ನಾನ್‌ ಹುಟ್ಟಿದ ನಂತ್ರನೇ ಅಪ್ಪನಿಗೆ ಅದೃಷ್ಟ ಸಿಕ್ತು, 4 ತಿಂಗಳ ಮಗು ಇದ್ದಾಗ ಅಪ್ಪ ಕಾರ್ಪೋರೇಟರ್‌ ಆದ್ರು!

ಇಂದಿಗೂ ಕೂಡ ನಮ್ಮ ಅಪ್ಪ, ಯಾವುದೇ ಅನಾಮಿಕ ನಂಬರ್‌ನಿಂದ ಫೋನ್‌ ಬಂದ್ರೂ ವಾಪಾಸ್‌ ಕಾಲ್‌ ಮಾಡ್ತಾರೆ. ಯಾವುದೇ ದಿನವಾಗ್ಲಿ ದಿನಕ್ಕೆ ಎರಡು ಬಾರಿ ಆಫೀಸ್‌ನಲ್ಲಿ ಸಿಗ್ತಾರೆ ಎಂದು ಸೌಮ್ಯ ರೆಡ್ಡಿ ಹೇಳಿದ್ದಾರೆ.
 

Congress Leader sowmya reddy on Family and his Father Ramalinga reddy san

ಬೆಂಗಳೂರು (ಏ.22): ಲೋಕಸಭೆ ಚುನಾವಣೆ ಕಣದಲ್ಲಿರುವ ಕಾಂಗ್ರೆಸ್‌ ಅಭ್ಯರ್ಥಿ ಸೌಮ್ಯ ರೆಡ್ಡಿ ಹಲವು ವಿಚಾರಗಳ ಬಗ್ಗೆ ರಾಪಿಡ್‌ ರಶ್ಮಿ ಅವರ ಯೂಟ್ಯೂಬ್‌ ಚಾನೆಲ್‌ನ ಸಂದರ್ಶನದಲ್ಲಿ ಮಾತನಾಡಿದ್ದಾರೆ. ತಮ್ಮ ರಾಜಕೀಯ ಜೀವನದಲ್ಲಿ ತಂದೆ ರಾಮಲಿಂಗಾ ರೆಡ್ಡಿ ಅವರ ಪಾತ್ರವನ್ನೂ ಸೌಮ್ಯ ರೆಡ್ಡಿ ವಿವರಿಸಿದ್ದಾರೆ. ಇಂದಿಗೂ ಕೂಡ ಅವರು ನನಗೆ ತಂದೆ ಅನ್ನೋದಕ್ಕಿಂತ ಹೆಚ್ಚಾಗಿ ರಾಜಕೀಯದಲ್ಲಿ ನನ್ನ ಬಾಸ್‌. ಯಾವುದೇ ನಿರ್ಧಾರಗಳನ್ನು ಅವರಿಗೆ ತಿಳಿಸಿಕೊಳ್ಳೋದೇ ತೆಗೆದುಕೊಳ್ಳೋದಿಲ್ಲ ಎಂದು ಹೇಳಿದ್ದಾರೆ. 'ನಾನು ನಾಲ್ಕು ತಿಂಗಳ ಮಗು ಇದ್ದಾಗ ತಂದೆ ಮೊದಲ ಬಾರಿಗೆ ಕಾರ್ಪೋರೇಟರ್‌ ಆಗಿದ್ದರು. ಈಗಲೂ ಕೂಡ ಅಮ್ಮ ಇದನ್ನ ಹೇಳ್ತಾ ಇರ್ತಾರೆ. ಆಗ ಮನೆಯ ಹೊರಗಡೆ ಟೆಲಿಫೋನ್‌ ಬೂತ್‌ ಇರ್ತಾ ಇತ್ತು. ಮನೆಯಲ್ಲಿ ಫೋನ್‌ ಇದ್ದಿರಲಿಲ್ಲ. ನಾಲ್ಕು ತಿಂಗಳ ಮಗು ಆಗಿದ್ದ ನನ್ನನ್ನು ಎತ್ತಿಕೊಂಡು ಅಮ್ಮ ಬೂತ್‌ಗೆ ಹೋಗಿದ್ರು. ನಾನು ಅಲ್ಲಿನ ಕೇಬಲ್‌ ಎಳಿತಾ ಇದ್ದಾಗ ಅಪ್ಪ, ಕಾಪೋರೇಟರ್‌ ಎಲೆಕ್ಷನ್‌ ಗೆದ್ದ ಬಗ್ಗೆ ತಿಳಿಸಿದ್ರಂತೆ..' ಎಂದು ಸೌಮ್ಯ ರೆಡ್ಡಿ ಹೇಳಿದ್ದಾರೆ. ಅಪ್ಪ ಈಗ್ಲೂ ಹೇಳ್ತಾರೆ, ನಾನು ಹುಟ್ಟಿದ ನಂತ್ರವೇ  ಅವರಿಗೆ ಅದೃಷ್ಟ ಬಂತೂ ಅಂತಾ ಎಂದು ತಿಳಿಸಿದ್ದಾರೆ.

ಚಿಕ್ಕ ವಯಸ್ಸಿನಿಂದಲೂ ಅಷ್ಟೇ. 1972ಅಲ್ಲಿ ಲಕ್ಕಸಂದ್ರದಲ್ಲಿ ಇರೋ ನಮ್ಮ ಮನೆ ಕಟ್ಟಿಸಿದ್ವಿ. ಅಲ್ಲಿ ಬೆಳಗ್ಗೆ 8 ಗಂಟೆಗೆ ಜನ ಬರೋಕೆ ಪ್ರಾರಂಭ ಆಗ್ತಾರೆ. ಜನರಿಗೂ ಗೊತ್ತು. ಈ ಟೈಮ್‌ಅಲ್ಲಿ ಬಂದ್ರೆ ತಂದೆ ಸಿಗ್ತಾರೆ ಅಂತಾ. ಜನ ನೋಡ್ಕೊಂಡೆ ನಾನು ಬೆಳೆದಿದ್ದು. ನನ್ನದು ಬಹಳ ಡೈವರ್ಸ್‌ ಆಗಿ ಬೆಳೆದಿದ್ದೆ. ಶಾಲೆಗೆ ನಡೆದುಕೊಂಡೇ ಹೋಗ್ತಿದ್ದೆ. ಟಿಪಿಕಲ್‌ ಬೆಂಗಳೂರು ಹುಡುಗೀರು ಇದ್ದ ಹಾಗೆಯೇ ನಾನು ಬೆಳೆದಿದ್ದೆ ಎಂದು ತಮ್ಮ ಜೀವನದ ಆರಂಭಿಕ ದಿನಗಳ ಬಗ್ಗೆ ಮಾತನಾಡಿದ್ದಾರೆ. 

ಅಪ್ಪನ ಮಾನವೀಯತೆ ನನಗೆ ಇಷ್ಟ: ನನ್ನ ಅಪ್ಪ ತೋರಿಸೋ ಮಾನವೀಯತೆ ಹಾಗೂ ಕಾಳಜಿ ನನಗೆ ಇಷ್ಟ. ಅವರು ಬಹಳ ಡೌನ್‌ ಟು ಅರ್ಥ್‌. ಜನರ ಸಮಸ್ಯೆಗೆ ಸ್ಪಂದನೆ ನೀಡ್ತಾರೆ. ಎಲ್ಲರಿಗೂ ಸಿಗ್ತಾರೆ.  ಒಂದು ಚಿಕ್ಕ ಮದುವೆ, ಅಂಗಡಿ ಓಪನಿಂಗೂ ಹೋಗ್ತಾರೆ. ಒಂದು ದಿನ ಅವರು 25 ಪ್ರೋಗ್ರಾಮ್‌ನ ಅಟೆಂಡ್‌ ಮಾಡಿದ್ರು. ರಾಜ್ಯೋತ್ಸವ, ಗಣೇಶ ಹಬ್ಬ, ಸಾವು, ಮುಂಜಿ ಎಲ್ಲದಕ್ಕೂ ಹೋಗ್ತಾರೆ. ಜನರ ಕುರಿತಾಗಿ ಅವರಿಗೆ ಇರೋ ಬದ್ಧತೆ ಇದ್ಯಲ್ಲ. ಅದನ್ನ ನಾನು ಅಳವಡಿಸಿಕೊಳ್ಳೋಕೆ ಇಷ್ಟಪಡ್ತೀನಿ. 8 ಬಾರಿ ಎಂಎಲ್‌ಎ ಆಗಿರುವ ಅಪ್ಪನಿಗೆ ಮುಂದೇನು ಅಂತಾ ಸಾಕಷ್ಟು ಬಾರಿ ಕೇಳಿದ್ದೇನೆ ಎಂದು ಸೌಮ್ಯ ರೆಡ್ಡಿ ತಿಳಿಸಿದ್ದಾರೆ.

ಅಲ್ಪಸಂಖ್ಯಾತರಾದ್ರೆ ಹೇಗೆ ಫೀಲ್‌ ಆಗುತ್ತೆ ಅಂತಾ ನನಗೆ ಅಮೆರಿಕದಲ್ಲಿ ಗೊತ್ತಾಯ್ತು: ಸೌಮ್ಯ ರೆಡ್ಡಿ

ನಾನು ಮೊದಲ ಬಾರಿ ಎಂಎಲ್‌ಎ ಆದಾಗ, ಮೊದಲ ದಿನವೇ ಭೈರಸಂದ್ರದಲ್ಲಿ ಸರ್ಕಾರಿ ಶಾಲೆಗೆ ಹೋಗಿ ಶಿಕ್ಷಣದ ಬಗ್ಗೆ ಮಾತನಾಡಿದ್ದೆ.  ಸಾಲಿಡ್‌ ವೇಸ್ಟ್‌ ಮ್ಯಾನೇಜ್‌ಮೆಂಟ್‌ ಬಗ್ಗೆ ಮೊದಲ ದಿನವೇ ಕೆಲಸ ಮಾಡಿದ್ದೆ. ವಿಧಾನಸಭೆಗೆ ಹೋಗಿದ್ದು ಈಗಲೂ ನೆನಪಿದೆ. ಅದು ರೋಮಾಂಚಕ ಅನುಭವ. ಅದೇ ಟೈಮ್‌ನಲ್ಲಿ ನಾನು ಬಿಬಿಎಂಪಿ ಕೌನ್ಸಿಲ್‌ಗೂ ಹೋಗಿದ್ದೆ. ಆದ್ರೆ ಅಲ್ಲಿ ಅಜಗಜಾಂತರ ವ್ಯತ್ಯಾಸ. ವಿಧಾನಸಭೆಯಲ್ಲಿ ಬರೀ 10 ಜನ ಮಹಿಳಾ ಶಾಸಕಿಯರಿದ್ರೆ, ಬಿಬಿಎಂಪಿ ಕೌನ್ಸಿಲ್‌ನಲ್ಲಿ ಶೇ. 50ರಷ್ಟಿದ್ದರು. ಅದಕ್ಕೆ ಕಾರಣ ಮೀಸಲಾತಿ ಎಂದು ಹೇಳಿದ್ದಾರೆ.

ಬೆಂಗಳೂರು ನಗರವನ್ನು ಗಾರ್ಬೇಜ್‌ ಸಿಟಿ ಮಾಡಿದ ಬಿಜೆಪಿ: ಸೌಮ್ಯಾರೆಡ್ಡಿ

Latest Videos
Follow Us:
Download App:
  • android
  • ios