ಬಿಜೆಪಿ ನನಗೆ ಸೋಲಿಸಲು ಹೋಗಿ ತಾನೇ ಸೋತಿದೆ: ಜಗದೀಶ ಶೆಟ್ಟರ್

ಬಿಜೆಪಿಗೆ ಮುಂಚೆ ಜನ ಬೆಂಬಲ ಇಲ್ಲದಿದ್ದಾಗ ಹಳ್ಳಿ ಹಳ್ಳಿಗಳಿಗೆ ತೆರಳಿ ಸಂಘಟನೆ ಮಾಡಿದ್ದೆ. ಈಗ ಕಾಂಗ್ರೆಸ್‌ನಲ್ಲಿದ್ದು ಪಕ್ಷ ಸಂಘಟನೆಗೆ ಶ್ರಮಿಸುತ್ತೇನೆ. ಯಾವ ಪಕ್ಷದಲ್ಲಿದ್ದರೂ ಪ್ರಾಮಾಣಿಕತೆಯಿಂದ ದುಡಿಯುವೆ. ನನಗೆ ಟಿಕೆಟ್‌ ತಪ್ಪಿಸಿ ಬಿಜೆಪಿ ನಾಯಕರು ಪಶ್ಚಾತಾಪ ಪಟ್ಟುಕೊಳ್ಳುತ್ತಿದ್ದಾರೆ ಎಂದ ಜಗದೀಶ ಶೆಟ್ಟರ್ 

Congress Leader Jagadish Shettar Slams Karnataka BJP grg

ರಾಮದುರ್ಗ(ಸೆ.03):  ಬಿಜೆಪಿಯಲ್ಲಿ ಟಿಕೆಟ್‌ ಮಾರಿಕೊಳ್ಳುವ ಪರಿಪಾಠ ಶುರುವಾಗಿದೆ. ಬಿಜೆಪಿಯಲ್ಲಿ ಪರಿಸ್ಥಿತಿ ಮುಂಚಿನಂತಿಲ್ಲ. ಪಕ್ಷ ನಿಷ್ಠೆಗೆ ಬೆಲೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ, ವಿಧಾನ ಪರಿಷತ್‌ ಸದಸ್ಯ ಜಗದೀಶ ಶೆಟ್ಟರ್ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು.

ಪಟ್ಟಣದಲ್ಲಿ ಶನಿವಾರ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾನು 7ನೇ ಬಾರಿ ಗೆದ್ದರೇ ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ಮಾಡುತ್ತೇನೆಂದು ಕೆಲವರು ನನಗೆ ಟಿಕೆಟ್‌ ತಪ್ಪಿಸಿದರು. ಬಿಜೆಪಿ ನನಗೆ ಸೋಲಿಸಲು ಹೋಗಿ ರಾಜ್ಯದಲ್ಲಿ ತಾನೇ ಸೋತಿತು. ರಾಮದುರ್ಗದಲ್ಲಿ ಕೂಡ ಹಿರಿಯರಾದ ಮಹಾದೇವಪ್ಪ ಯಾದವಾಡರಿಗೆ ಟಿಕೆಟ್‌ ತಪ್ಪಿಸಿದ್ದು, ಬಿಜೆಪಿಯಲ್ಲಿ ಮುಂಚಿನಂತಿಲ್ಲ ಎನ್ನುವುದನ್ನು ತೋರಿಸುತ್ತದೆ ಎಂದರು.

ಸಂತೋಷ್‌ ಮೊದ್ಲು ತಮ್ಮವರನ್ನೇ ಪಕ್ಷದಲ್ಲಿ ಉಳಿಸಿಕೊಳ್ಳಲಿ: ಜಗದೀಶ್‌ ಶೆಟ್ಟರ್‌

ಬಿಜೆಪಿಗೆ ಮುಂಚೆ ಜನ ಬೆಂಬಲ ಇಲ್ಲದಿದ್ದಾಗ ಹಳ್ಳಿ ಹಳ್ಳಿಗಳಿಗೆ ತೆರಳಿ ಸಂಘಟನೆ ಮಾಡಿದ್ದೆ. ಈಗ ಕಾಂಗ್ರೆಸ್‌ನಲ್ಲಿದ್ದು ಪಕ್ಷ ಸಂಘಟನೆಗೆ ಶ್ರಮಿಸುತ್ತೇನೆ. ಯಾವ ಪಕ್ಷದಲ್ಲಿದ್ದರೂ ಪ್ರಾಮಾಣಿಕತೆಯಿಂದ ದುಡಿಯುವೆ. ನನಗೆ ಟಿಕೆಟ್‌ ತಪ್ಪಿಸಿ ಬಿಜೆಪಿ ನಾಯಕರು ಪಶ್ಚಾತಾಪ ಪಟ್ಟುಕೊಳ್ಳುತ್ತಿದ್ದಾರೆ ಎಂದರು.

ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಮಾತನಾಡಿ, ಬಿಜೆಪಿ ನಾಯಕರು ಲಿಂಗಾಯತ ಸಮಾಜದ ನಾಯಕರಿಗೆ ಟಿಕೆಟ್‌ ತಪ್ಪಿಸಿ ಅನ್ಯಾಯ ಮಾಡಿದ್ದರಿಂದ ಕಾಂಗ್ರೆಸ್‌ ಗೆಲ್ಲುವಂತಾಗಿದೆ ಎಂದರು.

ಬಣಜಿಗ ಸಮಾಜದ ಜನ ಸ್ವಾಭಿಮಾನಿಗಳು, ಸ್ವಾಭಿಮಾನಕ್ಕೆ ದಕ್ಕೆ ಬಂದರೇ ಸುಮ್ಮನಿರುವುದಿಲ್ಲ. ಈ ಸಾರಿಯ ವಿಧಾನಸಭೆಯ ಚುನಾವಣೆಯು ನನಗೆ ತೀರ ಕಠಿಣವಾಗಿತ್ತು. ಲಿಂಗಾಯತ ಸಮಾಜದ ಎಲ್ಲರೂ ನನ್ನ ಗೆಲುವಿಗೆ ಶ್ರಮಿಸಿದ್ದು ಅವರ ಋಣ ತೀರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ವಿಧಾನ ಪರಿಷತ್‌ ಸದಸ್ಯ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ತಿಳಿಸಿದ್ದಾರೆ.  

Latest Videos
Follow Us:
Download App:
  • android
  • ios