ಸ್ಪೋಟವಾಗುತ್ತಿದೆ.  ಇದೇ ವೇಳೆ  ಶ್ರೀಮಂತ ಪಾಟೀಲ್ ಗೆ ಸಚಿವಗಿರಿ ಕೊಡಿಸಲು ಬಾಲಚಂದ್ರ ಜಾರಕಿಹೊಳಿ ಮುಂದಾಗಿದ್ದಾರೆ. 

ಶ್ರೀಮಂತ ಪಾಟೀಲ್ ಗೆ ಸಚಿವ ಸ್ಥಾನ ನೀಡಬೇಕು ಎಂದು ಸಿಎಂ ಬೊಮ್ಮಾಯಿಗೆ ಬಾಲಚಂದ್ರ ಜಾರಕಿಹೊಳಿ ಒತ್ತಡ ಹಾಕಿದ್ದಾರೆನ್ನಲಾಗಿದೆ. ಈ ಸಂಬಂಧ ನಾಳೆ ಬೆಂಗಳೂರಿನಲ್ಲಿ ಸಭೆ ನಡೆಸಲು ತಿರ್ಮಾನ ನಡೆಸಿದ್ದು,  ಆಪ್ತ ವಲಯದ ಶಾಸಕರ ಜೊತೆ ಬಾಲಚಂದ್ರ ಜಾರಕಿಹೊಳಿ ಈ ಸಂಬಂಧ ಸಭೆ ನಡೆಸಲಿದ್ದಾರೆ.  

ಎಂಟಿಬಿ, ಆನಂದ್‌ ಸಿಂಗ್‌ಗೆ ಟಾಂಗ್‌ : ಮುನಿರತ್ನ ಬೆಂಬಲಿಸಿದ H.ವಿಶ್ವನಾಥ್

ಸಭೆಯಲ್ಲಿ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ತೆಗೆದುಕೊಳ್ಳಲಿದ್ದು, ಹೇಗೆ ,ಯಾರಿಗೆ ,ಯಾವಾಗ ವಿಷಯ ತಲುಪಿಸಬೇಕೆಂದು ಸಭೆಯಲ್ಲಿ ತೀರ್ಮಾನ ಮಾಡಲಿದ್ದಾರೆ.  ಸಭೆಗೆ ಯಾವೆಲ್ಲಾ ಶಾಸಕರು ಭಾಗಿಯಾಗುತ್ತಾರೆ ಎನ್ನುವ ಬಗ್ಗೆಯೂ ಯಾವುದೇ ಖಚಿತ ಮಾಹಿತಿ ಲಭ್ಯವಾಗಿಲ್ಲ.ಆದರೆ ಸಚಿವ ಸ್ಥಾನ ಸಿಗದ ಒಂದಿಷ್ಟು ಶಾಸಕರನ್ನು ಬಾಲಚಂದ್ರ ಜಾರಕಿಹೊಳಿ ಸಂಪರ್ಕಿಸಿದ್ದಾರೆ ಎನ್ನಲಾಗಿದೆ.  

ಸೆಲೆಕ್ಟೆಡ್ ಎಂಎಲ್ ಗಳನ್ನು ಮಾತ್ರ ಸಭೆಗೆ ಆಹ್ವಾನಿಸಿದ್ದಾರೆನ್ನುವ ಮಾಹಿತಿ ಇದ್ದು, ರೇಣುಕಾಚಾರ್ಯ, ಯತ್ನಾಳ್  ಸೇರಿದಂತೆ ಕೆಲವರಿಗೆ ಅಹ್ವಾನ ನೀಡಿಲ್ಲ. ಇನ್ನು ಈ ಸಭೆಗೆ ಮುಖ್ಯಮಂತ್ರಿ ಸ್ಥಾನಾಕಾಂಕ್ಷಿಯಾಗಿದ್ದ ಬೆಲ್ಲದ್ ಬರುತ್ತಾರಾ ಎನ್ನುವ ಕುತೂಹಲವೂ ಇದೆ. ಸಭೆಯ ಸಮಯ, ಎಲ್ಲಿ ಎಷ್ಟು ಜನ ಬರಲಿದ್ದಾರೆ ಎನ್ನುವುದು ಸಂಜೆಯ ವೇಳೆಗೆ ಸ್ಪಷ್ಟವಾಗಲಿದೆ.  

Latest Videos
Follow Us:
Download App:
  • android
  • ios