ಸರ್ಕಾರವನ್ನು ಕೋಮುವಾದಿಗಳ ಮತ್ತು ಗೂಂಡಾಗಳ ಕೈಗೆ ಕೊಡಲಾಗಿದೆ: ಖಾದರ್ ಆಕ್ರೋಶ
ವಿಪಕ್ಷ ನಾಯಕ ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆತ ಕೇಸ್ ಸಂಬಂಧ ಮಂಗಳೂರಿನಲ್ಲಿ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಪ್ರತಿಕ್ರಿಯಿಸಿದ್ದು, ಸರ್ಕಾರವನ್ನು ಕೋಮುವಾದಿಗಳ ಮತ್ತು ಗೂಂಡಾಗಳ ಕೈಗೆ ಕೊಡಲಾಗಿದೆ ಎಂದಿದ್ದಾರೆ.
ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು
ಮಂಗಳೂರು (ಆ.19): ವಿಪಕ್ಷ ನಾಯಕ ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆತ ಕೇಸ್ ಸಂಬಂಧ ಮಂಗಳೂರಿನಲ್ಲಿ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಪ್ರತಿಕ್ರಿಯಿಸಿದ್ದು, ಸರ್ಕಾರವನ್ನು ಕೋಮುವಾದಿಗಳ ಮತ್ತು ಗೂಂಡಾಗಳ ಕೈಗೆ ಕೊಡಲಾಗಿದೆ. ಸಮಾಜದಲ್ಲಿ ಅರಾಜಕ ಸೃಷ್ಟಿಸುವವರ ಮೇಲೆ ಕ್ರಮ ತೆಗೊಳೋದ್ರಲ್ಲಿ ವಿಫಲವಾಗಿದೆ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯರ ಮೇಲೆ ನಿನ್ನೆ ಮೊಟ್ಟೆ ಎಸೆದಿರೋದು ಖಂಡನೀಯ. ಕೆಲವೊಂದು ಸಮಾಜಘಾತುಕ ಶಕ್ತಿಗಳು ಹಾಗೂ ಬಿಜೆಪಿಯವರ ಕೃತ್ಯ. ಇದು ಬರೇ ದೈಹಿಕ ದಾಳಿಯ ಪ್ರಯತ್ನವಲ್ಲ. ವೈಚಾರಿಕತೆ ಮತ್ತು ಪ್ರಜಾಪ್ರಭುತ್ವದ ತತ್ವ ಆದರ್ಶದ ಮೇಲೆ ನಡೆದ ದಾಳಿ. ಸಿದ್ದಾಂತದ ವಿರುದ್ದದ ದಬ್ಬಾಳಿಕೆಯ ವಿರುದ್ದ ಕಾಂಗ್ರೆಸ್ ಹೋರಾಡುತ್ತೆ. ಭಯ ಹುಟ್ಟಿಸಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಧ್ವನಿ ಅಡಗಿಸಲು ಬಿಜೆಪಿಯಿಂದ ಸಾಧ್ಯವಿಲ್ಕ. ಇದು ಪರೋಕ್ಷ ಮತ್ತು ನೇರವಾಗಿ ರಾಜ್ಯ ಬಿಜೆಪಿ ಕುಮ್ಮಕ್ಕಿನಿಂದ, ಪ್ರಾಯೋಜಿತವಾಗಿ ನಡೆದಿದೆ. ಪ್ರತಿಪಕ್ಷ ನಾಯಕ ಸರ್ಕಾರವನ್ನ ಎಚ್ಚರಿಸೋ ಕೆಲಸ ಮಾಡ್ತಾರೆ. ಮಳೆ ಹಾನಿಯಲ್ಲಿ ಜನರ ಸಮಸ್ಯೆ ವೀಕ್ಷಿಸಲು ಅವರು ಹೋಗಿದ್ದಾರೆ. ಆದರೆ ಅವರ ಧ್ಬನಿ ಅಡಗಿಸೋ ಕೆಲಸ ಮಾಡಲಾಗಿದೆ.
ಹಾಗಾದರೆ ಇವರ ಬಗ್ಗೆ ಯಾರೂ ಮಾತನಾಡಲೇ ಬಾರದಾ? ಇವರ ಈ ದಾಳಿಯನ್ನು ಯಾರೂ ಸಮರ್ಥಿಸಲು ಸಾಧ್ಯವೇ ಇಲ್ಲ. ಬಿಜೆಪಿಗೆ ವಿನಾಶ ಕಾಲ ವಿಪರೀತ ಬುದ್ದಿ ಅನ್ನುವ ಪರಿಸ್ಥಿತಿ ಬಂದಿದೆ. ಬಿಜೆಪಿಯ ಈ ಪ್ರಯತ್ನಗಳು ನಮಗೆ ಇನ್ನಷ್ಟು ಗಟ್ಟಿನಿಲುವು ತೆಗೆದುಕೊಳ್ಳಲು ಪ್ರೇರಣೆಯಾಗಿದೆ. ನಾವು ಮತ್ತಷ್ಟು ವೈಚಾರಿಕ ಮತ್ತು ಪ್ರಜಾಪ್ರಭುತ್ವ ಪರವಾಗಿ ಹೋರಾಟ ಮಾಡ್ತೇವೆ. ಕಾಂಗ್ರೆಸ್ ಈಗಲೂ ಆಗಲೂ ಅಸಹಿಷ್ಣುತೆ ವಿರೋಧಿಸುತ್ತೆ. ಈ ಮೂಲಕ ಕಾಂಗ್ರೆಸ್ ಧ್ವನಿ ಅಡಗಿಸ್ತೇವೆ ಅನ್ನೋದು ಮೂರ್ಖತನ. ರಾಜ್ಯ ಸರ್ಕಾರ ಈ ವಿಚಾರದಲ್ಲಿ ನೇರವಾದ ಜವಾಬ್ದಾರಿ. ಪೊಲೀಸ್ ಇಲಾಖೆ ಸಂಪೂರ್ಣವಾಗಿ ರಾಜ್ಯ ಸರ್ಕಾರದ ಕೈಗೊಂಬೆಯಾಗಿದೆ.
ಗುಂಪು ಸೇರಿದ 25 ಜನರನ್ನ ಪೊಲೀಸರಿಗೆ ಯಾಕೆ ತಡೆಯಲು ಆಗಿಲ್ಲ? ಅವರನ್ನು ತಡೆಯದಂತೆ ಪೊಲೀಸರಿಗೆ ಯಾರ ಒತ್ತಡ ಇತ್ತು? ಯಾರೂ ಯಾರ ಬ್ಯಾನರ್ ಹಾಕಿದ್ರೂ ಯಾರಿಗೂ ತೆಗೆಯಲು ಅವಕಾಶ ಇಲ್ಲ. ಯಾರೂ ಬೇಕಾದ್ರೂ ಅನುಮತಿ ಪಡೆದು ಪೋಸ್ಟರ್ ಹಾಕಲಿ. ಆದರೆ ಪೋಸ್ಟರ್ ಹಾಕೋರ ಉದ್ದೇಶ ಸದುದ್ದೇಶ ಇರಲಿ, ದುರುದ್ದೇಶ ಬೇಡ. ನನ್ನ ಕ್ಷೇತ್ರದಲ್ಲಿ ಇಂಥ ಬ್ಯಾನರ್ ಹಾಕಿದ್ರೆ ಜನ ನೋಡಿ ನೆಗಾಡಿಕೊಂಡು ಹೋಗ್ತಾರೆ. ಆದ್ರೆ ಯಾರೂ ಅದನ್ನ ತೆಗೆಯಿರಿ ಅಂತ ಯಾರೂ ಹೇಳಿಲ್ಲ. ಅನುಮತಿ ಪಡೆಯದೇ ಹಾಕಿದ್ದಕ್ಕೆ ಪೊಲೀಸರು ತೆಗೆಸಿದ್ದಾರೆ.
Shivamogga: ಕರಗಿದ ಫ್ಲೆಕ್ಸ್ ವಿವಾದ: ಟ್ರ್ಯಾಕಿಗೆ ಬಂದ ನಗರ
ನಮ್ಮಲ್ಲಿ ಯಾರೂ ಆಕ್ಷೇಪ ಎತ್ತಿಲ್ಲ, ನಮ್ಮ ಅಪಸ್ವರವೂ ಇಲ್ಲ. ಸಾವರ್ಕರ್ ವಿರುದ್ದ ಕಾಂಗ್ರೆಸ್ ಗೆ ಸೈದ್ದಾಂತಿಕ ಭಿನ್ನಾಭಿಪ್ರಾಯ ಇದೆ. ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರ ಅಲ್ಲ ಅಂತ ನಾವೂ ಎಲ್ಲೂ ಹೇಳಿಲ್ಲ. ಅವರು ಹೋರಾಟ ಮಾಡಿದ್ದಕ್ಕೆ ಬ್ರಿಟಿಷರು ಅವರನ್ನು ಅಂಡಮಾನ್ ಜೈಲಿಗೆ ಹಾಕಿದ್ರು. ಇವರ ಜೊತೆ ಇದ್ದ ಹಲವರನ್ನು ಬ್ರಿಟಿಷರು ಕೊಂದಿದ್ದಾರೆ. ಆದ್ರೆ ಸಾವರ್ಕರ್ ಕ್ಷಮೆ ಬೇಡಿಕ ಪರಿಣಾಮ ಅವರನ್ನ ಜೈಲಿಂದ ಬಿಟ್ಟರು. 1924ರ ನಂತ್ರ ಸಾವರ್ಕರ್ ಸ್ವಾತಂತ್ರ ಸಂಗ್ರಾಮದಲ್ಲಿ ಭಾಗವಹಿಸಿದ ಇತಿಹಾಸವೇ ಇಲ್ಲ. ನೆಹರೂ ಕ್ಷಮೆ ಪತ್ರ ಬರೆದಿದ್ದು ಅವರ ಹೆಂಡತಿಗೆ. ಇದು ನೆಹರೂ ಮತ್ತು ಸಾವರ್ಕರ್ ಗೆ ಇರೋ ವ್ಯತ್ಯಾಸ.
ಅನಧಿಕೃತ ಫ್ಲೆಕ್ಸ್ ನಿರ್ದಾಕ್ಷಿಣ್ಯ ತೆರವಿಗೆ ದಕ್ಷಿಣ ಕನ್ನಡ ಡಿಸಿ ಸೂಚನೆ
ಆದರೆ ಬಿಜೆಪಿಯವರು ನೆಹರೂ ಫೋಟೋ ಕೈ ಬಿಟ್ಟಿದ್ದು ಯಾವ ಉದ್ದೇಶ? ಬಿಜೆಪಿ ಬಂದಾಗ ಮಾತ್ರ ಯಾಕೆ ಈ ಧರ್ಮ ದಂಗಲ್? ಪೋಸ್ಟರ್ ತೆಗೆಯೋರಿಗೆ ಪೊಲೀಸರ ಭಯವೇ ಇಲ್ವಾ? ಬ್ಯಾನರ್ ತೆಗೆಯೋ ಯಾರಿಗೂ ನಮ್ಮ ಬೆಂಬಲ ಇಲ್ಲ. ಸರ್ಕಾರ ಏನ್ ಮಾಡ್ತಿದೆ, ಇದು ಸರ್ಕಾರದ ಸಂಪೂರ್ಣ ವೈಫಲ್ಯ. ಬಿಜೆಪಿ ಸರ್ಕಾರ ಕಿತ್ತು ಬಿಸಾಡದೇ ಇದ್ರೆ ಜನರಿಗೆ ನೆಮ್ಮದಿ ಇಲ್ಲ. ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಮೇಲಿನ ಭಯದಿಂದ ಬಿಜೆಪಿ ಇಂಥದ್ದನ್ನ ಬೆಂಬಲಿಸ್ತಿದೆ ಅಂತ ಅಸಮಾಧಾನ ಹೊರಹಾಕಿದ್ದಾರೆ.