Karnataka Politics: ‘ಸಿ.ಟಿ ರವಿ ನಿಮಗೆ ಮಾನ ಮರ್ಯಾದೆ ಇದ್ರೆ ನಿಮ್ಮ ಕೊಡುಗೆ ಏನು ಪಟ್ಟಿ ಕೊಡಿ‘

* ಬಿಜೆಪಿ ನಾಯಕ ಸಿಟಿ ರವಿ ವಿರುದ್ಧ ಕಾಂಗ್ರೆಸ್ ನಾಯಕರ ವಾಗ್ದಾಳಿ
* ಮೇಕೆದಾಟು ಯೋಜನೆ ಬಗ್ಗೆ ಸಿಟಿ ರವಿ ನಿಲುವು ಪ್ರಶ್ನಿಸಿದ ಎಂ ಲಕ್ಷ್ಮಣ್
* ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣರಿಂದಲೂ ವಾಗ್ದಾಳಿ

Congress Leaders Hits out at Chikkamagaluru BJP MLA CT ravi rbj

ಮೈಸೂರು, (ಡಿ.22): ಸಿ.ಟಿ ರವಿ(CT Ravi) ನಿಮ್ಮ ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಏನು ಪಟ್ಟಿ ಮಾಡಿ ಹೇಳಿ. ನಿಮಗೆ ಮಾನ ಮರ್ಯಾದೆ ಇದ್ದರೆ ಪಟ್ಟಿ ಕೊಡಿ ಎಂದು ಪಿಸಿಸಿ ವಕ್ತಾರ ಎಂ ಲಕ್ಷ್ಮಣ್ (M Lakshman) ಸವಾಲು ಹಾಕಿದ್ದಾರೆ.

ಮೈಸೂರಿನಲ್ಲಿ(Mysuru) ಇಂದು(ಬುಧವಾರ) ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಚಿಕ್ಕಮಗಳೂರುನಲ್ಲಿ(Chikkamagaluru) ಎರಡು ಕೆರೆ ಅಭಿವೃದ್ಧಿಗೆ (Development) ನಿರಂತರವಾಗಿ ಅನುದಾನ ಪಡೆಯುತ್ತಿದ್ದೀರಾ. ಕಳೆದ ವರ್ಷ 40ಕೋಟಿ ರೂ. ಅನುದಾನ ಪಡೆದಿದ್ದೀರಿ. ಏನು ಅಭಿವೃದ್ಧಿ ಮಾಡಿದ್ದೀರಿ ತಿಳಿಸಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ.ರವಿ ವಿರುದ್ಧ ವಾಗ್ದಾಳಿ ನಡೆಸಿದರು.

Percentage Politics: ಸಿಟಿ ರವಿ ಅಲ್ಲ ಲೂಟಿ ರವಿ: ಡಿಕೆ ಶಿವಕುಮಾರ್ ಡಿಚ್ಚಿ

ವಿವಾದಾತ್ಮಕ ಹೇಳಿಕೆಗಳಿಂದ ಮಾತ್ರ ನಿಮ್ಮನ್ನು ಗುರುತಿಸುವುದು. ಮೇಕೆದಾಟು ವಿಚಾರದಲ್ಲಿ ನಿಮ್ಮ ನಿಲುವು ಏನು? ತಮಿಳುನಾಡಿಗೆ ನೀವೇ ಉಸ್ತುವಾರಿ ವಹಿಸಿಕೊಂಡಿದ್ದೀರಿ. ನಿಮ್ಮ ನಿಲುವು ಏನು ಸ್ಪಷ್ಟಪಡಿಸಿ. ಅಣ್ಣಾಮಲೈ ಮೂಲಕ ನೀವೇ ಉಪವಾಸ ಸತ್ಯಾಗ್ರಹ ಮಾಡಿಸುತ್ತಿದ್ದೀರಿ. ನಾವು ಹಂಚಿಕೊಂಡು ತಿನ್ನುತ್ತೀವೆ ಅಂತೀರಿ ಎಂದು ಕಿಡಿಕಾರಿದರು.

ತಮಿಳುನಾಡಿನಲ್ಲಿ(Tamil Nadu) ರಾಜಕೀಯ ನೆಲೆ ಕಂಡುಕೊಳ್ಳಲು ಮೇಕೆದಾಟು ಯೋಜನೆ (Mekedatu Project) ಬಲಿ ಕೊಡುತ್ತಿದ್ದೀರಿ. ಬೆಂಗಳೂರು(Bengaluru) ಸೇರಿದಂತೆ ಹಲವು, ಜಲಾಶಯ ಪಟ್ಟಣಗಳಿಗೆ ಇದರಿಂದ ಅನುಕೂಲ ಆಗಲಿದೆ. ಇದು ನಿಮಗೆ ಇಷ್ಟಲ್ಲ. ನಿಮ್ಮ ರಾಜಕೀಯ ಸಲುವಾಗಿ ಈ ಯೋಜನೆ ಬಗ್ಗೆ ಚಕಾರ ಎತ್ತುತ್ತಿಲ್ಲ. ನಿಮ್ಮ ಮೋದಿ ಕರ್ನಾಟಕ ವಿಚಾರದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ. ನಿಮಗೆ ಮೇಕೆದಾಟು ಯೋಜನೆ ಮಾಡಲು ಕಷ್ಟ ಏನು.? ನಿಮ್ಮ ಯೋಗ್ಯತೆಗೆ ಒಂದು ಡ್ಯಾಂ ನಿಮ್ಮ ಮೋದಿ ನಿರ್ಮಾಣ ಮಾಡಿದ್ದಾರಾ ಹೇಳಿ..? ರಾಜಕೀಯ ಲಾಭಕ್ಕೆ ನಾವು ಚಳುವಳಿ ಮಾಡುತ್ತಿಲ್ಲ. ಮೇಕೆದಾಟು ಕಟ್ಟಬೇಕು ಎಂಬುದು ನಮ್ಮ ಉದ್ದೇಶ ಎಂದರು.

ಧ್ರುವನಾರಾಯಣ ವಾಗ್ದಾಳಿ
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಸಿ.ಟಿ. ರವಿಯನ್ನು ಲೂಟಿ ರವಿ ಎಂದು ಹೇಳುತ್ತಾರೆ. ಅವರು 4 ಬಾರಿ ಶಾಸಕ, 2 ಬಾರಿ ಸಚಿವರಾಗಿದ್ದರೂ ಅಭಿವೃದ್ಧಿ ಕೆಲಸ ಮಾಡಿಲ್ಲ ಎಂದು ಚಿಕ್ಕಮಗಳೂರಿನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಬುಧವಾರ ಹೇಳಿಕೆ ನೀಡಿದ್ದಾರೆ. ಚಿಕ್ಕಮಗಳೂರು ಕ್ಷೇತ್ರ ಮೂಲಸೌಕರ್ಯಗಳಿಂದಲೂ ವಂಚಿತವಾಗಿದೆ. ಧರ್ಮ, ವ್ಯಕ್ತಿಗಳನ್ನು ಗುರಿಯಾಗಿಸಿ ಹೇಳಿಕೆ ನೀಡುವುದೇ ರವಿ ಕಾಯಕ. ಸಿ.ಟಿ.ರವಿ ಒಬ್ಬ ವಿಕೃತ ಮನಸ್ಸುಳ್ಳಂತಹ ವ್ಯಕ್ತಿ ಎಂದು ಆರ್. ಧ್ರುವನಾರಾಯಣ ಬಿಜೆಪಿ ನಾಯಕ ಸಿ.ಟಿ ರವಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಬೆಂಕಿ ಹಚ್ಚುವ ಮನಸ್ಥಿತಿಯ ಪಕ್ಷವೆಂದು ಸಿ.ಟಿ ರವಿ ಆರೋಪಿಸಿದ್ದಾರೆ. ನಿಮಗೆ ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ. ಬಿಜೆಪಿ ಅಂದ್ರೆ ಬೆಂಕಿ ಹಚ್ಚುವ ಜನರ ಪಕ್ಷವೆಂದು ಹೇಳಬೇಕಾಗುತ್ತೆ. ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗಿ 4 ತಿಂಗಳೊಳಗೆ 43 ಕೇಸ್​ ಹಿಂಪಡೆದಿದ್ದರು. 43 ಕೇಸ್​ಗಳ ಪೈಕಿ ಮೊದಲ ಪ್ರಕರಣವೇ ಸಿ.ಟಿ. ರವಿ ಅವರದು. ಬಿಜೆಪಿ ಶಾಸಕರ ಬೆಂಕಿ, ದೌರ್ಜನ್ಯ ಪ್ರಕರಣಗಳನ್ನು ಹಿಂಪಡೆದಿದ್ದರು. ಇದರಲ್ಲೇ ಗೊತ್ತಾಗುತ್ತೆ ಯಾರು ಕೇಸ್​ನಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಯಾರು, ಯಾವ ಕೇಸ್​ ಹಿಂಪಡೆದರು ಎಂದು ಜನರಿಗೆ ಗೊತ್ತಿದೆ ಎಂದು ಧ್ರುವ ನಾರಾಯಣ್ ಟೀಕಿಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ 2 ವರ್ಷ ಜೈಲಿನಲ್ಲಿದ್ದರು. ನಮ್ಮ ರಾಜ್ಯದಲ್ಲಿ ಸಿಎಂ, ಸಚಿವರಾಗಿದ್ದವರು ಜೈಲುಪಾಲಾಗಿದ್ದರು. ನಿಮ್ಮ ಮನೆಯ ವಾತಾವರಣವೇ ಕೊಳೆತು ನಾರುತ್ತಿದೆ ಎಂದು ಕಿಡಿ ಕಾರಿದ್ದಾರೆ. ಕಾಂಗ್ರೆಸ್​ ಬಗ್ಗೆ ನಿಮಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Latest Videos
Follow Us:
Download App:
  • android
  • ios