ಕನ್ನಡ ಅಸ್ಮಿತೆ ಮುಗಿಸಲು ಬಿಜೆಪಿ ಸಂಚು: ಪ್ರಿಯಾಂಕ್ ಖರ್ಗೆ
ಕನ್ನಡದ ಅಸ್ಮಿತೆ ಮುಗಿಸಲು ಕೇಂದ್ರದ ಬಿಜೆಪಿ ನಾಯಕರು ಸಂಚು ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಇದಕ್ಕೆ ಮೂಕ ಪ್ರೇಕ್ಷಕರಾಗಿ ರಾಜ್ಯ ಬಿಜೆಪಿ ಮುಖಂಡರು ಬೆಂಬಲ ನೀಡುತ್ತಿದ್ದಾರೆ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಬೆಂಗಳೂರು (ಏ.08): ಕನ್ನಡದ ಅಸ್ಮಿತೆ ಮುಗಿಸಲು ಕೇಂದ್ರದ ಬಿಜೆಪಿ ನಾಯಕರು ಸಂಚು ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಇದಕ್ಕೆ ಮೂಕ ಪ್ರೇಕ್ಷಕರಾಗಿ ರಾಜ್ಯ ಬಿಜೆಪಿ ಮುಖಂಡರು ಬೆಂಬಲ ನೀಡುತ್ತಿದ್ದಾರೆ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ಗಡಿ ಭಾಗದ ಹಳ್ಳಿಗಳಿಗೆ ಮಹಾರಾಷ್ಟ್ರವು ಆರೋಗ್ಯ ಕಾರ್ಡ್ ವಿತರಣೆಗೆ ಮುಂದಾಗಿದ್ದನ್ನು ನೋಡಿದರೆ ಕನ್ನಡದ ಅಸ್ಮಿತೆ ಮುಗಿಸಲು ಕೇಂದ್ರದ ಬಿಜೆಪಿ ನಾಯಕರು ಸಂಚು ರೂಪಿಸಿದ್ದಾರೆ ಎನಿಸುತ್ತದೆ. ಇದನ್ನು ವಿರೋಧಿಸಬೇಕಾದ ರಾಜ್ಯ ಬಿಜೆಪಿಯ ಸಂಸದರು, ಶಾಸಕರು ಧ್ವನಿ ಎತ್ತುತ್ತಿಲ್ಲ ಎಂದು ಟೀಕಿಸಿದರು.
ಚುನಾವಣೆಯಲ್ಲಿ ಅಭಿವೃದ್ಧಿ ವಿಷಯ ಮುನ್ನೆಲೆಗೆ ತರದೆ ಲವ್ ಜಿಹಾದ್ ಬಗ್ಗೆ ಮಾತನಾಡಿ ಎಂದು ಸ್ವಪಕ್ಷೀಯರಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ತಿಳಿಸಿದ್ದಾರೆ. ಬಿಜೆಪಿಯವರು ಹತಾಶರಾಗಿ ಈ ಹೇಳಿಕೆ ನೀಡಿದ್ದು, ಪ್ರಮುಖ ವಿಚಾರ ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ. ಇವರಿಗೆ ಕರ್ನಾಟಕದ ಅಸ್ಮಿತೆ ಬಗ್ಗೆ ಕಾಳಜಿ ಇಲ್ಲ. ರಾಜ್ಯದ ಇತಿಹಾಸ ಹಾಗೂ ಕರ್ನಾಟಕದ ಏಕೀಕರಣಕ್ಕೆ ಅವರ ಕೊಡುಗೆಯೇ ಇಲ್ಲ. ಹೀಗಿರುವಾಗ ಕನ್ನಡದ ವಿಚಾರವಾಗಿ ಬಿಜೆಪಿಯವರಿಗೆ ಪ್ರೀತಿ ಹುಟ್ಟಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಕುಡಿದ ನಶೆಯಲ್ಲಿ ಇಂಡಿಗೋ ವಿಮಾನದ ಎಮರ್ಜೆನ್ಸಿ ಬಾಗಿಲು ತೆರೆಯಲೆತ್ನ: ಪ್ರಯಾಣಿಕನ ಬಂಧನ
ಚಿತ್ರ ನಿಷೇಧ ಸರಿಯಲ್ಲ: ನಟ ಸುದೀಪ್ ಅವರು ರಾಜ್ಯಕ್ಕೆ ಅದ್ಭುತವಾದ ಕೊಡುಗೆ ನೀಡಿದ್ದು, ಯಾವತ್ತೂ ಕನ್ನಡದ ಅಸ್ಮಿತೆ ಬಗ್ಗೆ ಮಾತನಾಡುತ್ತಾರೆ. ಆದರೆ 40 ಪರ್ಸೆಂಟ್ ಭಷ್ಟಾಚಾರದ ಸರ್ಕಾರ ಎಂದು ಹೆಸರುವಾಸಿಯಾಗಿರುವ ಬಿಜೆಪಿ ಪರ ಚುನಾವಣೆಯಲ್ಲಿ ಪ್ರಚಾರ ನಡೆಸುವುದು ಸರಿಯಲ್ಲ. ಮೀಸಲಾತಿಗಾಗಿ ವಾಲ್ಮೀಕಿ ಸಮುದಾಯದ ಸ್ವಾಮೀಜಿ 300 ದಿನ ಧರಣಿ ನಡೆಸಿದ್ದಾಗ ಸುದೀಪ್ ಬೆಂಬಲ ನೀಡಬಹುದಿತ್ತು, ‘ಬೊಮ್ಮಾಯಿ ಮಾಮನ ಜೊತೆ ಮಾತನಾಡುತ್ತೇನೆ’ ಎಂದು ಆಗ ಶ್ರೀಗಳಿಗೆ ಹೇಳಬಹುದಿತ್ತಲ್ಲ ಎಂದು ಪ್ರಚಾರದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.
ಕಟ್ಟಕಡೆ ಪ್ರಜೆಗೂ ಡಬಲ್ ಎಂಜಿನ್ ಸರ್ಕಾರದಿಂದ ಸೌಲಭ್ಯ: ಬಿ.ಎಲ್.ಸಂತೋಷ್
ಬಿಜೆಪಿ ಪರ ಸುದೀಪ್ ಚುನಾವಣಾ ಪ್ರಚಾರ ಮಾಡುವುದರಿಂದ ಅವರ ಚಲನಚಿತ್ರಗಳಿಗೆ ನಿರ್ಬಂಧ ಹೇರಿ ಎನ್ನುವುದು ಸರಿಯಲ್ಲ. ಸುದೀಪ್ ಅವರು ಹಲವರಿಗೆ ಸಿನಿಮಾದಲ್ಲಿ ಕೆಲಸ ನೀಡಿದ್ದು ಅವರ ಚಿತ್ರಗಳನ್ನು ಚುನಾವಣೆ ಮುಗಿಯುವವರೆಗೂ ಬ್ಯಾನ್ ಮಾಡಿ ಎಂಬುದು ಸರಿಯಲ್ಲ. ಆದರೆ ಚಿತ್ರಗಳಲ್ಲಿ ರಾಜಕೀಯ ವಿಷಯವಿದ್ದರೆ ನಿಷೇಧಿಸಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.