ನಮೋ ಅಂದರೆ ನಮಗೆ ಮೋಸ ಎಂದರ್ಥ: ಪ್ರಿಯಾಂಕ್‌ ಖರ್ಗೆ

ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆ ಶೂನ್ಯವಾಗಿದೆ. ಈ ಸರ್ಕಾರದಲ್ಲಿ ಭ್ರಷ್ಟಾಚಾರವೇ ಅಭಿವೃದ್ಧಿಯಾಗಿದೆ. ಚುನಾವಣೆ ಸಮಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡಿದ ಒಂದೇ ಒಂದು ಭರವಸೆಯೂ ಇನ್ನುವರೆಗೂ ಈಡೇರಿಲ್ಲ: ಪ್ರಿಯಾಂಕ್‌ ಖರ್ಗೆ 
 

Congress Leader Priyank Kharge Slams BJP Government grg

ಚಿತ್ತಾಪುರ(ಡಿ.14):  ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಮೋ ಹೆಸರಿನಲ್ಲಿ ರಾಜಕೀಯ ಮಾಡುತ್ತಾ ಯುವಜನತೆಗೆ ಮೊಸ ಮಾಡುತ್ತಿದ್ದಾರೆ. ನಮೋ ಎಂದರೆ ನಮಗೆ ಮೋಸ ಮಾಡುವುದು ಎಂದರ್ಥವಾಗಿದೆ ಎಂದು ಶಾಸಕ ಪ್ರಿಯಾಂಕ್‌ ಖರ್ಗೆ ಟೀಕಿಸಿದರು. ಪಟ್ಟಣದ ಬಜಾಜ್‌ ಕಲ್ಯಾಣ ಮಂಟಪದಲ್ಲಿ ಪುರಸಭೆಯ 2022-23 ನೇ ಸಾಲಿನ 15ನೇ ಹಣಕಾಸು ಯೊಜನೆ ಅಡಿಯಲ್ಲಿನ ವಿವಿಧ ವಾರ್ಡ್‌ಗಳಲ್ಲಿ ಕಾಮಗಾರಿಗಳಿಗೆ ಅಡಿಗಲ್ಲು ನೆರವೇರಿಸಿ ಮಾತನಾಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆ ಶೂನ್ಯವಾಗಿದೆ. ಈ ಸರ್ಕಾರದಲ್ಲಿ ಭ್ರಷ್ಟಾಚಾರವೇ ಅಭಿವೃದ್ಧಿಯಾಗಿದೆ. ಚುನಾವಣೆ ಸಮಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡಿದ ಒಂದೇ ಒಂದು ಭರವಸೆಯೂ ಇನ್ನುವರೆಗೂ ಈಡೇರಿಲ್ಲ. ದೇಶದಲ್ಲಿನ ಕಪ್ಪು ಹಣ ಹೊರತಂದು ಪ್ರತಿಯೊಬ್ಬರ ಖಾತೆಗೂ ಹದಿನೈದು ಲಕ್ಷ ನೀಡುವುದಾಗಿ ಭರವಸೆ ನೀಡಿದ್ದರು. ಅದು ಈಡೇರಿದೆಯೇ ಎಂದು ಪ್ರಶ್ನಿಸಿದರು. ಮೇಕಿನ್‌ ಇಂಡಿಯಾ ಮಾಡುವುದಾಗಿ ಹೇಳಿತ್ತು ಅದು ಈಡೇರಿದೆಯಾ? ಈಗ ದೇಶದಲ್ಲಿ ಮಹಿಳಾ ದೌರ್ಜನ್ಯ, ಎಸ್‌ಸಿ, ಎಸ್‌ಟಿ ಹಾಗೂ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಹೆಚ್ಚಾಗಿದೆ ಎಂದು ಸರ್ಕಾರದ ಅಂಕಿಸಂಖ್ಯಿಗಳು ಹೇಳುತ್ತಿವೆ ಎಂದರು.

'ಮಲ್ಲಿಕಾರ್ಜುನ ಖರ್ಗೆ ಕಲ್ಯಾಣ ಕರ್ನಾಟಕದ ಅಂಬೇಡ್ಕರ್‌'

ರಾಜ್ಯದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ನಮ್ಮ ಸರ್ಕಾರದ ಅವಧಿಯಲ್ಲಿ 30 ಸಾವಿರ ಹುದ್ದೆಗಳನ್ನು ಭರ್ತಿ ಮಾಡಿದ್ದೇವು. ಈಗ 50 ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದ್ದರೂ ಏಕೆ ತುಂಬುತ್ತಿಲ್ಲ ಎಂದು ಪ್ರಶ್ನಿಸಿದರು.ಕೇಂದ್ರ ಮತ್ತು ರಾಜ್ಯದ ಬಿಜೆಪಿ ಮುಖಂಡರು ನನ್ನನ್ನು ಮುಂದಿನ ಚುನಾವಣೆಯಲ್ಲಿ ಸೋಲಿಸುವುದಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ನಾನು ಅವರಿಗೆ ಪ್ರಶ್ನೆ ಮಾಡುತ್ತೇನೆ. ನನ್ನನ್ನು ಯಾಕೆ ಸೊಲಿಸುತ್ತಿರಿ. ನಾನು ಪಿಎಸ್‌ಐ ಹಗರಣ ಸೇರಿದಂತೆ ಹಲವಾರು ಹಗರಣಗಳ ವಿರುದ್ಧ ಧ್ವನಿ ಎತ್ತಿದ್ದಕ್ಕೆ ನನ್ನನ್ನು ಸೊಲಿಸಲು ಪ್ರಯತ್ನಿಸುತ್ತಿದ್ದಿರಾ ಎಂದು ಪ್ರಶ್ನಿಸಿದರು.

ಪುರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ, ಮುಖಂಡರಾದ ನಾಗರೆಡ್ಡಿ ಪಾಟೀಲ್‌ ಕರದಾಳ, ಚಂದ್ರಶೇಖರ ಕಾಶಿ, ಶೀಲಾ ಕಾಶಿ, ಜಗದೀಶ ಚವ್ವಾಣ, ಮುಕ್ತಾರ ಪಟೇಲ್‌ ಮಾತನಾಡಿದರು.

ಪಟ್ಟಣದಲ್ಲಿ ಶಾಸಕ ಪ್ರಿಯಾಂಕ್‌ ಖರ್ಗೆ ಅವರ ಸೂಚನೆಯ ಮೇರೆಗೆ ಸಾರ್ವಜನಿಕರ ಅನುಕೂಲಕ್ಕಾಗಿ ತರಕಾರಿ ಮಾರುಕಟ್ಟೆ, ವಿವಿಧ ವಾರ್ಡ್‌ಗಳಲ್ಲಿ ಚರಂಡಿ, ಸಿಸಿ ರಸ್ತೆ, ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಕಂಪನಿ ವತಿಯಿಂದ ಅನುದಾನ ನೀಡುತ್ತಿದ್ದು ಮಾದರಿ ಪಟ್ಟಣದ ನಿರ್ಮಾಣಕ್ಕೆ ಕಂಪನಿಯು ಸದಾ ಸಹಾಯ ಹಸ್ತ ಮಾಡಲಾಗುವುದು ಅಂತ ಎ.ಜಿ.ಎಂ ಓರಿಯಂಟ್‌ ಸಿಮೆಂಟ್‌ ಕಂಪನಿ ಶಿವಾನಂದ ಪಾಟೀಲ್‌ ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios