ಎಲೆಕ್ಷನ್‌ ಬಂದಾಗ ಮಾತ್ರ ಬಿಎಸ್‌ವೈಗೆ ಮುಸ್ಲಿಮರು ನೆನಪಾಗ್ತಾರೆ: ಖಾದರ್‌

*   ವಿಚಾರಗಳಿಂದ ಬಿಜೆಪಿ ಆಡಳಿತದ ವಿರುದ್ಧ ಬೇಸತ್ತ ಜನ
*   ಕಾಂಗ್ರೆಸ್‌ ಸರ್ಕಾರದ ಯೋಜನೆಗಳಿಗೆ ಕತ್ತರಿ ಹಾಕಿದ ಬಿಜೆಪಿ ಸರ್ಕಾರ
*   ಬಿಜೆಪಿ ಸರ್ಕಾರ ಬಂದು ಮೂರು ವರ್ಷಗಳಾದರೂ ಒಂದೇ ಒಂದು ಮನೆಯನ್ನೂ ಕಟ್ಟಿಕೊಟ್ಟಿಲ್ಲ 

Congress Leader UT Khader Slams on BS Yediyurappa grg

ಸಿಂದಗಿ(ಅ. 23): ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ(BS Yediyurappa) ಅವರಿಗೆ ಚುನಾವಣೆಗಳು(Election) ಬಂದಾಗ ಮಾತ್ರ ಮುಸ್ಲಿಂ ಸಮುದಾಯದ ಬಗ್ಗೆ ನೆನಪಾಗುತ್ತದೆ ಎಂದು ಮಾಜಿ ಸಚಿವ ಯು.ಟಿ.ಖಾದರ್‌(UT Khader) ಟೀಕಿಸಿದ್ದಾರೆ. 

ಸಿಂದ​ಗಿಯಲ್ಲಿ(Sindagi) ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅವರಿಗೆ ಮುಸ್ಲಿಮರ(Muslim) ಬಗ್ಗೆ ಕಾಳಜಿ ಇದ್ದರೆ ಕಾಂಗ್ರೆಸ್‌(Congress) ಸರ್ಕಾರ ನೀಡಿರುವ ಶಾದಿಭಾಗ್ಯವನ್ನು ವಿರೋಧಿಸಿದ್ದೇಕೆ? ಅಲ್ಪಸಂಖ್ಯಾತರಿಗೆ(Minorities) ಮೀಸಲಿಟ್ಟ ಬಜೆಟ್‌ನ(Budget) ಗಾತ್ರ ಕಡಿತಗೊಳಿಸಿದ್ದೇಕೆ ಎಂದು ಪ್ರಶ್ನಿಸಿದರು. ದೇಶದ ಜನ ನಿತ್ಯ ಬೆಲೆ ಏರಿಕೆ, ಕೋಮುವಾದ, ದಲಿತರ ಮೇಲಿನ ದೌರ್ಜನ್ಯ ಮತ್ತಿತರ ವಿಚಾರಗಳಿಂದ ಬಿಜೆಪಿ(BJP) ಆಡಳಿತದ ವಿರುದ್ಧ ಬೇಸತ್ತಿದ್ದಾರೆ ಎಂದು ಹೇಳಿದ್ದಾರೆ.

ಅ​ನ್ನ​ಭಾಗ್ಯ ಅಕ್ಕಿ ನೀಡಿದ್ದು ಸಿದ್ದು ಅಲ್ಲ, ಕೇಂದ್ರ: ಯಡಿಯೂರಪ್ಪ

ಕಾಂಗ್ರೆಸ್‌ ಸರ್ಕಾರಾವಧಿಯಲ್ಲಿ ಜಾರಿಗೆ ತಂದ ಅನೇಕ ಬಡವರ ಪರ ಯೋಜನೆಗಳಿಗೆ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಕತ್ತರಿ ಹಾಕಲಾಗಿದೆ. ನಮ್ಮ ಸರ್ಕಾರದ ಅವಧಿಯಲ್ಲಿ 18 ಲಕ್ಷ ಬಡವರಿಗೆ ಮನೆ ವಿತರಿಸಲಾಗಿದೆ. ಆದರೆ, ಬಿಜೆಪಿ ಸರ್ಕಾರ ಬಂದು ಮೂರು ವರ್ಷಗಳಾದರೂ ಒಂದೇ ಒಂದು ಮನೆಯನ್ನೂ ಕಟ್ಟಿಕೊಟ್ಟಿಲ್ಲ ಎಂದು ತಿಳಿಸಿದ್ದಾರೆ. 

ಹಾನಗಲ್‌ ಕ್ಷೇತ್ರದಲ್ಲಿರುವ ಅಭ್ಯರ್ಥಿಗಳು: 

ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳು: ನಿಯಾಜ್ ಶೇಖ್ (ಜೆಡಿಎಶ್), ಶಿವರಾಜ ಸಜ್ಜನರ (ಬಿಜೆಪಿ), ಶ್ರೀನಿವಾಸ ಮಾನೆ (ಕಾಂಗ್ರೆಸ್), ಉಡಚಪ್ಪ ಉದ್ದನಕಾಲ (ಕರ್ನಾಟಕ ರಾಷ್ಟ್ರ ಸಮಿತಿ), ಫಕ್ಕೀರಗೌಡ ಶಂಕರಗೌಡ ಗಾಜಿಗೌಡ್ರ (ರೈತ ಭಾರತ ಪಕ್ಷ), ತಳವಾರ ಶಿವಕುಮಾರ (ಲೋಕಶಕ್ತಿ ಪಕ್ಷ), ಉಮೇಶ ಕೃಷ್ಣಪ್ಪ ದೈವಜ್ಞ (ಪಕ್ಷೇತರ), ಸಿದ್ದಪ್ಪ ಕಲ್ಲಪ್ಪ ಪೂಜಾರ (ಪಕ್ಷೇತರ), ಎಸ್ಎಸ್.ದೊಡ್ಡ ಲಿಂಗಣ್ಣನವರ (ಪಕ್ಷೇತರ), ಸೋಮಶೇಖರ ಮಹದೇವಪ್ಪ ಕೋತಂಬರಿ (ಪಕ್ಷೇತರ), ಹೊನ್ನಪ್ಪ ಹನುಮಂತಪ್ಪ ಅಕ್ಕಿವಳ್ಳಿ (ಪಕ್ಷೇತರ) 

ಸಿಂದಗಿಯಲ್ಲಿ ಕ್ಷೇತ್ರದಲ್ಲಿರುವ ಅಭ್ಯರ್ಥಿಗಳು: 

ಇನ್ನು ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಆರು ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಅಶೋಕ ಮನಗೊಳಿ(ಕಾಂಗ್ರೆಸ್‌), ರಮೇಶ್ ಬೂಸನೂರ್(ಬಿಜೆಪಿ), ನಜಿಯಾ ಅಂಗಡಿ(ಜೆಡಿಎಸ್), ಡಾ. ಸುನಿಲ್‌ ಕುಮಾರ್‌ ಹೆಬ್ಬಿ(ಕರ್ನಾಟಕ ರಾಷ್ಟ್ರ ಸಮಿತಿ) ಹಾಗೂ ಜಿಲಾನಿ ಗುಡುಸಾಬ್‌ ಮುಲ್ಲಾ, ದೀಪಿಕಾ ಎಸ್‌. ಪಡಸಲಗಿ ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ. 

ಹಾನಗಲ್‌ ಹಾಗೂ ಸಿಂದಗಿ ವಿಧಾನಸಭಾ ಕ್ಷೇತ್ರಗಳಿಗೆ ಅ. 30ರಂದು ಮತದಾನ ನಡೆಯಲಿದ್ದು ನ.2ರಂದು ಫಲಿತಾಂಶ ಹೊರಬೀಳಲಿದೆ. 

Latest Videos
Follow Us:
Download App:
  • android
  • ios