ಕಾಂಗ್ರೆಸ್ ಶಾಸಕ ಜಮೀರ್‌ ಅಹಮದ್‌ಗೆ ಇದೀಗ ಅಲ್ಲಿಂದ ಬುಲಾವ್ ಬಂದಿದೆ.  ಬಂದು ಭೇಟಿಯಾಗುವಂತೆ ಆಹ್ವಾನಿಸಲಾಗಿದೆ. 

ಬೆಂಗಳೂರು (ಮಾ.01):  ಮೈಸೂರು ಮಹಾನಗರ ಪಾಲಿಕೆ ಮೇಯರ್‌ ಚುನಾವಣೆಗೆ ಸಂಬಂಧಿಸಿ ಕಾಂಗ್ರೆಸ್‌ ಶಾಸಕರಾದ ಜಮೀರ್‌ ಅಹಮದ್‌ ಮತ್ತು ತನ್ವೀರ್‌ ಸೇಠ್‌ ಅವರ ನಡುವೆ ನಡೆಯುತ್ತಿರುವ ಮುಸುಕಿನ ಗುದ್ದಾಟವನ್ನು ಕಾಂಗ್ರೆಸ್‌ ಹೈಕಮಾಂಡ್‌ ಗಂಭೀರವಾಗಿ ಪರಿಗಣಿಸಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಕುರಿತಾಗಿ ಶಾಸಕ ಜಮೀರ್‌ ಅವರನ್ನು ಎಐಸಿಸಿ ಪ್ರಧಾನ ಸಂಘಟನಾ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಅವರು ತಮ್ಮ ನಿವಾಸಕ್ಕೆ ಕರೆಸಿ ಚರ್ಚೆ ನಡೆಸಿದ್ದಾರೆ. 

ಜಮೀರ್ ಮನೆಗೆ ರಾಬರ್ಟ್... ಯಜಮಾನ ಭೇಟಿ ಕೊಟ್ಟ ಉದ್ದೇಶ ..

ದೆಹಲಿಯಯಲ್ಲಿ ಭಾನುವಾರ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣ್‌ದೀಪ್‌ ಸಿಂಗ್‌ ಸುರ್ಜೆವಾಲಾ ಅವರ ಪುತ್ರನ ವಿವಾಹ ಸಮಾರಂಭಕ್ಕೆ ಶಾಸಕ ಜಮೀರ್‌ ಆಗಮಿಸಿದ್ದರು. ಈ ವೇಳೆ ವೇಣುಗೋಪಾಲ್‌ ಅವರು ತಮ್ಮ ಮನೆಗೆ ಬಂದು ಭೇಟಿಯಾಗುವಂತೆ ಜಮೀರ್‌ ಅವರಿಗೆ ಸೂಚಿಸಿದ್ದರು.