ಬೆಂಗಳೂರು (ಜ.24): ಕೆಪಿಸಿಸಿ ಕಾರ್ಯಾಧ್ಯಕ್ಷರಾಗುತ್ತಿದ್ದಂತೆ ಮಿತ್ರ ಮಂಡಳಿ ಶಾಸಕರ ಕರೆತರುವ ಇಂಗಿತ ವ್ಯಕ್ತಪಡಿಸಿದ್ದಾರೆ ರಾಮಲಿಂಗಾ ರೆಡ್ಡಿ. 

ಕಾಂಗ್ರೆಸ್ ಗೆ ಕೈ ಕೊಟ್ಟ ಶಾಸಕರನ್ನು ಮರಳಿ ವಾಪಸ್ ಕರೆತರುವ ಬಗ್ಗೆ ಮಾತನಾಡಿದ್ದು, ಕೈ ಹಿಡಿದು ಕರೆತರುತ್ತಾರಾ  ರಾಮಲಿಂಗಾರೆಡ್ಡಿ ಎನ್ನುವ ಬಗ್ಗೆ ಕುತೂಹಲ ಮೂಡಿದೆ.

ಕೆಲವು ಕಾರಣಗಳಿಗೆ ಬೆಂಗಳೂರಿನ ಶಾಸಕರು ಕಾಂಗ್ರೆಸ್ ಬಿಟ್ಟು ಹೋಗಿದ್ದಾರೆ. ಸಾಮೂಹಿಕ ನಾಯಕತ್ವದಲ್ಲಿ ಅವರನ್ನ ಪಕ್ಷಕ್ಕೆ ಕರೆತರುವ ಪ್ರಯತ್ನ ಮಾಡುತ್ತೇವೆ ಎಂದು  ಕೆಪಿಸಿಸಿ ಕಾರ್ಯಾಧ್ಯಕ್ಷ  ರಾಮಲಿಂಗಾರೆಡ್ಡಿ ಹೇಳಿದ್ದಾರೆ. 

'ಸಿದ್ದರಾಮಯ್ಯ ವಿರುದ್ಧ ಡಿಕೆಶಿ ತಕ್ಷಣ ಕ್ರಮ ಕೈಗೊಳ್ಳಲಿ' ...

ಕಾಂಗ್ರೆಸ್ ಪ್ರೊಟೆಸ್ಟ್ ವೇಳೆ ಸೌಮ್ಯರೆಡ್ಡಿ ಹಲ್ಲೆ ಆರೋಪ ವಿಚಾರ :  ಸೌಮ್ಯ ರೆಡ್ಡಿ ತಪ್ಪು ಮಾಡಿದ್ದರೆ ಕ್ರಮ ಕೈಗೊಳ್ಳಲಿ.  ಆದರೆ ಪ್ರೊಟೆಸ್ಟ್ ನಡೆಯುವ ವೇಳೆ ಶಾಸಕಿ ಸೌಮ್ಯ ರೆಡ್ಡಿ, ಹಾಗೂ ಶಾಸಕಿ ಅಂಜಲಿ ನಿಂಬಾಳ್ಕರ್ ಇಬ್ಬರು ರಸ್ತೆಯಲ್ಲಿ ಬಿದ್ದಿದ್ದರು. ಸೌಮ್ಯರೆಡ್ಡಿ, ಅಂಜಲಿ ನಿಂಬಾಳ್ಕರ್ ಬಿದ್ದಿದ್ದು ಮಾಧ್ಯಮಗಳಲ್ಲೇ ಬಂದಿದೆ ಎಂದು ಹೇಳಿದರು.

ಅಂಜಲಿ ನಿಂಬಾಳ್ಕರ್ ಅವರಿಗೂ ಗಾಯಗಳಾಗಿವೆ.  ಆಸ್ಪತ್ರೆಯಲ್ಲಿ ಚಿಕಿತ್ಸೆ ಕೂಡ ಪಡೆದುಕೊಂಡರು.  ಇಬ್ಬರು ಶಾಸಕಿಯರನ್ನ ರಸ್ತೆಯಲ್ಲಿ ಕೆಡವಿದವರು ಯಾರು..?  ರಾಜ್ಯ ಸರ್ಕಾರ ಉತ್ತರ ಕೊಡಲಿ.  ಅವರ ಪಾಡಿಗೆ ಅವರೇ ನೆಲದ ಮೇಲೆ ಬೀಳುತ್ತಾರಾ ಎಂದು ಪ್ರಶ್ನೆ ಮಾಡಿದರು.

ಕಾಂಗ್ರೆಸ್‌ನಲ್ಲಿ ದಲಿತ ಎಡಗೈ, ಬಲಗೈ ಪಾಲಿಟಿಕ್ಸ್; ಸಿದ್ದರಾಮಯ್ಯಗೆ ನಾಯಕರಿಂದ ದೂರು ...

ಇದಕ್ಕೆಲ್ಲಾ ಗೃಹ ಸಚಿವರು ಉತ್ತರ ನೀಡಲಿ.  ರಾಜ್ಯವನ್ನು ಕೇಸರು ಮಯ ಮಾಡಲಾಗುತ್ತಿದೆಯಾ..?  ಪೊಲೀಸ್ ಸ್ಟೇಷನ್ ಗೆ ದೂರು ಕೊಡಲು ಕಾಂಗ್ರೆಸ್ ನವರು ಹೋದರೆ ನೀವು ಬರಬೇಡಿ ಎಂದು ಪೊಲೀಸರು ಹೇಳುತ್ತಾರೆ.  ಕಾಂಗ್ರೆಸ್ ನವರು ಬರಬೇಡಿ, ನಮ್ಮ ಮೇಲೆ ಒತ್ತಡ ಇದೆ ಅಂತ ಪೊಲೀಸ್ ಸ್ಟೇಷನ್ ನವರು ಹೇಳಿದರೆ ಏನರ್ಥ ಎಂದು ಹೇಳಿದರು. 

ವೀರಪ್ಪ ಮೊಯ್ಲಿ ಸಿಎಂ ಆಗಿದ್ದಾಗಿನಿಂದಲೂ ನಾನು ಸಚಿವನಾಗಿದ್ದೇನೆ.  ಬೆಂಗಳೂರನ್ನ ಗಟ್ಟಿ ಗೊಳಿಸೋ ಕೆಲಸ ಮಾಡುತ್ತಿದ್ದೇನೆ. ಬಿಬಿಎಂಪಿ ಚುನಾವಣೆ ಹಾಗೂ 2023 ರಾಜ್ಯ ಚುನಾವಣೆ ನನ್ನ ಗುರಿ ಎಂದು ರಾಮಲಿಂಗಾರೆಡ್ಡಿ ಹೇಳಿದರು.