ಗ್ರಾಪಂಗಳ ಬಲವರ್ಧನೆಗೆ ಬಿಜೆಪಿ ಆದ್ಯತೆ: ಸಚಿವ ಆನಂದ್ ಸಿಂಗ್
* ಚುನಾವಣೆ ಚದುರಂಗದಾಟದಲ್ಲಿ ರಣತಂತ್ರ ಮುಖ್ಯ
* ಮತದಾರರು ಎದುರಾಳಿ ಅಭ್ಯರ್ಥಿಗಳ ಅಮಿಷಕ್ಕೊಳಗಾಗುವುದಿಲ್ಲ
* ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು
ಹೊಸಪೇಟೆ(ನ.15): ಬಿಜೆಪಿ(BJP) ಅಧಿಕಾರಕ್ಕಾಗಿ ಜನ್ಮ ತಳೆದಿರುವ ಪಕ್ಷವಲ್ಲ. ದೇಶಭಕ್ತಿ ಮೈಗೂಡಿಸಿಕೊಂಡಿರುವ ಪಕ್ಷವಾಗಿದೆ. ಪಕ್ಷಕ್ಕೆ ಕಾರ್ಯಕರ್ತರ ದೊಡ್ಡ ಶಕ್ತಿ ಇದೆ. ವಿಧಾನಪರಿಷತ್ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ ಗೆಲುವು ಸಾಧಿಸಲಿದೆ. ಚುನಾವಣೆ ಚದುರಂಗದಾಟದಲ್ಲಿ ರಣತಂತ್ರ ಮುಖ್ಯ ಎಂದು ಪ್ರವಾಸೋದ್ಯಮ ಹಾಗೂ ಬಳ್ಳಾರಿ, ವಿಜಯನಗರ ಜಿಲ್ಲೆಗಳ ಉಸ್ತುವಾರಿ ಸಚಿವ ಆನಂದ್ ಸಿಂಗ್(Anand Singh) ಹೇಳಿದ್ದಾರೆ.
ನಗರದ ಪಟೇಲ್ ನಗರದ ಬಿಜೆಪಿ ಕಚೇರಿಯಲ್ಲಿ ಭಾನುವಾರ ರಾತ್ರಿ ಜನ ಸ್ವರಾಜ್ ಸಮಾವೇಶ ಹಾಗೂ ವಿಧಾನಪರಿಷತ್ ಚುನಾವಣೆ(Vidhan Parishat Election) ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳ ಬಗ್ಗೆ ಮತದಾರರಿಗೆ(Voters) ತಿಳಿಸುವ ಕಾರ್ಯ ಮಾಡಬೇಕು. ಮತದಾರರು ಎದುರಾಳಿ ಅಭ್ಯರ್ಥಿಗಳ ಅಮಿಷಕ್ಕೊಳಗಾಗುವುದಿಲ್ಲ. ಮತದಾರರಲ್ಲಿ ವಿಶ್ವಾಸ ಮೂಡಿಸಬೇಕು. ನಮ್ಮದೇ ಸರ್ಕಾರ ಇರುವುದರಿಂದ ಗ್ರಾಪಂಗಳ ಬಲವರ್ಧನೆಗೆ ಆದ್ಯತೆ ನೀಡಲಾಗುವುದು ಎಂಬುದನ್ನು ತಿಳಿಯಪಡಿಸಬೇಕು ಎಂದರು.
ಗ್ರಾಪಂ ಸದಸ್ಯರು ಚಿಹ್ನೆಯಡಿ ಗೆದ್ದಿರುವುದಿಲ್ಲ. ಅವರು ಬಹಿರಂಗವಾಗಿ ಬರುವುದಿಲ್ಲ. ವಿಶ್ವಾಸಕ್ಕೆ ತೆಗೆದುಕೊಂಡು, ನಮ್ಮ ಅಭ್ಯರ್ಥಿಗೆ ಮತಗಳು ಬೀಳುವಂತೆ ಮಾಡಬೇಕು. ಶೀಘ್ರವೇ ಅಭ್ಯರ್ಥಿ ಘೋಷಣೆಯಾಗಲಿದೆ. ಕಾಂಗ್ರೆಸ್‌ನವರು ಘೋಷಣೆ ಮಾಡಿಲ್ಲ.
Hosapete| ಜಿಲ್ಲಾ ಕ್ರೀಡಾಂಗಣ, ವೃತ್ತಕ್ಕೆ ಪುನೀತ್ ಹೆಸರಿಡಲು ಆಗ್ರಹ
ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಕೋವಿಡ್(Covid19) ಸಮಯದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಇಡೀ ವಿಶ್ವವೇ(World) ಆರ್ಥಿಕ ಸಂಕಷ್ಟದಿಂದ ತತ್ತರಿಸಿದೆ. ಆದರೂ ಪ್ರಧಾನಿ ಅವರು ಇಡೀ ವಿಶ್ವ ಮೆಚ್ಚುವ ಕೆಲಸ ಮಾಡಿದ್ದಾರೆ. 111 ಕೋಟಿಗೂ ಅಧಿಕ ಜನರಿಗೆ ಲಸಿಕೆ(Vaccine) ನೀಡಲಾಗಿದೆ. ಇಂಥ ಪ್ರಧಾನಿ ಹಿಂದೆಯೂ ಇಲ್ಲ. ಮುಂದೆಯೂ ಬರಲ್ಲ ಎಂದರು.
ಜಲಮಿಷನ್ ಯೋಜನೆ:
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಮಾತನಾಡಿ, ಜಲ ಮಿಷನ್ ಯೋಜನೆ ಮೂಲಕ ಮುಂದಿನ 2024ರೊಳಗೆ ದೇಶದ ಪ್ರತಿ ಗ್ರಾಮದ ಮನೆ, ಮನೆಗೆ ಶುದ್ಧ ಕುಡಿಯುವ ನೀರು ನೀಡುವ ಸಂಕಲ್ಪವನ್ನು ಪ್ರಧಾನ ನರೇಂದ್ರ ಮೋದಿ ಅವರು ಮಾಡಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಇನ್ನೂ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಮುಂದಾಗಿಲ್ಲ. ಇದೀಗ ಪ್ರಧಾನಿ ನೇರಂದ್ರ ಮೋದಿಯವರು, ದೇಶವಾಸಿಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಮುಂದಾಗಿದ್ದಾರೆ ಎಂದರು.
ಕೊರೋನಾ ಸಂಕಷ್ಟಸಮಯದಲ್ಲಿ ಯಾರೊಬ್ಬರೂ ಕೊರೋನಾ ರೋಗಿಗಳ ಹತ್ತಿರ ಹೋಗಲೂ ಹೆದರುತ್ತಿದ್ದರು. ಇಂತಹ ಸಮಯದಲ್ಲಿ ಲಕ್ಷಾಂತರ ಕಾರ್ಯಕರ್ತರು, ಕೊರೋನಾ ರೋಗಿಗಳ ಸೇವೆ ಮಾಡಿದರು. ಪ್ರಧಾನ ನರೇಂದ್ರ ಮೋದಿಯವರು ದೇಶದ ಜನರಿಗೆ ಆತ್ಮಸ್ಥೈರ್ಯ ತುಂಬಿದರು ಎಂದರು.
ಜನ ಸ್ವರಾಜ್ ಸಮಾವೇಶ:
ರಾಜ್ಯದಲ್ಲಿ ವಿಧಾನಪರಿಷತ್ ಚುನಾವಣೆ ಹಿನ್ನೆಲೆ ಪಕ್ಷದ ನಾಯಕರ ನೇತೃತ್ವದಲ್ಲಿ ಆರು ತಂಡ ರಚಿಸಲಾಗಿದೆ. ಕಲ್ಯಾಣ ಕರ್ನಾಟಕದ ತಂಡದ ನೇತೃತ್ವವನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ್ ವಹಿಸಲಿದ್ದು, ನ. 18ರಿಂದ 20ರವರೆಗೆ ಆರು ಜಿಲ್ಲೆಗಳಲ್ಲಿ ಜನಸ್ವರಾಜ್ ಸಮಾವೇಶ ನಡೆಯಲಿದೆ ಎಂದರು.
ಬಿಜೆಪಿ ರಾಜ್ಯ ಕಾರ್ಯದರ್ಶಿ ಕೇಶವಪ್ರಸಾದ ಮಾತನಾಡಿ, ಪಕ್ಷದ ಕಾರ್ಯಕರ್ತರು ಗ್ರಾಪಂ ಸದಸ್ಯರ ಮನೆ ಮನೆಗೆ ತೆರಳಿ ಮನವೊಲಿಸಬೇಕು. 25 ಸೀಟುಗಳಲ್ಲಿ ಬಿಜೆಪಿ 20 ಸೀಟುಗಳಲ್ಲಿ ಸ್ಪರ್ಧಿಸಿದ್ದು, 15 ಸೀಟು ಗೆಲ್ಲುವ ಗುರಿ ಹೊಂದಲಾಗಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾಜಿ ಶಾಸಕರಾದ ನೇಮರಾಜ್ ನಾಯ್ಕ, ಚಂದ್ರಾ ನಾಯ್ಕ, ಮುಖಂಡರಾದ ಅಯ್ಯಾಳಿ ತಿಮ್ಮಪ್ಪ, ಸಿದ್ದೇಶ ಯಾದವ್, ಎಚ್. ಹನುಮಂತಪ್ಪ, ಲಲಿತಾಬಾಯಿ, ಪೂಜಪ್ಪ, ರಮೇಶ ನಾಯ್ಕ, ಅನಿಲ ನಾಯ್ಡು, ಡಾ. ಮಹಿಪಾಲ, ಚಂದ್ರಶೇಖರ ಪಾಟೀಲ, ಆರುಂಡಿ ನಾಗರಾಜ, ದಿವಾಕರ, ಬಸವರಾಜ ನಾಲತ್ವಾಡ ಮತ್ತಿತರರಿದ್ದರು.
ಹೊಸಪೇಟೆ: ಪುನೀತ್ ಪ್ರತಿಮೆ ನಿರ್ಮಾಣಕ್ಕೆ ಸಚಿವ ಆನಂದ್ ಸಿಂಗ್ ಸಂಕಲ್ಪ
ಮಿನಿಸ್ಟರ್ ರಿಯಾಲಿಟಿ ಚೆಕ್, ಟೂರಿಸ್ಟ್‌ಗಳ ಸಮಸ್ಯೆ ಆಲಿಸಿದ ಆನಂದ್ ಸಿಂಗ್..!
ಹೊಸಪೇಟೆ: ಪ್ರವಾಸಿ ತಾಣಗಳಲ್ಲಿ(Tourist Spot) ಸ್ವತಃ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ಪ್ರವಾಸಿಗರನ್ನು ನೇರ ಮುಖಾಮುಖಿಯಾಗಿ ಸಮೀಕ್ಷೆ ನಡೆಸಿ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಯೋಜನೆಗೆ ಕೈಹಾಕಿದ್ದಾರೆ!.
ಹೌದು, ಪ್ರವಾಸಿ ತಾಣಗಳ ಗ್ರೌಂಡ್ ರಿಪೋರ್ಟ್(Ground Report) ಹಾಗೂ ರಿಯಾಲಿಟಿ ಚೆಕ್‌ಅನ್ನು(Reality Check) ಸ್ವತಃ ಸಚಿವ ಆನಂದ್ ಸಿಂಗ್ ಅವರೇ ಮಾಡಿದ್ದಾರೆ. ಅಧಿಕಾರಿಗಳು ನೀಡುವ ಅಂಕಿ- ಅಂಶ ಹಾಗೂ ಕಾರಣಗಳನ್ನು ಪಟ್ಟಿ ಮಾಡಿಕೊಂಡು ಪ್ರವಾಸಿಗರಿಗೆ(Tourists) ಪೂರಕವಾದ ಯೋಜನೆಗಳನ್ನು ರೂಪಿಸಿ ಜಾರಿ ಮಾಡುವುದಕ್ಕಿಂತ ಸ್ವತಃ ಅವರೇ ದೇಶ- ವಿದೇಶಿ ಪ್ರವಾಸಿಗರನ್ನು ನೇರ ಭೇಟಿಯಾಗಿ ಮಾತನಾಡಿದ್ದರು. ಈ ಮೂಲಕ ನೈಜ ಸಮಸ್ಯೆ ಅರಿತುಕೊಂಡು ವಾಸ್ತವ ಯೋಜನೆ ರೂಪಿಸಿ ಜಾರಿ ಮಾಡುತ್ತ ಹೆಜ್ಜೆ ಹಾಕಿದ್ದಾರೆ.