Asianet Suvarna News Asianet Suvarna News

ಕೇಂದ್ರ ರೈತರ ಸಾಲ ಮನ್ನಾ ಏಕೆ ಮಾಡಿಲ್ಲ: ಸಂತೋಷ ಲಾಡ್‌

ರೈತರಿಗೆ ಸರಳವಾಗಿ ಹಣಕಾಸು ಸೌಲಭ್ಯ ಸಿಗಬೇಕಾದರೆ ಸಹಕಾರ ಸಂಘಗಳಿಂದ ಮಾತ್ರ ಸಾಧ್ಯ. ಸಹಕಾರಿ ವಲಯದಲ್ಲಿ ರೈತರ ಬೆಳೆವಣಿಗೆ ಆಗಬೇಕೆಂಬ ಉದ್ದೇಶದಿಂದ ಸರ್ಕಾರ ಹೆಚ್ಚಿನ ಉತ್ತೇಜನ ನೀಡಬೇಕೆಂದು ಒತ್ತಾಯಿಸಿದ ಲಾಡ್‌ 

Congress Leader Santosh Lad Slams BJP Government grg
Author
First Published Nov 23, 2022, 11:45 AM IST

ಕಲಘಟಗಿ(ನ.23): ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಉದ್ದಿಮೆದಾರರ . 10 ಲಕ್ಷ ಕೋಟಿ ಸಾಲ ಮನ್ನಾ ಮಾಡಿದೆ. ಆದರೆ ರೈತರ ಸಾಲ ಏಕೆ ಮನ್ನಾ ಮಾಡುತ್ತಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಸಚಿವ ಸಂತೋಷ ಲಾಡ್‌ ಕಿಡಿಕಾರಿದರು.

ಅವರು ತಾಲೂಕಿನ ಗಳಗಿ ಹುಲಕೊಪ್ಪ ಗ್ರಾಮದಲ್ಲಿ ಕೆಸಿಸಿ ಬ್ಯಾಂಕ್‌ ಧಾರವಾಡ, ತಾಲೂಕಿನ ವಿವಿಧ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಆಶ್ರಯದಲ್ಲಿ ನಡೆದ 69ನೇ ಅಖಿಲ ಭಾರತ ಸಹಕಾರ ಸಪ್ತಾಹ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೊಟ್ಟ ಭರವಸೆಗಳನ್ನು ಈಡೆರಸದೆ ಹೋದ್ರೆ 2028 ಕ್ಕೆ ನಾವು ನಿಮ್ಮಲ್ಲಿ ಮತ ಕೇಳಲ್ಲ: ಸಿ.ಎಂ.ಇಬ್ರಾಹಿಂ

ರೈತರಿಗೆ ಸರಳವಾಗಿ ಹಣಕಾಸು ಸೌಲಭ್ಯ ಸಿಗಬೇಕಾದರೆ ಸಹಕಾರ ಸಂಘಗಳಿಂದ ಮಾತ್ರ ಸಾಧ್ಯ. ಸಹಕಾರಿ ವಲಯದಲ್ಲಿ ರೈತರ ಬೆಳೆವಣಿಗೆ ಆಗಬೇಕೆಂಬ ಉದ್ದೇಶದಿಂದ ಸರ್ಕಾರ ಹೆಚ್ಚಿನ ಉತ್ತೇಜನ ನೀಡಬೇಕೆಂದು ಒತ್ತಾಯಿಸಿದರು.
ಸಹಕಾರ ರತ್ನ ಪುರಸ್ಕೃತ ಮಲ್ಲಿಕಾರ್ಜುನ ಹೊರಕೇರಿ ಮಾತನಾಡಿ, ಪ್ರತಿ ರೈತರಿಗೆ 3 ಲಕ್ಷ ವರೆಗೆ ಬಡ್ಡಿರಹಿತ ಸಾಲ ನೀಡುತ್ತಿರುವುದಾಗಿ ತಿಳಿಸಿದರು. ರಾಜ್ಯ ಸಹಕಾರ ಗ್ರಾಹಕರ ಮಹಾ ಮಂಡಳ ಉಪಾಧ್ಯಕ್ಷ ಶಿವಕುಮಾರಗೌಡ ಪಾಟೀಲ ಮಾತನಾಡಿ, ಸಣ್ಣ ರೈತರ ಕುಟುಂಬಕ್ಕೆ ಬಿತ್ತನೆ ಬೀಜ ಹಾಗೂ ರಾಸಾಯನಿಕ ಗೊಬ್ಬರ ಪೂರೈಸುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಕೆಸಿಸಿ ಬ್ಯಾಂಕ್‌ ನಿರ್ದೇಶಕ ಮಂಜುನಾಥ ಮುರಳ್ಳಿ ಮಾತನಾಡಿ, ಸಂಘದ ಬ್ಯಾಂಕ್‌ ಪ್ರತಿ ವರ್ಷಕ್ಕಿಂತ ಹೆಚ್ಚು ಲಾಭವಾಗುತ್ತಿದ್ದು 9.30 ಕೋಟಿ ನಿವ್ವಳ ಲಾಭ ಪಡೆದಿದ್ದೇವೆ ಎಂದರು.

ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಕ್ಕಳಿಂದ ಕುಂಭ ಮೇಳ, ಜಗ್ಗಲಗಿ, ಡೊಳ್ಳು ಕುಣಿತ, ಸಹಕಾರ ಸಂಘ ಸಂಸ್ಥಾಪಕರ ಭಾವಚಿತ್ರದ ಮೆರವಣಿಗೆ ನಡೆಯಿತು. ಬಸವರಾಜ ಸ್ವಾಮೀಜಿ ಸಾನ್ನಿಧ್ಯ, ವಿಠಲ್‌ ಜಾಧವ ಅಧ್ಯಕ್ಷತೆ ವಹಿಸಿದ್ದರು. ಜಿ.ಪಿ. ಪಾಟೀಲ, ಬಾಪುಗೌಡ ಪಾಟೀಲ, ಐ.ಎಸ್‌. ಪಾಟೀಲ, ಯಲ್ಲಪ್ಪ ದಾಸನಕೊಪ್ಪ, ಎಸ್‌.ಆರ್‌. ಪಾಟೀಲ, ನರೇಶ ಮಲೆನಾಡು, ಬಸವರಾಜ ಕಡ್ಲೆನ್ನವರ, ಮಲ್ಲಿಕಾರ್ಜುನ ಮಲ್ಲಮ್ಮನವರ, ಅರ್ಜುನ ಮುದಿಗೌಡ್ರ, ಬಸವರಾಜ ದೊಡಮನಿ, ಶಂಕರಗೌಡ ಭರಮಗೌಡ್ರ, ಬಾಬಾಜಾನ ತೇರಗಾವ ಅಣ್ಣಪ್ಪ ದೇಸಾಯಿ ಉಪಸ್ಥಿತರಿದ್ದರು.
 

Follow Us:
Download App:
  • android
  • ios