Asianet Suvarna News Asianet Suvarna News

ಸುಳ್ಳಲ್ಲಿ ಮೋದಿಗಿಂತಲೂ ಬೊಮ್ಮಾಯಿ ನಿಸ್ಸೀಮರು: ಪ್ರಿಯಾಂಕ್‌ ಖರ್ಗೆ

ಕಲ್ಯಾಣ ಕರ್ನಾಟಕಕ್ಕೆ ಘೋಷಿತ ಅನುದಾನವನ್ನೇ ಸರಿಯಾಗಿ ಬಿಡುಗಡೆ ಮಾಡದ ಸಿಎಂ ಮತ್ತೆ 5000 ಕೋಟಿ ನೀಡುವುದಾಗಿ ಹೇಳಿದ್ದು ನೋಡಿದರೆ, ಮೋದಿಗಿಂತಲೂ ಸುಳ್ಳು ಹೇಳುವುದರಲ್ಲಿ ಬೊಮ್ಮಾಯಿ ನಿಸ್ಸೀಮರು ಎಂದು ಮಾಜಿ ಸಚಿವ, ಚಿತ್ತಾಪುರ ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ. 

Congress leader priyank kharge slams to basavaraj bommai at kalaburagi gvd
Author
First Published Sep 19, 2022, 3:15 AM IST

ಕಲಬುರಗಿ (ಸೆ.19): ಕಲ್ಯಾಣ ಕರ್ನಾಟಕಕ್ಕೆ ಘೋಷಿತ ಅನುದಾನವನ್ನೇ ಸರಿಯಾಗಿ ಬಿಡುಗಡೆ ಮಾಡದ ಸಿಎಂ ಮತ್ತೆ 5000 ಕೋಟಿ ನೀಡುವುದಾಗಿ ಹೇಳಿದ್ದು ನೋಡಿದರೆ, ಮೋದಿಗಿಂತಲೂ ಸುಳ್ಳು ಹೇಳುವುದರಲ್ಲಿ ಬೊಮ್ಮಾಯಿ ನಿಸ್ಸೀಮರು ಎಂದು ಮಾಜಿ ಸಚಿವ, ಚಿತ್ತಾಪುರ ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕಕ್ಕೆ ಈ ಹಿಂದೆ 3 ಸಾವಿರ ಕೋಟಿ ಕೊಡೋದಾಗಿ ಹೇಳಿದ್ರು, ಕೊಟ್ಟಿದ್ದು 1,500 ಕೋಟಿ ಮಾತ್ರ. ಇದೀಗ 5 ಸಾವಿರ ಕೋಟಿ ಮುಂದಿನ ಬಜೆಟ್‌ನಲ್ಲಿ ಕೊಡ್ತೀನಿ ಅಂತಾರೆ, ಇದು ಮೂಗಿಗೆ ತುಪ್ಪ ಸವರುವ ಘೋಷಣೆಯಷ್ಟೆ. ಒಂದು ವೇಳೆ ನಿಜವಾಗಿ 5,000 ಕೋಟಿ ಕೊಟ್ರೆ ಎಲ್ಲೆಡೆ ಸಿಎಂ ಬೊಮ್ಮಾಯಿ ಫೋಟೋ ಹಾಕ್ತೇವೆ ಎಂದ ಅವರು, ಮುಂದೆ ಚುನಾವಣೆ ಬರುತ್ತಿದೆ. ಈ ಅನುದಾನ ಬಿಡುಗಡೆ ಅಸಾಧ್ಯ ಎಂದು ಹೇಳಿದರು.

ಪ್ರಿಯಾಂಕ್‌ ಖರ್ಗೆ ಭವಿಷ್ಯದಲ್ಲಿ ಸಿಎಂ ಆಗ್ತಾರೆ: ಎನ್‌ಎಸ್‌ಐಯೂ ನಿಂದ ತಮ್ಮ ರಾಜಕೀಯ ಪ್ರಾರಂಭಿಸಿದ ಶಾಸಕ ಪ್ರಿಯಾಂಕ್‌ ಖರ್ಗೆ ಅವರು ತಮ್ಮ ಸ್ವಂತ ಪರಿಶ್ರಮ ಹಾಗೂ ಶಕ್ತಿಯಿಂದ ಸಚಿವರಾಗಿ, ಜನಾನುರಾಗಿಯಾಗಿ ರಾಜ್ಯ ನಾಯಕರಾಗಿ ಬೆಳೆದಿದ್ದಾರೆ ಎಂದು ಯುವ ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಮೊಹಮ್ಮದ್‌ ನಲಪಾಡ್‌ ಹೇಳಿದರು. ತಾಲೂಕಿನ ವಾಡಿ ಪಟ್ಟಣದಲ್ಲಿ ಏರ್ಪಡಿಸಲಾಗಿದ್ದ ಯುವ ಗರ್ಜನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಯಾವುದೇ ಕ್ಷೇತ್ರದಲ್ಲಿಯೂ ಇಷ್ಟೊಂದು ಪ್ರಮಾಣದಲ್ಲಿ ಯುವಕರನ್ನು ಸೆಲೆಯುವಂತ ಶಕ್ತಿ ಕೇವಲ ಪ್ರಿಯಾಂಕ್‌ ಖರ್ಗೆ ಅವರಿಗಿದೆ. ಮುಂದೆ ನಮ್ಮ ಸರ್ಕಾರ ಅ​ಧಿಕಾರಕ್ಕೆ ಬಂದಾಗ ಅವರು ಸಚಿವರಾಗುತ್ತಾರೆ. ಮುಂದಿನ ದಿನಗಳಲ್ಲಿ ಅವರು ಈ ರಾಜ್ಯದ ಮುಖ್ಯಮಂತ್ರಿಗಳಾಗುತ್ತಾರೆ ಎಂದು ಭವಿಷ್ಯ ನುಡಿದರು.

Karnataka Politics: ಡಬಲ್‌ ಎಂಜಿನ್‌ ಅಲ್ಲ, ಡಬಲ್‌ ದೋಖಾ ಸರ್ಕಾರ: ಪ್ರಿಯಾಂಕ್‌ ಖರ್ಗೆ

ಕೇಂದ್ರ ಸರ್ಕಾರದ ನಿರ್ಲಕ್ಷ್ಯತನ ಹಾಗೂ ಬೇಜವಬ್ದಾರಿಯಿಂದಾಗಿ ಯುವಕರು ನಿರುದ್ಯೋಗಿಗಳಾಗಿದ್ದಾರೆ. ಪದವೀಧರರು ಆಹಾರ ಡೆಲಿವರಿ ಬಾಯ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ. ಮೋದಿಯವರೇ ನಮ್ಮ ಸರ್ಕಾರವಿದ್ದಾಗ ಬೆಲೆ ಏರಿಕೆಯಿಂದಾಗಿ ಈ ಸರ್ಕಾರ ಹೋಗಲಿ ಎಂದು ಘೊಷಣೆ ಹಾಕಿದ್ದೀರಿ. ಈಗ ಏನಾಗಿದೆ? ಪ್ರತಿ ವರ್ಷ ಎರಡು ಕೊಟಿ ಉದ್ಯೊಗ ಕೊಡಿಸುವ ಘೋಷಣೆ, ಭರವಸೆ ಈಗ ಏನಾಯಿತು ? ಇಲ್ಲಿಯವರೆಗೆ ನಿಮ್ಮ ಎಂಟು ವರ್ಷದ ಅವ​ಧಿಯಲ್ಲಿ 16 ಕೋಟಿ ಯುವಕರು ಉದ್ಯೋಗ ಪಡೆದುಕೊಳ್ಳಬೇಕಾಗಿತ್ತು. ನೀವೇ ಹೇಳಿ ಎಷ್ಟುಜನ ಉದ್ಯೋಗ ಪಡೆದಿದ್ದಾರೆ ಎಂದು ಪ್ರಶ್ನಿಸಿದರು. 

ಈಗಿನ ಪರಿಸ್ಥಿತಿಯಲ್ಲಿ ತಂದೆ-ತಾಯಿಗಳು ಮಕ್ಕಳನ್ನು ಓದಿ ಎನ್ನದಂತಾಗಿದೆ. ಓದಿದ ಮಗ ಕೆಲಸ ಸಿಗದೇ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ಬಂದಿದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, ದಿನಬಳಕ್ಕೆ ವಸ್ತುಗಳ ಬೆಲೆ ಗಗನಕ್ಕೇರಿದೆ. ಭ್ರಷ್ಟಾಚಾರ ವ್ಯಾಪಕವಾಗಿದೆ. ಪಿಎಸ್‌ಐ ನೇಮಕಾತಿಯಲ್ಲಿ ಭ್ರಷ್ಟಾಚಾರ ಎಸಗಿ 40% ಲಂಚದ ಸರ್ಕಾರ ಪಿಎಸ್‌ಐ ಆಗಬೇಕಿದ್ದವರ ಬಾಳಿಗೆ ಕೊಳ್ಳಿ ಇಟ್ಟಿದೆ ಎಂದು ಖಾರವಾಗಿ ಹೇಳಿದರು.

ಗುತ್ತಿಗೆದಾರರಿಗೆ ಕಿರುಕುಳ ಜಾಸ್ತಿಯಾಗಿದ್ದಕ್ಕೆ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ. ಆದರೆ ಸಚಿವ ಈಶ್ವರಪ್ಪನವರ ಮೇಲೆ ಒಂದು ಎಫ್‌ಐಅರ್‌ ಕೂಡಾ ದಾಖಲಾಗಿಲ್ಲ. ಬಾಬಾ ಸಾಹೇಬರು ಒದಗಿಸಿದ ಮಾತನಾಡುವ ಹಕ್ಕನ್ನು ಈ ಸರ್ಕಾರ ಕಿತ್ತುಕೊಂಡಿದೆ. ಸರ್ಕಾರದ ವಿರುದ್ಧ ಮಾತನಾಡುವವರ ಮೇಲೆ ಕೇಸು ದಾಖಲಿಸಲಾಗುತ್ತಿದೆ. ಕಾಂಗ್ರೆಸ್‌ ಪಕ್ಷ ಇಂತಹ ಬೆದರಿಕೆಗಳಿಗೆ ಬಗ್ಗಲ್ಲ. ಯುವಕರ ಎಲ್ಲ ಸಮಸ್ಯೆ ಬಗೆಹರಿಯಬೇಕಾದರೆ 2023ರಲ್ಲಿ ಕಾಂಗ್ರೆಸ್‌ ಪಕ್ಷ ಅ​ಧಿಕಾರಕ್ಕೆ ಬರಬೇಕು. ನೀವೆಲ್ಲಾ ಇದಕ್ಕೆ ಪರಿಶ್ರಮ ಪಡಬೇಕು ಎಂದು ಮನವಿ ಮಾಡಿದರು.

Kalaburagi: ಫ್ಲೈ ಓವರ್‌ ಅಂದಾಜು ವೆಚ್ಚದಲ್ಲಿ ಏಕಾಏಕಿ ಏರಿಕೆ: ಪ್ರಿಯಾಂಕ್‌ ಖರ್ಗೆ

ಚೀತಾ ಬಿಡುವುದು ಏನು ಮಹಾನ್‌ ಕೆಲಸವೇ ಎಂದು ಪ್ರಶ್ನಿಸಿದ ನಲಪಾಡ್‌, ಮೋದಿಯವರಿಗೆ ಚೀತಾ ಹೊರಗೆ ಬಿಡಲು ನಾಲ್ಕು ತಾಸು ಸಮಯವಿದೆ. ಆದರೆ ಯುವಕರಿಗೆ ಉದ್ಯೋಗ ಒದಗಿಸಲು ಸಮಯವಿಲ್ಲವೇ? ಮೋದಿ ಚೀತಾ ಬಿಡುವುದನ್ನೆ ತಾಸುಗಟ್ಟಲೇ ಪದೇ ಪದೇ ತೊರಿಸುವ ಟಿ.ವಿ ಮಾಧ್ಯಮಗಳು ಎರಡುನೂರು ಕಿಲೊ ಮೀಟರ್‌ ಪಾದಯಾತ್ರೆ ಮಾಡಿದ ಗಂಡು ಮಗ ರಾಹುಲ್‌ ಗಾಂ​ಧಿಯನ್ನು ಏಕೆ ತೊರಿಸಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ದೇಶದ ಭವಿಷ್ಯ ಉದ್ಧಾರವಾಗಲು ಯುವಕರ ಬಾಳು ಬೆಳಕಾಗಲು ನೀವೆಲ್ಲಾ ಕಾಂಗ್ರೆಸ್‌ ಪಕ್ಷವನ್ನು ಅ​ಧಿಕಾರಕ್ಕೆ ತರಬೇಕು. ಕ್ಷೇತ್ರ ಮತ್ತಷ್ಟುಅಭಿವೃದ್ಧಿಯಾಗಬೇಕಾದರೆ ಪ್ರಿಯಾಂಕ್‌ ಖರ್ಗೆ ಅವರನ್ನು ಮತ್ತೊಮ್ಮೆ ಶಾಸಕರನ್ನಾಗಿ ಮಾಡಿ ಎಂದು ಮನವಿ ಮಾಡಿದರು.

Follow Us:
Download App:
  • android
  • ios