ರಾಹುಲ್ ಗಾಂಧಿ ಪಶ್ಚಿಮ ಬಂಗಾಳಕ್ಕೂ ಹೋಗ್ತಾರೆ. ರಾಹುಲ್ ಗಾಂಧಿ ನಿಮ್ಮ ಕನಸಲ್ಲೂ‌ ಬರ್ತಾರೆ ಅಂತಾ ಅರ್ಥ. ಬಿಜೆಪಿಯವರು ರಾಹುಲ್ ಗಾಂಧಿಗೆ ಹೆದರುತ್ತಾರೆ. ಆದ್ರಿಂದ ಪದೇ ಪದೇ ಅವರ ಬಗ್ಗೆ ಮಾತಾಡುತ್ತಾರೆ.  ಬಿಜೆಪಿಯವರಿಗೆ ರಾಹುಲ್ ಗಾಂಧಿ ಸಿಂಹಸ್ವಪ್ನ ಆಗಿದ್ದಾರೆ ಎಂದು ಕೈ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ  ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಬೆಳಗಾವಿ (ಏ.11): ರಾಹುಲ್ ಗಾಂಧಿಯವರು ಬಂದರೆ ಬಂದ್ರಿ ಅಂತೀರಾ.. ಬರದಿದ್ದರೆ ಬಂದಿಲ್ಲ ಎನ್ನುತ್ತೀರಾ ಎಂದು ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಚುನಾವಣಾ ಪ್ರಚಾರಕ್ಕೆ ರಾಹುಲ್ ಗಾಂಧಿ ಆಗಮಿಸಿಲ್ಲ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ. 

ಬೆಳಗಾವಿಯಲ್ಲಿಂದು ಮಾತನಾಡಿದ ಮಲ್ಲಿಕಾರ್ಜುನ್ ಖರ್ಗೆ ರಾಹುಲ್ ಗಾಂಧಿ ಪಶ್ಚಿಮ ಬಂಗಾಳಕ್ಕೂ ಹೋಗ್ತಾರೆ. ರಾಹುಲ್ ಗಾಂಧಿ ನಿಮ್ಮ ಕನಸಲ್ಲೂ‌ ಬರ್ತಾರೆ ಅಂತಾ ಅರ್ಥ. ಬಿಜೆಪಿಯವರು ರಾಹುಲ್ ಗಾಂಧಿಗೆ ಹೆದರುತ್ತಾರೆ. ಆದ್ರಿಂದ ಪದೇ ಪದೇ ಅವರ ಬಗ್ಗೆ ಮಾತಾಡುತ್ತಾರೆ. ಬಿಜೆಪಿಯವರಿಗೆ ರಾಹುಲ್ ಗಾಂಧಿ ಸಿಂಹಸ್ವಪ್ನ ಆಗಿದ್ದಾರೆ ಎಂದು ಹೇಳಿದರು. 

'ಬೈ ಎಲೆಕ್ಷನ್‌ ಬಳಿಕ ಅಡ್ರಸ್‌ ಕಳೆದುಕೊಳ್ಳುವ ಕಾಂಗ್ರೆಸ್‌ : 3 ಕ್ಷೇತ್ರಗಳಲ್ಲಿ ಜಯ ಖಚಿತ' ...

 ಸತೀಶ್ ಜಾರಕಿಹೊಳಿ‌ ಭಾರತೀಯ ಸಂಸ್ಕೃತಿ ವಿರೋಧಿ ಎಂಬ ಅರುಣ್ ಸಿಂಗ್ ಹೇಳಿಕೆಗೂ ಈ ವೇಳೆ ಪ್ರತಿಕ್ರಿಯಿಸಿದ ಖರ್ಗೆ ಸತೀಶ್ ಜಾರಕಿಹೊಳಿ‌ ಇವತ್ತು ಹುಟ್ಟಿ ಬೆಳೆದಿರುವ ಮನುಷ್ಯ ಅಲ್ಲ. ಬಸವೇಶ್ವರ ತತ್ವ ಏನು ಹೇಳುತ್ತದೆ ಎಂದರೆ ಅಂಧ ಶ್ರದ್ಧೆ ನಂಬ ಬೇಡಿ ಎನ್ನುತ್ತದೆ. ಅದೇ ರೀತಿ ಅವರಿದ್ದಾರೆ.

ಬಸವಣ್ಣನವರು ಮಾಡಿದ ಕೆಲಸ ಸತೀಶ್ ಜಾರಕಿಹೊಳಿ‌ ಮಾಡುತ್ತಿದ್ದಾರೆ . ಸಂವಿಧಾನ ಬದ್ಧವಾಗಿ ಸತೀಶ್ ಜಾರಕಿಹೊಳಿ‌ ಕೆಲಸ ಮಾಡುತ್ತಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ಹೇಳಿದರು.