ಜನಾದೇಶದಿಂದ ಬಿಜೆಪಿ ಅಧಿಕಾರಕ್ಕೆ ಬರಲಿಲ್ಲ: ವಿ.ಎಸ್‌.ಉಗ್ರಪ್ಪ

ರಾಜ್ಯದಲ್ಲಿ ಎಂದೂ ಕೂಡ ಬಿಜೆಪಿ ಜನಾದೇಶದಿಂದ ಅಧಿಕಾರಕ್ಕೆ ಬರಲಿಲ್ಲ. ಆಪರೇಷನ್‌ ಕಮಲದೊಂದಿಗೆ ಕಳ್ಳ ಮಾರ್ಗದಲ್ಲಿ ಅಧಿಕಾರ ಹಿಡಿಯಿತು ಎಂದು ಕಾಂಗ್ರೆಸ್‌ ವಕ್ತಾರ ವಿ.ಎಸ್‌.ಉಗ್ರಪ್ಪ ಟೀಕಿಸಿದರು. 

Congress Leader VS Ugrappa Slams On BJP Govt At Mandya gvd

ಮಳವಳ್ಳಿ (ಫೆ.12): ರಾಜ್ಯದಲ್ಲಿ ಎಂದೂ ಕೂಡ ಬಿಜೆಪಿ ಜನಾದೇಶದಿಂದ ಅಧಿಕಾರಕ್ಕೆ ಬರಲಿಲ್ಲ. ಆಪರೇಷನ್‌ ಕಮಲದೊಂದಿಗೆ ಕಳ್ಳ ಮಾರ್ಗದಲ್ಲಿ ಅಧಿಕಾರ ಹಿಡಿಯಿತು ಎಂದು ಕಾಂಗ್ರೆಸ್‌ ವಕ್ತಾರ ವಿ.ಎಸ್‌.ಉಗ್ರಪ್ಪ ಟೀಕಿಸಿದರು. ಪಟ್ಟಣದ ಅನಂತರಾಂ ಸರ್ಕಲ್‌ನಲ್ಲಿ ಶನಿವಾರ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿ, 2008 ಮತ್ತು 2018ರಲ್ಲಿ ಎರಡು ಬಾರಿಯೂ ಬಿಜೆಪಿಗೆ ರಾಜ್ಯದಲ್ಲಿ ಜನಾದೇಶ ಸಿಕ್ಕಿರಲಿಲ್ಲ. ಆಪರೇಷನ್‌ ಕಮಲದ ಮೂಲಕವೇ ಅಧಿಕಾರ ನಡೆಸುವ ಅವಕಾಶವನ್ನು ಪಡೆದುಕೊಂಡರು. ಜೆಡಿಎಸ್‌ ಕೂಡ ಜನಾದೇಶ ಪಡೆದು ಅಧಿಕಾರಕ್ಕೇರಲಿಲ್ಲ. ಅವಕಾಶವಾದಿತನದಿಂದ ಅಧಿಕಾರವನ್ನು ಹಿಡಿಯಿತು. 

ಹೀಗೆ ಎರಡು ಪಕ್ಷಗಳು ಜನವಿಶ್ವಾಸವನ್ನು ಗಳಿಸಲಿಲ್ಲ. ಅಭಿವೃದ್ಧಿಗೆ ಯಾವುದೇ ಕೊಡುಗೆ ನೀಡಲಿಲ್ಲ ಎಂದು ದೂರಿದರು. ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಅಧಿಕಾರ ಇರುವುದು ಕಾಂಗ್ರೆಸ್‌ ಪಕ್ಷಕ್ಕೆ ಮಾತ್ರ. ಕುಟುಂಬದಿಂದ 10 ಜನರನ್ನು ರಾಜಕಾರಣಕ್ಕೆ ತರುವ ಜೆಡಿಎಸ್‌ಗೆ ಜನಪರವಾದ ಯಾವುದೇ ಕಾಳಜಿ ಇಲ್ಲ. ಇದು ಅವರ ಸ್ವಾರ್ಥ ರಾಜಕಾರಣಕ್ಕೆ ಸಾಕ್ಷಿ ಎಂದು ಆರೋಪಿಸಿದರು. ಸಮಾರಂಭದಲ್ಲಿ ವಿಧಾನ ಪರಿಷತ್‌ ಸದಸ್ಯ ದಿನೇಶ್‌ ಗೂಳಿಗೌಡ, ಯುವ ಘಟಕದ ಅಧ್ಯಕ್ಷ ವಿಜಯಕುಮಾರ್‌, ಮುಖಂಡರಾದ ಗಣಿಗ ರವಿ ಕುಮಾರ್‌, ಕನಕಪುರದ ವಿಶ್ವನಾಥ್‌, ಕೆ.ಜೆ.ದೇವರಾಜು, ಎಸ್‌.ಪಿ.ಸುಂದರ್‌ರಾಜ, ಡಾ.ಮೂರ್ತಿ, ಎಂ.ಬಿ.ಮಲ್ಲಯ್ಯ, ಸುಜಾತಾ ಕೆ.ಎಂ.ಪುಟ್ಟು, ಸುಷ್ಮಾ ರಾಜು ಇದ್ದರು.

ಜೆಡಿಎಸ್‌ ಅಧಿಕಾರಕ್ಕೆ ಬರೋದು ಕನಸು: ಡಿ.ಕೆ.ಶಿವಕುಮಾರ್‌

ಅವಕಾಶವಾದಿ ರಾಜಕೀಯ ಪಕ್ಷ: ದೇಶ ಹಾಗೂ ರಾಜ್ಯದಲ್ಲಿ ಯಾವುದಾದರೂ ವಚನ ಭ್ರಷ್ಟಹಾಗೂ ಅವಕಾಶವಾದಿ ರಾಜಕೀಯ ಪಕ್ಷ ಇದ್ದರೆ ಅದು ಬಿಜೆಪಿ ಮಾತ್ರ. ಪ್ರಧಾನಿ ಮೋದಿ ಕೂಡ ಒಬ್ಬ ಅವಕಾಶವಾದಿ ರಾಜಕಾರಣಿಯೆಂದು ಕಾಂಗ್ರೆಸ್‌ ವಕ್ತಾರ ಹಾಗೂ ಮಾಜಿ ಸಂಸದ ವಿ.ಎಸ್‌.ಉಗ್ರಪ್ಪ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್‌ ಗಾಳಿ ಇದ್ದು ಬಿಜೆಪಿ ವಿರೋದ ಅಲೆ ಇದೆ. ಬರುವ ಚುನಾವಣೆಯಲ್ಲಿ ಜನ ವಿರೋಧಿ ಬಿಜೆಪಿಯನ್ನು ಮನೆಗೆ ಕಳುಹಿಸಲು ಜನ ತುದಿಗಾಲಲ್ಲಿದ್ದಾರೆ. ಕಾಂಗ್ರೆಸ್‌ಗೆ ಕನಿಷ್ಠ 140 ಸೀಟು ಬರುವುದು ಖಚಿತ ಎಂದರು.

ಬಿಜೆಪಿಯ ಹುಸಿ ಭರವಸೆಗಳು: ವಿದೇಶದಲ್ಲಿರುವ ಕಪ್ಪು ಹಣ ತರುತ್ತೇವೆ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಠಿಸುತ್ತೇವೆ, ಬೆಲೆ ಏರಿಕೆ ನಿಯಂತ್ರಿಸುತ್ತೇವೆಂಬ ಬಿಜೆಪಿ ಭರವಸೆಗಳು ಹುಸಿಯಾಗಿವೆ. ಬಿಪಿಎಲ್‌ ಕುಟುಂಬದ ಪ್ರತಿ ಕುಟುಂಬದ ಗೃಹಿಣಿಗೆ ಮಾಸಿಕ 2000 ರು, ಪ್ರತಿ ಕುಟುಂಬಕ್ಕೆ 200 ಯೂನಿಟ್‌ ಉಚಿತ ಕರೆಂಟ್‌ ಕೊಡುತ್ತೇವೆಂದು ಕಾಂಗ್ರೆಸ್‌ ಘೋಷಣೆ ಮಾಡುತ್ತಿದ್ದಂತೆ ಬಿಜೆಪಿಗೆ ಭಯ, ನಡುಕು ಶುರುವಾಗಿದೆ. ನಾವು ಕೊಟ್ಟಮಾತು ತಪ್ಪವರಲ್ಲ. ನುಡಿದಂತೆ ನಡೆದಿರುವ ಪಕ್ಷ ಇದ್ದರೆ ಕಾಂಗ್ರೆಸ್‌ ಮಾತ್ರ. ರಾಜ್ಯದಲ್ಲಿ ನೆರೆ ಸಂಕಷ್ಟ, ಅತಿವೃಷ್ಟಿ, ಕೋವಿಡ್‌ ಸಂಕಷ್ಟದಲ್ಲಿ ರೈತರು, ಕಾರ್ಮಿಕರು ತೊಂದರೆ ಇದ್ದಾಗ ಮೋದಿ ಏಕೆ ರಾಜ್ಯಕ್ಕೆ ಬರಲಿಲ್ಲ. 

ಈ ತಿಂಗಳಲ್ಲೇ ಜೆಡಿಎಸ್‌ 2ನೇ ಪಟ್ಟಿ ಬಿಡುಗಡೆ: ಎಚ್‌.ಡಿ.ಕುಮಾರಸ್ವಾಮಿ

ಚುನಾವಣೆ ಇದೆಯೆಂದು ಪದೇ ಪದೇ ಕರ್ನಾಟಕಕ್ಕೆ ಬರುವ ಉದ್ದೇಶವೇನು, ಇದು ಅವಕಾಶವಾದಿ ರಾಜಕಾರಣ ಅಲ್ಲವೇ ಎಂದು ವಿ.ಎಸ್‌.ಉಗ್ರಪ್ಪ ಪ್ರಶ್ನಿಸಿದರು. 100 ದಿನ ಅವಕಾಶ ಕೊಡಿ ಕಪ್ಪು ಹಣ ತರುತ್ತೇವೆ. ರೈತರ ಆದಾಯ ದ್ವಿಗುಣಗೊಳಿಸುತ್ತೇವೆ. ಬೆಲೆ ಏರಿಕೆ ನಿಯಂತ್ರಿಸ್ತೀವಿ ಎಂದು ಪ್ರಧಾನಿ ಮೋದಿ ಘೋಷಿಸಿದ್ದರು. ಆದರೆ ಅವರ ಕೈಯಲ್ಲಿ ಏನು ಆಗಲಿಲ್ಲ. ರಾಜ್ಯದ ಜನತೆ ಅವರಿಗೆ ಪಾಠ ಕಲಿಸುವ ದಿನಗಳು ಬಂದಿವೆ. ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರದ ಜನ ವಿರೋಧಿ ನೀತಿಗಳ ಬಗ್ಗೆ ಅರಿವು ಮೂಡಿಸಲು ರಾಜ್ಯದಲ್ಲಿ ಕಾಂಗ್ರೆಸ್‌ ಪ್ರಜಾಧ್ವನಿ ಯಾತ್ರೆ ನಡೆಸುತ್ತಿದೆಯೆಂದು ಉಗ್ರಪ್ಪ, ಬಿಜೆಪಿ ಕೊಟ್ಟಯಾವ ಭರವಸೆ ಕೂಡ ಈಡೇರಿಸಿಲ್ಲ ಎಂದರು.

Latest Videos
Follow Us:
Download App:
  • android
  • ios