ಮೂಲಗಳ ಪ್ರಕಾರ ಸುಮಾರು 30ರಿಂದ 35 ಮಂದಿ ಶಾಸಕರ ಪಟ್ಟಿ ಈಗಾಗಲೇ ಆಖೈರುಕೊಂಡಿದೆ. ಆದರೆ, ಹೈಕಮಾಂಡ್ ಸೂಚನೆಯಂತೆ ಕಳೆದ ವಿಧಾನಸಭಾ ಚುನಾವಣೆ ವೇಳೆ ಟಿಕೆಟ್ ವಂಚಿತರಾಗಿ ಹೈಕಮಾಂಡ್ ನಿಂದ ಭರವಸೆ ಪಡೆದಿದ್ದ ಸುಮಾರು 15ರಿಂದ 20 ಮಂದಿಗೂ ನಿಗಮ ಮಂಡಳಿಯಲ್ಲಿ ಅವಕಾಶ ನೀಡಲು ಕಾರ್ಯಕರ್ತರ ಪಟ್ಟಿ ಪರಿಷ್ಕರಿಸುವ ಪ್ರಕ್ರಿಯೆಯನ್ನು ಮೂವರು ನಾಯಕರು ನಡೆಸಿದರು ಎನ್ನಲಾಗಿದೆ.
ಬೆಂಗಳೂರು(ಜ.10): ನಿಗಮ ಮಂಡಳಿ ನೇಮಕ ವಿಚಾರ ಕುರಿತು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯ ಡಿ.ಕೆ. ಶಿವಕುಮಾರ್ ಅವರೊಂದಿಗೆ ಮಂಗಳವಾರ ಸುದೀರ್ಘ ಚರ್ಚೆ ನಡೆಸಿದ್ದು, ಕಾರ್ಯಕರ್ತರ ಪಟ್ಟಿಯನ್ನು ಪರಿಷ್ಕರಿಸುವ ಪ್ರಕ್ರಿಯೆ ನಡೆಸಿದರು ಎಂದು ಉನ್ನತ ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ ಸುಮಾರು 30ರಿಂದ 35 ಮಂದಿ ಶಾಸಕರ ಪಟ್ಟಿ ಈಗಾಗಲೇ ಆಖೈರುಕೊಂಡಿದೆ. ಆದರೆ, ಹೈಕಮಾಂಡ್ ಸೂಚನೆಯಂತೆ ಕಳೆದ ವಿಧಾನಸಭಾ ಚುನಾವಣೆ ವೇಳೆ ಟಿಕೆಟ್ ವಂಚಿತರಾಗಿ ಹೈಕಮಾಂಡ್ ನಿಂದ ಭರವಸೆ ಪಡೆದಿದ್ದ ಸುಮಾರು 15ರಿಂದ 20 ಮಂದಿಗೂ ನಿಗಮ ಮಂಡಳಿಯಲ್ಲಿ ಅವಕಾಶ ನೀಡಲು ಕಾರ್ಯಕರ್ತರ ಪಟ್ಟಿ ಪರಿಷ್ಕರಿಸುವ ಪ್ರಕ್ರಿಯೆಯನ್ನು ಮೂವರು ನಾಯಕರು ನಡೆಸಿದರು ಎನ್ನಲಾಗಿದೆ. ಮೂಲಗಳ ಪ್ರಕಾರ ಬಹುತೇಕ ಪ್ರಮುಖರ ಪಟ್ಟಿ ಯೂಪರಿಷ್ಕರಣೆಗೊಂಡಿದೆ. ಕೆಲ ಸೇರ್ಪಡೆ ಹಿನ್ನೆಲೆಯಲ್ಲಿ ಮತ್ತೊಂದು ಸಭೆ ಈ ದಿಸೆಯಲ್ಲಿ ನಡೆಯಬಹುದು.
ಅಸೆಂಬ್ಲಿ ಟಿಕೆಟ್ ವಂಚಿತ 15 ಜನಕ್ಕೆ ನಿಗಮ-ಮಂಡಳಿ ಪಟ್ಟ?
ಮತ್ತೊಂದು ಸಭೆ ನಡೆಸಿ ಅಂತಿಮವಾಗಿ ಪಟ್ಟಿಯನ್ನು ಅಂತಿಮಗೊಳಿಸಿ ಹೈಕಮಾಂಡ್ ರವಾನಿಸುವ ಸಾಧ್ಯತೆ ಯಿದೆ. ಅನಂತರ ಹೈಕಮಾಂಡ್ ಈ ಪಟ್ಟಿಗೆ ಅನುದೋ ದನೆ ನೀಡಲಿದೆ. ಒಂದು ಮೂಲದಪ್ರಕಾರಜ.15ರೊಳಗೆ ಈ ಪ್ರಕ್ರಿಯೆ ನಡೆಯಲಿದೆ ಎಂದು ಹೇಳಿದರೆ, ಮತ್ತೊಂದು ಮೂಲವು ನಿಗಮ ಮಂಡಳಿ ನೇದುಕ ಮತ್ತಷ್ಟು ವಿಳಂಬವಾಗಲಿದೆ ಎಂದು ಹೇಳುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಸ್ತುದಾರಿ ಸುರ್ಜೇವಾಲ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡೆಸಿದ ಸಭೆಯಲ್ಲಿ ನಿಗಮ ಮಂಡಳಿ ನೇಮಕ ವಿಚಾರವೇ ಪ್ರಧಾನವಾಗಿ ಚರ್ಚೆಯಾಗಿದೆ. ಸಭೆಯಲ್ಲಿ ಸುಮಾರು ಒಂದು ತಾಸು ಮುಖ್ಯಮಂತ್ರಿ ಯವರು ಪಾಲ್ಗೊಂಡಿದ್ದು, ಆನಂತರ ಸಭೆಯಿಂದ ತೆರಳಿದ್ದಾರೆ. ಇದಾದ ನಂತರ ಸುರ್ಜೇವಾಲ ಹಾಗೂ ಶಿವಕುಮಾರ್ ಅವರು ಒಂದೂವರೆ ತಾಸು ಪ್ರತ್ಯೇಕವಾಗಿ ಚರ್ಚೆ ನಡೆಸಿದ್ದು, ಈ ಚರ್ಚೆ ವೇಳೆ ಯಾದ ವಿಚಾರಗಳು ಪ್ರಸ್ತಾಪವಾದವು ಎಂಬುದು ಸ್ಪಷ್ಟವಿಲ್ಲ.
ಮುಂದಿನ ಸಂಪುಟದಲ್ಲಿ ಮಿನಿಸ್ಟರ್ ಆಗುತ್ತಾರೆ ಶಿವಲಿಂಗೇಗೌಡ: ಸಚಿವ ರಾಜಣ್ಣ ಭವಿಷ್ಯ
ಮುಂದಿನ ತಿಂಗಳೇ ಕಾಂಗ್ರೆಸ್ ಅಭ್ಯರ್ಥಿ ಪಟ್ಟಿ ಪ್ರಕಟಕ್ಕೆ ಚರ್ಚೆ ಸುರ್ಜೇವಾಲ, ಸಿದ್ದು, ಡಿಕೆಶಿ ಸಭೆಯಲ್ಲಿ ಮಾತುಕತೆ
ಬೆಂಗಳೂರು: ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರನೇತೃತ್ವದಲ್ಲಿ ಮಂಗಳವಾರ ನಡೆದ ರಾಜ್ಯ ನಾಯಕರ ಸಭೆಯಲ್ಲಿ ಲೋಕಸಭಾ ಚುನಾವಣೆಗೆ ರಾಜ್ಯದ ಎಲ್ಲ 28 ಕ್ಷೇತ್ರಗಳಿಗೂ ಫೆಬ್ರವರಿ ವೇಳೆಗೆ ಪಕ್ಷದ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸುವ ಬಗ್ಗೆ ಗಂಭೀರ ಚರ್ಚೆ ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ನಡೆದ ಸಭೆಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಹಳ ಬೇಗ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿ ಅವರು ಕ್ಷೇತ್ರಗಳಲ್ಲಿ ಕೆಲಸ ಮಾಡಲು ಅವಕಾಶ ನೀಡಿದ್ದರಿಂದ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಲು ಸಾಧ್ಯವಾ ಯಿತು. ಅದೇ ರೀತಿ ಲೋಕಸಭಾ ಚುನಾವಣೆ ಯಲ್ಲೂ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲು ಯಾವುದೇ ಕಾರಣಕ್ಕೂ ತಡ ಮಾಡದೆ ಫೆಬ್ರವರಿ ವೇಳೆಗೆ ಪಟ್ಟಿ ಅಂತಿಮಗೊಳಿಸಿ ಪ್ರಕಟಿಸುವುದು ಸೂಕ್ತ ಎಂಬ ಅಭಿಪ್ರಾಯವನ್ನು ನಾಯಕರು ವ್ಯಕ್ತಪಡಿಸಿದರು ಎಂದು ತಿಳಿದು ಬಂದಿದೆ.
ಟಿಕೆಟ್ ಆಕಾಂಕ್ಷಿಗಳ ಜತೆ ದಿಲ್ಲಿಗೆ: ಪರಂ
ಬೆಂಗಳೂರು: ಲೋಕಸಭಾ ಚುನಾವಣೆಗೆ ರಾಜ್ಯದ 28 ಕ್ಷೇತ್ರಗಳಿಗೆ ಸಂಯೋಜನರನ್ನಾಗಿ ನೇಮಿಸಿ ರುವ 28 ಸಚಿವರುಗಳು ಜ.1ಕ್ಕೆ ದೆಹಲಿಗೆ ಬರುವಂತೆ ಹೈಕಮಾಂಡ್ ಸೂಚಿಸಿದೆ. ಪ್ರತಿ ಕ್ಷೇತ್ರದ ಆಕಾಂಕ್ಷಿಗಳ ಪಟ್ಟಿಯೊಂದಿಗೆ ಹೋಗು ತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರ ಮಾತನಾಡಿದ ಅವರು, ಹೈಕಮಾಂಡ್ ಪ್ರತಿ ಕ್ಷೇತ್ರ ಮಾಹಿತಿ ಕೇಳಿದೆ. ಅಂತಿಮವಾಗಿ ಅಭ್ಯರ್ಥಿಯ ನಿರ್ಧಾರವನ್ನು ಹೈಕಮಾಂಡ್ ಮಾಡುತ್ತೆ ಎಂದರು.
