ಬೇಳೂರು ಗೋಪಾಲಕೃಷ್ಣ ಮಾಡಿದ ಆಪರೇಷನ್ ಸಕ್ಸಸ್ ಆಗಿದೆ. ಬಿಜೆಪಿ, ಜೆಡಿಎಸ್ ಮೈತ್ರಿಕೂಟಕ್ಕೆ ಬಹುಮತವಿದ್ದರೂ ಅಧಿಕಾರ ಮಾತ್ರ ಕಾಂಗ್ರೆಸ್ ತೆಕ್ಕೆಗೆ ಜಾರಿಗದೆ. ಹೊಸನಗರ ಪಟ್ಟಣ ಪಂಚಾಯಿತಿಯ 11 ಸ್ಥಾನಗಳಲ್ಲಿ ನಾಲ್ಕು ಕಾಂಗ್ರೆಸ್ ನಾಲ್ಕು ಬಿಜೆಪಿ ಮೂರು ಜೆಡಿಎಸ್ ಸದಸ್ಯರಿದ್ದರು. ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ನಾಗರಾಜ್ ಗೆ ಬಿಜೆಪಿಯ ಇಬ್ಬರು ಜೆಡಿಎಸ್ ನ ಓರ್ವ ಸದಸ್ಯರು ಬೆಂಬಲಿಸುವ ಮೂಲಕ ಆಯ್ಕೆಯಾಗಿದ್ದಾರೆ. 

ಶಿವಮೊಗ್ಗ(ಆ.29): ಜಿಲ್ಲೆಯ ಹೊಸನಗರ ಪಟ್ಟಣ ಪಂಚಾಯತ್‌ನಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಿದೆ. ಅಧ್ಯಕ್ಷರಾಗಿ ನಾಗರಾಜ ಹಾಗೂ ಉಪಾಧ್ಯಕ್ಷರಾಗಿ ಚಂದ್ರಕಲಾ ನಾಗರಾಜ್ ಅವರು ಆಯ್ಕೆಯಾಗಿದ್ದಾರೆ. ಇಂದು(ಗುರುವಾರ) ನಡೆದ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಜನಪ್ರತಿನಿಧಿಗಳು ಚುನಾಯಿತರಾಗಿದ್ದಾರೆ. 

ಬೇಳೂರು ಆಪರೇಷನ್ ಸಕ್ಸಸ್

ಬೇಳೂರು ಗೋಪಾಲಕೃಷ್ಣ ಮಾಡಿದ ಆಪರೇಷನ್ ಸಕ್ಸಸ್ ಆಗಿದೆ. ಬಿಜೆಪಿ, ಜೆಡಿಎಸ್ ಮೈತ್ರಿಕೂಟಕ್ಕೆ ಬಹುಮತವಿದ್ದರೂ ಅಧಿಕಾರ ಮಾತ್ರ ಕಾಂಗ್ರೆಸ್ ತೆಕ್ಕೆಗೆ ಜಾರಿಗದೆ. ಹೊಸನಗರ ಪಟ್ಟಣ ಪಂಚಾಯಿತಿಯ 11 ಸ್ಥಾನಗಳಲ್ಲಿ ನಾಲ್ಕು ಕಾಂಗ್ರೆಸ್ ನಾಲ್ಕು ಬಿಜೆಪಿ ಮೂರು ಜೆಡಿಎಸ್ ಸದಸ್ಯರಿದ್ದರು. ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ನಾಗರಾಜ್ ಗೆ ಬಿಜೆಪಿಯ ಇಬ್ಬರು ಜೆಡಿಎಸ್ ನ ಓರ್ವ ಸದಸ್ಯರು ಬೆಂಬಲಿಸುವ ಮೂಲಕ ಆಯ್ಕೆಯಾಗಿದ್ದಾರೆ. 

ಭ್ರಷ್ಟಾಚಾರದಿಂದ ಮುಕ್ತವಾದರೆ ಸಹಕಾರ ಕ್ಷೇತ್ರ ಪ್ರಗತಿ: ಸಂಸದ ಬಿ.ವೈ.ರಾಘವೇಂದ್ರ

ತಹಶೀಲ್ದಾರ್ ಶ್ರೀಮತಿ ರಶ್ಮಿ ಹಾಲೇಶ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. 

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಬೇಳೂರು ಗೋಪಾಲಕೃಷ್ಣ ಅವರು, ಹೊಸನಗರ ಪಟ್ಟಣದ 11 ವಾರ್ಡ್‌ಗಳ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.