ಸಿಎಂ ಬದಲಾವಣೆ ಆಗುತ್ತಾರೋ ಇಲ್ಲವೋ ಅನ್ನೋದನ್ನ ಬಿಜೆಪಿ ರಾಜ್ಯಾಧ್ಯಕ್ಷರು ಸ್ಪಷ್ಟಪಡಿಸಲಿ ಮಾಜಿ ಸಚಿವ ಯು.ಟಿ.ಖಾದರ್ ಸಿಎಂ ಬದಲಾವನೆ ವಿಚಾರಕ್ಕೆ ಪ್ರತಿಕ್ರಿಯೆ ನಳಿನ್ ಕುಮಾರ್ ಆಡಿಯೋ ಅಸಲಿಯೋ ನಕಲಿಯೋ ಅಂತ ಸಿಎಂ ಹೇಳಲಿ
ಮಂಗಳೂರು (ಜು.20) : ಸಿಎಂ ಬದಲಾವಣೆ ಆಗುತ್ತಾರೋ ಇಲ್ಲವೋ ಅನ್ನೋದನ್ನ ಬಿಜೆಪಿ ರಾಜ್ಯಾಧ್ಯಕ್ಷರು ಸ್ಪಷ್ಟಪಡಿಸಲಿ ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದರು.
ಮಂಗಳೂರಿನಲ್ಲಿಂದು ಮಾತನಾಡಿದ ಮಾಜಿ ಸಚಿವ ಖಾದರ್ ನಾನು ಸಿದ್ದರಾಮಯ್ಯರಷ್ಟು ದೊಡ್ಡ ನಾಯಕ ಅಲ್ಲ, ಅವರು ಸೀನಿಯರ್ ಲೀಡರ್. ಹೀಗಾಗಿ ಅವರು ಬೇರೆ ಬೇರೆ ಮೂಲಗಳ ಮಾಹಿತಿ ಪ್ರಕಾರ ಹೇಳುತ್ತಾ ಇದ್ದಾರೆ. ನಳಿನ್ ಕುಮಾರ್ ಆಡಿಯೋ ಅಸಲಿಯೋ ನಕಲಿಯೋ ಅಂತ ಸಿಎಂ ಹೇಳಲಿ. ಆ ಬಗ್ಗೆ ತನಿಖೆ ನಡೆಸಿ ಮುಖ್ಯಮಂತ್ರಿ ಜನರಿಗೆ ಹೇಳಲಿ ಎಂದರು.
ಜನರಿಗೆ ಗೊಂದಲ ಆಗದಂತೆ ಇಬ್ಬರೂ ಜನರಿಗೆ ಉತ್ತರ ಕೊಡಲಿ. ಕಾಂಗ್ರೆಸ್ ಮುಂದೆ ಅಧಿಕಾರಕ್ಕೆ ಬರುತ್ತದೆ ಎನ್ನುವ ವಿಶ್ವಾಸ ಎಲ್ಲರಿಗೂ ಬಂದಿದೆ. ಹೀಗಾಗಿಯೇ ಸದ್ಯ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಬಗ್ಗೆ ಚರ್ಚೆ ನಡೆಯುತ್ತಿರಬಹುದು ಎಂದರು.
ಕೆಟ್ಟ ಹೆಸರು ತರಲು ಫೇಕ್ ಆಡಿಯೋ ಸೃಷ್ಟಿ : ಕಟೀಲ್ ಪರ ನಿಂತ ರೇಣುಕಾಚಾರ್ಯ
ಕಾಂಗ್ರೆಸ್ ನಲ್ಲಿ ಎರಡು ಬಣ ಎನ್ನುವ ವಿಷಯವೇ ಇಲ್ಲ, ನಮ್ಮಲ್ಲಿ ಒಂದೇ ಬಣವಿದೆ. ನಮ್ಮಲ್ಲಿ ರಾಷ್ಟ್ರೀಯ ನಾಯಕರು ಮತ್ತು ರಾಜ್ಯ ನಾಯಕರ ಹೇಳಿಕೆಗಷ್ಟೇ ಮಹತ್ವ ಕೊಡಿ.
ಅದು ಬಿಟ್ಟು ಒಬ್ಬೊಬ್ಬರು ಮಾತನಾಡುವುದಕ್ಕೆಲ್ಲಾ ಮಹತ್ವ ಬೇಡ ಎಂದರು.
ಬಿಜೆಪಿಯಲ್ಲಿ ಯತ್ನಾಳ್, ಯೋಗೇಶ್ವರ್ ಮಾತನಾಡುವುದರ ಬಗ್ಗೆ ಚರ್ಚೆ ನಡೆಯಲಿ. ಅವರು ಸಿಎಂ ಬಗ್ಗೆ ನೇರವಾಗಿ ಆರೋಪಿಸುವುದು ಚರ್ಚೆಯೇ ಆಗಲ್ಲ. ಷಡ್ಯಂತ್ರ ಮಾಡಿ ಹಿರಿಯ ನಾಯಕನಿಗೆ ಮಾನಸಿಕ ಕಿರುಕುಳ ಕೊಟ್ಟು ಕೆಳಗಿಳಿಸುವುದು ಸರಿಯಲ್ಲ ಎಂದು ಎಂ.ಬಿ.ಪಾಟೀಲ್ ಅವರೂ ಸಹ ಹೇಳಿದ್ದಾರೆಂದರು.
