ಸಿಡಿ, ಭ್ರಷ್ಟಾಚಾರ ಮಾಡಿಕೊಂಡು ಬಿಜೆಪಿ ಜನರನ್ನು ದಾರಿ ತಪ್ಪಿಸಲು ಮುಂದಾಗಿದೆ: ರಾಮಲಿಂಗಾ ರೆಡ್ಡಿ
ದೆಹಲಿಯ ಪ್ರಭಾವಿ ನಾಯಕರು ಬಂದು ಹೋದ್ರು ಅದಾದ ಮೇಲೆ ರಮೇಶ್ ಜಾರಕಿಹೊಳಿ ಆರೋಪ ಮಾಡಲು ಮುಂದಾಗಿದ್ದಾರೆ ಎಂದು ಅಮಿತ್ ಶಾ ಹೆಸರು ಹೇಳದೆ ಕುಟುಕಿದ ರಾಮಲಿಂಗಾ ರೆಡ್ಡಿ
ವರದಿ: ಟಿ.ಮಂಜುನಾಥ ಹೆಬ್ಬಗೋಡಿ
ಆನೇಕಲ್(ಫೆ.02): ಬಿಜೆಪಿ ಸಿಡಿ ಹಾಗೂ ಭ್ರಷ್ಟಾಚಾರ ಮಾಡಿಕೊಂಡು ಜನರನ್ನು ದಾರಿ ತಪ್ಪಿಸಲು ಚುನಾವಣೆ ಸಂದರ್ಭದಲ್ಲಿ ಮುಂದಾಗಿದೆ ಎಂದು ಕೆಪಿಸಿಸಿ ಕಾರ್ಯಾದ್ಯಕ್ಷ ರಾಮಲಿಂಗಾ ರೆಡ್ಡಿ ಕಿಡಿ ಕಾರಿದ್ದಾರೆ.
ಬೆಂಗಳೂರು ಹೊರವಲಯದ ಆನೇಕಲ್‌ನ ಚಂದಾಪುರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಸಿಡಿ ಪ್ರಕರಣ ಬಹಳ ಹಳೇಯದು ಆ ಪ್ರಕರಣದಲ್ಲಿ ಎಸ್.ಐ.ಟಿ ತನಿಖೆಯೂ ಆಯ್ತು ಅದರೆ ಚುನಾವಣೆ ಬರುತ್ತಿದ್ದು ಇದಕ್ಕಾಗಿ ಬಿಜೆಪಿಯವರೂ ಆರೋಪ ಮಾಡ್ತಿದ್ದಾರೆ.
ದೆಹಲಿಯ ಪ್ರಭಾವಿ ನಾಯಕರು ಬಂದು ಹೋದ್ರು ಅದಾದ ಮೇಲೆ ರಮೇಶ್ ಜಾರಕಿಹೊಳಿ ಆರೋಪ ಮಾಡಲು ಮುಂದಾಗಿದ್ದಾರೆ ಎಂದು ಅಮಿತ್ ಶಾ ಹೆಸರು ಹೇಳದೆ ರಾಮಲಿಂಗಾ ರೆಡ್ಡಿ ಕುಟುಕಿದ್ದು, ರಮೇಶ್ ಅವರು ಹತಾಶೆಯಿಂದ ಹೇಳಿಕೆ ನೀಡುತ್ತಿದ್ದಾರೆ. ಅವರು ಒಂದಲ್ಲ ಒಂದು ಗೊಂದಲದ ಹೇಳಿಕೆ ನೀಡುತ್ತಿದ್ದು ಮಾನಸಿಕ ಸ್ಥೀಮಿತ ಕಳೆದುಕೊಂಡಿದ್ದಾರೆ. ಬಿಜೆಪಿಯವರದ್ದು ಸುಳ್ಳೇ ಮನೆ ದೇವರು ಸುಳ್ಳು ಹೇಳಿಕೊಂಡು ಪ್ರಚಾರ ಪಡೆದುಕೊಳ್ಳುವುದು ಅವರ ಹವ್ಯಾಸ ಆಗಿದೆ ಡಿ.ಕೆ ಶಿವಕುಮಾರ್ ಅವರ ಮೇಲೆ ಆರೋಪ ಮಾಡುತ್ತಿದ್ದಾರೆ. ಆದರೆ ಚುನಾವಣೆ ಸಂದರ್ಭದಲ್ಲಿ ಕೆಟ್ಟ ಹೆಸರು ತರಲು ಈ ಷಡ್ಯಂತ್ರ ಮಾಡುತ್ತಿದ್ದಾರೆ ಅಂತ ಕಿಡಿ ಕಾರಿದ್ದಾರೆ.
ಮೂಗಿಗೆ ಬದಲು ಹಣೆಗೆ ತುಪ್ಪ ಸವರಿದ ಕೇಂದ್ರ ಬಜೆಟ್: ಕುಮಾರಸ್ವಾಮಿ
ರಾಜ್ಯ ಹಾಗೂ ಕೇಂದ್ರದಲ್ಲಿ ಇವರದ್ದೇ ಸರ್ಕಾರ ಇದೆ ತನಿಖೆ ಮಾಡಲಿ ಎಂದು ಸವಾಲು ಎಸೆದರು. ಸಹಕಾರ ಇಲಾಖೆಯಲ್ಲಿ ಅಕ್ರಮ ಆಗಿದೆ ಎನ್ನುತ್ತಿದ್ದಾರೆ. 30 ವರ್ಷ ಆದ ಮೇಲೆ ಆರೋಪ ಮಾಡುವುದು ಹಾಸ್ಯಾಸ್ಪದ ಆ ಸಮಯದಲ್ಲಿ ಡಿ.ಕೆ. ಶಿವಕುಮಾರ್ ಶಾಸಕರೇ ಆಗಿರಲಿಲ್ಲ ಇತ್ತೀಚಿನ ಯಾವ ಸಮೀಕ್ಷೆಯಲ್ಲೂ ಬಿಜೆಪಿ 60 ರಿಂದ 70 ಸ್ಥಾನ ದಾಟುತ್ತಿಲ್ಲ ಇವರಿಗೆ ಕೆಲಸ ಮಾಡಿ ಹೆಸರು ತೆಗೆದುಕೊಳ್ಳಲು ಆಗುತ್ತಿಲ್ಲ. ಬೆಂಗಳೂರು ರಸ್ತೆ ಗುಂಡಿ ವಿಚಾರದಲ್ಲಿ ಹೈಕೋರ್ಟ್ ಛೀಮಾರಿ ಹಾಕಿದೆ, ಹೈಕೋರ್ಟ್ ಎಲ್ಲವನ್ನು ಸೂಚಿಸುವುದಾರೆ ಸರ್ಕಾರ ಯಾಕಿರಬೇಕು ಕೇಂದ್ರ ಹಾಗೂ ರಾಜ್ಯ ಸರ್ಕಾರ ಒಂದೇ ರೀತಿ ಆಗಿದ್ದು ಬಿಜೆಪಿಯವರು ತಮ್ಮನ್ನು ಶುದ್ದಿ ಮಾಡಿಕೊಳ್ಳಬೇಕು ಎಂದರು.
ಬಿಜೆಪಿಯವರ ಬುಟ್ಟಿಯಲ್ಲಿ ಹಾವಿಲ್ಲ ಆದ್ರೆ ಖಾಲಿ ಬುಟ್ಟಿ ಹಿಡಿದು ಹಾವು ಬಿಡುತ್ತೇವೆ ಎನ್ನುತ್ತಾ ರಾಜ್ಯದ ಜನರ ದಾರಿ ತಪ್ಪಿಸಲು ಹೊರಟಿದ್ದಾರೆ ಸಿಡಿ ಮಾಡುವುದು ಡಿಕೆಶಿ ಅವರ ಕೆಲಸ ಅಲ್ಲ. ಅದು ಬಿಜೆಪಿಯವರಿಗೆ ಬಿಟ್ಟಿದ್ದು ಚುನಾವಣೆ ಹತ್ತಿರ ಬರುತ್ತಿದ್ದು ಬೆಳಗಾವಿ ರಾಜಕಾರಣಕ್ಕೆ ಕಾಂಗ್ರೆಸ್ ತಗಲು ಹಾಕುತ್ತಿದ್ದಾರೆ. ಬಿಜೆಪಿಯವರದೇನಿದ್ದರೂ ಹಿಂದುತ್ವ, ರಾಮ ಮಂದಿರ ಹೆಸರಿನಲ್ಲಿ ಓಟು ಕೇಳುವುದು ಭ್ರಷ್ಟಾಚಾರದ ಗಂಗೋತ್ರಿ ಬಿಜೆಪಿ ಪಾರ್ಟಿಯಾಗಿದೆ.ಸಿಡಿ ಬ್ಲಾಕ್ ಮೇಲ್ ಕಾಂಗ್ರೆಸ್ ಕಲ್ಚರ್ ಅಲ್ಲ ಅದೇನಿದ್ದರೂ ಬಿಜೆಪಿಯವರ ಕೆಲಸ ಆಗಿದ್ದು ಎಲೆಕ್ಷನ್ ಬರುತ್ತಿದೆ ಷೇರು ಮಾರ್ಕೇಟ್ ನಂತೆ ಪರ್ಸೆಂಟೇಜ್ ಕೂಡ ಹೆಚ್ಚಾಗಬಹುದು. ಈಗಾಗಲೇ 40 ಪರ್ಸೆಂಟ್ ಸರ್ಕಾರ ಎನ್ನುವ ಹಣೆಪಟ್ಟಿ ಪಡೆದಿದ್ದಾರೆ. ದೇಶದಲ್ಲಿ ಎಲ್ಲಿ ಚುನಾವಣೆ ನಡೆಯುತ್ತದೆ, ಅಂತಹ ಕಡೆ ತಿಂಗಳಿಗೆ ನಾಲ್ಕು ಬಾರಿ ಮೋದಿ, ಅಮಿತ್ ಶಾ ಬರ್ತಾರೆ ಮತ್ತೆ ಅವರು ಇತ್ತ ಮುಖ ಹಾಕುವುದಿಲ್ಲ ಬರ ಬಂದಾಗ ಇತ್ತ ತಲೆ ಹಾಕಿಯೂ ನೋಡದ ಅವರು ರಾಜ್ಯದ ಬಗ್ಗೆ ಕಾಳಜಿ ಹೊಂದಿಲ್ಲ ಎಂದರು.