ತುಮಕೂರು, (19): ಎಲ್ಲಾ ಸ್ವಾಮೀಜಿಗಳನ್ನು ಸೇರಿಸಿ ಅವರನ್ನೇ ಎಂಎಲ್‌ಎ, ಮಂತ್ರಿಯನ್ನಾಗಿ ಮಾಡಿಬಿಡಬೇಕು ಎಂದು ಕಾಂಗ್ರೆಸ್ ಮುಖಂಡ ಕೆ.ಎನ್.ರಾಜಣ್ಣ ವಾಗ್ದಾಳಿ ನಡೆಸಿದ್ದಾರೆ.

ಮೀಸಲಾತಿ‌ಗಾಗಿ ಸ್ವಾಮೀಜಿಗಳ ಹೋರಾಟ ವಿಚಾರಕ್ಕೆ ಸಂಬಂಧಿಸಿ ಮಾಧ್ಯಮಗಳ ಎದುರು ಗುಡುಗಿದ ರಾಜಣ್ಣ, ಈ ಸಮಸ್ಯೆ ಸರಿಹೋಗಬೇಕು ಅಂದರೆ ಎಲ್ಲಾ ಸ್ವಾಮೀಗಳು ಎಂಎಲ್‌ಎ, ಸಿಎಂ ಆಗಿಬಿಡಬೇಕು. ಆಗ ಸಮಸ್ಯೆ ಬಗೆಹರಿಯಬಹುದಷ್ಟೇ. ಇಲ್ಲಾ ಅಂದ್ರೆ ಇದು ನೆವರ್ ಎಂಡಿಂಗ್ ಪ್ರಾಬ್ಲಂ ಎಂದರು.

ಗೌಡ ಲಿಂಗಾಯತ ಸ್ವಾಮೀಜಿಗಳು ಕಾಂಜಿ ಪಿಂಜಿಗಳು ಎಂದ ವಚನಾನಂದ ಶ್ರೀ

ಕುಂಬಾರರು, ಮಡಿವಾಳರು ಈ ರೀತಿಯವರು ಮೀಸಲಾತಿ ಕೇಳಿದ್ರೇ ಪರವಾಗಿಲ್ಲ. ತಳಸಮುದಾಯದ ಶೋಷಿತರು ಮೀಸಲಾತಿ ಕೇಳೋದ್ರಲ್ಲಿ ಅರ್ಥ‌ ಇದೆ. ಲಿಂಗಾಯತರು 2-ಎಗೆ ಬಂದರೆ ಕುರುಬರೆಲ್ಲ ಸತ್ತುಹೋಗುತ್ತಾರೆ. 2ಎನಲ್ಲಿ ಹೆಚ್ಚು ಫಲಾನುಭವಿಗಳು ಕುರುಬರೇ‌ ಇರೋದು. ಅವರೇನಾದರೂ 2Aಗೆ ಬಂದರೆ ಕುರುಬರನ್ನ ಸಾಯಿಸಿ ಬಿಡುತ್ತಾರೆ ಎಂದು ಹೇಳಿದರು.