ಬಿಜೆಪಿ ಆಯೋಜಿಸುತ್ತಿರುವುದು ಜನೋತ್ಸವ ಅಲ್ಲ ಭ್ರಷ್ಟೋತ್ಸವ: ಸಿದ್ದರಾಮಯ್ಯ

ಬಿಜೆಪಿ ದೊಡ್ಡಬಳ್ಳಾಪುರದಲ್ಲಿ ಆಯೋಜಿಸುತ್ತಿರುವುದು ಜನೋತ್ಸವ ಅಲ್ಲ ಅದು ಭ್ರಷ್ಟೋತ್ಸವ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ. ಅಲ್ಲದೇ ನಾನು ಯಾರಿಗೂ ಭಯಪಡುವ ಪ್ರಶ್ನೆ ಇಲ್ಲ. 

congress leader siddaramaiah slams to bjp government over janotsava gvd

ಚಿಕ್ಕಬಳ್ಳಾಪುರ (ಆ.22): ಬಿಜೆಪಿ ದೊಡ್ಡಬಳ್ಳಾಪುರದಲ್ಲಿ ಆಯೋಜಿಸುತ್ತಿರುವುದು ಜನೋತ್ಸವ ಅಲ್ಲ ಅದು ಭ್ರಷ್ಟೋತ್ಸವ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ. ಅಲ್ಲದೇ ನಾನು ಯಾರಿಗೂ ಭಯಪಡುವ ಪ್ರಶ್ನೆ ಇಲ್ಲ. ಬಿಜೆಪಿ ಭಯದಿಂದ ಸಿದ್ದರಾಮಯ್ಯ ದೇಗುಲಗಳಿಗೆ ಭೇಟಿ ನೀಡುತ್ತಿದ್ದಾರೆಂಬ ಕೇಂದ್ರ ಸಚಿವ ಜೋಷಿ ಹೇಳಿಕೆಗೆ ಕಿಡಿಕಾರಿದ ಸಿದ್ದರಾಮಯ್ಯ, ನಾನು ಯಾರಿಗೂ ಭಯ ಪಡುವ ಪ್ರಶ್ನೆ ಇಲ್ಲ. ಜನರನ್ನು ಕಂಡರೆ ಭಯ ಅಂತ ಸಿದ್ದರಾಮಯ್ಯ ಜೋಷಿಗೆ ತಿರುಗೇಟು ನೀಡಿದರು. ಜನರ ಅರ್ಶೀವಾದದಿಂದ ನಾವು ಅಧಿಕಾರಕ್ಕೆ ಬರುತ್ತೇವೆ ಎಂದರು.

ಮೊಟ್ಟೆ ಎಸೆತ ವ್ಯಕ್ತಿ ನಾನು ಕಾಂಗ್ರೆಸ್‌ ಕಾರ್ಯಕರ್ತ ಎಂದು ಹೇಳಿಕೊಂಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಆತನ ಕೈಯಲ್ಲಿ ಆ ರೀತಿ ಹೇಳಿಸಿದ್ದಾರೆ. ಸಂಪತ್ತು ಆತ ಪಕ್ಕಾ ಆರ್‌ಎಸ್‌ಎಸ್‌ ಕಾರ್ಯಕರ್ತ, ಶಾಖೆಗೆ ಹೋಗಿ ಬರುತ್ತಿದ್ದ. ಬಲತ್ಕಾರವಾಗಿ ಕಾಂಗ್ರೆಸ್‌ ಕಾರ್ಯಕರ್ತ ಅಂತ ಹೇಳಿಸಿದ್ದಾರೆ. ಇದು ಪೂರ್ವ ನಿಯೋಜಿತ ಬಿಜೆಪಿ ಪ್ರತಿಭಟನೆ ಎಂದರು.

ಸರ್ಕಾರವನ್ನು ಕೋಮುವಾದಿಗಳ ಮತ್ತು ಗೂಂಡಾಗಳ ಕೈಗೆ ಕೊಡಲಾಗಿದೆ: ಖಾದರ್ ಆಕ್ರೋಶ

ಪತ್ರಕರ್ತರ ಮೇಲೆ ಸಿದ್ದು ಗರಂ: ನಾನ್‌ವೇಜ್‌ ತಿಂದು ದೇವಸ್ಥಾನಕ್ಕೆ ಹೋಗಿದ್ದು ನಿಜಾನಾ ಎಂಬ ಪತ್ರಕರ್ತರು ಪದೇ ಪದೇ ಕೇಳಿದ ಪ್ರಶ್ನೆಗೆ ಗರಂ ಆದ ಸಿದ್ದರಾಮಯ್ಯ, ಏಯ್‌ ಅದೆಲ್ಲಾ ಕೇಳಕ್ಕೆ ನೀನು ಯಾವನಯ್ಯ ಅಂತ ತೀವ್ರ ಗರಂ ಆದರು. ಅವರು ಮಾಡುತ್ತಿರುವುದು ಆರೋಪ ಅಂದರು. ಅದು ನಿಜಾನಾ ಅಂತ ಮತ್ತೆ ಪತ್ರಕರ್ತರೊಬ್ಬರು ಪ್ರಶ್ನಿಸಿದಾಗ ನೀನು ಯಾವನೋ ಕೇಳಕ್ಕೆ ಅಂತ ಸಿದ್ದರಾಮಯ್ಯ ಸಿಟ್ಟಾದರು. ನಾನು ಮಾಂಸಹಾರಿ ಮಾಂಸ ತಿನ್ನುತ್ತೇನೆ, ತಪ್ಪೇನಿದೆ. ನೀನು ಸಸ್ಯಹಾರಿ ಆದರೆ ಸಸ್ಯಹಾರಿ ತಿನ್ನುತ್ತೀಯಾ, ನಿನ್ನ ಹವ್ಯಾಸ ನಿನ್ನದು, ನನ್ನ ಹವ್ಯಾಸ ನನ್ನದು ಎಂದರು.

ಮಧ್ಯಾಹ್ನ ತಿಂದು ಸಂಜೆ ಹೋಗಬಾರದೇ?: ರಾತ್ರಿ ನಾನ್‌ವೇಜ್‌ ತಿಂದು ಬೆಳಗ್ಗೆ ದೇವಸ್ಥಾನಕ್ಕೆ ಹೋಗಬಹುದು. ಮಧ್ಯಾಹ್ನ ತಿಂದು ಸಂಜೆ ಹೋಗಬಾರದ, ಬಿಜೆಪಿಯವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ. ಎಲ್ಲಿ ಚೆನ್ನಾಗಿದ್ದಾರೆ ಅಲ್ಲಿ ಬೆಂಕಿ, ವಿಷ ಕೊಡುವ ಕೆಲಸ ಬಿಜೆಪಿ ಮಾಡುತ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ವಿರುದ್ದ ಕೇಳಿ ಬರುತ್ತಿರುವ ನಾನ್‌ವೇಜ್‌ ವಿವಾದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

'ಸಿದ್ದರಾಮಯ್ಯರನ್ನು ಅಪಮಾನಿಸಲು ಮುಂದಾದರೇ ಉಗ್ರ ಹೋರಾಟ'

ಚಿಕ್ಕಬಳ್ಳಾಪುರದಲ್ಲಿ ಭಾನುವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನ್‌ವೇಜ್‌ ತಿಂದು ಬಸವೇಶ್ವರ ದೇಗುಲಕ್ಕೆ ಹೋಗಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ದೇವರು ಇಂತಹದ್ದನ್ನೆ ತಿಂದುಕೊಂಡು ಬನ್ನಿ ಅಂತ ಹೇಳುತ್ತಾರಾ. ತಾವು ಅಂದು ಊಟ ಮಾಡಿದ್ದು ಸುದರ್ಶನ ಗೆಸ್ಟ್‌ ಹೌಸ್‌ನಲ್ಲಿ, ಮಧ್ಯಾಹ್ನ 2.30ರ ಸಮಯದಲ್ಲಿ. ಸಂಜೆ ಹೋಗುವಾಗ ಪೂಜೆ ಏರ್ಪಾಟು ಮಾಡಿದ್ದರು. ಅದಕ್ಕೆ ಹೋಗಿದ್ದೆ ಎಂದರು.

Latest Videos
Follow Us:
Download App:
  • android
  • ios