'ಪ್ರಧಾನಿ ಮೋದಿಯವರು ಅದಾನಿ, ಅಂಬಾನಿ ಗುಲಾಮರಾಗಿದ್ದಾರೆ'
ಸರ್ಕಾರದ ಬಳಿ ಗುಪ್ತಚರ ಮಾಹಿತಿ ಇರಲಿಲ್ಲವೇ. ರೈತರು 62 ದಿನಗಳಿಂದ ಸುಮ್ನೇ ಪ್ರತಿಭಟನೆ ಮಾಡುತ್ತಾರಾ..? ಕೇಂದ್ರ ಸರ್ಕಾರ 11 ಬಾರಿ ಮಾತುಕತೆ ನಡೆಸಿದ್ದು ಕಣ್ಣೊರೆಸುವ ತಂತ್ರ ಮಾಡುತ್ತಿದೆ ಎಮದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಬೆಂಗಳೂರು (ಜ.27): ರೈತರನ್ನ ಭಯೋತ್ಪಾದಕರು ಎಂದು ಬಾಯಿಗೆ ಬಂದ ಹಾಗೆ ಮಾತಾಡಬೇಡಿ. ಸರ್ಕಾರ ಹತಾಶೆಗೊಂಡು ಈ ರೀತಿಯ ಹೇಳಿಕೆಗಳನ್ನ ನೀಡುತ್ತಿದೆ. ಖಲಿಸ್ತಾನ ಭಯೋತ್ಪಾದರಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರ ವಿರುದ್ಧ ಅಸಮಾಧಾನ ಹೊರಹಾಕಿದರು.
ಬೆಂಗಳೂರಿನಲ್ಲಿಂದು ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರದ ಬಳಿ ಗುಪ್ತಚರ ಮಾಹಿತಿ ಇರಲಿಲ್ಲವೇ. ರೈತರು 62 ದಿನಗಳಿಂದ ಸುಮ್ನೇ ಪ್ರತಿಭಟನೆ ಮಾಡುತ್ತಾರಾ..? ಕೇಂದ್ರ ಸರ್ಕಾರ 11 ಬಾರಿ ಮಾತುಕತೆ ನಡೆಸಿದ್ದು ಕಣ್ಣೊರೆಸುವ ತಂತ್ರ ಮಾಡುತ್ತಿದೆ. ಈ ಸಮಸ್ಯೆ ಇತ್ಯರ್ಥ ಮಾಡಲು 11 ಬಾರಿ ಮಾತುಕತೆಗಳು ಬೇಕಾಗಿತ್ತಾ ಎಂದು ಪ್ರಶ್ನೆ ಮಾಡಿದ್ದಾರೆ.
ಕೇಂದ್ರ ಸರ್ಕಾರ ತಂದಿರುವ ಕೃಷಿಕಾಯ್ದೆಗಳು ರೈತವಿರೋಧಿಯಾಗಿದೆ. ಇವು ಕೃಷಿಕಾಯ್ದೆಗಳಲ್ಲಿ ಕಪ್ಪು ಕಾಯ್ದೆಗಳು.. ಇವನ್ನ ಹಿಂಪಡೆಯಿರಿ ಎನ್ನುವುದು ರೈತರ ಬೇಡಿಕೆಯಾಗಿದೆ ಎಂದರು.
'ಸಿದ್ದರಾಮಯ್ಯ ವಿರುದ್ಧ ಡಿಕೆಶಿ ತಕ್ಷಣ ಕ್ರಮ ಕೈಗೊಳ್ಳಲಿ' ...
ಪ್ರಧಾನಿ ನರೇಂದ್ರ ಮೋದಿ ಅದಾನಿ, ಅಂಬಾನಿಗೆ ಮಾತುಕೊಟ್ಟಂತೆ ಕಾಣುತ್ತಿದೆ. ಅವರ ಗುಲಾಮರಾಗಿದ್ದಾರೆ. ಅದಾನಿ, ಅಂಬಾನಿ ಅವರೇ ಡಿಕ್ಟೇಟ್ ಮಾಡಿ ಕಾಯ್ದೆ ಮಾಡಿಸಿದಂತಿದೆ. 56 ಇಂಚಿನ ಎದೆ ಇದೆ ಇದ್ದರೆ ಸಾಲದು, ಆ ಎದೆಯೊಳಗೆ ಬಡವರು ರೈತರ ಕಣ್ಣೀರಿಗೆ ಸ್ಪಂದಿಸುವ ಹೃದಯ ಇರಬೇಕು. ಇವತ್ತಿನ ವರೆಗು ರೈತರ ಜೊತೆ ಮೋದಿ ಮಾತಾಡಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಶಿವಮೊಗ್ಗಕ್ಕೆ ಭೇಟಿ : ಇಂದು ಶಿವಮೊಗ್ಗದಲ್ಲಿ ಸ್ಫೋಟ ನಡೆದ ಸ್ಥಳಕ್ಕೆ ಹೋಗುತ್ತೇನೆ. ಅಲ್ಲಿ ಆರು ಜನ ಸತ್ತಿದ್ದಾರೆ, ಸರ್ಕಾರದ ನೆಗ್ಲಿಜೆನ್ಸ್ ಇದೆ
ಹೀಗಾಗಿ ಸ್ಥಳಕ್ಕೇ ಹೋಗಿ ಪರಿಶೀಲಿಸುವೆ. ಅಧಿವೇಶನದಲ್ಲಿ ಸ್ಫೋಟದ ವಿಚಾರ ಪ್ರಸ್ತಾಪಿಸುವೆ. ಇದು ಜಂಟಿ ಅಧಿವೇಶನ. ಇಲ್ಲಿ ಹೆಚ್ಚು ಚರ್ಚೆಗೆ ಅವಕಾಶವಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಸಭಾಪತಿ ಆಯ್ಕೆ ವಿಚಾರ : ಜೆ ಡಿ ಎಸ್ ಸೆಕ್ಯುಲರ್ ಬಣ್ಣ ಬಯಲಾಗಲಿದೆ. ಜೆ ಡಿ ಎಸ್ ಸೆಕ್ಯುಲರ್ ಬಣ್ಣ ಬೇಗನೆ ತಿಳಿಯುತ್ತದೆ ಎಂದು ಅಸಮಾಧಾನ ಹೊರಹಾಕಿದರು.