Asianet Suvarna News Asianet Suvarna News

Vidhan Parishat Election: ಕಾಂಗ್ರೆಸ್‌ನವರೇ ತಮ್ಮ ಅಭ್ಯರ್ಥಿ ಸೋಲಿಸ್ತಾರೆ: ಆನಂದ್‌ ಸಿಂಗ್‌

*   ಕಾಂಗ್ರೆಸ್‌ನ ಕೆಲ ಶಾಸಕರು ದೈಹಿಕವಾಗಿ ಮಾತ್ರ ಕಾಂಗ್ರೆಸ್‌ ಅಭ್ಯರ್ಥಿ ಪರ ಇದ್ದಾರೆ
*   ಬಿಜೆಪಿ ಅಭ್ಯರ್ಥಿ ಗೆಲುವಿಗೆ ಶ್ರೀರಾಮುಲು, ಸಿಂಗ್‌ ಕಸರತ್ತು
*   ಎಂಎಲ್ಸಿ ಎಲೆಕ್ಷನ್‌ ನಾವೇ ಗೆಲ್ತೇವೆ: ಆನಂದ್‌ ಸಿಂಗ್‌
 

Congress Leaders Will Be Defeat Their Candidate in MLC Election Says Anand Singh grg
Author
Bengaluru, First Published Dec 2, 2021, 1:39 PM IST

ಹರಪನಹಳ್ಳಿ(ಡಿ.02):  ವಿಧಾನ ಪರಿಷತ್‌ ಚುನಾವಣೆಯಲ್ಲಿ(Vidhan Parishat Election) ನನ್ನ ಹಾಗೂ ಶ್ರೀರಾಮುಲು ಕುರಿತು, ತಾಕತ್ತಿದ್ದರೆ ನಮ್ಮ (ಕಾಂಗ್ರೆಸ್‌) ಅಭ್ಯರ್ಥಿ ಸೋಲಿಸಿ ಎಂದು ಕಾಂಗ್ರೆಸ್‌ ಪಕ್ಷದವರು ಹೇಳಿ ನಮಗೆ ಪ್ರಚೋದನೆ ಮಾಡುತ್ತಿದ್ದಾರೆ ಎಂದು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌(Anand Singh) ಹೇಳಿದರು.

ಪಟ್ಟಣದ ನಟರಾಜ ಕಲಾಭವನದಲ್ಲಿ ಬುಧವಾರ ಆಯೋಜಿಸಿದ್ದ ವಿಪ ಚುನಾವಣಾ ಪ್ರಚಾರ(Election Campaign) ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಅವರ ಪ್ರಚೋದನೆ ನೋಡಿದರೆ ಪರೋಕ್ಷವಾಗಿ ತಮ್ಮ ಅಭ್ಯರ್ಥಿಯನ್ನು ಸೋಲಿಸಲು ಕಾಂಗ್ರೆಸ್‌ನವರೇ(Congress) ಸಿದ್ಧತೆ ನಡೆಸಿದಂತಿದೆ ಎಂದರು.

Vidhan Parishat Election: ಬಿಜೆಪಿ ಗೆಲ್ಲಿಸಿದರೆ ಅಭಿವೃದ್ಧಿಗೆ ಇನ್ನಷ್ಟು ವೇಗ: ಆನಂದ್‌ ಸಿಂಗ್‌

ಕಾಂಗ್ರೆಸ್‌ನ ಬಳ್ಳಾರಿ(Ballari) ಕ್ಷೇತ್ರದ ಈಗಿರುವ ಅಭ್ಯರ್ಥಿಗೆ ಟಿಕೆಟ್‌ ನೀಡಬಾರದು, ದಲಿತರಿಗೆ(Dalit) ಕೊಡಿ ಎಂದು ಅವರ ಪಕ್ಷದ ಅಧ್ಯಕ್ಷರಿಗೆ ಅವರ ಶಾಸಕರೇ ಪತ್ರ ಬರೆದಿದ್ದರು. ಆ ಪತ್ರಗಳು ನಮ್ಮ ಬಳಿ ಇವೆ ಎಂದರು.
ಕಾಂಗ್ರೆಸ್‌ನ ಕೆಲ ಶಾಸಕರು ದೈಹಿಕವಾಗಿ ಮಾತ್ರ ಕಾಂಗ್ರೆಸ್‌ ಅಭ್ಯರ್ಥಿ ಪರವಾಗಿ ಇದ್ದಾರೆ, ಮಾನಸಿಕವಾಗಿ ಇಲ್ಲ. ಅವರ ಅಭ್ಯರ್ಥಿಯನ್ನು ಅವರೇ ಸೋಲಿಸುತ್ತಾರೆ ಎಂದು ತಿಳಿಸಿದರು.

ಎಂಎಲ್ಸಿ ಎಲೆಕ್ಷನ್‌ ನಾವೇ ಗೆಲ್ತೇವೆ: ಆನಂದ್‌ ಸಿಂಗ್‌

ಹೊಸಪೇಟೆ: ಬಳ್ಳಾರಿ- ವಿಜಯನಗರ(Vijayanagara) ಜಿಲ್ಲೆಯ ಬಿಜೆಪಿ ಅಭ್ಯರ್ಥಿ ನೂರಕ್ಕೆ ನೂರರಷ್ಟು ಗೆಲ್ತಾರೆ. ಕಾಂಗ್ರೆಸ್‌ ನಾಯಕರದ್ದು ಕೇವಲ ವೇದಿಕೆಯ ಮೇಲೆ ಒಗ್ಗಟ್ಟು ಅಷ್ಟೇ. ಕಾಂಗ್ರೆಸ್‌ ಅಭ್ಯರ್ಥಿ ಕೆ.ಸಿ. ಕೊಂಡಯ್ಯ(KC Kondaiah) ಅವರ ಬಗ್ಗೆ ಅವರ ಶಾಸಕರೇ ಅಪಸ್ವರ ಎತ್ತಿದ್ದಾರೆ ಎಂದು ಪ್ರವಾಸೋದ್ಯಮ ಹಾಗೂ ಪರಿಸರ ಸಚಿವ ಆನಂದ್‌ ಸಿಂಗ್‌ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಂಡಯ್ಯನವರ ವಿರುದ್ಧ ಶಾಸಕರೇ ಪತ್ರಗಳು ಸಹ ಬರೆದಿದ್ದಾರೆ. ಕಾಂಗ್ರೆಸ್‌ ನಾಯಕರಲ್ಲಿ ಒಗ್ಗಟ್ಟಿನ ಕೊರತೆ ಇದೆ. ಅವರ ಆಂತರಿಕ ವಿಚಾರವನ್ನು ನಾವು ಎನ್‌ಕ್ಯಾಶ್‌ ಮಾಡಿಕೊಂಡು ಚುನಾವಣೆಗೆ ಹೋಗೋ ಅವಶ್ಯಕತೆ ಇಲ್ಲ. ಬಿಜೆಪಿ ಅಭ್ಯರ್ಥಿ ಸತೀಶ್‌ ಅವರು ಗೆದ್ದೆ ಗೆಲ್ತಾರೆ. ಯಾವುದೇ ರೀತಿಯಲ್ಲಿ ಅನುಮಾನ ಇಲ್ಲ. ಕಾಂಗ್ರೆಸ್‌ ನಾಯಕರ ಟೀಕೆಗಳ ಬಗ್ಗೆ ನಾವು ತಲೆಕೆಡಿಸಿಕೊಳ್ಳಲ್ಲ ಎಂದರು.

ಕೆಲಸ ಮಾಡಿದವರು ಉಳೀತಾರೆ:

ರಾಜ್ಯ ಸಚಿವ ಸಂಪುಟದಲ್ಲಿ ಉತ್ತಮ ಕೆಲಸ ಮಾಡೋರನ್ನ ಉಳಿಸಿಕೊಳ್ತಾರೆ. ಕೆಲಸ ಮಾಡದೇ ಇರೋರನ್ನು ಮನೆಗೆ ಕಳುಹಿಸುತ್ತಾರೆ. ಪಕ್ಷದ ಹೈಕಮಾಂಡ್‌ ಟ್ರ್ಯಾಕ್‌ ರೆಕಾರ್ಡ್‌ ಮಾಹಿತಿ ಕಲೆಹಾಕುತ್ತಿದ್ದಾರೆ. ಉತ್ತಮರಿಗೆ ಒಳ್ಳೆಯದಾಗುತ್ತದೆ ಎಂದು ಸಚಿವ ಸಿಂಗ್‌ ಹೇಳಿದರು.

ಬಿಜೆಪಿ ಅಭ್ಯರ್ಥಿ ಗೆಲುವಿಗೆ ಶ್ರೀರಾಮುಲು, ಸಿಂಗ್‌ ಕಸರತ್ತು!

ಬಳ್ಳಾರಿ: ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ ನಡೆಯುತ್ತಿರುವ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಲು ಸಚಿವರಾದ ಬಿ.ಶ್ರೀರಾಮುಲು(B Sriramulu), ಆನಂದ ಸಿಂಗ್‌ ತೀವ್ರ ಕಸರತ್ತು ಮಾಡುತ್ತಿದ್ದಾರೆ. ಇದು ಅವರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.

ಗ್ರಾಪಂಗಳ ಬಲವರ್ಧನೆಗೆ ಬಿಜೆಪಿ ಆದ್ಯತೆ: ಸಚಿವ ಆನಂದ್‌ ಸಿಂಗ್‌

ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲೇಬೇಕಾದ ಅನಿವಾರ್ಯತೆ. ಇದು ಪಕ್ಷದ ಹೈಕಮಾಂಡ್‌ ನೀಡಿರುವ ಸೂಚನೆಯೂ ಹೌದು. ಹೀಗಾಗಿ, ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಹಾಗೂ ಸಾರಿಗೆ ಸಚಿವ ಬಿ.ಶ್ರೀರಾಮುಲು ಬಿಡುವಿಲ್ಲದೆ ಓಡಾಡುತ್ತಿದ್ದಾರೆ. ನಾನಾ ತಂತ್ರಗಳನ್ನು ರೂಪಿಸುತ್ತಿದ್ದಾರೆ.

ಸಂಘದ ನಿಗಾ:

ಬಿಜೆಪಿ ಅಭ್ಯರ್ಥಿಯ ಗೆಲುವಿಗಾಗಿನ ಓಡಾಟ, ಮುಖಂಡರು ಹಾಗೂ ಕಾರ್ಯಕರ್ತರ ಶ್ರಮ ಈ ಎಲ್ಲವನ್ನು ಸಂಘ ಪರಿವಾರ ನಿಗಾ ವಹಿಸಿದೆ. ಈ ಸಂಬಂಧ ಬಳ್ಳಾರಿ-ವಿಜಯನಗರ ಜಿಲ್ಲೆಯಲ್ಲಿ 20ಕ್ಕೂ ಹೆಚ್ಚು ಸಂಘದ ಕಾರ್ಯಕರ್ತರು ಬೀಡು ಬಿಟ್ಟಿದ್ದಾರೆ. ಪಕ್ಷದ ಅಭ್ಯರ್ಥಿಯ ಗೆಲುವಿಗೆ ಯಾರಾರ‍ಯರು ಶ್ರಮಿಸುತ್ತಿದ್ದಾರೆ. ನಿಜಕ್ಕೂ ಸಕ್ರೀಯವಾಗಿರುವವರು ಯಾರು? ಹಾಗೆ ಸುಮ್ಮನೆ ಬಂದು ಹೋಗುವವರು ಯಾರು? ಎಂಬುದರ ಕಡೆ ಸಂಘದ ಕಾರ್ಯಕರ್ತರು ನಿಗಾ ವಹಿಸಿ, ಸಂಘದ ಹಿರಿಯ ನಾಯಕರಿಗೆ ಮಾಹಿತಿ ರವಾನಿಸುತ್ತಿದ್ದಾರೆ. ಇದು ಜಿಲ್ಲೆಯ ಸಚಿವರು ಸೇರಿದಂತೆ ಶಾಸಕರು, ವಿವಿಧ ಚುನಾಯಿತ ಪ್ರತಿನಿಧಿಗಳಿಗೂ ಗೊತ್ತಿದೆ. ಹೀಗಾಗಿ, ಚುನಾವಣೆಯಲ್ಲಿ(Election) ಬಹುತೇಕರು ಚುರುಕಾಗಿ ಕೆಲಸ ಮಾಡುತ್ತಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾಧನೆ ಇಟ್ಟುಕೊಂಡು ಮತ ಕೇಳುತ್ತೇವೆಯೇ ಹೊರತು, ನಾವು ಯಾವುದೇ ಆಮಿಷ ನೀಡುವುದಿಲ್ಲ. ಗ್ರಾಮ ಪಂಚಾಯಿತಿಗಳ ಅಭಿವೃದ್ಧಿಯೇ ನನ್ನ ಕನಸು. ಹಳ್ಳಿಜನರ ಬದುಕು ಬದಲಾಗಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳು ಎಲ್ಲರಿಗೂ ತಲುಪಬೇಕು. ಇದಕ್ಕಾಗಿ ಶ್ರಮಿಸುವೆ ಅಂತ ಬಿಜೆಪಿ ಅಭ್ಯರ್ಥಿ ಏಚರೆಡ್ಡಿ ಸತೀಶ್‌(Satish Yeachareddy) ತಿಳಿಸಿದ್ದಾರೆ.  
 

Follow Us:
Download App:
  • android
  • ios