ಪಂಚ ಗ್ಯಾರಂಟಿ ಸ್ಕೀಂ: ಬಿಜೆಪಿ, ಜೆಡಿಎಸ್‌ ನಾಯಕರಿಂದ ಅಪಪ್ರಚಾರ, ಶಾಸಕ ಅಲ್ಲಂಪ್ರಭು

ಪಕ್ಷ ಅಧಿಕಾರಕ್ಕೆ ಬಂದಲ್ಲಿ ಪಂಚ ಗ್ಯಾರಂಟಿ ಸ್ಕೀಂ ಜಾರಿ ಶತಸಿದ್ಧವೆಂಬ ಮಾತಿನಂತೆಯೇ ನಡೆಯುತ್ತಿದ್ದೇವೆ. ಈಗಾಗಲೇ ಸಎಂ ಸಿದ್ದರಾಮಯ್ಯನವರು 3 ಯೋಜನೆ ಜಾರಿಗ ತಂದಿದ್ದಾರೆ. ಈಗಗಾಲೇ, ರಾಜ್ಯದ ಎಲ್ಲ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣದ ಭರವಸೆಯನ್ನು ಅನುಷ್ಠಾನ ಮಾಡಿದ್ದಾರೆ. ಇನ್ನುಳಿದ ಭರವಸೆಗಳ ಅನುಷ್ಠಾನಕ್ಕೆ ಅಗತ್ಯ ಪ್ರಕ್ರಿಯೆಗಳು ನಡೆಯುತ್ತಿವೆ: ಅಲ್ಲಂಪ್ರಭು ಪಾಟೀಲ್‌ 

Congress MLA Allamaprabhu Patil slams BJP JDS grg

ಕಲಬುರಗಿ(ಜು.14):  ಉಭಯ ಸದನಗಳನ್ನು ಉದ್ದೇಶಿಸಿ ರಾಜ್ಯಪಾಲ ಥಾವರಚಂದ್‌ ಗೆಹ್ಲೋಟ್‌ ಮಾಡಿರುವ ಭಾಷಣದ ವಂದನಾ ನಿರ್ಣಯಣವನ್ನು ಬೆಂಬಲಿಸಿ ಗುರುವಾರ ಸದನದಲ್ಲಿ ಮಾತನಾಡಿದ ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲಲಂಪ್ರಭು ಪಾಟೀಲರು ವಿರೋಧ ಪಕ್ಷ ಬಿಜೆಪಿಗೆ ಮಾತಲ್ಲೇ ಟಾಂಗ್‌ ನೀಡಿದರು.

ಕಳೆದ ನಾಲ್ಕು ವರ್ಷಗಳ ಹಿಂದೆ ಕಾಂಗ್ರೆಸ್‌ ಪಕ್ಷದ ಶಾಸಕರನ್ನು ಆಮಿಷಕ್ಕೆ ಒಳಪಡಿಸಿ, ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದು, ದುರಾಡಳಿತ ನಡೆಸಿದ್ದ ಬಿಜೆಪಿ ಸರಕಾರವನ್ನು ಚುನಾವಣೆಯಲ್ಲಿ ಕಿತ್ತೆಸೆದು, ರಾಜ್ಯದ ಮತದಾರರು ಕಾಂಗ್ರೆಸ್‌ ಪಕ್ಷವನ್ನು ಅಭೂತಪೂರ್ವವಾಗಿ ಗೆಲ್ಲಿಸಿ ಅಧಿಕಾರಕ್ಕೆ ತಂದಿದ್ದಾರೆ. ಇದಕ್ಕಾಗಿ, ನಾನು ರಾಜ್ಯದ ಮತದಾರರನ್ನು ಈ ಸದನದ ಮೂಲಕ ಅಭಿನಂದಿಸುತ್ತೇನೆಂದು ಅಲ್ಲಂಪ್ರಭು ಹೇಳುತ್ತಿದ್ದಂತೆಯೇ ಸದನದಲ್ಲಿ ಬಿಜೆಪಿ ಶಾಸಕರು ಆಕ್ಷೇಪಿಸಿದರಾದರೂ ಅದನ್ನು ಲೆಕ್ಕಿಸದೆ ಪಾಟೀಲರು ತಮ್ಮ ಮಾತು ಮುಂದುವರಿಸಿದರು.

ಬಾರದ ಮಳೆ: ಕಲಬುರಗಿ ಜಿಲ್ಲಾದ್ಯಂತ ಬತ್ತಿದ ಕೆರೆ

ನೂತನವಾಗಿ ಚುನಾಯಿತವಾದ ಸರಕಾರದ ಮುಂದಿನ ಐದು ವರ್ಷದ ಅವಧಿಯ ಆಡಳಿತದ ಅವಧಿಯ ಮುನ್ನುಡಿಯಾಗಿ ರಾಜ್ಯಪಾಲರು ತಮ್ಮ ಭಾಷಣವನ್ನು ಸದನದಲ್ಲಿ ಮಂಡಿಸಿದ್ದಾರೆ. ಬಡವರು, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದವರ ಪರವಾಗಿ ಸರ್ಕಾರ ನಿಲ್ಲಲಿದೆ, ಎಲ್ಲಾ ಜಾತಿ, ಧರ್ಮ ಮತ್ತು ಪಂಗಡಗಳ ಜನರು, ತಮ್ಮ ನ್ಯಾಯುತ ಪಾಲನ್ನು ಪಡೆಯುವಂತೆ ಮಾಡುವುದು ನನ್ನ ಸರಕಾರದ ಗುರಿಯಾಗಿದೆ ಎಂದು ರಾಜ್ಯಪಾಲರು ಹೇಳಿದ್ದಾರೆ, ಇದನ್ನು ಸದನದ ಎಲ್ಲ ಸದಸ್ಯರು ಪಕ್ಷ ಭೇಧ ಮರೆತು ಸ್ವಾಗತಿಸಿ, ಸರಕಾರ ಆ ಹಾದಿಯಲ್ಲಿಯೇ ನಡೆಯುವುದಕ್ಕೆ ಸಹಕಾರ ನೀಡಬೇಕಾಗಿದೆ ಎಂದು ಪ್ರತಿಪಾದಿಸಿದರು.

ಪಕ್ಷ ಅಧಿಕಾರಕ್ಕೆ ಬಂದಲ್ಲಿ ಪಂಚ ಗ್ಯಾರಂಟಿ ಸ್ಕೀಂ ಜಾರಿ ಶತಸಿದ್ಧವೆಂಬ ಮಾತಿನಂತೆಯೇ ನಡೆಯುತ್ತಿದ್ದೇವೆ. ಈಗಾಗಲೇ ಸಎಂ ಸಿದ್ದರಾಮಯ್ಯನವರು 3 ಯೋಜನೆ ಜಾರಿಗ ತಂದಿದ್ದಾರೆ. ಈಗಗಾಲೇ, ರಾಜ್ಯದ ಎಲ್ಲ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣದ ಭರವಸೆಯನ್ನು ಅನುಷ್ಠಾನ ಮಾಡಿದ್ದಾರೆ. ಇನ್ನುಳಿದ ಭರವಸೆಗಳ ಅನುಷ್ಠಾನಕ್ಕೆ ಅಗತ್ಯ ಪ್ರಕ್ರಿಯೆಗಳು ನಡೆಯುತ್ತಿವೆ.

ಕಾಂಗ್ರೆಸ್‌ ಪಕ್ಷದ ಭರವಸೆಗಳನ್ನು, ಗೇಲಿ ಮಾಡಿ, ಇದರಿಂದ ರಾಜ್ಯದ ಆರ್ಥಿಕ ಸ್ಥಿತಿ ಹಾಳಾಗಲಿದೆ, ಶ್ರೀ ಲಂಕಾ, ಪಾಕಿಸ್ತಾನದಲ್ಲಿ ಆದಂತೆ,ಕರ್ನಾಟಕ ಆಗಲಿದೆ, ಎಂದೆಲ್ಲ ಬೊಬ್ಬೆ ಹೊಡೆದಿದ್ದ, ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳ ನಾಯಕರು, ಈಗ, ಅದೇ ಯೋಜನೆಗಳನ್ನು, ಯಾವುದೇ ವಿಳಂಬ ವಿಲ್ಲದಂತೆ, ಜಾರಿ ಮಾಡಿ ಎಂದು ಆಗ್ರಹ ಮಾಡುತ್ತಿರುವುದು, ಅವರ ದ್ವಂದ್ವ ನಿಲುವಿಗೆ ಕನ್ನಡಿ, ಆ ಪಕ್ಷಗಳ ಬೌದ್ಧಿಕ ದಾರಿದ್ರ್ಯತನವನ್ನು ಎತ್ತಿ ತೋರಿಸತ್ತದೆ ಎಂದು ಅಲ್ಲಂಪ್ರಭು ಗೇಲಿ ಮಾಡಿದರು.

ಕುಟುಂಬದ ಹಿರಿಯ ಮಹಿಳಾ ಸದಸ್ಯರಿಗೆ ಪ್ರತಿ ಎರಡು ಸಾವಿರ ರೂಪಾಯಿ ನೀಡುವ ಯೋಜನೆ, ಕೇಂದ್ರ ಸರಕಾರದ ಕ್ರೂರ ಆಡಳಿತ ನೀತಿಯ ಫಲವಾಗಿ ಎದುರಿಸುತ್ತಿರುವ ಅವಶ್ಯ ವಸ್ತುಗಳ ಬೆಲೆಯೇರಿಕೆ ಯಿಂದ ಸ್ವಲ್ಪ ಆರ್ಥಿಕ ಭಾರ ತಗ್ಗಿಸುವ ಈ ಯೋಜನೆಯ ಜಾರಿಯಿಂದ ಕುಟುಂಬದಲ್ಲಿ ಸಾಮರಸ್ಯ ಕೆಡಲಿದೆ ಎಂದು ಬಿಜೆಪಿ ಹಾಗು ಜೆಡಿಎಸ್‌ ನಾಯಕರು ಅಪಪ್ರಚಾರದಲ್ಲಿ ತೊಡಗಿದ್ದಾರೆ. ಇದು ಖಂಡಿಸುತ್ತೇವೆಂದ ಅಲ್ಲಂಪ್ರಭು ಪಾಟೀಲ್‌ ಈ ಹಿಂದೆ ಹಿಂಬಾಗಿಲಿನ ಮೂಲಕ ಅಧಿಕಾರಕ್ಕೆ ಬಂದಿದ್ದ , ಯಡಿಯೂರಪ್ಪನವರು ತಮ್ಮ ಸಂಪುಟ ವಿಸ್ತರಣೆಗೆ ತಿಂಗಳುಗಳ ಕಾಲ ನಡೆಸಲಾಗದೆ ಕೇವಲ ಒಬ್ಬರೇ, ತಿರುಗಾಟ ಮಾಡಿದ್ದನ್ನು ನಾವೆಲ್ಲ ನೋಡಿದ್ದೇವೆ.

ಪ್ರಸ್ತುತ ಬಿಜೆಪಿಗೆ ಇನ್ನೂ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ತುಂಬಲು ಸಾಧ್ಯವಾಗಿಲ್ಲ. ತಮ್ಮ ತಟ್ಟೆಯಲ್ಲಿ ಹೆಗ್ಗಣ ಇದ್ದರೂ, ಮತ್ತೊಬ್ಬರ ತಟ್ಟೆಯಲ್ಲಿ ನೊಣವನ್ನು ಹುಡುಕುವ ಕೆಲಸ, ಪ್ರತಿಪಕ್ಷ ಬಿಜೆಪಿ ಮಾಡುತ್ತಿದೆ ಎಂದು ಪಾಟೀಲ್‌ ಟೀಕಿಸಿದರು..ಒಂದು ಜವಾಬ್ದಾರಿ ಪ್ರತಿಪಕ್ಷವಾಗಿ, ಬಿಜೆಪಿ ನಾಯಕರು ಸೋತಿದ್ದು, ಬಡವರಿಗೆ ವಿತರಿಸಲಾಗುವ ಹೆಚ್ಚುವರಿ ಅಕ್ಕಿಯನ್ನು ರಾಜ್ಯಕ್ಕೆಪಡೆಯಲು, ರಾಜ್ಯ ಬಿಜೆಪಿ ನಾಯಕರು ಸರಕಾರದ ಜತೆ ಕೈ ಜೋಡಿಸದೆ, ಅಡ್ಡಗಾಲು ಹಾಕುತ್ತಿರುವುದು, ಅತ್ಯಂತ ಖಂಡನಾರ್ಹ. ಬಡವರ ಶಾಪ ಅವರಿಗೆ ತಟ್ಟಲಿದೆ ಎಂದು ನಾನು ಭಾವಿಸುತ್ತೇನೆ.

8 ವರ್ಷ ಒಂದೇ ಠಾಣೆಯಲ್ಲಿದ್ದ 100 ಸಿಬ್ಬಂದಿ ಎತ್ತಂಗಡಿ; ಜ್ಯು.ಖರ್ಗೆ ಬೀಸಿದ ಚಾಟಿಗೆ ಕಲಬುರ್ಗಿ ಖಾಕಿ ಹೈಲರ್ಟ್!

ರಾಜ್ಯಪಾಲರು, ತಮ್ಮ ಭಾಷಣದಲ್ಲಿ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಪ್ರಯತ್ನ ಮಾಡಲಾಗುವುದು, ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಅರೋಗ್ಯ, ಶಿಕ್ಷಣ ಮತ್ತು ಅಗತ್ಯ ಸೇವೆಗಳನ್ನು, ಒದಗಿಸಲು ವಿಶೇಷ ಯೋಜನೆ ಜಾರಿಗೊಳಿಸಲಾಗುವುದು, ಎಂದು ಹೇಳಿದ್ದಾರೆ. ಹೈದೆರಾಬಾದ…-ಕರ್ನಾಟಕ ಭಾಗದ ಹೃದಯ ಭಾಗವಾದ, ಕಲಬುರಗಿ ಜಿಲ್ಲೆ, ತೊಗರಿ ಬೆಳೆಯ ಕಣಜವೆಂದೇ ಪ್ರಸಿದ್ದಿ ಪಡೆದಿದ್ದು, ಈ ಬಾರಿ, ತೊಗರಿ ಬೆಳೆಗೆ ಮಾರಕ ರೋಗಕ್ಕೆ ಬಲಿಯಾಗಿ, ಜಿಲ್ಲೆಯ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಬೆಳೆದಿದ್ದ ಬೆಲೆಯೂ ಕೈಗೆ ಬಾರದಂತಾಗಿದೆ, ರೈತ ಬಾಂಧವರ ನೆರವಿಗೆ ಸರಕಾರ ನಿಲ್ಲಬೇಕು ಹಾಗು ತಕ್ಷಣ ಅಧಿಕಾರಿಗಳಿಂದ ಬೆಲೆ ನಷ್ಟದ ಮಾಹಿತಿ ಪಡೆದು, ನಗದು ಪರಿಹಾರ ಘೋಷಿಸಬೇಕು ಎಂದು ಆಗ್ರಹಿಸಿದರು.

ಹಿಂದಿನ ಸರಕಾರ ಆ ಭಾಗವನ್ನು ಕೇವಲ ಕಲ್ಯಾಣ ಕರ್ನಾಟಕ ಎಂದು ಹೆಸರನ್ನು ಬದಲಿಸಿದ್ದನ್ನು ಬಿಟ್ಟರೆ, ಅಲ್ಲಿನ ಜನತೆಯ ಆರ್ಥಿಕ, ಸಾಮಾಜಿಕ ಹಾಗು ಸಾಂಸ್ಕೃತಿಕ ಅಭಿವ್ರಿದ್ದಿಗೆ ವಿಶೇಷ ಗಮನ ನೀಡಿರಲಿಲ್ಲ. ಉದ್ಯೋಗ ಹಾಗು ಶಿಕ್ಷಣಸಂಸ್ಥೆಗಳಲ್ಲಿ ನಮ್ಮ ಭಾಗದ ಯುವಕ ಯುವತಿಯರಿಗೆ, ಮೀಸಲಾತಿ ನಿಯಮಗಳನ್ನು, ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಈ ಒಂದು ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಯತ್ನ ನಡೆಯಬೇಕು ಎಂದೂ ಸದನದಲ್ಲಿ ಅಲ್ಲಂಪ್ರಭು ಪಾಟೀಲ್‌ ಬಲವಾದಂತಹ ಆಗ್ರಹ ಪೂರ್ವಕ ವಾದ ಮಂಡಿಸಿ ವಂದನಾ ನಿರ್ಣಯ ಅನುಮೋದಿಸಿ ಗಮನ ಸೆಳೆದರು.

Latest Videos
Follow Us:
Download App:
  • android
  • ios